logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಾಯ್ದಿರಿಸದ ಟಿಕೆಟ್ ಬುಕಿಂಗ್ ಮತ್ತಷ್ಟು ಸುಲಭ; ಯುಟಿಎಸ್ ಆ್ಯಪ್ ಬಳಸಿ ಟಿಕೆಟ್ ಬುಕ್ ಮಾಡುವ ವಿಧಾನ ಹೀಗಿದೆ; ಫೋಟೊಸ್

ಕಾಯ್ದಿರಿಸದ ಟಿಕೆಟ್ ಬುಕಿಂಗ್ ಮತ್ತಷ್ಟು ಸುಲಭ; ಯುಟಿಎಸ್ ಆ್ಯಪ್ ಬಳಸಿ ಟಿಕೆಟ್ ಬುಕ್ ಮಾಡುವ ವಿಧಾನ ಹೀಗಿದೆ; ಫೋಟೊಸ್

Apr 29, 2024 05:24 PM IST

ಕಾಯ್ದಿರಿಸದ ಟಿಕೆಟ್ ಸೌಲಭ್ಯ ಒದಗಿಸುವ ಅನ್ ರಿಸರ್ವ್ಡ್ ಟಿಕೆಟಿಂಗ್ ಸಿಸ್ಟಮ್-ಯುಟಿಎಸ್ ಮೊಬೈಲ್ ಆ್ಯಪ್‌ ಪ್ರಯೋಜನಕಾರಿಯಾಗಿದೆ. ಆ್ಯಪ್ ಬಳಸಿ ಎಲ್ಲಿಂದ ಬೇಕಾದರೂ ಟಿಕೆಟ್ ಬುಕ್ ಮಾಡಬಹುದು. ಇದರ ಉಪಯೋಗಗಳು ಹಾಗೂ ಬಳಸುವ ವಿಧಾನ ಇಲ್ಲಿದೆ.

  • ಕಾಯ್ದಿರಿಸದ ಟಿಕೆಟ್ ಸೌಲಭ್ಯ ಒದಗಿಸುವ ಅನ್ ರಿಸರ್ವ್ಡ್ ಟಿಕೆಟಿಂಗ್ ಸಿಸ್ಟಮ್-ಯುಟಿಎಸ್ ಮೊಬೈಲ್ ಆ್ಯಪ್‌ ಪ್ರಯೋಜನಕಾರಿಯಾಗಿದೆ. ಆ್ಯಪ್ ಬಳಸಿ ಎಲ್ಲಿಂದ ಬೇಕಾದರೂ ಟಿಕೆಟ್ ಬುಕ್ ಮಾಡಬಹುದು. ಇದರ ಉಪಯೋಗಗಳು ಹಾಗೂ ಬಳಸುವ ವಿಧಾನ ಇಲ್ಲಿದೆ.
ಕಾಯ್ದಿರಿಸಿದ ಟಿಕೆಟ್‌ಗಳನ್ನು ಬುಕ್‌ ಮಾಡಲು ರೈಲ್ವೆ ನಿಲ್ದಾಣಗಳ ಟಿಕೆಟ್ ಕೌಂಟರ್‌ಗಳ ಬಳಿ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸುವುದು, ರೈಲು ತಪ್ಪಿಸಿಕೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕಾಯ್ದಿರಿಸದ ಟಿಕೆಟ್ ವ್ಯವಸ್ಥೆ-ಯುಟಿಎಸ್ ಮೊಬೈಲ್ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ.
(1 / 9)

ಪ್ರಯಾಣ ಮಾಡುವ ದಿನಾಂಕಕ್ಕಿಂತ ಮೂರು ದಿನಗಳ ಮುಂಚಿತವಾಗಿ ಈ ಆ್ಯಪ್‌ನಲ್ಲಿ ಕಾಯ್ದಿರಿಸದ ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳಬಹುದು.
(2 / 9)

ಪ್ರಯಾಣಿಕರೊಬ್ಬರು ತಾವಿರುವ ಸ್ಥಳದಿಂದಲೇ ಯಾವುದೇ ನಿಲ್ದಾಣಕ್ಕೆ ಯುಟಿಎಸ್‌ ಕೌಂಟರ್‌ನಲ್ಲೇ ಟಿಕೆಟ್ ಖರೀದಿಸಬಹುದು. ಟಿಕೆಟ್ ರದ್ದು ಮಾಡುವ ವ್ಯವಸ್ಥೆಯನ್ನು ಸುಲಭಗೊಳಿಸಲಾಗಿದೆ.
(3 / 9)

ಕಾಯ್ದಿರಿಸದ ಟಿಕೆಟ್ ವ್ಯವಸ್ಥೆ ಯುಟಿಎಸ್‌ ಮೊಬೈಲ್ ಆ್ಯಪ್ ಅನ್ನು ಸೆಂಟರ್ ಫಾರ್ ರೈಲ್ವೆ ಇನ್ಫಾರ್ಮೆಷನ್ ಸಿಸ್ಟಮ್ (ಸಿಆರ್‌ಐಎಸ್) 2014ರಲ್ಲಿ ಆರಂಭಿಸಿತ್ತು
(4 / 9)

ಆಂಡ್ರಾಯ್ಡ್ ಮತ್ತು ಐಒಎಸ್ ಮೊಬೈಲ್ ಫೋನ್‌ಗಳಿಗೆ ಯುಟಿಎಸ್ ಆ್ಯಪ್ ಲಭ್ಯವಿದೆ. ಈ ಆ್ಯಪ್‌ನಲ್ಲಿ ಕಾಯ್ದಿರಿಸದ ಟಿಕೆಟ್, ಪ್ಲಾಟ್‌ಫಾರ್ಮ್ ಟಿಕೆಟ್, ಸೀಸನ್ ಟಿಕೆಟ್, ಟಿಕೆಟ್ ರದ್ದು ಗೊಳಿಸುವುದು ಸೇರಿ ಹಲವು ಸೌಲಭ್ಯಗಳಿವೆ.
(5 / 9)

ಹಂತ 1 - ಯುಟಿಎಸ್‌ನಲ್ಲಿ ಟಿಕೆಟ್ ಬುಕಿಂಗ್ ಮಾಡಿಕೊಳ್ಳುವ ವಿಧಾನವನ್ನು ಇಲ್ಲಿ ನೀಡಲಾಗಿದೆ. ನಿಮ್ಮ ಮೊಬೈಲ್‌ ಫೋನ್‌ನಲ್ಲಿ ಯುಟಿಎಸ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದರೆ, ನಿಮ್ಮ ಫೋನ್ ನಂಬರ್, ಹೆಸರು, ಲಿಂಗ ಹಾಗೂ ಜನ್ಮ ದಿನಾಂಕಗೊಂದಿಗೆ ಆ್ಯಪ್ ಸೈನ್‌ಅಪ್ ಮಾಡಿ. 
(6 / 9)

ಹಂತ 2 - ಯುಟಿಎಸ್‌ಗೆ ವೈಯಕ್ತಿಕ ಪಾಸ್‌ವರ್ಡ್ ರಚಿಸಿಕೊಳ್ಳಿ. ಮೊಬೈಲ್ ಅಪ್ಲಿಕೇಷನ್‌ನ ನಿಮಯಗಳು ಮತ್ತು ಷರತ್ತುಗಳಿಗೆ ಸಮ್ಮತಿ ಸೂಚಿಸಿ. ರಿಜಿಸ್ಚರ್ ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಯೂಸರ್ ಐಡಿ ಮತ್ತುು ಪಾಸ್‌ವರ್ಡ್ ನಮೂದಿಸಿ
(7 / 9)

ಹಂತ 3 - ಪೇಪರ್‌ಲೆಸ್ ಮತ್ತು ಪೇಪರ್ ಎರಡರಲ್ಲಿ ಒಂದನ್ನ ಆಯ್ಕೆ ಮಾಡಿ. ಹಂತ 4 - ರೈಲು ಹತ್ತುವ ನಿಲ್ದಾಣ ಮತ್ತು ತಲುಪಬೇಕಾದ ನಿಲ್ದಾಣವನ್ನು ಆಯ್ಕೆ ಮಾಡಿ. ಟಿಕೆಟ್ ಬೆಲೆ ಪಡೆಯಿರಿ
(8 / 9)

ಹಂತ 5 - ಇದಾದ ಬಳಿಕ ಬುಕ್ ಟಿಕೆಟ್ ಮೇಲೆ ಕ್ಲಿಕ್ ಮಾಡಿ. ಟಿಕೆಟ್ ಹಣ ಪಾವತಿಸುವ ವಿಧಾನವನ್ನು ಅನುಸರಿಸಿ. ಆರ್-ವ್ಯಾಲೆಟ್, ಯುಪಿಐ, ನೆಟ್ ಬ್ಯಾಂಕಿಂಗ್, ಕಾರ್ಡ್ ಸೇರಿ ಯಾವುದಾದರೂ ಒಂದು ಆಯ್ಕೆಯೊಂದಿಗೆ ಟಿಕೆಟ್ ಹಣ ಪಾವತಿಸಿ. ಶೋ ಟಿಕೆಟ್ ಅನ್ನು ಆಯ್ಕೆ ಮಾಡುವ ಮೂಲಕ ನೀವು ಕಾಯ್ದಿರಿಸದ ಟಿಕೆಟ್ ಬುಕ್ ಮಾಡಿರುವುದನ್ನು ವೀಕ್ಷಿಸಬಹುದು.
(9 / 9)

    ಹಂಚಿಕೊಳ್ಳಲು ಲೇಖನಗಳು