logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಾಮ ಮಂದಿರ ಮತ್ತು ನೇಪಾಳಕ್ಕಿದೆ ವಿಶೇಷ ನಂಟು; ದೇವಾಲಯ ನಿರ್ಮಾಣಕ್ಕೆ ನೆರೆಯ ದೇಶದ ಕೊಡುಗೆ ನೀವೂ ತಿಳಿಯಿರಿ

ರಾಮ ಮಂದಿರ ಮತ್ತು ನೇಪಾಳಕ್ಕಿದೆ ವಿಶೇಷ ನಂಟು; ದೇವಾಲಯ ನಿರ್ಮಾಣಕ್ಕೆ ನೆರೆಯ ದೇಶದ ಕೊಡುಗೆ ನೀವೂ ತಿಳಿಯಿರಿ

Jan 22, 2024 07:09 PM IST

Ayodhya ram mandir: ಭವ್ಯ ರಾಮ ಮಂದಿರ ನಿರ್ಮಾಣ ಮತ್ತು ಉದ್ಘಾಟನೆಗೆ ಹಲವು ರಾಜ್ಯಗಳು ಮಾತ್ರವಲ್ಲದೆ ದೇಶಗಳು ಕೂಡಾ ಕೊಡುಗೆ ನೀಡಿವೆ. ನೆರೆಯ ನೇಪಾಳದಿಂದ ರಾಮಮಂದಿರಕ್ಕೆ ಎರಡು ಸಾಲಿಗ್ರಾಮ ಕಲ್ಲುಗಳು ಬಂದಿವೆ. ಇವು 60 ಮಿಲಿಯನ್ ವರ್ಷಗಳಷ್ಟು ಹಳೆಯವು ಎನ್ನಲಾಗಿದೆ. ರಾಮಮಂದಿರ ನಿರ್ಮಾಣಕ್ಕೆ ನೇಪಾಳದ ಕೊಡುಗೆಳು ಏನು ಎಂಬುದನ್ನು ಇಲ್ಲಿ ನೋಡೋಣ.

  • Ayodhya ram mandir: ಭವ್ಯ ರಾಮ ಮಂದಿರ ನಿರ್ಮಾಣ ಮತ್ತು ಉದ್ಘಾಟನೆಗೆ ಹಲವು ರಾಜ್ಯಗಳು ಮಾತ್ರವಲ್ಲದೆ ದೇಶಗಳು ಕೂಡಾ ಕೊಡುಗೆ ನೀಡಿವೆ. ನೆರೆಯ ನೇಪಾಳದಿಂದ ರಾಮಮಂದಿರಕ್ಕೆ ಎರಡು ಸಾಲಿಗ್ರಾಮ ಕಲ್ಲುಗಳು ಬಂದಿವೆ. ಇವು 60 ಮಿಲಿಯನ್ ವರ್ಷಗಳಷ್ಟು ಹಳೆಯವು ಎನ್ನಲಾಗಿದೆ. ರಾಮಮಂದಿರ ನಿರ್ಮಾಣಕ್ಕೆ ನೇಪಾಳದ ಕೊಡುಗೆಳು ಏನು ಎಂಬುದನ್ನು ಇಲ್ಲಿ ನೋಡೋಣ.
ಜನವರಿ 22ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನೆರವೇರಿದೆ. ಭವ್ಯ ದೇವಾಲಯದ ನಿರ್ಮಾಣದಿಂದ ದೇಶದ ವಿವಿಧ ರಾಜ್ಯಗಳು ಹಾಗೂ ನೆರೆಯ ದೇಶಗಳು ಕೂಡಾ ಮಂದಿರಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿವೆ. ನೇಪಾಳದ ಕಾಳಿಗಂಡಕಿ ನದಿಯ ದಡದಿಂದ ಎರಡು ಸಾಲಿಗ್ರಾಮ ಕಲ್ಲುಗಳನ್ನು ತರಲಾಗಿದೆ.
(1 / 5)
ಜನವರಿ 22ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನೆರವೇರಿದೆ. ಭವ್ಯ ದೇವಾಲಯದ ನಿರ್ಮಾಣದಿಂದ ದೇಶದ ವಿವಿಧ ರಾಜ್ಯಗಳು ಹಾಗೂ ನೆರೆಯ ದೇಶಗಳು ಕೂಡಾ ಮಂದಿರಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿವೆ. ನೇಪಾಳದ ಕಾಳಿಗಂಡಕಿ ನದಿಯ ದಡದಿಂದ ಎರಡು ಸಾಲಿಗ್ರಾಮ ಕಲ್ಲುಗಳನ್ನು ತರಲಾಗಿದೆ.(PTI)
ವರದಿಗಳ ಪ್ರಕಾರ, ಈ ಸಾಲಿಗ್ರಾನ ಬಂಡೆ ಕಲ್ಲುಗಳು ಆರು ಮಿಲಿಯನ್ ವರ್ಷಗಳಷ್ಟು ಹಳೆಯವು.  ಇದರ ತೂಕ 14ರಿಂದ 27 ಟನ್. ಇದನ್ನು ನೇಪಾಳದಿಂದ ಗೋರಖ್‌ಪುರ, ಬಿಹಾರದ ಮೂಲಕ ಅಯೋಧ್ಯೆಗೆ ರಸ್ತೆ ಮೂಲಕ ಕಳುಹಿಸಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಸಾಲಿಗ್ರಾಮ ಕಲ್ಲುಗಳನ್ನು ವಿಷ್ಣುವಿನ ರೂಪವೆಂದು ಪರಿಗಣಿಸಲಾಗುತ್ತದೆ.
(2 / 5)
ವರದಿಗಳ ಪ್ರಕಾರ, ಈ ಸಾಲಿಗ್ರಾನ ಬಂಡೆ ಕಲ್ಲುಗಳು ಆರು ಮಿಲಿಯನ್ ವರ್ಷಗಳಷ್ಟು ಹಳೆಯವು.  ಇದರ ತೂಕ 14ರಿಂದ 27 ಟನ್. ಇದನ್ನು ನೇಪಾಳದಿಂದ ಗೋರಖ್‌ಪುರ, ಬಿಹಾರದ ಮೂಲಕ ಅಯೋಧ್ಯೆಗೆ ರಸ್ತೆ ಮೂಲಕ ಕಳುಹಿಸಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಸಾಲಿಗ್ರಾಮ ಕಲ್ಲುಗಳನ್ನು ವಿಷ್ಣುವಿನ ರೂಪವೆಂದು ಪರಿಗಣಿಸಲಾಗುತ್ತದೆ.
ಮಹಾಭಾರತದಲ್ಲಿ, ಶ್ರೀ ಕೃಷ್ಣನು ಯುಧಿಷ್ಠಿರನಿಗೆ ಸಾಲಿಗ್ರಾಮದ ಗುಣಲಕ್ಷಣಗಳ ಬಗ್ಗೆ ಹೇಳಿದ್ದನು. ವೈಷ್ಣವ ನಂಬಿಕೆಯ ಪ್ರಕಾರ, ಸಾಲಿಗ್ರಾಮವು ವಿಷ್ಣುವಿನ ವಾಸಸ್ಥಾನ ಎಂಬ ನಂಬಿಕೆ ಇದೆ. ಹೀಗಾಗಿ ಇದನ್ನು ವೈಷ್ಣವರು ಪೂಜಿಸುವ ಅತ್ಯಂತ ಪವಿತ್ರವಾದ ಕಲ್ಲು ಎಂದು ಪರಿಗಣಿಸಲಾಗಿದೆ.
(3 / 5)
ಮಹಾಭಾರತದಲ್ಲಿ, ಶ್ರೀ ಕೃಷ್ಣನು ಯುಧಿಷ್ಠಿರನಿಗೆ ಸಾಲಿಗ್ರಾಮದ ಗುಣಲಕ್ಷಣಗಳ ಬಗ್ಗೆ ಹೇಳಿದ್ದನು. ವೈಷ್ಣವ ನಂಬಿಕೆಯ ಪ್ರಕಾರ, ಸಾಲಿಗ್ರಾಮವು ವಿಷ್ಣುವಿನ ವಾಸಸ್ಥಾನ ಎಂಬ ನಂಬಿಕೆ ಇದೆ. ಹೀಗಾಗಿ ಇದನ್ನು ವೈಷ್ಣವರು ಪೂಜಿಸುವ ಅತ್ಯಂತ ಪವಿತ್ರವಾದ ಕಲ್ಲು ಎಂದು ಪರಿಗಣಿಸಲಾಗಿದೆ.(HT_PRINT)
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ನೇಪಾಳದಿಂದ ಕಲ್ಲುಗಳು ಮಾತ್ರವಲ್ಲದೆ ವಿವಿಧ ಬಗೆಯ ಆಭರಣಗಳು, ಪಾತ್ರೆಗಳು, ಬಟ್ಟೆಗಳು ಮತ್ತು ಸಿಹಿತಿಂಡಿಗಳು ಬಂದಿವೆ ಎಂದು ವರದಿಗಳು ಹೇಳಿವೆ. ಇವುಗಳನ್ನು ಜನಕಪುರ ಧಾಮದಿಂದ ಅಯೋಧ್ಯೆಗೆ ಕಳುಹಿಸಲಾಗಿದೆ.
(4 / 5)
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ನೇಪಾಳದಿಂದ ಕಲ್ಲುಗಳು ಮಾತ್ರವಲ್ಲದೆ ವಿವಿಧ ಬಗೆಯ ಆಭರಣಗಳು, ಪಾತ್ರೆಗಳು, ಬಟ್ಟೆಗಳು ಮತ್ತು ಸಿಹಿತಿಂಡಿಗಳು ಬಂದಿವೆ ಎಂದು ವರದಿಗಳು ಹೇಳಿವೆ. ಇವುಗಳನ್ನು ಜನಕಪುರ ಧಾಮದಿಂದ ಅಯೋಧ್ಯೆಗೆ ಕಳುಹಿಸಲಾಗಿದೆ.(Champat Rai-X)
ಅಯೋಧ್ಯೆಯಲ್ಲಿ ಜನವರಿ 22ರ ಸೋಮವಾರ ಬಾಲರಾಮನನ್ನು ಪ್ರತಿಷ್ಠಾಪಿಸಲಾಗಿದೆ. ಜನವರಿ 16ರಿಂದಲೇ ಅಯೋಧ್ಯೆಯಲ್ಲಿ ವೇದಘೋಷಗಳು ಮತ್ತು ಯಜ್ಞಗಳು ಪ್ರಾರಂಭವಾಗಿದ್ದವು.
(5 / 5)
ಅಯೋಧ್ಯೆಯಲ್ಲಿ ಜನವರಿ 22ರ ಸೋಮವಾರ ಬಾಲರಾಮನನ್ನು ಪ್ರತಿಷ್ಠಾಪಿಸಲಾಗಿದೆ. ಜನವರಿ 16ರಿಂದಲೇ ಅಯೋಧ್ಯೆಯಲ್ಲಿ ವೇದಘೋಷಗಳು ಮತ್ತು ಯಜ್ಞಗಳು ಪ್ರಾರಂಭವಾಗಿದ್ದವು.(PTI)

    ಹಂಚಿಕೊಳ್ಳಲು ಲೇಖನಗಳು