logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜಾರ್ಖಂಡ್: ಸಚಿವ ಆಲಂಗೀರ್ ಆಲಂ ಆಪ್ತ ಕಾರ್ಯದರ್ಶಿ ಮನೆ ಮೇಲೆ ಇಡಿ ದಾಳಿ, 20 ಕೋಟಿ ರೂಪಾಯಿಗೂ ಅಧಿಕ ನಗದು, ಚಿನ್ನಾಭರಣ ವಶ- ಚಿತ್ರನೋಟ

ಜಾರ್ಖಂಡ್: ಸಚಿವ ಆಲಂಗೀರ್ ಆಲಂ ಆಪ್ತ ಕಾರ್ಯದರ್ಶಿ ಮನೆ ಮೇಲೆ ಇಡಿ ದಾಳಿ, 20 ಕೋಟಿ ರೂಪಾಯಿಗೂ ಅಧಿಕ ನಗದು, ಚಿನ್ನಾಭರಣ ವಶ- ಚಿತ್ರನೋಟ

May 06, 2024 04:42 PM IST

ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ಬೆಳಗ್ಗೆ ರಾಂಚಿಯ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್ ಆಲಂ ಅವರ ವೈಯಕ್ತಿಕ ಕಾರ್ಯದರ್ಶಿ ಸಂಜೀವ್ ಲಾಲ್ ಅವರು ಕೆಲಸ ಮಾಡುತ್ತಿದ್ದ ಮನೆಯ ಸಹಾಯಕರ ನಿವಾಸದಿಂದ 20 ಕೋಟಿ ರೂ. ವಸೂಲಿಯಾದ ಹಣದ ಎಣಿಕೆ ಇನ್ನೂ ಪ್ರಕ್ರಿಯೆಯಲ್ಲಿದೆ.

ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ಬೆಳಗ್ಗೆ ರಾಂಚಿಯ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್ ಆಲಂ ಅವರ ವೈಯಕ್ತಿಕ ಕಾರ್ಯದರ್ಶಿ ಸಂಜೀವ್ ಲಾಲ್ ಅವರು ಕೆಲಸ ಮಾಡುತ್ತಿದ್ದ ಮನೆಯ ಸಹಾಯಕರ ನಿವಾಸದಿಂದ 20 ಕೋಟಿ ರೂ. ವಸೂಲಿಯಾದ ಹಣದ ಎಣಿಕೆ ಇನ್ನೂ ಪ್ರಕ್ರಿಯೆಯಲ್ಲಿದೆ.
ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್ ಆಲಂ (ಬಲ ಚಿತ್ರ) ಅವರ ವೈಯಕ್ತಿಕ ಕಾರ್ಯದರ್ಶಿ ಸಂಜೀವ್ ಲಾಲ್ ಮತ್ತು ಅವರ ಮನೆಗೆಲಸದವನ ಮನೆಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ಸೋಮವಾರ ದಾಳಿ ನಡೆಸಿತು. ಈ ಸಂದರ್ಭದಲ್ಲಿ ಪತ್ತೆಯಾದ ನಗ,ನಗದುಗಳ ರಾಶಿ (ಎಡಚಿತ್ರ).
(1 / 6)
ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್ ಆಲಂ (ಬಲ ಚಿತ್ರ) ಅವರ ವೈಯಕ್ತಿಕ ಕಾರ್ಯದರ್ಶಿ ಸಂಜೀವ್ ಲಾಲ್ ಮತ್ತು ಅವರ ಮನೆಗೆಲಸದವನ ಮನೆಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ಸೋಮವಾರ ದಾಳಿ ನಡೆಸಿತು. ಈ ಸಂದರ್ಭದಲ್ಲಿ ಪತ್ತೆಯಾದ ನಗ,ನಗದುಗಳ ರಾಶಿ (ಎಡಚಿತ್ರ).
ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ಬೆಳಗ್ಗೆ ರಾಂಚಿಯ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್ ಆಲಂ ಅವರ ವೈಯಕ್ತಿಕ ಕಾರ್ಯದರ್ಶಿ ಸಂಜೀವ್ ಲಾಲ್ ಅವರ ಮನೆಯ ಸಹಾಯಕರ ನಿವಾಸದಲ್ಲಿ ಪತ್ತೆಯಾದ ಹಣದ ರಾಶಿ. ಇದರಲ್ಲಿ ಸದ್ಯ 20 ಕೋಟಿ ರೂ. ಎಣಿಕೆಯಾಗಿದ್ದು, ಎಣಿಕೆ ಕಾರ್ಯ ಪ್ರಗತಿಯಲ್ಲಿದೆ.
(2 / 6)
ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ಬೆಳಗ್ಗೆ ರಾಂಚಿಯ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್ ಆಲಂ ಅವರ ವೈಯಕ್ತಿಕ ಕಾರ್ಯದರ್ಶಿ ಸಂಜೀವ್ ಲಾಲ್ ಅವರ ಮನೆಯ ಸಹಾಯಕರ ನಿವಾಸದಲ್ಲಿ ಪತ್ತೆಯಾದ ಹಣದ ರಾಶಿ. ಇದರಲ್ಲಿ ಸದ್ಯ 20 ಕೋಟಿ ರೂ. ಎಣಿಕೆಯಾಗಿದ್ದು, ಎಣಿಕೆ ಕಾರ್ಯ ಪ್ರಗತಿಯಲ್ಲಿದೆ.(PTI)
ಜಾರ್ಖಂಡ್ ಸಚಿವ ಅಲಂಗೀರ್ ಆಲಂ ಅವರ ಆಪ್ತರಲ್ಲಿ ಒಬ್ಬರಾದ ಜಹಾಂಗೀರ್ ಆಲಂ ಅವರ ನಿವಾಸದಲ್ಲಿ ಸಿಆರ್‌ಪಿಎಫ್ ಪಹರೆ. ರಾಂಚಿಯಲ್ಲಿ ನಡೆಸಿದ ಶೋಧದ ವೇಳೆ ಇಡಿ ಅಪಾರ ಪ್ರಮಾಣದ "ಲೆಕ್ಕಪತ್ರವಿಲ್ಲದ" ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
(3 / 6)
ಜಾರ್ಖಂಡ್ ಸಚಿವ ಅಲಂಗೀರ್ ಆಲಂ ಅವರ ಆಪ್ತರಲ್ಲಿ ಒಬ್ಬರಾದ ಜಹಾಂಗೀರ್ ಆಲಂ ಅವರ ನಿವಾಸದಲ್ಲಿ ಸಿಆರ್‌ಪಿಎಫ್ ಪಹರೆ. ರಾಂಚಿಯಲ್ಲಿ ನಡೆಸಿದ ಶೋಧದ ವೇಳೆ ಇಡಿ ಅಪಾರ ಪ್ರಮಾಣದ "ಲೆಕ್ಕಪತ್ರವಿಲ್ಲದ" ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.(PTI)
ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿನ ಅಕ್ರಮಗಳಿಗೆ ಸಂಬಂಧಿಸಿ 2023ರ ಫೆಬ್ರವರಿಯಲ್ಲಿಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಇಂಜಿನಿಯರ್ ವೀರೇಂದ್ರ ಕೆ. ರಾಮ್  ಬಂಧಿಸಲ್ಪಟ್ಟಿದ್ದರು. ಅವರನ್ನು ಒಳಗೊಂಡ ಪ್ರಕರಣಕ್ಕೆ ಸಂಬಂಧಿಸಿ ನಡೆಯುತ್ತಿರುವ ತನಿಖೆಯ ಭಾಗವಾಗಿ ಈ ದಾಳಿಗಳು ನಡೆಯುತ್ತಿವೆ.
(4 / 6)
ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿನ ಅಕ್ರಮಗಳಿಗೆ ಸಂಬಂಧಿಸಿ 2023ರ ಫೆಬ್ರವರಿಯಲ್ಲಿಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಇಂಜಿನಿಯರ್ ವೀರೇಂದ್ರ ಕೆ. ರಾಮ್  ಬಂಧಿಸಲ್ಪಟ್ಟಿದ್ದರು. ಅವರನ್ನು ಒಳಗೊಂಡ ಪ್ರಕರಣಕ್ಕೆ ಸಂಬಂಧಿಸಿ ನಡೆಯುತ್ತಿರುವ ತನಿಖೆಯ ಭಾಗವಾಗಿ ಈ ದಾಳಿಗಳು ನಡೆಯುತ್ತಿವೆ.(PTI)
ರಾಂಚಿಯ ಹಲವು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯವು ದಾಳಿ ನಡೆಸಿದ್ದು, ಸಚಿವ ಅಲಂಗೀರ್ ಆಲಂ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಅವರ ಮನೆಸಹಾಯಕರ ಮನೆಯಲ್ಲಿದ್ದ ಅಪಾರ ಪ್ರಮಾಣದ ಹಣವನ್ನು ವಶಪಡಿಸಿಕೊಂಡಿದೆ. 20 ಕೋಟಿಗೂ ಹೆಚ್ಚು ಹಣವನ್ನು ಎಣಿಸಲಾಗಿದ್ದು, ಎಣಿಕೆ ಪ್ರಕ್ರಿಯೆಯಲ್ಲಿದೆ" ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
(5 / 6)
ರಾಂಚಿಯ ಹಲವು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯವು ದಾಳಿ ನಡೆಸಿದ್ದು, ಸಚಿವ ಅಲಂಗೀರ್ ಆಲಂ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಅವರ ಮನೆಸಹಾಯಕರ ಮನೆಯಲ್ಲಿದ್ದ ಅಪಾರ ಪ್ರಮಾಣದ ಹಣವನ್ನು ವಶಪಡಿಸಿಕೊಂಡಿದೆ. 20 ಕೋಟಿಗೂ ಹೆಚ್ಚು ಹಣವನ್ನು ಎಣಿಸಲಾಗಿದ್ದು, ಎಣಿಕೆ ಪ್ರಕ್ರಿಯೆಯಲ್ಲಿದೆ" ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.(PTI)
ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ರಾಂಚಿಯಲ್ಲಿ ದಾಳಿ ನಡೆಸುತ್ತಿದ್ದಾಗ, ಸಚಿವ ಅಲಂಗೀರ್ ಆಲಂ ಲೋಕಸಭಾ ಚುನಾವಣೆ ಪ್ರಚಾರದಲ್ಲಿದ್ದರು.
(6 / 6)
ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ರಾಂಚಿಯಲ್ಲಿ ದಾಳಿ ನಡೆಸುತ್ತಿದ್ದಾಗ, ಸಚಿವ ಅಲಂಗೀರ್ ಆಲಂ ಲೋಕಸಭಾ ಚುನಾವಣೆ ಪ್ರಚಾರದಲ್ಲಿದ್ದರು.(PTI)

    ಹಂಚಿಕೊಳ್ಳಲು ಲೇಖನಗಳು