logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Wtc: ಇಂಗ್ಲೆಂಡ್ ವಿರುದ್ಧ ಗೆಲುವಿನೊಂದಿಗೆ ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಜಿಗಿದ ಭಾರತ; 8ನೇ ಸ್ಥಾನದಲ್ಲೇ ಉಳಿದ ಇಂಗ್ಲೆಂಡ್

WTC: ಇಂಗ್ಲೆಂಡ್ ವಿರುದ್ಧ ಗೆಲುವಿನೊಂದಿಗೆ ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಜಿಗಿದ ಭಾರತ; 8ನೇ ಸ್ಥಾನದಲ್ಲೇ ಉಳಿದ ಇಂಗ್ಲೆಂಡ್

Feb 05, 2024 03:52 PM IST

WTC Points Table: ವಿಶಾಖಪಟ್ಟಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 106 ರನ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಬೆನ್ನಲ್ಲೇ 2023-25ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಟೀಮ್‌ ಇಂಡಿಯಾ ಎರಡನೇ ಸ್ಥಾನಕ್ಕೆ ಜಿಗಿದಿದೆ.

  • WTC Points Table: ವಿಶಾಖಪಟ್ಟಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 106 ರನ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಬೆನ್ನಲ್ಲೇ 2023-25ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಟೀಮ್‌ ಇಂಡಿಯಾ ಎರಡನೇ ಸ್ಥಾನಕ್ಕೆ ಜಿಗಿದಿದೆ.
ಇದು ಪ್ರಸಕ್ತ ಡಬಲ್ಯೂಟಿಸಿ ಸೈಕಲ್‌ನಲ್ಲಿ ಭಾರತದ ಮೂರನೇ ಜಯವಾಗಿದೆ. ಈ ಹಿಂದೆ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳಲ್ಲಿ ಭಾರತ ಗೆದ್ದಿತ್ತು.
(1 / 8)
ಇದು ಪ್ರಸಕ್ತ ಡಬಲ್ಯೂಟಿಸಿ ಸೈಕಲ್‌ನಲ್ಲಿ ಭಾರತದ ಮೂರನೇ ಜಯವಾಗಿದೆ. ಈ ಹಿಂದೆ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳಲ್ಲಿ ಭಾರತ ಗೆದ್ದಿತ್ತು.(PTI)
ಭಾರತವು ಒಟ್ಟು 6 ಪಂದ್ಯಗಳನ್ನು ಆಡಿದ್ದು, ಮೂರು ಗೆಲುವು ಸಾಧಿಸಿದೆ. ಉಳಿದಂತೆ 2 ಪಂದ್ಯದಲ್ಲಿ ಸೋತಿದ್ದು, 1 ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ. ಒಟ್ಟು 38 ಪಾಯಿಂಟ್‌ ಕಲೆ ಹಾಕಿರುವ ಭಾರತವು, 52.77 ಶೇಕಡ ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ.
(2 / 8)
ಭಾರತವು ಒಟ್ಟು 6 ಪಂದ್ಯಗಳನ್ನು ಆಡಿದ್ದು, ಮೂರು ಗೆಲುವು ಸಾಧಿಸಿದೆ. ಉಳಿದಂತೆ 2 ಪಂದ್ಯದಲ್ಲಿ ಸೋತಿದ್ದು, 1 ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ. ಒಟ್ಟು 38 ಪಾಯಿಂಟ್‌ ಕಲೆ ಹಾಕಿರುವ ಭಾರತವು, 52.77 ಶೇಕಡ ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ.(ANI)
ಮತ್ತೊಂದೆಡೆ, ಇಂಗ್ಲೆಂಡ್ ತಂಡವು ಆಡಿದ 7 ಪಂದ್ಯಗಳಲ್ಲಿ 3ರಲ್ಲಿ ಜಯ ಸಾಧಿಸಿದೆ. ಉಳಿದ ಮೂರು ಪಂದ್ಯಗಳಲ್ಲಿ ಸೋತು ಕೇವಲ 25.00 ಶೇಕಡಾ ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ.
(3 / 8)
ಮತ್ತೊಂದೆಡೆ, ಇಂಗ್ಲೆಂಡ್ ತಂಡವು ಆಡಿದ 7 ಪಂದ್ಯಗಳಲ್ಲಿ 3ರಲ್ಲಿ ಜಯ ಸಾಧಿಸಿದೆ. ಉಳಿದ ಮೂರು ಪಂದ್ಯಗಳಲ್ಲಿ ಸೋತು ಕೇವಲ 25.00 ಶೇಕಡಾ ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ.(PTI)
ಆಸ್ಟ್ರೇಲಿಯಾ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆಡಿದ 10 ಪಂದ್ಯಗಳಲ್ಲಿ ಆಸೀಸ್ 6 ಪಂದ್ಯಗಳಲ್ಲಿ ಗೆದ್ದಿದೆ.
(4 / 8)
ಆಸ್ಟ್ರೇಲಿಯಾ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆಡಿದ 10 ಪಂದ್ಯಗಳಲ್ಲಿ ಆಸೀಸ್ 6 ಪಂದ್ಯಗಳಲ್ಲಿ ಗೆದ್ದಿದೆ.(REUTERS)
ಭಾರತ ತಂಡವು ಅಗ್ರಸ್ಥಾನಕ್ಕೆ ಏರಬೇಕಾದರೆ, ಇಂಗ್ಲೆಂಡ್ ವಿರುದ್ಧದ ಉಳಿದ ಪಂದ್ಯಗಳಲ್ಲಿ ಗೆಲ್ಲಬೇಕಾಗಿದೆ.
(5 / 8)
ಭಾರತ ತಂಡವು ಅಗ್ರಸ್ಥಾನಕ್ಕೆ ಏರಬೇಕಾದರೆ, ಇಂಗ್ಲೆಂಡ್ ವಿರುದ್ಧದ ಉಳಿದ ಪಂದ್ಯಗಳಲ್ಲಿ ಗೆಲ್ಲಬೇಕಾಗಿದೆ.(PTI)
ಅತ್ತ 50 ಶೇಕಡವಾರು ಅಂಕಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್ ಮತ್ತು ಬಾಂಗ್ಲಾದೇಶ ತಂಡಗಳು ಕ್ರಮವಾಗಿ 3,4 ಮತ್ತು 5ನೇ ಸ್ಥಾನದಲ್ಲಿದೆ.
(6 / 8)
ಅತ್ತ 50 ಶೇಕಡವಾರು ಅಂಕಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್ ಮತ್ತು ಬಾಂಗ್ಲಾದೇಶ ತಂಡಗಳು ಕ್ರಮವಾಗಿ 3,4 ಮತ್ತು 5ನೇ ಸ್ಥಾನದಲ್ಲಿದೆ.(AP)
ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಸೋತಿದ್ದ ಭಾರತವು, ಎರಡನೇ ಸ್ಥಾನದಿಂದ 5ನೇ ಕುಸಿತ ಕಂಡಿತ್ತು. ಇದೀಗ ಮತ್ತೆ ಎರಡನೇ ಸ್ಥಾನವನ್ನು ಮರಳಿ ಪಡೆದಿದೆ.
(7 / 8)
ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಸೋತಿದ್ದ ಭಾರತವು, ಎರಡನೇ ಸ್ಥಾನದಿಂದ 5ನೇ ಕುಸಿತ ಕಂಡಿತ್ತು. ಇದೀಗ ಮತ್ತೆ ಎರಡನೇ ಸ್ಥಾನವನ್ನು ಮರಳಿ ಪಡೆದಿದೆ.(PTI)
ವಿಶಾಖಪಟ್ಟಣದ ಡಾ ವೈಎಸ್ ರಾಜಶೇಖರ್ ರೆಡ್ಡಿ ಕ್ರಿಕೆಟ್ ಮೈದಾನದಲ್ಲಿ ನಡೆದ ದ್ವಿತೀಯ ಟೆಸ್ಟ್‌ನಲ್ಲಿ, ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಬೆನ್‌ ಸ್ಟೋಕ್ಸ್‌ ಬಳಗವು 292 ರನ್‌ಗಳಿಗೆ ಆಲೌಟ್‌ ಆಯ್ತು. ಆ ಮೂಲಕ ಭಾರತ ಕ್ರಿಕೆಟ್‌ ತಂಡವು 106 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತವು 5 ಪಂದ್ಯಗಳ ಟೆಸ್ಟ್‌ ಸರಣಿಯು ಸದ್ಯ 1-1 ಅಂತರದಿಂದ ಸಮಬಲಗೊಂಡಿದೆ.
(8 / 8)
ವಿಶಾಖಪಟ್ಟಣದ ಡಾ ವೈಎಸ್ ರಾಜಶೇಖರ್ ರೆಡ್ಡಿ ಕ್ರಿಕೆಟ್ ಮೈದಾನದಲ್ಲಿ ನಡೆದ ದ್ವಿತೀಯ ಟೆಸ್ಟ್‌ನಲ್ಲಿ, ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಬೆನ್‌ ಸ್ಟೋಕ್ಸ್‌ ಬಳಗವು 292 ರನ್‌ಗಳಿಗೆ ಆಲೌಟ್‌ ಆಯ್ತು. ಆ ಮೂಲಕ ಭಾರತ ಕ್ರಿಕೆಟ್‌ ತಂಡವು 106 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತವು 5 ಪಂದ್ಯಗಳ ಟೆಸ್ಟ್‌ ಸರಣಿಯು ಸದ್ಯ 1-1 ಅಂತರದಿಂದ ಸಮಬಲಗೊಂಡಿದೆ.(AFP)

    ಹಂಚಿಕೊಳ್ಳಲು ಲೇಖನಗಳು