logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Summer Tips: ಬೇಸಿಗೆ ಕಾಲದಲ್ಲಿ ತಪ್ಪಿಯೂ ಮೊಸರಿನೊಂದಿಗೆ ಈ ಆಹಾರಗಳನ್ನು ಸೇವಿಸಬೇಡಿ, ಆರೋಗ್ಯ ಕೆಡಬಹುದು ಎಚ್ಚರ

Summer Tips: ಬೇಸಿಗೆ ಕಾಲದಲ್ಲಿ ತಪ್ಪಿಯೂ ಮೊಸರಿನೊಂದಿಗೆ ಈ ಆಹಾರಗಳನ್ನು ಸೇವಿಸಬೇಡಿ, ಆರೋಗ್ಯ ಕೆಡಬಹುದು ಎಚ್ಚರ

May 01, 2024 01:19 PM IST

Food to Avoid with Curd: ಬೇಸಿಗೆಯಲ್ಲಿ ದೇಹ ತಂಪಾಗಲು ನಾವು ಆರಿಸಿಕೊಳ್ಳುವ ಆಹಾರ ಪದಾರ್ಥಗಳಲ್ಲಿ ಮೊಸರು ಕೂಡ ಒಂದು. ಬೇಸಿಗೆಯಲ್ಲಿ ಮೊಸರು, ಮಜ್ಜಿಗೆ ಆರೋಗ್ಯಕ್ಕೆ ಉತ್ತಮ ಎನ್ನುವುದು ಎಷ್ಟು ನಿಜವೋ, ಈ ಆಹಾರಗಳನ್ನು ಮೊಸರಿನೊಂದಿಗೆ ತಿಂದರೆ ಆರೋಗ್ಯ ಕೆಡುತ್ತದೆ ಎಂಬುದು ಅಷ್ಟೇ ನಿಜ. ಬಿಸಿಲುಗಾಲದಲ್ಲಿ ಮೊಸರಿನೊಂದಿಗೆ ಯಾವೆಲ್ಲಾ ಆಹಾರವನ್ನು ತಿನ್ನಬಾರದು ನೋಡಿ.

ಬೇಸಿಗೆಯಲ್ಲಿ ಉರಿ ಬಿಸಿಲಿನ ತಾಪ ನೀಗಿಸಿಕೊಳ್ಳಲು ಹಲವರು ಮಜ್ಜಿಗೆ ಅಥವಾ ಲಸ್ಸಿಯ ಮೊರೆ ಹೋಗುತ್ತಾರೆ. ದಿನೇ ದಿನೇ ಏರುತ್ತಿರುವ ತಾಪಮಾನದಲ್ಲಿ ದಾಹ ನೀಗಿಸಿಕೊಳ್ಳಲು ಮೊಸರು ಅಥವಾ ಮಜ್ಜಿಗೆ ಬೆಸ್ಟ್‌ ಎನ್ನುವುದು ನಿಜ. ಆದರೆ ಬಿಸಿಲುಗಾಲದಲ್ಲಿ ಇದರೊಂದಿಗೆ ಈ ಕೆಲವು ಆಹಾರ ಪದಾರ್ಥಗಳನ್ನು ತಪ್ಪಿಯೂ ಸೇವಿಸಬಾರದು ಎನ್ನುತ್ತಾರೆ ತಜ್ಞರು. ಹಾಗಾದರೆ ಬೇಸಿಗೆಯಲ್ಲಿ ಮೊಸರಿನೊಂದಿಗೆ ಯಾವೆಲ್ಲಾ ಆಹಾರಗಳನ್ನ ತಿನ್ನಬಾರದು ನೋಡಿ. 
(1 / 11)
ಬೇಸಿಗೆಯಲ್ಲಿ ಉರಿ ಬಿಸಿಲಿನ ತಾಪ ನೀಗಿಸಿಕೊಳ್ಳಲು ಹಲವರು ಮಜ್ಜಿಗೆ ಅಥವಾ ಲಸ್ಸಿಯ ಮೊರೆ ಹೋಗುತ್ತಾರೆ. ದಿನೇ ದಿನೇ ಏರುತ್ತಿರುವ ತಾಪಮಾನದಲ್ಲಿ ದಾಹ ನೀಗಿಸಿಕೊಳ್ಳಲು ಮೊಸರು ಅಥವಾ ಮಜ್ಜಿಗೆ ಬೆಸ್ಟ್‌ ಎನ್ನುವುದು ನಿಜ. ಆದರೆ ಬಿಸಿಲುಗಾಲದಲ್ಲಿ ಇದರೊಂದಿಗೆ ಈ ಕೆಲವು ಆಹಾರ ಪದಾರ್ಥಗಳನ್ನು ತಪ್ಪಿಯೂ ಸೇವಿಸಬಾರದು ಎನ್ನುತ್ತಾರೆ ತಜ್ಞರು. ಹಾಗಾದರೆ ಬೇಸಿಗೆಯಲ್ಲಿ ಮೊಸರಿನೊಂದಿಗೆ ಯಾವೆಲ್ಲಾ ಆಹಾರಗಳನ್ನ ತಿನ್ನಬಾರದು ನೋಡಿ. (Freepik)
ಮೀನು: ಬೇಸಿಗೆಯ ದಿನಗಳಲ್ಲಿ ಉಳಿದೆಲ್ಲಾ ಮಾಂಸಾಹಾರಕ್ಕಿಂತ ಮೀನು ಬೆಸ್ಟ್‌. ಹಾಗಾಗಿ ಹಲವರು ಈ ಕಾಲದಲ್ಲಿ ಮೀನು ತಿನ್ನಲು ಇಷ್ಟಪಡುತ್ತಾರೆ. ಕೆಲವರು ಮೀನಿನ ಖಾದ್ಯದೊಂದಿಗೆ ಮೊಸರು ಬೆರೆಸಿ ತಿನ್ನುತ್ತಾರೆ. ಆದರೆ ತಜ್ಞರ ಪ್ರಕಾರ, ಮೀನುಗಳನ್ನು ಮೊಸರಿನೊಂದಿಗೆ ತಿನ್ನಬಾರದು. ಈ ಎರಡು ಪ್ರೋಟೀನ್ ಭರಿತ ಆಹಾರಗಳನ್ನು ಒಟ್ಟಿಗೆ ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು ಎಂಬುದು ತಜ್ಞರ ಅಭಿಪ್ರಾಯ. 
(2 / 11)

ಈರುಳ್ಳಿ: ಬೇಸಿಗೆಯಲ್ಲಿ ರಾಯಿತವನ್ನು ಹೆಚ್ಚಾಗಿ ಮಾಡುತ್ತಾರೆ. ಮೊಸರಿನ ರಾಯಿತಕ್ಕೆ ಈರುಳ್ಳಿ ಸೇರಿಸುವುದು ಸಹಜ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಮೊಸರಿನೊಂದಿಗೆ ಈರುಳ್ಳಿ ತಿನ್ನುವುದು ತುಂಬಾ ಆರೋಗ್ಯಕರವಲ್ಲ ಎಂದು ತಜ್ಞರು ಹೇಳುತ್ತಾರೆ. ಇದು ಅಲರ್ಜಿ ಅಥವಾ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು.
(3 / 11)
ಈರುಳ್ಳಿ: ಬೇಸಿಗೆಯಲ್ಲಿ ರಾಯಿತವನ್ನು ಹೆಚ್ಚಾಗಿ ಮಾಡುತ್ತಾರೆ. ಮೊಸರಿನ ರಾಯಿತಕ್ಕೆ ಈರುಳ್ಳಿ ಸೇರಿಸುವುದು ಸಹಜ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಮೊಸರಿನೊಂದಿಗೆ ಈರುಳ್ಳಿ ತಿನ್ನುವುದು ತುಂಬಾ ಆರೋಗ್ಯಕರವಲ್ಲ ಎಂದು ತಜ್ಞರು ಹೇಳುತ್ತಾರೆ. ಇದು ಅಲರ್ಜಿ ಅಥವಾ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು.(Freepik)
ಕರಿದ ಆಹಾರಗಳು: ಆಲೂ ಪರಾಠದೊಂದಿಗೆ ಹಲವರು ಮೊಸರು ನೀಡುತ್ತಾರೆ. ಇಂತಹ ಹಲವು ಕರಿದ ಪದಾರ್ಥಗಳೊಂದಿಗೆ ಮೊಸರು ತಿನ್ನುವುದನ್ನು ತಪ್ಪಿಸುವುದು ಜಾಣತನ ಎನ್ನುತ್ತಾರೆ ತಜ್ಞರು. ಹಾಗಾಗಿ ಮನೆಯಲ್ಲಿ ಪರಾಠ ಅಥವಾ ಯಾವುದೇ ಕರಿದ ಪದಾರ್ಥಗಳಿದ್ದರೆ ಅದರೊಂದಿಗೆ ಮೊಸರು ತಿನ್ನಬೇಡಿ, ಇದು ಆರೋಗ್ಯಕ್ಕೆ ಹಾನಿಕಾರ.
(4 / 11)
ಕರಿದ ಆಹಾರಗಳು: ಆಲೂ ಪರಾಠದೊಂದಿಗೆ ಹಲವರು ಮೊಸರು ನೀಡುತ್ತಾರೆ. ಇಂತಹ ಹಲವು ಕರಿದ ಪದಾರ್ಥಗಳೊಂದಿಗೆ ಮೊಸರು ತಿನ್ನುವುದನ್ನು ತಪ್ಪಿಸುವುದು ಜಾಣತನ ಎನ್ನುತ್ತಾರೆ ತಜ್ಞರು. ಹಾಗಾಗಿ ಮನೆಯಲ್ಲಿ ಪರಾಠ ಅಥವಾ ಯಾವುದೇ ಕರಿದ ಪದಾರ್ಥಗಳಿದ್ದರೆ ಅದರೊಂದಿಗೆ ಮೊಸರು ತಿನ್ನಬೇಡಿ, ಇದು ಆರೋಗ್ಯಕ್ಕೆ ಹಾನಿಕಾರ.(Freepik)
ಮಾವಿನಹಣ್ಣು: ಬೇಸಿಗೆಯಲ್ಲಿ ಹೇರಳವಾಗಿ ಸಿಗುವ ಮಾವಿನಹಣ್ಣಿನಿಂದ ಲಸ್ಸಿ ತಯಾರಿಸುವುದು ಸಹಜ. ಆದರೆ ಮಾವಿನಹಣ್ಣಿನೊಂದಿಗೆ ಲಸ್ಸಿ ಕುಡಿಯಬೇಡಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಮಾವು ಮತ್ತು ಮೊಸರನ್ನು ಒಟ್ಟಿಗೆ ತಿನ್ನುವುದು ದೇಹಕ್ಕೆ ಆರೋಗ್ಯಕರವೆಂದು ಪರಿಗಣಿಸಲಾಗುವುದಿಲ್ಲ, ಇದರಿಂದ ಅಲರ್ಜಿ ಉಂಟಾಗುವ ಸಾಧ್ಯತೆ ಹೆಚ್ಚು. 
(5 / 11)
ಮಾವಿನಹಣ್ಣು: ಬೇಸಿಗೆಯಲ್ಲಿ ಹೇರಳವಾಗಿ ಸಿಗುವ ಮಾವಿನಹಣ್ಣಿನಿಂದ ಲಸ್ಸಿ ತಯಾರಿಸುವುದು ಸಹಜ. ಆದರೆ ಮಾವಿನಹಣ್ಣಿನೊಂದಿಗೆ ಲಸ್ಸಿ ಕುಡಿಯಬೇಡಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಮಾವು ಮತ್ತು ಮೊಸರನ್ನು ಒಟ್ಟಿಗೆ ತಿನ್ನುವುದು ದೇಹಕ್ಕೆ ಆರೋಗ್ಯಕರವೆಂದು ಪರಿಗಣಿಸಲಾಗುವುದಿಲ್ಲ, ಇದರಿಂದ ಅಲರ್ಜಿ ಉಂಟಾಗುವ ಸಾಧ್ಯತೆ ಹೆಚ್ಚು. (Freepik)
ಆದರೆ ಬೇಸಿಗೆಯಲ್ಲಿ ಮೊಸರು ಮಾತ್ರ ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಮೊಸರು ದೇಹವನ್ನು ತಾಜಾವಾಗಿಡಲು ಸಹಾಯ ಮಾಡುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಇದು ರೋಗಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಹೊಟ್ಟೆಯ ಸಮಸ್ಯೆಗಳನ್ನು ನಿವಾರಣೆಗೂ ಇದು ಉತ್ತಮ.
(6 / 11)
ಆದರೆ ಬೇಸಿಗೆಯಲ್ಲಿ ಮೊಸರು ಮಾತ್ರ ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಮೊಸರು ದೇಹವನ್ನು ತಾಜಾವಾಗಿಡಲು ಸಹಾಯ ಮಾಡುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಇದು ರೋಗಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಹೊಟ್ಟೆಯ ಸಮಸ್ಯೆಗಳನ್ನು ನಿವಾರಣೆಗೂ ಇದು ಉತ್ತಮ.(Freepik)
ಮೊಸರು ಕ್ಯಾಲ್ಸಿಯಂ, ವಿಟಮಿನ್ ಬಿ 2, ವಿಟಮಿನ್ ಬಿ 12, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಅನ್ನು ಹೊಂದಿರುತ್ತದೆ. ಇದು ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿ. ಇದರಲ್ಲಿರುವ ಕ್ಯಾಲ್ಸಿಯಂ ಆರೋಗ್ಯಕರ ಮೂಳೆಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮೊಸರು ವಿಟಮಿನ್ ಡಿ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ವಿಟಮಿನ್-ಬಿ ಒಟ್ಟಾರೆ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ.
(7 / 11)

ಮೊಸರು ದೇಹವನ್ನು ತಾಜಾವಾಗಿಡಲು ಸಹಾಯ ಮಾಡುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಇದು ರೋಗಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಹೊಟ್ಟೆಯ ಸಮಸ್ಯೆಗಳನ್ನು ನಿವಾರಣೆಗೂ ಇದು ಉತ್ತಮ.
(8 / 11)
ಮೊಸರು ದೇಹವನ್ನು ತಾಜಾವಾಗಿಡಲು ಸಹಾಯ ಮಾಡುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಇದು ರೋಗಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಹೊಟ್ಟೆಯ ಸಮಸ್ಯೆಗಳನ್ನು ನಿವಾರಣೆಗೂ ಇದು ಉತ್ತಮ.
ಮೊಸರು: ಮೊಸರು ಬಹಳಷ್ಟು ನೀರನ್ನು ಹೊಂದಿರುತ್ತದೆ ಮತ್ತು ಚರ್ಮಕ್ಕೂ ಒಳ್ಳೆಯದು. ಅದನ್ನು ಹೈಡ್ರೀಕರಿಸಿದಂತೆ ಮಾಡುತ್ತದೆ. ಮೊಸರಿನ ನಿಯಮಿತ ಸೇವನೆಯು ಆರೋಗ್ಯಕರ ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ.
(9 / 11)
ಮೊಸರು: ಮೊಸರು ಬಹಳಷ್ಟು ನೀರನ್ನು ಹೊಂದಿರುತ್ತದೆ ಮತ್ತು ಚರ್ಮಕ್ಕೂ ಒಳ್ಳೆಯದು. ಅದನ್ನು ಹೈಡ್ರೀಕರಿಸಿದಂತೆ ಮಾಡುತ್ತದೆ. ಮೊಸರಿನ ನಿಯಮಿತ ಸೇವನೆಯು ಆರೋಗ್ಯಕರ ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ.
ಈ ಲೇಖನದಲ್ಲಿ ಪ್ರಸ್ತುತಪಡಿಸಲಾದ ಮಾಹಿತಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಹಿಂದೂಸ್ತಾನ್ ಟೈಮ್ಸ್ ಕನ್ನಡ ಇದನ್ನು ಖಚಿತಪಡಿಸುವುದಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂರ್ಪಕಿಸಿ. 
(10 / 11)
ಈ ಲೇಖನದಲ್ಲಿ ಪ್ರಸ್ತುತಪಡಿಸಲಾದ ಮಾಹಿತಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಹಿಂದೂಸ್ತಾನ್ ಟೈಮ್ಸ್ ಕನ್ನಡ ಇದನ್ನು ಖಚಿತಪಡಿಸುವುದಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂರ್ಪಕಿಸಿ. 
ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
(11 / 11)
ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 

    ಹಂಚಿಕೊಳ್ಳಲು ಲೇಖನಗಳು