logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ; ಆಶಾ ಶೋಭನಾ ಸೇರಿ ಐವರು ಆರ್‌ಸಿಬಿ ಆಟಗಾರ್ತಿಯರಿಗೆ ಮಣೆ

ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ; ಆಶಾ ಶೋಭನಾ ಸೇರಿ ಐವರು ಆರ್‌ಸಿಬಿ ಆಟಗಾರ್ತಿಯರಿಗೆ ಮಣೆ

Apr 16, 2024 06:06 PM IST

ಕ್ರಿಕೆಟ್‌ನಿಂದ ಬಹುತೇಕ ಹೊರಗುಳಿದಿದ್ದ ಅನುಭವಿ ಲೆಗ್ ಸ್ಪಿನ್ನರ್ ಆಶಾ ಶೋಭನಾ, ಡಬ್ಲ್ಯುಪಿಎಲ್‌ 2ನೇ ಆವೃತ್ತಿಯಲ್ಲಿ ಮಿಂಚಿದ್ದರು. ಆರ್‌ಸಿಬಿ ತಂಡವು ಚೊಚ್ಚಲ ಟ್ರೋಫಿ ಎತ್ತಿಹಿಡಿಯುವಲ್ಲಿ ಮಹತ್ವದ ಪಾತ್ರವಹಿಸಿದ್ದ ಆಟಗಾರ್ತಿ, ಇದೇ ಮೊದಲ ಬಾರಿಗೆ ಭಾರತ ವನಿತೆಯರ ಕ್ರಿಕೆಟ್‌ ತಂಡಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಂಡದಲ್ಲಿ ಆರ್‌ಸಿಬಿ ಆಟಗಾರ್ತಿಯರೇ ಹೆಚ್ಚಿದ್ದಾರೆ.

  • ಕ್ರಿಕೆಟ್‌ನಿಂದ ಬಹುತೇಕ ಹೊರಗುಳಿದಿದ್ದ ಅನುಭವಿ ಲೆಗ್ ಸ್ಪಿನ್ನರ್ ಆಶಾ ಶೋಭನಾ, ಡಬ್ಲ್ಯುಪಿಎಲ್‌ 2ನೇ ಆವೃತ್ತಿಯಲ್ಲಿ ಮಿಂಚಿದ್ದರು. ಆರ್‌ಸಿಬಿ ತಂಡವು ಚೊಚ್ಚಲ ಟ್ರೋಫಿ ಎತ್ತಿಹಿಡಿಯುವಲ್ಲಿ ಮಹತ್ವದ ಪಾತ್ರವಹಿಸಿದ್ದ ಆಟಗಾರ್ತಿ, ಇದೇ ಮೊದಲ ಬಾರಿಗೆ ಭಾರತ ವನಿತೆಯರ ಕ್ರಿಕೆಟ್‌ ತಂಡಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಂಡದಲ್ಲಿ ಆರ್‌ಸಿಬಿ ಆಟಗಾರ್ತಿಯರೇ ಹೆಚ್ಚಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವನಿತೆಯರ ತಂಡವು ಎರಡನೇ ಸೀಸನ್‌ನಲ್ಲಿ ಟ್ರೋಫಿ ಎತ್ತಿ ಹಿಡಿಯಿತು. ಇದರಲ್ಲಿ ಆಶಾ ಪಾತ್ರ ಪ್ರಮುಖವಾಗಿತ್ತು. ಆಡಿದ 10 ಪಂದ್ಯಗಳಲ್ಲಿ 12 ವಿಕೆಟ್‌ಗಳೊಂದಿಗೆ ಪಂದ್ಯಾವಳಿಯಲ್ಲಿ ಜಂಟಿಯಾಗಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿಯಾಗಿ ಹೊರಹೊಮ್ಮಿದರು. ಇವರು ಇದೀಗ ಭಾರತ ತಂಡಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬಾಂಗ್ಲಾ ವಿರುದ್ಧದ ಟಿ20 ಸರಣಿಗೆ ಐವರು ಆರ್‌ಸಿಬಿ ಆಟಗಾರ್ತಿಯರು ಆಯ್ಕೆಯಾಗಿದ್ದಾರೆ.
(1 / 7)
ರಾಯಲ್ ಚಾಲೆಂಜರ್ಸ್ ಬೆಂಗಳೂರು ವನಿತೆಯರ ತಂಡವು ಎರಡನೇ ಸೀಸನ್‌ನಲ್ಲಿ ಟ್ರೋಫಿ ಎತ್ತಿ ಹಿಡಿಯಿತು. ಇದರಲ್ಲಿ ಆಶಾ ಪಾತ್ರ ಪ್ರಮುಖವಾಗಿತ್ತು. ಆಡಿದ 10 ಪಂದ್ಯಗಳಲ್ಲಿ 12 ವಿಕೆಟ್‌ಗಳೊಂದಿಗೆ ಪಂದ್ಯಾವಳಿಯಲ್ಲಿ ಜಂಟಿಯಾಗಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿಯಾಗಿ ಹೊರಹೊಮ್ಮಿದರು. ಇವರು ಇದೀಗ ಭಾರತ ತಂಡಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬಾಂಗ್ಲಾ ವಿರುದ್ಧದ ಟಿ20 ಸರಣಿಗೆ ಐವರು ಆರ್‌ಸಿಬಿ ಆಟಗಾರ್ತಿಯರು ಆಯ್ಕೆಯಾಗಿದ್ದಾರೆ.
ಏಪ್ರಿಲ್ 28ರಿಂದ ಬಾಂಗ್ಲಾದೇಶದ ಸಿಲ್ಹೆಟ್‌ನಲ್ಲಿ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಭಾರತ ವನಿತೆಯರ ಕ್ರಿಕೆಟ್‌ ತಂಡದಲ್ಲಿ ಆಶಾ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ಸಜನಾ ಸಜೀವನ್‌ ಕೂಡಾ ಟೀಮ್‌ ಇಂಡಿಯಾ ಪದಾರ್ಪಣೆಗೆ ಸಜ್ಜಾಗಿದ್ದಾರೆ.
(2 / 7)
ಏಪ್ರಿಲ್ 28ರಿಂದ ಬಾಂಗ್ಲಾದೇಶದ ಸಿಲ್ಹೆಟ್‌ನಲ್ಲಿ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಭಾರತ ವನಿತೆಯರ ಕ್ರಿಕೆಟ್‌ ತಂಡದಲ್ಲಿ ಆಶಾ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ಸಜನಾ ಸಜೀವನ್‌ ಕೂಡಾ ಟೀಮ್‌ ಇಂಡಿಯಾ ಪದಾರ್ಪಣೆಗೆ ಸಜ್ಜಾಗಿದ್ದಾರೆ.(Women's Premier League Twitter)
ಯುಪಿ ವಾರಿಯರ್ಜ್ ವಿರುದ್ಧ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಋತುವಿನ ಮೊದಲ ಪಂದ್ಯದಲ್ಲಿ ಐದು ವಿಕೆಟ್‌ ಕಬಳಿಸಿದ್ದ ಆಶಾ, ಆ ಬಳಿಕ ತಂಡ ಫೈನಲ್‌ ಪ್ರವೇಶಿಸುವಲ್ಲೂ ಪ್ರಮುಖ ಪಾತ್ರ ವಹಿಸಿದರು. ಮುಂಬೈ ವಿರುದ್ಧ ಗೆಲುವಿನಲ್ಲಿ ನಿರ್ಣಾಯಕ ಆಟವಾಡಿದ್ದ ಅವರು, ಆ ಬಳಕ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಫೈನಲ್‌ನಲ್ಲೂ ಮಿಂಚಿದ್ದರು. ಮೂರು ಓವರ್‌ಗಳಲ್ಲಿ ಕೇವಲ 14 ರನ್ ಬಿಟ್ಟುಕೊಟ್ಟು ಮರಿಜಾನ್ನೆ ಕಪ್ ಮತ್ತು ಜೆಸ್ ಜೊನಾಸ್ಸೆನ್ ವಿಕೆಟ್‌ಗಳನ್ನು ಕಬಳಿಸಿದ್ದರು.
(3 / 7)
ಯುಪಿ ವಾರಿಯರ್ಜ್ ವಿರುದ್ಧ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಋತುವಿನ ಮೊದಲ ಪಂದ್ಯದಲ್ಲಿ ಐದು ವಿಕೆಟ್‌ ಕಬಳಿಸಿದ್ದ ಆಶಾ, ಆ ಬಳಿಕ ತಂಡ ಫೈನಲ್‌ ಪ್ರವೇಶಿಸುವಲ್ಲೂ ಪ್ರಮುಖ ಪಾತ್ರ ವಹಿಸಿದರು. ಮುಂಬೈ ವಿರುದ್ಧ ಗೆಲುವಿನಲ್ಲಿ ನಿರ್ಣಾಯಕ ಆಟವಾಡಿದ್ದ ಅವರು, ಆ ಬಳಕ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಫೈನಲ್‌ನಲ್ಲೂ ಮಿಂಚಿದ್ದರು. ಮೂರು ಓವರ್‌ಗಳಲ್ಲಿ ಕೇವಲ 14 ರನ್ ಬಿಟ್ಟುಕೊಟ್ಟು ಮರಿಜಾನ್ನೆ ಕಪ್ ಮತ್ತು ಜೆಸ್ ಜೊನಾಸ್ಸೆನ್ ವಿಕೆಟ್‌ಗಳನ್ನು ಕಬಳಿಸಿದ್ದರು.(AFP)
ಅತ್ತ ಡಬ್ಲ್ಯೂಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ ಅಮೋಘ ಪ್ರದರ್ಶನ ನೀಡಿದ 29 ವರ್ಷದ ಸಜನಾ ಸಜೀವನ್ ಕೂಡಾ ಭಾರತ ಟಿ20 ಸರಣಿಗೆ ಆಯ್ಕೆಯಾಗಿದ್ದಾರೆ. ಕೇರಳ ತಂಡದ ಆಲ್‌ರೌಂಡರ್ ಆಗಿರುವ ಸಜನಾ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಸಿಕ್ಸರ್‌ ಸಿಡಿಸಿ ತಂಡವನ್ನು ಗೆಲ್ಲಿಸಿ ಮಿಂಚಿದ್ದರು. ವಯನಾಡ್ ಮೂಲದ ಸಜನಾ, ಆಫ್ ಸ್ಪಿನ್ ಬೌಲಿಂಗ್ ಕೂಡ ಮಾಡುತ್ತಾರೆ.
(4 / 7)
ಅತ್ತ ಡಬ್ಲ್ಯೂಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ ಅಮೋಘ ಪ್ರದರ್ಶನ ನೀಡಿದ 29 ವರ್ಷದ ಸಜನಾ ಸಜೀವನ್ ಕೂಡಾ ಭಾರತ ಟಿ20 ಸರಣಿಗೆ ಆಯ್ಕೆಯಾಗಿದ್ದಾರೆ. ಕೇರಳ ತಂಡದ ಆಲ್‌ರೌಂಡರ್ ಆಗಿರುವ ಸಜನಾ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಸಿಕ್ಸರ್‌ ಸಿಡಿಸಿ ತಂಡವನ್ನು ಗೆಲ್ಲಿಸಿ ಮಿಂಚಿದ್ದರು. ವಯನಾಡ್ ಮೂಲದ ಸಜನಾ, ಆಫ್ ಸ್ಪಿನ್ ಬೌಲಿಂಗ್ ಕೂಡ ಮಾಡುತ್ತಾರೆ.(PTI)
ಇದೀಗ ಟಿ20 ಸರಣಿಗೆ ಆಯ್ಕೆಯಾಗಿರುವ ಆಶಾ, ಇಲ್ಲಿ ಯಶಸ್ವಿಯಾದರೆ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶದಲ್ಲಿ ನಡೆಯಲಿರುವ ಟಿ20 ಮಹಿಳಾ ವಿಶ್ವಕಪ್‌ಗೆ ಆಯ್ಕೆಯಾಗುವ ಸಾಧ್ಯತೆಯಿದೆ.
(5 / 7)
ಇದೀಗ ಟಿ20 ಸರಣಿಗೆ ಆಯ್ಕೆಯಾಗಿರುವ ಆಶಾ, ಇಲ್ಲಿ ಯಶಸ್ವಿಯಾದರೆ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶದಲ್ಲಿ ನಡೆಯಲಿರುವ ಟಿ20 ಮಹಿಳಾ ವಿಶ್ವಕಪ್‌ಗೆ ಆಯ್ಕೆಯಾಗುವ ಸಾಧ್ಯತೆಯಿದೆ.(AFP)
ಭಾರತ 16 ಸದಸ್ಯರ ತಂಡದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಕಾಣಿಸಿಕೊಂಡಿಲ್ಲ. ಅತ್ತ ಆರ್‌ಸಿಬಿ ಪರ ಅಬ್ಬರಿಸಿ ಪರ್ಪಲ್‌ ಕ್ಯಾಪ್ ಗೆದ್ದಿದ್ದ ಕನ್ನಡತಿ ಶ್ರೇಯಾಂಕಾ ಪಾಟೀಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
(6 / 7)
ಭಾರತ 16 ಸದಸ್ಯರ ತಂಡದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಕಾಣಿಸಿಕೊಂಡಿಲ್ಲ. ಅತ್ತ ಆರ್‌ಸಿಬಿ ಪರ ಅಬ್ಬರಿಸಿ ಪರ್ಪಲ್‌ ಕ್ಯಾಪ್ ಗೆದ್ದಿದ್ದ ಕನ್ನಡತಿ ಶ್ರೇಯಾಂಕಾ ಪಾಟೀಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ.(PTI)
ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಭಾರತ ವನಿತೆಯರ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದಯಾಲನ್ ಹೇಮಲತಾ, ಸಜನಾ ಸಜೀವನ್, ರಿಚಾ ಘೋಷ್ (ವಿಕೆಟ್‌ ಕೀಪರ್), ಯಾಸ್ತಿಕಾ ಭಾಟಿಯಾ (ವಿಕೆಟ್‌ ಕೀಪರ್), ರಾಧಾ ಯಾದವ್, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಅಮಂಜೋತ್ ಕೌರ್, ಶ್ರೇಯಾಂಕಾ ಪಾಟೀಲ್, ಸೈಕಾ ಇಶಾಕ್, ಆಶಾ ಶೋಭನಾ, ರೇಣುಕಾ ಸಿಂಗ್ ಠಾಕೂರ್, ಟಿಟಾಸ್ ಸಾಧು.
(7 / 7)
ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಭಾರತ ವನಿತೆಯರ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದಯಾಲನ್ ಹೇಮಲತಾ, ಸಜನಾ ಸಜೀವನ್, ರಿಚಾ ಘೋಷ್ (ವಿಕೆಟ್‌ ಕೀಪರ್), ಯಾಸ್ತಿಕಾ ಭಾಟಿಯಾ (ವಿಕೆಟ್‌ ಕೀಪರ್), ರಾಧಾ ಯಾದವ್, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಅಮಂಜೋತ್ ಕೌರ್, ಶ್ರೇಯಾಂಕಾ ಪಾಟೀಲ್, ಸೈಕಾ ಇಶಾಕ್, ಆಶಾ ಶೋಭನಾ, ರೇಣುಕಾ ಸಿಂಗ್ ಠಾಕೂರ್, ಟಿಟಾಸ್ ಸಾಧು.(BCCI)

    ಹಂಚಿಕೊಳ್ಳಲು ಲೇಖನಗಳು