logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಚಿನ್‌ರಿಂದ ಕೊಯೆಟ್ಜಿವರೆಗೆ; ವಿಶ್ವಕಪ್‌ನಲ್ಲಿ ಅಬ್ಬರಿಸಿದ ಟಾಪ್ ಐವರು ಯುವ ಆಟಗಾರರು ಇವರೇ

ರಚಿನ್‌ರಿಂದ ಕೊಯೆಟ್ಜಿವರೆಗೆ; ವಿಶ್ವಕಪ್‌ನಲ್ಲಿ ಅಬ್ಬರಿಸಿದ ಟಾಪ್ ಐವರು ಯುವ ಆಟಗಾರರು ಇವರೇ

Nov 15, 2023 06:00 AM IST

ಇಂದು (ನವೆಂಬರ್ 15, ಬುಧವಾರ) ಭಾರತ-ನ್ಯೂಜಿಲೆಂಡ್ ನಡುವೆ ಮೊದಲ ವಿಶ್ವಕಪ್ ಸೆಮಿ ಫೈನಲ್ ಫೈಟ್ ನಡೆಯಲಿದೆ. ಗ್ರೂಪ್ ಹಂತದಲ್ಲಿ ಈವರೆಗೆ ಮಿಂಚಿದ ಯುವ ಆಟಗಾರರ ಡಿಟೇಲ್ಸ್ ಇಲ್ಲಿದೆ.

ಇಂದು (ನವೆಂಬರ್ 15, ಬುಧವಾರ) ಭಾರತ-ನ್ಯೂಜಿಲೆಂಡ್ ನಡುವೆ ಮೊದಲ ವಿಶ್ವಕಪ್ ಸೆಮಿ ಫೈನಲ್ ಫೈಟ್ ನಡೆಯಲಿದೆ. ಗ್ರೂಪ್ ಹಂತದಲ್ಲಿ ಈವರೆಗೆ ಮಿಂಚಿದ ಯುವ ಆಟಗಾರರ ಡಿಟೇಲ್ಸ್ ಇಲ್ಲಿದೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಮಿಂಚಿರುವ ಪ್ರಮುಖ ಬ್ಯಾಟರ್‌ಗಳಲ್ಲಿ ನ್ಯೂಜಿಲೆಂಡ್‌ನ ಯುವ ಪ್ರತಿಭೆ ರಚಿನ್ ರವೀಂದ್ರ ಕೂಡ ಒಬ್ಬರು. 23ರ ಹರೆಯದ ಕಿವೀಸ್ ತಾರೆ ರಚಿನ್ ವಿಶ್ವಕಪ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ತಂಡದಲ್ಲಿ ಪೂರ್ಣಮಾದಲ್ಲಿ ಸ್ಥಾನ ಪಡೆದಿದ್ದಾರೆ. ಆಡಿದ 9 ಪಂದ್ಯಗಳಿಂದ 3 ಶತಕ, 2 ಅರ್ಧ ಶತಕಗಳು ಸೇರಿ 565 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.
(1 / 5)
ಈ ಬಾರಿಯ ವಿಶ್ವಕಪ್‌ನಲ್ಲಿ ಮಿಂಚಿರುವ ಪ್ರಮುಖ ಬ್ಯಾಟರ್‌ಗಳಲ್ಲಿ ನ್ಯೂಜಿಲೆಂಡ್‌ನ ಯುವ ಪ್ರತಿಭೆ ರಚಿನ್ ರವೀಂದ್ರ ಕೂಡ ಒಬ್ಬರು. 23ರ ಹರೆಯದ ಕಿವೀಸ್ ತಾರೆ ರಚಿನ್ ವಿಶ್ವಕಪ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ತಂಡದಲ್ಲಿ ಪೂರ್ಣಮಾದಲ್ಲಿ ಸ್ಥಾನ ಪಡೆದಿದ್ದಾರೆ. ಆಡಿದ 9 ಪಂದ್ಯಗಳಿಂದ 3 ಶತಕ, 2 ಅರ್ಧ ಶತಕಗಳು ಸೇರಿ 565 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.(REUTERS)
ಶ್ರೀಲಂಕಾ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ ಈ ತಂಡದಲ್ಲಿನದ್ದ ವೇಗಿ ದಿಲ್ಶನ್ ಮಧುಶಂಕ ವಿಭಿನ್ನ ರೀತಿಯಲ್ಲಿ ಛಾಪು ಮೂಡಿಸಿದ್ದಾರೆ. 23 ವರ್ಷದ ಸಿಂಹಳೀಯರ ವೇಗಿ ಮಧುಶಂಕ 9 ಪಂದ್ಯಗಳಿಂದ 21 ವಿಕೆಟ್ ಪಡೆದಿದ್ದಾರೆ. ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. 
(2 / 5)
ಶ್ರೀಲಂಕಾ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ ಈ ತಂಡದಲ್ಲಿನದ್ದ ವೇಗಿ ದಿಲ್ಶನ್ ಮಧುಶಂಕ ವಿಭಿನ್ನ ರೀತಿಯಲ್ಲಿ ಛಾಪು ಮೂಡಿಸಿದ್ದಾರೆ. 23 ವರ್ಷದ ಸಿಂಹಳೀಯರ ವೇಗಿ ಮಧುಶಂಕ 9 ಪಂದ್ಯಗಳಿಂದ 21 ವಿಕೆಟ್ ಪಡೆದಿದ್ದಾರೆ. ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. (ANI)
ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಪಂದ್ಯಗಳಲ್ಲಿ ಬೆಂಚು ಕಾದು ಆ ನಂತರ ಖಾಯಂ ಸ್ಥಾನ ಪಡೆದಿರುವ ಯುವ ವೇಗಿ ಜೆರಾಲ್ಡ್ ಕೊಯೆಟ್ಜಿ ಕೂಡ ಗಮನ ಸೆಳೆಯುವಂತ ಸಾಧನೆ ಮಾಡಿದ್ದಾರೆ. 23 ವರ್ಷದ ಕೊಯೆಟ್ಜಿ 7 ಲೀಗ್ ಪಂದ್ಯಗಳಲ್ಲಿ 18 ವಿಕೆಟ್ ಗಳಿಸಿದ್ದಾರೆ. ಲೀಗ್ ಅಂತ್ಯದ ವೇಳೆಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
(3 / 5)
ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಪಂದ್ಯಗಳಲ್ಲಿ ಬೆಂಚು ಕಾದು ಆ ನಂತರ ಖಾಯಂ ಸ್ಥಾನ ಪಡೆದಿರುವ ಯುವ ವೇಗಿ ಜೆರಾಲ್ಡ್ ಕೊಯೆಟ್ಜಿ ಕೂಡ ಗಮನ ಸೆಳೆಯುವಂತ ಸಾಧನೆ ಮಾಡಿದ್ದಾರೆ. 23 ವರ್ಷದ ಕೊಯೆಟ್ಜಿ 7 ಲೀಗ್ ಪಂದ್ಯಗಳಲ್ಲಿ 18 ವಿಕೆಟ್ ಗಳಿಸಿದ್ದಾರೆ. ಲೀಗ್ ಅಂತ್ಯದ ವೇಳೆಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.(South Africa Cricket)
ದಕ್ಷಿಣ ಆಫ್ರಿಕಾ ತಂಡದಲ್ಲಿರುವ ಯುವ ಆಟಗಾರ ಎಂದರೆ ಅದು ಆಲ್‌ರೌಂಡರ್ ಮಾರ್ಕೊ ಜಾನ್ಸೆನ್. 23 ವರ್ಷದ ಈ ಆಟಗಾರ ಕೂಡ ಗಮನ ಸೆಳೆಯುವಂತಹ ಪ್ರದರ್ಶನ ನೀಡಿದ್ದಾರೆ. ತಾನಾಡಿರುವ 8 ಪಂದ್ಯಗಳಿಂದ 17 ವಿಕೆಟ್ ಪಡೆದಿದ್ದಾರೆ. ಜಾನ್ಸೆನ್ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಅಜೇಯ 75 ರನ್ ಗಳಿಸಿ ತಂಡಕ್ಕೆ ಬ್ಯಾಟಿಂಗ್‌ನಲ್ಲೂ ನೆರವಾಗಿದ್ದಾರೆ. 
(4 / 5)
ದಕ್ಷಿಣ ಆಫ್ರಿಕಾ ತಂಡದಲ್ಲಿರುವ ಯುವ ಆಟಗಾರ ಎಂದರೆ ಅದು ಆಲ್‌ರೌಂಡರ್ ಮಾರ್ಕೊ ಜಾನ್ಸೆನ್. 23 ವರ್ಷದ ಈ ಆಟಗಾರ ಕೂಡ ಗಮನ ಸೆಳೆಯುವಂತಹ ಪ್ರದರ್ಶನ ನೀಡಿದ್ದಾರೆ. ತಾನಾಡಿರುವ 8 ಪಂದ್ಯಗಳಿಂದ 17 ವಿಕೆಟ್ ಪಡೆದಿದ್ದಾರೆ. ಜಾನ್ಸೆನ್ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಅಜೇಯ 75 ರನ್ ಗಳಿಸಿ ತಂಡಕ್ಕೆ ಬ್ಯಾಟಿಂಗ್‌ನಲ್ಲೂ ನೆರವಾಗಿದ್ದಾರೆ. 
ಈ ಬಾರಿಯ ವಿಶ್ವಕಪ್‌ನಲ್ಲಿ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಅಫ್ಘಾನಿಸ್ತಾನ ತಂಡ ಪ್ರದರ್ಶನ ನೀಡಿದೆ. ಆದರಲ್ಲೂ ಯುವ ಆಟಗಾರ ಇಬ್ರಾಹಿಂ ಜದ್ರಾನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತ ಪ್ರದರ್ಶನ ನೀಡಿದ್ದಾರೆ. 21 ವರ್ಷದ ಜದ್ರಾನ್ 9 ಲೀಗ್ ಪಂದ್ಯಗಳಿಂದ 1 ಶತಕ 1 ಅರ್ಧ ಶತಕ ಸೇರಿ 395 ರನ್ ಕಲೆಹಾಕಿದ್ದಾರೆ. 
(5 / 5)
ಈ ಬಾರಿಯ ವಿಶ್ವಕಪ್‌ನಲ್ಲಿ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಅಫ್ಘಾನಿಸ್ತಾನ ತಂಡ ಪ್ರದರ್ಶನ ನೀಡಿದೆ. ಆದರಲ್ಲೂ ಯುವ ಆಟಗಾರ ಇಬ್ರಾಹಿಂ ಜದ್ರಾನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತ ಪ್ರದರ್ಶನ ನೀಡಿದ್ದಾರೆ. 21 ವರ್ಷದ ಜದ್ರಾನ್ 9 ಲೀಗ್ ಪಂದ್ಯಗಳಿಂದ 1 ಶತಕ 1 ಅರ್ಧ ಶತಕ ಸೇರಿ 395 ರನ್ ಕಲೆಹಾಕಿದ್ದಾರೆ. (PTI)

    ಹಂಚಿಕೊಳ್ಳಲು ಲೇಖನಗಳು