logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Dubai Rains2024: ದುಬೈ ನಗರದಲ್ಲಿ ಕುಂಭದ್ರೋಣ ಮಳೆ, ಕೊಚ್ಚಿ ಹೋದ ಪ್ರವಾಸಿ ನಗರ, ಹೇಗಿದೆ ಮಳೆ ಸ್ಥಿತಿಗತಿ Photos

Dubai Rains2024: ದುಬೈ ನಗರದಲ್ಲಿ ಕುಂಭದ್ರೋಣ ಮಳೆ, ಕೊಚ್ಚಿ ಹೋದ ಪ್ರವಾಸಿ ನಗರ, ಹೇಗಿದೆ ಮಳೆ ಸ್ಥಿತಿಗತಿ photos

Apr 17, 2024 10:24 PM IST

 ಒಂದೂವರೆ ವರ್ಷ ಕಾಲ ಸುರಿಯಬೇಕಾದ ಮಳೆ ಒಂದೇ ದಿನ ಬಂದರೆ ಹೇಗಿರಬೇಡ. ವಿಶ್ವದ ಪ್ರಮುಖ ಪ್ರವಾಸಿ ನಗರ ದುಬೈನಲ್ಲಿ ಬುಧವಾರ ಸುರಿದ ಮಳೆ ಭಾರೀ ಅನಾಹುತವನ್ನೇ ಸೃಷ್ಟಿಸಿದೆ. ಅದರ ಚಿತ್ರಣ ಇಲ್ಲಿದೆ. 

ದುಬೈ ಮಹಾನಗರದ ರಸ್ತೆಯಿದು. ಈ ರಸ್ತೆಯೇ ನದಿಯಾಗಿ ಮಾರ್ಪಡುವ ಮಟ್ಟಿಗೆ ಭಾರೀ ಮಳೆ ಸುರಿದಿದೆ. ಜನ ಮಳೆಯಿಂದ ಉಕ್ಕಿ ಹರಿಯುತ್ತಿರುವ ರಸ್ತೆಯಲ್ಲೇ ಸಂಚರಿಸುವ ಸನ್ನಿವೇಶವಿದು.
(1 / 8)

ಭಾರೀ ಮಳೆಯಿಂದ ದುಬೈನ ಸಹಸ್ರಾರು ವಾಹನಗಳು ನಿಂತಲ್ಲೇ ನಿಂತಿವೆ. ರಸ್ತೆಯಲ್ಲಿ ನೀರು ಹರಿಯುತ್ತಿರುವುದರಿಂದ ಜನ ಪ್ರಯಾಸ ಪಟ್ಟುಕೊಂಡು ಹೋಗಬೇಕಾಗಿದೆ. 
(2 / 8)

ದುಬೈನ ವಿಮಾನ ಸೇವೆಯಲ್ಲೂ ವ್ಯತ್ಯಯವಾಗಿದೆ. ಹಲವಾರು ವಿಮಾನಗಳನ್ನು ರದ್ದುಪಡಿಸಲಾಗಿದೆ. ಮಳೆ ಕಾರಣದಿಂದ ನೂರಾರು ವಿಮಾನ ನಿಲ್ದಾಣದಲ್ಲೇ ನಿಂತಿವೆ.
(3 / 8)

ಭಾರೀ ಮಳೆಯಿಂದ ನೀರಿನಲ್ಲಿ ಸಿಲುಕಿದ್ದ ದುಬಾರಿ ಕಾರನ್ನು ಹೊರ ತೆಗೆಯಲು ಅಲ್ಲಿನ ಜನ ಹರ ಸಾಹಸಪಡುವಂತಾಗಿದೆ. 
(4 / 8)

ದುಬೈನಲ್ಲಿ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಅಲ್ಲಿಗೆ ಆಹಾರವನ್ನು ತಲುಪಿಸುವ ಕೆಲಸವನ್ನು ಮಾಡಲಾಗುತ್ತಿದೆ. 
(5 / 8)

ಇಂತಹ ಮಳೆ ಬಹಳ ವರ್ಷದಿಂದ ಬಂದಿರಲಿಲ್ಲ. ಮಳೆ ಮಾಲ್‌ಗಳು, ಅಪಾರ್ಟ್‌ಮೆಂಟ್‌ನ ಕೆಲವು ಮಹಡಿಗಳು ನುಗ್ಗಿದೆ. ಗಾಳಿಯ ರಭಸಕ್ಕೆ ಹಲವಾರು ವಸ್ತುಗಳು ಕೊಚ್ಚಿಕೊಂಡು ಹೋಗಿವೆ. 
(6 / 8)

ಎರಡು ದಿನದಿಂದ ದುಬೈನಲ್ಲಿ ಮಳೆಯಿತ್ತು. ಸೋಮವಾರ ಹಾಗೂ ಮಂಗಳವಾರ ಸಣ್ಣ ಪ್ರಮಾಣದಲ್ಲಿದ್ದುದು ಬುಧವಾರ ಬೆಳಿಗ್ಗೆಯಿಂದ ಏಕಾಏಕಿ ಭಾರೀ ಪ್ರಮಾಣಕ್ಕೆ ತಿರುಗಿತು. ಇದರಿಂದ ಜನಜೀವನವೇ ಅಸ್ತವ್ಯಸ್ತಗೊಂಡಿತು. ಮಳೆಗೆ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ.
(7 / 8)

ದುಬೈ ನಗರದಲ್ಲಿ ಬುಧವಾರ ರಾತ್ರಿ ಕಂಡು ಬಂದ ಸಿಡಿಲಿನ ನೋಟ. ಪ್ರವಾಸೋದ್ಯಮ ನಗರಿ ಇಂತಹ ಮಳೆ ಕಂಡು ಬೆಚ್ಚಿ ಬಿದ್ದಿದೆ. ದುಬೈನಲ್ಲಿ ಭಾರೀ ಮಳೆಯಿಂದ ಶಾಲಾ ಕಾಲೇಜುಗಳನ್ನು ಒಂದು ವಾರ ಮುಚ್ಚಲಾಗಿದೆ. 
(8 / 8)

    ಹಂಚಿಕೊಳ್ಳಲು ಲೇಖನಗಳು