logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Hubble Telescope: ಜೋಡಿ ಗ್ಯಾಲಕ್ಸಿಗಳ ತಿಕ್ಕಾಟ?: ಹಬಲ್‌ ಚಿತ್ರದಿಂದ ಖಗೋಳ ವಿಜ್ಞಾನಿಗಳಿಗೆ ಪೇಚಾಟ!

Hubble Telescope: ಜೋಡಿ ಗ್ಯಾಲಕ್ಸಿಗಳ ತಿಕ್ಕಾಟ?: ಹಬಲ್‌ ಚಿತ್ರದಿಂದ ಖಗೋಳ ವಿಜ್ಞಾನಿಗಳಿಗೆ ಪೇಚಾಟ!

Sep 12, 2022 05:20 PM IST

ವಾಷಿಂಗ್ಟನ್: ಕಳೆದ ಮೂರು ದಶಕಗಳಿಂದ ಬ್ರಹ್ಮಾಂಡದ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಹಬಲ್‌ ಬಾಹ್ಯಾಕಾಶ ದೂರದರ್ಶಕ ಯಂತ್ರ, ವಿಶ್ವ ರಚನೆಯ ಕುರಿತ ಮಾನವನ ಜ್ಞಾನವನ್ನು ಅಪಾರವಾಗಿ ವೃದ್ಧಿಸಿದೆ. ಬ್ರಹ್ಮಾಂಡದ ಹತ್ತು ಹಲವು ರೋಚಕ ರಹಸ್ಯಗಳನ್ನು ಹೊರಗೆಡವಿರುವ ಹಬಲ್‌ ಸ್ಪೇಸ್ಟೆಲಿಸ್ಕೋಪ್‌, ನಿತ್ಯವೂ ಜಾಗತಿಕ ಖಗೋಳಪ್ರಿಯರಿಗೆ ಹೊಸ ಹೊಸ ಸಂಶೋಧನೆಗಳ ಮೂಲಕ ರಸದೌತಣ ಉಣಬಡಿಸುತ್ತದೆ. ಅದರಂತೆ ಪರಸ್ಪರ ಘರ್ಷಣೆಯಲ್ಲಿ ನಿರತವಾಗಿರುವಂತೆ ಭಾಸವಾಗುವ ಅವಳಿ ಗ್ಯಾಲಕ್ಸಿಗಳ ಸುಂದರ ಚಿತ್ರವನ್ನು ಹಬಲ್‌ ಈ ಬಾರಿ ಸೆರೆ ಹಿಡಿದಿದೆ.

  • ವಾಷಿಂಗ್ಟನ್: ಕಳೆದ ಮೂರು ದಶಕಗಳಿಂದ ಬ್ರಹ್ಮಾಂಡದ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಹಬಲ್‌ ಬಾಹ್ಯಾಕಾಶ ದೂರದರ್ಶಕ ಯಂತ್ರ, ವಿಶ್ವ ರಚನೆಯ ಕುರಿತ ಮಾನವನ ಜ್ಞಾನವನ್ನು ಅಪಾರವಾಗಿ ವೃದ್ಧಿಸಿದೆ. ಬ್ರಹ್ಮಾಂಡದ ಹತ್ತು ಹಲವು ರೋಚಕ ರಹಸ್ಯಗಳನ್ನು ಹೊರಗೆಡವಿರುವ ಹಬಲ್‌ ಸ್ಪೇಸ್ಟೆಲಿಸ್ಕೋಪ್‌, ನಿತ್ಯವೂ ಜಾಗತಿಕ ಖಗೋಳಪ್ರಿಯರಿಗೆ ಹೊಸ ಹೊಸ ಸಂಶೋಧನೆಗಳ ಮೂಲಕ ರಸದೌತಣ ಉಣಬಡಿಸುತ್ತದೆ. ಅದರಂತೆ ಪರಸ್ಪರ ಘರ್ಷಣೆಯಲ್ಲಿ ನಿರತವಾಗಿರುವಂತೆ ಭಾಸವಾಗುವ ಅವಳಿ ಗ್ಯಾಲಕ್ಸಿಗಳ ಸುಂದರ ಚಿತ್ರವನ್ನು ಹಬಲ್‌ ಈ ಬಾರಿ ಸೆರೆ ಹಿಡಿದಿದೆ.
SDSS J115331 ಮತ್ತು LEDA 2073461 ಎಂಬ ಹೆಸರಿನ ಜೋಡಿ ಗ್ಯಾಲಕ್ಸಿಗಳು ಪರಸ್ಪರ ಸಮಾಗಮಗೊಂಡಂತೆ ಭಾಸವಾಗುವ ಅಪರೂಪದ ಚಿತ್ರವನ್ನು ನಾಸಾದ ಹಬಲ್‌ ಟೆಲಿಸ್ಕೋಪ್‌ ಬಿಡುಗಡೆ ಮಾಡಿದೆ. ಆದರೆ ವಾಸ್ತವದಲ್ಲಿ ಈ ಗ್ಯಾಲಕ್ಸಿಗಳು ಪರಸ್ಪರ ಸಂ ವಹನ ನಡೆಸುತ್ತಿಲ್ಲ ಎಂದು ನಾಸಾದ ಖಗೋಳ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.
(1 / 5)
SDSS J115331 ಮತ್ತು LEDA 2073461 ಎಂಬ ಹೆಸರಿನ ಜೋಡಿ ಗ್ಯಾಲಕ್ಸಿಗಳು ಪರಸ್ಪರ ಸಮಾಗಮಗೊಂಡಂತೆ ಭಾಸವಾಗುವ ಅಪರೂಪದ ಚಿತ್ರವನ್ನು ನಾಸಾದ ಹಬಲ್‌ ಟೆಲಿಸ್ಕೋಪ್‌ ಬಿಡುಗಡೆ ಮಾಡಿದೆ. ಆದರೆ ವಾಸ್ತವದಲ್ಲಿ ಈ ಗ್ಯಾಲಕ್ಸಿಗಳು ಪರಸ್ಪರ ಸಂ ವಹನ ನಡೆಸುತ್ತಿಲ್ಲ ಎಂದು ನಾಸಾದ ಖಗೋಳ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.(Verified Twitter)
ಹಬಲ್‌ ಟೆಲಿಸ್ಕೋಪ್‌ ಬಿಡುಗಡೆ ಮಾಡಿರುವ ಚಿತ್ರದಲ್ಲಿ SDSS J115331 ಮತ್ತು LEDA 2073461 ಪರಸ್ಪರ ಘರ್ಷಣೆಯಾಗುತ್ತಿರುವಂತೆ ತೋರುತ್ತಿದ್ದರೂ, ಭೂಮಿಯ ಸ್ಥಾನದಿಂದ ನೋಡಿದಾಗ ಇವು ಪರಸ್ಪರ ಸಮಾಗಮವಾಗುತ್ತಿರುವಂತೆ ಭಾಸವಾಗುತ್ತವೆ. ಅಸಲಿಗೆ ಈ ಎರಡೂ ಗ್ಯಾಲಕ್ಸಿಗಳು ಸಾಕಷ್ಟು ದೂರದಲ್ಲಿವೆ ಎಂದು ನಾಸಾ ಹೇಳಿದೆ.
(2 / 5)
ಹಬಲ್‌ ಟೆಲಿಸ್ಕೋಪ್‌ ಬಿಡುಗಡೆ ಮಾಡಿರುವ ಚಿತ್ರದಲ್ಲಿ SDSS J115331 ಮತ್ತು LEDA 2073461 ಪರಸ್ಪರ ಘರ್ಷಣೆಯಾಗುತ್ತಿರುವಂತೆ ತೋರುತ್ತಿದ್ದರೂ, ಭೂಮಿಯ ಸ್ಥಾನದಿಂದ ನೋಡಿದಾಗ ಇವು ಪರಸ್ಪರ ಸಮಾಗಮವಾಗುತ್ತಿರುವಂತೆ ಭಾಸವಾಗುತ್ತವೆ. ಅಸಲಿಗೆ ಈ ಎರಡೂ ಗ್ಯಾಲಕ್ಸಿಗಳು ಸಾಕಷ್ಟು ದೂರದಲ್ಲಿವೆ ಎಂದು ನಾಸಾ ಹೇಳಿದೆ.(HT)
ಇನ್ನು ಹಬಲ್‌ ಬಿಡುಗಡೆ ಮಾಡಿರುವ ಮತ್ತೊಂದು ಚಿತ್ರದಲ್ಲಿ, ತ್ರಿವಳಿ ಗ್ಯಾಲಕ್ಸಿಗಳ ಸಂಗಮ ಕಂಡುಬರುತ್ತದೆ. ಈ ಮೂರು ಗ್ಯಾಲಕ್ಸಿಗಳನ್ನು ಒಟ್ಟಾಗಿ NGC 7764A ಎಂದು ಕರೆಯಲಾಗುತ್ತದೆ. ಹಬಲ್ ಬಾಹ್ಯಾಕಾಶ ದೂರದರ್ಶಕವು ತನ್ನ ಅಡ್ವಾನ್ಸ್ಡ್ ಕ್ಯಾಮೆರಾ ಮತ್ತು ವೈಡ್ ಫೀಲ್ಡ್ ಕ್ಯಾಮೆರಾ 3 ಎರಡನ್ನೂ ಬಳಸಿಕೊಂಡು ಈ ಚಿತ್ರವನ್ನು ಸೆರೆಹಿಡಿದಿದೆ.
(3 / 5)
ಇನ್ನು ಹಬಲ್‌ ಬಿಡುಗಡೆ ಮಾಡಿರುವ ಮತ್ತೊಂದು ಚಿತ್ರದಲ್ಲಿ, ತ್ರಿವಳಿ ಗ್ಯಾಲಕ್ಸಿಗಳ ಸಂಗಮ ಕಂಡುಬರುತ್ತದೆ. ಈ ಮೂರು ಗ್ಯಾಲಕ್ಸಿಗಳನ್ನು ಒಟ್ಟಾಗಿ NGC 7764A ಎಂದು ಕರೆಯಲಾಗುತ್ತದೆ. ಹಬಲ್ ಬಾಹ್ಯಾಕಾಶ ದೂರದರ್ಶಕವು ತನ್ನ ಅಡ್ವಾನ್ಸ್ಡ್ ಕ್ಯಾಮೆರಾ ಮತ್ತು ವೈಡ್ ಫೀಲ್ಡ್ ಕ್ಯಾಮೆರಾ 3 ಎರಡನ್ನೂ ಬಳಸಿಕೊಂಡು ಈ ಚಿತ್ರವನ್ನು ಸೆರೆಹಿಡಿದಿದೆ.(HT)
ಚಿತ್ರದ ಮೇಲಿನ ಬಲಭಾಗದಲ್ಲಿರುವ ಎರಡು ಗ್ಯಾಲಕ್ಸಿಗಳು ಪರಸ್ಪರ ಸಂವಹನ ನಡೆಸುತ್ತಿರುವಂತೆ ತೋರುತ್ತವೆ. ವಾಸ್ತವವಾಗಿ ಈ ತ್ರಿವಳಿ ಗ್ಯಾಲಕ್ಸಿಗಳ ನಡುವೆ ಸುದೀರ್ಘ ಅವಧಿಯಿಂದ ಸಂವಹನ ನಡೆಯುತ್ತಿದ್ದು, ಭವಿಷ್ಯದಲ್ಲಿ ಇವು ಪರಸ್ಪರ ಮುಖಾಮುಖಿಯಾಗಲಿವೆ ಎಂದು ನಾಸಾ ಸ್ಪಷ್ಟಪಡಿಸಿದೆ.
(4 / 5)
ಚಿತ್ರದ ಮೇಲಿನ ಬಲಭಾಗದಲ್ಲಿರುವ ಎರಡು ಗ್ಯಾಲಕ್ಸಿಗಳು ಪರಸ್ಪರ ಸಂವಹನ ನಡೆಸುತ್ತಿರುವಂತೆ ತೋರುತ್ತವೆ. ವಾಸ್ತವವಾಗಿ ಈ ತ್ರಿವಳಿ ಗ್ಯಾಲಕ್ಸಿಗಳ ನಡುವೆ ಸುದೀರ್ಘ ಅವಧಿಯಿಂದ ಸಂವಹನ ನಡೆಯುತ್ತಿದ್ದು, ಭವಿಷ್ಯದಲ್ಲಿ ಇವು ಪರಸ್ಪರ ಮುಖಾಮುಖಿಯಾಗಲಿವೆ ಎಂದು ನಾಸಾ ಸ್ಪಷ್ಟಪಡಿಸಿದೆ.(Verified Twitter)
ಫೀನಿಕ್ಸ್ ನಕ್ಷತ್ರಪುಂಜದಲ್ಲಿ ಭೂಮಿಯಿಂದ ಸುಮಾರು 425 ಮಿಲಿಯನ್ ಬೆಳಕಿನ ವರ್ಷಗಳ ದೂರದಲ್ಲಿರುವ NGC 7764A ತ್ರಿವಳಿ ಗ್ಯಾಲಕ್ಸಿ, ಹಬಲ್‌ ಸೆರೆಹಿಡಿದ ಅಪರೂಪದ ಛಾಯಾಚಿತ್ರಗಳಲ್ಲಿ ಒಂದು ಎಂದು ನಾಸಾ ತಿಳಿಸಿದೆ.
(5 / 5)
ಫೀನಿಕ್ಸ್ ನಕ್ಷತ್ರಪುಂಜದಲ್ಲಿ ಭೂಮಿಯಿಂದ ಸುಮಾರು 425 ಮಿಲಿಯನ್ ಬೆಳಕಿನ ವರ್ಷಗಳ ದೂರದಲ್ಲಿರುವ NGC 7764A ತ್ರಿವಳಿ ಗ್ಯಾಲಕ್ಸಿ, ಹಬಲ್‌ ಸೆರೆಹಿಡಿದ ಅಪರೂಪದ ಛಾಯಾಚಿತ್ರಗಳಲ್ಲಿ ಒಂದು ಎಂದು ನಾಸಾ ತಿಳಿಸಿದೆ.(HT)

    ಹಂಚಿಕೊಳ್ಳಲು ಲೇಖನಗಳು