logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Akash Deep: ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದ ಆರ್​ಸಿಬಿ ವೇಗಿ ಆಕಾಶ್ ದೀಪ್ ಜೀವನ ಬದಲಾಗಿದ್ದೇಗೆ?

Akash Deep: ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದ ಆರ್​ಸಿಬಿ ವೇಗಿ ಆಕಾಶ್ ದೀಪ್ ಜೀವನ ಬದಲಾಗಿದ್ದೇಗೆ?

Feb 11, 2024 12:41 PM IST

India vs England 3rd Test Akash Deep: ಪಶ್ಚಿಮ ಬಂಗಾಳದ ಆಕಾಶ್ ದೀಪ್ ಇಂಗ್ಲೆಂಡ್ ವಿರುದ್ಧದ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಆಕಾಶ್ ತನ್ನ ಜೀವನದಲ್ಲಿ ಎದುರಿಸಿದ ಕೆಟ್ಟ ಸಮಯ ಅಷ್ಟಿಷ್ಟಲ್ಲ. ಆತನ ಹೋರಾಟದ ಕಥೆ ಇಲ್ಲಿ ತಿಳಿಯಿರಿ.

  • India vs England 3rd Test Akash Deep: ಪಶ್ಚಿಮ ಬಂಗಾಳದ ಆಕಾಶ್ ದೀಪ್ ಇಂಗ್ಲೆಂಡ್ ವಿರುದ್ಧದ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಆಕಾಶ್ ತನ್ನ ಜೀವನದಲ್ಲಿ ಎದುರಿಸಿದ ಕೆಟ್ಟ ಸಮಯ ಅಷ್ಟಿಷ್ಟಲ್ಲ. ಆತನ ಹೋರಾಟದ ಕಥೆ ಇಲ್ಲಿ ತಿಳಿಯಿರಿ.
ಇಂಗ್ಲೆಂಡ್ ವಿರುದ್ಧದ ಅಂತಿಮ ಮೂರು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಮುಕೇಶ್ ಕುಮಾರ್ ನಂತರ ಬಂಗಾಳದ ಮತ್ತೊಬ್ಬ ವೇಗಿ ಆಕಾಶ್ ದೀಪ್​ ಟೀಂ ಇಂಡಿಯಾದ ಟೆಸ್ಟ್ ತಂಡಕ್ಕೆ ಎಂಟ್ರಿಕೊಟ್ಟಿದ್ದಾರೆ. ಆದರೆ ಈತನ ಜೀವನದ ಕಥೆಯೇ ರೋಚಕ.
(1 / 7)

ಆಕಾಶ್ ದೀಪ್ ಬಿಹಾರದ ರೋಹ್ತಾಸ್ ಜಿಲ್ಲೆಯ ಬಡ್ಡಿ ಗ್ರಾಮದ ಹುಡುಗ. 2016ರಲ್ಲಿ ಯುನೈಟೆಡ್ ಕ್ಲಬ್‌ ಪರ ಆಡಲು ಪ್ರಾರಂಭಿಸಿದರು. ಆ ಋತುವಿನಲ್ಲಿ ಆಕಾಶ್ ದೀಪ್ 42 ವಿಕೆಟ್ ಪಡೆದು ಮಿಂಚಿದ್ದರು.
(2 / 7)

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ಆಕಾಶ್, ಸೌರವ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದು ತನ್ನ ಜೀವನದಲ್ಲಿ ಮಹತ್ವದ ತಿರುವು ಪಡೆಯಿತು ಎಂದಿದ್ದಾರೆ.
(3 / 7)

2018-19ರ ಋತುವಿನಲ್ಲಿ ಆಕಾಶ್ ದೀಪ್ ಮುಷ್ತಾಕ್ ಅಲಿ ಟೂರ್ನಿಗೆ ಆಯ್ಕೆಯಾದರು. 2019ರಿಂದ ರಣಜಿ, ವಿಜಯ್ ಹಜಾರೆ, ಮುಷ್ತಾಕ್ ಅಲಿ ಸೇರಿ ಹಲವು ಟೂರ್ನಿಗಳಲ್ಲಿ ಬಂಗಾಳದ ಪರ ನಿರಂತರ ಆಡಿದ್ದಾರೆ.
(4 / 7)

2013ರಲ್ಲಿ ಆಕಾಶ್ ದೀಪ್ ಅವರ ತಂದೆ ಅವರು ಕೋಲ್ಕತ್ತಾದಲ್ಲಿದ್ದಾಗ ನಿಧನರಾದರು. ಇದಾದ ಆರೇ ತಿಂಗಳಲ್ಲಿ ಅಣ್ಣ ತೀರಿಕೊಂಡರು. ಆಕಾಶ್ ಸತತ 2 ಆಘಾತಗಳಿಂದ ಹೊರಬರಲು ಬಹಳ ಕಷ್ಟಪಟ್ಟರು.
(5 / 7)

ತಂದೆ ಮತ್ತು ಅಣ್ಣನ ಮರಣದ ನಂತರ ಆಕಾಶ್ ದೀಪ್ ಕೋಲ್ಕತ್ತಾಗೆ ಬರುವುದು ತಾಯಿಗೆ ಇಷ್ಟವಿರಲಿಲ್ಲ. ಆಕಾಶ್ ಗೆಳೆಯನ ಮಾತಿಗೆ ತಾಯಿ ಒಪ್ಪಿಗೆ ಸೂಚಿಸಿದರು. ಕೋಲ್ಕತ್ತಾಗೆ ಬಂದ ನಂತರ ಸೌರವ್ ಗಂಗೋಪಾಧ್ಯಾಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದರು.
(6 / 7)

2023ರ ರಣಜಿ ಟ್ರೋಫಿಯಲ್ಲಿ ದೇಶದ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಭಾರತ ಎ ಪರ ಆಕಾಶ್ ಇಂಗ್ಲಿಷ್ ಕ್ಲಬ್ ವಿರುದ್ಧದ 2 ಪಂದ್ಯಗಳಲ್ಲಿ 13 ವಿಕೆಟ್ ಪಡೆದರು. ಅಲ್ಲದೆ, 46 ರನ್ ಗಳಿಸಿದರು. ಆ ಪ್ರದರ್ಶನದ ಆತನ ಅದೃಷ್ಟ ಬದಲಿಸಿತು ಎನ್ನಲಾಗ್ತಿದೆ.
(7 / 7)

    ಹಂಚಿಕೊಳ್ಳಲು ಲೇಖನಗಳು