logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Iphone 15 Launch: ಸೆಪ್ಟೆಂಬರ್‌ 12 ಆಪಲ್‌ ಐಫೋನ್‌ 15 ಆಗಮನ, ಹೇಗಿರಲಿದೆ ಹೊಸ ಐಫೋನ್‌, ಇಲ್ಲಿದೆ ಹೆಚ್ಚಿನ ವಿವರ

iPhone 15 launch: ಸೆಪ್ಟೆಂಬರ್‌ 12 ಆಪಲ್‌ ಐಫೋನ್‌ 15 ಆಗಮನ, ಹೇಗಿರಲಿದೆ ಹೊಸ ಐಫೋನ್‌, ಇಲ್ಲಿದೆ ಹೆಚ್ಚಿನ ವಿವರ

Sep 01, 2023 08:30 AM IST

iPhone 15 launch: ಆಪಲ್‌ ಐಫೋನ್‌ 15 ಇದೇ ಸೆಪ್ಟೆಂಬರ್‌ 12ರಂದು ಆಗಮಿಸಲಿದೆ. ಹೊಸ ಐಫೋನ್‌ನಲ್ಲಿ ದೊಡ್ಡ ಮತ್ತು ಅತ್ಯುತ್ತಮ ಕ್ಯಾಮೆರಾ ಇರಲಿದೆ. ಅನನ್ಯ ಗುಣಮಟ್ಟದ ಚಿತ್ರಗಳನ್ನು ತೆಗೆಯಲು ಬಯಸುವವರಿಗೆ ಹೊಸ ಐಫೋನ್‌ ಸೂಕ್ತವಾಗಿರಲಿದೆ. ಐಫೋನ್‌ 15 ಕುರಿತು ಹೆಚ್ಚಿನ ವಿವರ ಇಲ್ಲಿದೆ.

iPhone 15 launch: ಆಪಲ್‌ ಐಫೋನ್‌ 15 ಇದೇ ಸೆಪ್ಟೆಂಬರ್‌ 12ರಂದು ಆಗಮಿಸಲಿದೆ. ಹೊಸ ಐಫೋನ್‌ನಲ್ಲಿ ದೊಡ್ಡ ಮತ್ತು ಅತ್ಯುತ್ತಮ ಕ್ಯಾಮೆರಾ ಇರಲಿದೆ. ಅನನ್ಯ ಗುಣಮಟ್ಟದ ಚಿತ್ರಗಳನ್ನು ತೆಗೆಯಲು ಬಯಸುವವರಿಗೆ ಹೊಸ ಐಫೋನ್‌ ಸೂಕ್ತವಾಗಿರಲಿದೆ. ಐಫೋನ್‌ 15 ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಹೊಸ ಐಫೋನ್‌ ಕುರಿತು ಟೆಕ್‌ ಜಗತ್ತಿನಲ್ಲಿ ಚರ್ಚೆ ಕಾವೇರಿದೆ. ಇದರಲ್ಲಿ ಸಾಲಿಡ್‌ ಬಟನ್‌, ಯುಎಸ್‌ಬಿ ಸಿ ಮೂಲಕ ವೇಗದ ಚಾರ್ಜಿಂಗ್‌ ಇತ್ಯಾದಿ ಹಲವು ಫೀಚರ್‌ಗಳು ಇರಲಿವೆ. ಆದರೆ, ಜನರು ಮಾತ್ರ ಅದರ ಹೊಸ ಕ್ಯಾಮೆರಾದ ಕುರಿತು ಹೆಚ್ಚಿನ ಚರ್ಚೆ ನಡೆಸುತ್ತಿದ್ದಾರೆ.
(1 / 5)
ಹೊಸ ಐಫೋನ್‌ ಕುರಿತು ಟೆಕ್‌ ಜಗತ್ತಿನಲ್ಲಿ ಚರ್ಚೆ ಕಾವೇರಿದೆ. ಇದರಲ್ಲಿ ಸಾಲಿಡ್‌ ಬಟನ್‌, ಯುಎಸ್‌ಬಿ ಸಿ ಮೂಲಕ ವೇಗದ ಚಾರ್ಜಿಂಗ್‌ ಇತ್ಯಾದಿ ಹಲವು ಫೀಚರ್‌ಗಳು ಇರಲಿವೆ. ಆದರೆ, ಜನರು ಮಾತ್ರ ಅದರ ಹೊಸ ಕ್ಯಾಮೆರಾದ ಕುರಿತು ಹೆಚ್ಚಿನ ಚರ್ಚೆ ನಡೆಸುತ್ತಿದ್ದಾರೆ.(Pixabay)
ಈಗಾಗಲೇ ಐಫೋನ್‌ 14ರಲ್ಲಿ ಅದ್ಭುತ ಕ್ಯಾಮೆರಾ ಇದೆ. ವೃತ್ತಿಪರ ಫೋಟೊಗ್ರಾಫರ್‌ ತೆಗೆದಂತಹ ಚಿತ್ರ ತೆಗೆಯಲು ಈ ಐಫೋನ್‌ ನೆರವು ನೀಡುತ್ತದೆ. ಅಂದರೆ, ಡಿಎಸ್‌ಎಲ್‌ಆರ್‌ ಕ್ಯಾಮೆರಾದ ಚಿತ್ರದಂತೆ ಗುಣಮಟ್ಟ ನೀಡುತ್ತದೆ. ಹಾಗಾದರೆ, ಇದಕ್ಕಿಂತಲೂ ಅತ್ಯುತ್ತಮವಾದ ಐಫೋನ್‌ 15ನ ಕ್ಯಾಮೆರಾ ಹೇಗಿರಲಿದೆ ಎಂಬ ಕುತೂಹಲ ಜನರಲ್ಲಿ ಮೂಡಿದೆ. ಅಂದಹಾಗೆ ಕ್ಯಾಮೆರಾದ ಕುರಿತು ಕೇವಲ ವದಂತಿ ಇದೆ, ಐಫೋನ್‌ ಲಾಂಚ್‌ ಆದ ಬಳಿಕ ನಿಜ ಸಂಗತಿ ತಿಳಿಯಲಿದೆ. 
(2 / 5)
ಈಗಾಗಲೇ ಐಫೋನ್‌ 14ರಲ್ಲಿ ಅದ್ಭುತ ಕ್ಯಾಮೆರಾ ಇದೆ. ವೃತ್ತಿಪರ ಫೋಟೊಗ್ರಾಫರ್‌ ತೆಗೆದಂತಹ ಚಿತ್ರ ತೆಗೆಯಲು ಈ ಐಫೋನ್‌ ನೆರವು ನೀಡುತ್ತದೆ. ಅಂದರೆ, ಡಿಎಸ್‌ಎಲ್‌ಆರ್‌ ಕ್ಯಾಮೆರಾದ ಚಿತ್ರದಂತೆ ಗುಣಮಟ್ಟ ನೀಡುತ್ತದೆ. ಹಾಗಾದರೆ, ಇದಕ್ಕಿಂತಲೂ ಅತ್ಯುತ್ತಮವಾದ ಐಫೋನ್‌ 15ನ ಕ್ಯಾಮೆರಾ ಹೇಗಿರಲಿದೆ ಎಂಬ ಕುತೂಹಲ ಜನರಲ್ಲಿ ಮೂಡಿದೆ. ಅಂದಹಾಗೆ ಕ್ಯಾಮೆರಾದ ಕುರಿತು ಕೇವಲ ವದಂತಿ ಇದೆ, ಐಫೋನ್‌ ಲಾಂಚ್‌ ಆದ ಬಳಿಕ ನಿಜ ಸಂಗತಿ ತಿಳಿಯಲಿದೆ. (Apple)
ಐಫೋನ್‌ 13ಗೆ ಹೋಲಿಸಿದರೆ ಐಫೋನ್‌ 15ನಲ್ಲಿ ಕ್ಯಾಮೆರಾದಲ್ಲಿ ಹೆಚ್ಚು ಬದಲಾವಣೆ ಇರಲಿಲ್ಲ. ಆದರೆ, ಐಫೋನ್‌ 15ನ ಕ್ಯಾಮೆರಾ ಸಾಕಷ್ಟು ಬದಲಾವಣೆ ಕಾಣಲಿದೆ. ಇದರಲ್ಲಿ 12 ಮೆಗಾ ಫಿಕ್ಸೆಲ್‌ ಕ್ಯಾಮೆರಾ ಬದಲು 48 ಮೆಗಾ ಫಿಕ್ಸೆಲ್‌ ಕ್ಯಾಮೆರಾ ಇರಲಿದೆ ಎಂದು ಉದ್ಯಮ ವಿಶ್ಲೇಷಕ ಜೆಫ್‌ ಪು (ಮೆಕ್‌ರೂಮರ್ಸ್‌) ಹೇಳಿದ್ದಾರೆ. 
(3 / 5)
ಐಫೋನ್‌ 13ಗೆ ಹೋಲಿಸಿದರೆ ಐಫೋನ್‌ 15ನಲ್ಲಿ ಕ್ಯಾಮೆರಾದಲ್ಲಿ ಹೆಚ್ಚು ಬದಲಾವಣೆ ಇರಲಿಲ್ಲ. ಆದರೆ, ಐಫೋನ್‌ 15ನ ಕ್ಯಾಮೆರಾ ಸಾಕಷ್ಟು ಬದಲಾವಣೆ ಕಾಣಲಿದೆ. ಇದರಲ್ಲಿ 12 ಮೆಗಾ ಫಿಕ್ಸೆಲ್‌ ಕ್ಯಾಮೆರಾ ಬದಲು 48 ಮೆಗಾ ಫಿಕ್ಸೆಲ್‌ ಕ್ಯಾಮೆರಾ ಇರಲಿದೆ ಎಂದು ಉದ್ಯಮ ವಿಶ್ಲೇಷಕ ಜೆಫ್‌ ಪು (ಮೆಕ್‌ರೂಮರ್ಸ್‌) ಹೇಳಿದ್ದಾರೆ. (Apple)
ಹೊಸ ಇಮೇಜ್‌ ಸೆನ್ಸಾರ್‌: ಹೊಸ ಐಫೋನ್‌ನಲ್ಲಿ ಹೊಸ ಫ್ಯಾನ್ಸಿ ಸೆನ್ಸಾರ್‌ ಇರಲಿದ್ದು, ಅತ್ಯಧಿಕ ಬೆಳಕು ಇದ್ದರೂ ಸುಂದರ ಫೋಟೊ ತೆಗೆಯಲು ನೆರವಾಗಲಿದೆ. 
(4 / 5)
ಹೊಸ ಇಮೇಜ್‌ ಸೆನ್ಸಾರ್‌: ಹೊಸ ಐಫೋನ್‌ನಲ್ಲಿ ಹೊಸ ಫ್ಯಾನ್ಸಿ ಸೆನ್ಸಾರ್‌ ಇರಲಿದ್ದು, ಅತ್ಯಧಿಕ ಬೆಳಕು ಇದ್ದರೂ ಸುಂದರ ಫೋಟೊ ತೆಗೆಯಲು ನೆರವಾಗಲಿದೆ. (Apple)
ಈ ಹಿಂದಿನ ಐಫೋನ್‌ಗಳಿಗೆ ಹೋಲಿಸಿದರೆ ನೂತನ ಕ್ಯಾಮೆರಾ ಸೆನ್ಸಾರ್‌ ಇನ್ನಷ್ಟು ದೊಡ್ಡದಾಗಿರುವ ಸಾಧ್ಯತೆಯಿದೆ. ನೂತನ ಐಫೋನ್‌ 15 ದರವೂ ಈ ಹಿಂದಿನ ಎಲ್ಲಾ ಐಫೋನ್‌ಗಳಿಗಿಂತ ದುಬಾರಿಯಾಗಿರಲಿದೆ. 
(5 / 5)
ಈ ಹಿಂದಿನ ಐಫೋನ್‌ಗಳಿಗೆ ಹೋಲಿಸಿದರೆ ನೂತನ ಕ್ಯಾಮೆರಾ ಸೆನ್ಸಾರ್‌ ಇನ್ನಷ್ಟು ದೊಡ್ಡದಾಗಿರುವ ಸಾಧ್ಯತೆಯಿದೆ. ನೂತನ ಐಫೋನ್‌ 15 ದರವೂ ಈ ಹಿಂದಿನ ಎಲ್ಲಾ ಐಫೋನ್‌ಗಳಿಗಿಂತ ದುಬಾರಿಯಾಗಿರಲಿದೆ. (Apple)

    ಹಂಚಿಕೊಳ್ಳಲು ಲೇಖನಗಳು