logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  China Rains: ಚೀನಾದಲ್ಲಿ ಭಾರೀ ಮಳೆ ಅನಾಹುತ, ಹೆದ್ದಾರಿ ಕುಸಿತ, 48 ಮಂದಿ ಬಲಿ Photos

China Rains: ಚೀನಾದಲ್ಲಿ ಭಾರೀ ಮಳೆ ಅನಾಹುತ, ಹೆದ್ದಾರಿ ಕುಸಿತ, 48 ಮಂದಿ ಬಲಿ photos

May 02, 2024 07:47 PM IST

ಭಾರತದಲ್ಲಿ ಬರದ ಸನ್ನಿವೇಶ. ಮಳೆಗಾಗಿ ಜನ ಹಪಹಪಿಸುತ್ತಿರುವಾಗ ನೆರೆಯ ಚೀನಾದಲ್ಲಿ ಮಳೆಯ ಅಬ್ಬರ. ನಿರಂತರವಾಗಿ ಸುರಿಯತ್ತಿರುವ ಮಳೆಯಿಂದ ಹೆದ್ದಾರಿ ಕುಸಿದು ಜನ ಜೀವ ಕಳೆದುಕೊಂಡಿದ್ದಾರೆ. ಮಳೆ ಅನಾಹುತದ ಚಿತ್ರ ನೋಟ ಇಲ್ಲಿದೆ. 

  • ಭಾರತದಲ್ಲಿ ಬರದ ಸನ್ನಿವೇಶ. ಮಳೆಗಾಗಿ ಜನ ಹಪಹಪಿಸುತ್ತಿರುವಾಗ ನೆರೆಯ ಚೀನಾದಲ್ಲಿ ಮಳೆಯ ಅಬ್ಬರ. ನಿರಂತರವಾಗಿ ಸುರಿಯತ್ತಿರುವ ಮಳೆಯಿಂದ ಹೆದ್ದಾರಿ ಕುಸಿದು ಜನ ಜೀವ ಕಳೆದುಕೊಂಡಿದ್ದಾರೆ. ಮಳೆ ಅನಾಹುತದ ಚಿತ್ರ ನೋಟ ಇಲ್ಲಿದೆ. 
ಚೀನಾ ದೇಶದ ದಕ್ಷಿಣ ಭಾಗದಲ್ಲಿ ಕೆಲವು ದಿನಗಳಿಂದ ಎಡಬಿಡದೇ ಮಳೆ ಸುರಿಯುತ್ತಲೇ ಇದೆ.ಬುಧವಾರ ಸುರಿದ ಭಾರೀ ಮಳೆಗೆ  ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಹೆದ್ದಾರಿ ಕುಸಿದು ಕನಿಷ್ಠ 48 ಮಂದಿ ಜೀವ ಕಳೆದುಕೊಂಡಿದ್ದಾರೆ. 
(1 / 6)

ಭಾರೀ ಮಳೆ ಹಾಗೂ ಪ್ರವಾಹಕ್ಕೆ ಹೆದ್ದಾರಿಯ ಒಂದು ಭಾಗ ಸಂಪೂರ್ಣ ಕುಸಿದು ಹೋಗಿ ಕಾರುಗಳು ಕೊಚ್ಚಿಕೊಂಡು ಹೋಗಿವೆ. 
(2 / 6)

ಭಾರೀ ಮಳೆಯ ಪರಿಣಾಮವಾಗಿ ಅಲ್ಲಲ್ಲಿ ಪ್ರವಾಸ ಸನ್ನಿವೇಶ ನಿರ್ಮಾಣವಾಗಿದೆ. ಇದರಿಂದ ಕಾರುಗಳು ಎಲ್ಲೆಂದರೆಲ್ಲಿ ಕೊಚ್ಚಿಕೊಂಡು ಹೋಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. 
(3 / 6)

ಚೀನಾದ ದಕ್ಷಿಣ ಭಾಗದಲ್ಲಿ ಮಳೆ ಅವಾಂತರ ಜೋರಾಗಿದೆ. ಹಲವು ಕಡೆಗಳಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡು ಸಹಜ ಸ್ಥಿತಿಗೆ ಬರುವ ನಡುವೆಯೇ ಮತ್ತೆ ಮಳೆಯಾಗುತ್ತಿದೆ. 
(4 / 6)

 ಚೀನಾದ ದಕ್ಷಿಣ ಗುವಾಂಗ್‌ಡಾಂಗ್ ಪ್ರಾಂತ್ಯದ ಕ್ವಿಂಗ್ವಾನ್‌( Qingyuan) ನಗರವು ಕಳೆದ ವಾರ ಭಾರೀ ಮಳೆಗೆ ತತ್ತರಿಸಿ ಹೋಗಿದ್ದು ಹೀಗೆ. 
(5 / 6)

ಚೀನಾದಲ್ಲಿ ಮಳೆಯಿಂದ ಜಲಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದರು. ಮನೆ, ವಸ್ತುಗಳನ್ನು ಕಳೆದುಕೊಂಡವರ ರೋದನ ಮುಗಿಲು ಮುಟ್ಟಿತ್ತು.
(6 / 6)

    ಹಂಚಿಕೊಳ್ಳಲು ಲೇಖನಗಳು