logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಶ್ರೀಲಂಕಾ ಕ್ರಿಕೆಟ್‌ ಮೇಲಿನ ಅಮಾನತು ಶಿಕ್ಷೆ ತೆರವುಗೊಳಿಸಿದ ಐಸಿಸಿ

ಶ್ರೀಲಂಕಾ ಕ್ರಿಕೆಟ್‌ ಮೇಲಿನ ಅಮಾನತು ಶಿಕ್ಷೆ ತೆರವುಗೊಳಿಸಿದ ಐಸಿಸಿ

Jan 29, 2024 03:07 PM IST

ಶ್ರೀಲಂಕಾ ಕ್ರಿಕೆಟ್‌ ಮಂಡಳಿ (Sri Lanka Cricket -SLC) ಮೇಲೆ ವಿಧಿಸಿದ್ದ ಅಮಾನತು ಶಿಕ್ಷೆಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯು ತಕ್ಷಣದಿಂದ ಜಾರಿಗೆ ಬರುವಂತೆ ತೆಗೆದುಹಾಕಿದೆ. ಈ ಕುರಿತು ಜನವರಿ 28ರ ಭಾನುವಾರ ಐಸಿಸಿ ತಿಳಿಸಿದೆ.

  • ಶ್ರೀಲಂಕಾ ಕ್ರಿಕೆಟ್‌ ಮಂಡಳಿ (Sri Lanka Cricket -SLC) ಮೇಲೆ ವಿಧಿಸಿದ್ದ ಅಮಾನತು ಶಿಕ್ಷೆಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯು ತಕ್ಷಣದಿಂದ ಜಾರಿಗೆ ಬರುವಂತೆ ತೆಗೆದುಹಾಕಿದೆ. ಈ ಕುರಿತು ಜನವರಿ 28ರ ಭಾನುವಾರ ಐಸಿಸಿ ತಿಳಿಸಿದೆ.
ಐಸಿಸಿ ಸದಸ್ಯನಾಗಿ ತನ್ನ ಜವಾಬ್ದಾರಿಗಳನ್ನು ಗಂಭೀರವಾಗಿ ಉಲ್ಲಂಘಿಸಿದ್ದಕ್ಕಾಗಿ ಕಳೆದ ವರ್ಷದ ನವೆಂಬರ್‌ನಲ್ಲಿ ಶ್ರೀಲಂಕಾ ಕ್ರಿಕೆಟ್‌ ಅನ್ನು ಐಸಿಸಿಯು ಅಮಾನತುಗೊಳಿಸಿತ್ತು. 
(1 / 6)
ಐಸಿಸಿ ಸದಸ್ಯನಾಗಿ ತನ್ನ ಜವಾಬ್ದಾರಿಗಳನ್ನು ಗಂಭೀರವಾಗಿ ಉಲ್ಲಂಘಿಸಿದ್ದಕ್ಕಾಗಿ ಕಳೆದ ವರ್ಷದ ನವೆಂಬರ್‌ನಲ್ಲಿ ಶ್ರೀಲಂಕಾ ಕ್ರಿಕೆಟ್‌ ಅನ್ನು ಐಸಿಸಿಯು ಅಮಾನತುಗೊಳಿಸಿತ್ತು. (AFP)
ಮುಖ್ಯವಾಗಿ ಕ್ರಿಕೆಟ್‌ ಕುರಿತು ಎಲ್ಲಾ ಆಗುಹೋಗುಗಳನ್ನು ಸ್ವಾಯತ್ತವಾಗಿ ನಿರ್ವಹಿಸುವ ಅಗತ್ಯವನ್ನು ಐಸಿಸಿ ಒತ್ತಿ ಹೇಳಿತ್ತು. ಕ್ರಿಕೆಟ್‌ ಸಂಬಂಧಿತ ಚಟುವಟಿಕೆಗಳಲ್ಲಿ ಮತ್ತು ಸರ್ಕಾರದ ಹಸ್ತಕ್ಷೇಪ ಆಗದಂತೆ ಖಚಿತಪಡಿಸಿಕೊಳ್ಬೇಕು ಎಂದು ಐಸಿಸಿ ಹೇಳಿತ್ತು.
(2 / 6)
ಮುಖ್ಯವಾಗಿ ಕ್ರಿಕೆಟ್‌ ಕುರಿತು ಎಲ್ಲಾ ಆಗುಹೋಗುಗಳನ್ನು ಸ್ವಾಯತ್ತವಾಗಿ ನಿರ್ವಹಿಸುವ ಅಗತ್ಯವನ್ನು ಐಸಿಸಿ ಒತ್ತಿ ಹೇಳಿತ್ತು. ಕ್ರಿಕೆಟ್‌ ಸಂಬಂಧಿತ ಚಟುವಟಿಕೆಗಳಲ್ಲಿ ಮತ್ತು ಸರ್ಕಾರದ ಹಸ್ತಕ್ಷೇಪ ಆಗದಂತೆ ಖಚಿತಪಡಿಸಿಕೊಳ್ಬೇಕು ಎಂದು ಐಸಿಸಿ ಹೇಳಿತ್ತು.(AFP)
ಕ್ರಿಕೆಟ್‌ ಮಂಡಳಿಯನ್ನು ಅಮಾನತುಗೊಳಿಸಿದಾಗಿನಿಂದ ಐಸಿಸಿಯು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ಸದ್ಯ ಸದಸ್ಯತ್ವದ ಬಾಧ್ಯತೆಗಳನ್ನು ಲಂಕಾ ಮಂಡಳಿಯು ಉಲ್ಲಂಘಿಸುವುದಿಲ್ಲ ಎಂಬುದನ್ನು ಐಸಿಸಿ ಖಚಿತಪಡಿಸಿಕೊಂಡಿದೆ. ಹೀಗಾಗಿ ಅಮಾನತು ಶಿಕ್ಷೆಯನ್ನು ತೆಗೆದುಹಾಕಿದೆ. ಈ ಕುರಿತು ಲಂಕಾ ಕ್ರೀಡಾ ಸಚಿವ ಹರಿನ್ ಫೆರ್ನಾಂಡೋ ಅವರು ಟ್ವೀಟ್ ಮಾಡಿದ್ದಾರೆ.
(3 / 6)
ಕ್ರಿಕೆಟ್‌ ಮಂಡಳಿಯನ್ನು ಅಮಾನತುಗೊಳಿಸಿದಾಗಿನಿಂದ ಐಸಿಸಿಯು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ಸದ್ಯ ಸದಸ್ಯತ್ವದ ಬಾಧ್ಯತೆಗಳನ್ನು ಲಂಕಾ ಮಂಡಳಿಯು ಉಲ್ಲಂಘಿಸುವುದಿಲ್ಲ ಎಂಬುದನ್ನು ಐಸಿಸಿ ಖಚಿತಪಡಿಸಿಕೊಂಡಿದೆ. ಹೀಗಾಗಿ ಅಮಾನತು ಶಿಕ್ಷೆಯನ್ನು ತೆಗೆದುಹಾಕಿದೆ. ಈ ಕುರಿತು ಲಂಕಾ ಕ್ರೀಡಾ ಸಚಿವ ಹರಿನ್ ಫೆರ್ನಾಂಡೋ ಅವರು ಟ್ವೀಟ್ ಮಾಡಿದ್ದಾರೆ.(AFP)
ರಾಜಕೀಯ ಹಸ್ತಕ್ಷೇಪವನ್ನು ಉಲ್ಲೇಖಿಸಿ ಐಸಿಸಿ ಕಳೆದ ವರ್ಷ ನವೆಂಬರ್‌ನಲ್ಲಿ ಶ್ರೀಲಂಕಾ ಮಂಡಳಿಯನ್ನು ಅಮಾನತುಗೊಳಿಸಿತು.
(4 / 6)
ರಾಜಕೀಯ ಹಸ್ತಕ್ಷೇಪವನ್ನು ಉಲ್ಲೇಖಿಸಿ ಐಸಿಸಿ ಕಳೆದ ವರ್ಷ ನವೆಂಬರ್‌ನಲ್ಲಿ ಶ್ರೀಲಂಕಾ ಮಂಡಳಿಯನ್ನು ಅಮಾನತುಗೊಳಿಸಿತು.(AFP)
ಅಮಾನತು ಶಿಕ್ಷೆಯಿಂದಾಗಿ ಅಂಡರ್‌ 19 ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸುವ ಹಕ್ಕನ್ನು ಶ್ರೀಲಂಕಾ ಕಳೆದುಕೊಂಡಿತು. ಸದ್ಯ ಟೂರ್ನಿ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದೆ.
(5 / 6)
ಅಮಾನತು ಶಿಕ್ಷೆಯಿಂದಾಗಿ ಅಂಡರ್‌ 19 ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸುವ ಹಕ್ಕನ್ನು ಶ್ರೀಲಂಕಾ ಕಳೆದುಕೊಂಡಿತು. ಸದ್ಯ ಟೂರ್ನಿ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದೆ.(AFP)
ಐಸಿಸಿ ಸಿಇಒ ಜೆಫ್ ಅಲ್ಲಾರ್ಡಿಸ್ ಈ ತಿಂಗಳ ಆರಂಭದಲ್ಲಿ ಕೊಲಂಬೊಗೆ ಭೇಟಿ ನೀಡಿದ್ದರು. ಕ್ರೀಡಾ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡದೆ ಹೊಸ ಕ್ರೀಡಾ ಕಾಯಿದೆಯ ಕುರಿತು ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಲಂಕಾ ಸಚಿವರು ಸಿಇಒಗೆ ಹೇಳಿದ್ದಾರೆ.
(6 / 6)
ಐಸಿಸಿ ಸಿಇಒ ಜೆಫ್ ಅಲ್ಲಾರ್ಡಿಸ್ ಈ ತಿಂಗಳ ಆರಂಭದಲ್ಲಿ ಕೊಲಂಬೊಗೆ ಭೇಟಿ ನೀಡಿದ್ದರು. ಕ್ರೀಡಾ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡದೆ ಹೊಸ ಕ್ರೀಡಾ ಕಾಯಿದೆಯ ಕುರಿತು ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಲಂಕಾ ಸಚಿವರು ಸಿಇಒಗೆ ಹೇಳಿದ್ದಾರೆ.(PTI)

    ಹಂಚಿಕೊಳ್ಳಲು ಲೇಖನಗಳು