logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Gt Vs Csk: Ipl ಉದ್ಘಾಟನಾ ಪಂದ್ಯದಲ್ಲಿ ಸೃಷ್ಟಿಯಾದ ಪ್ರಮುಖ ದಾಖಲೆಗಳಿವು!

GT vs CSK: IPL ಉದ್ಘಾಟನಾ ಪಂದ್ಯದಲ್ಲಿ ಸೃಷ್ಟಿಯಾದ ಪ್ರಮುಖ ದಾಖಲೆಗಳಿವು!

Apr 01, 2023 11:51 AM IST

16ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​​​​​​, ಗುಜರಾತ್ ಟೈಟಾನ್ಸ್​ ವಿರುದ್ಧ ಸೋಲನುಭವಿಸಿತು. ಶುಭ್​ಮನ್​ ಗಿಲ್​ ಅವರ ಭರ್ಜರಿ ಅರ್ಧಶತಕದಾಟದಿಂದ ಮೊದಲ ಪಂದ್ಯದಲ್ಲೇ ಸಿಎಸ್​ಕೆ ಮಕಾಡೆ ಮಲಗಿತು. ಆದರೆ ಈ ಪಂದ್ಯದಲ್ಲಿ ಯಾವೆಲ್ಲಾ ದಾಖಲೆಗಳು ದಾಖಲಾಗಿವೆ ಎಂಬುದನ್ನು ಈ ಮುಂದೆ ನೋಡೋಣ.!

  • 16ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​​​​​​, ಗುಜರಾತ್ ಟೈಟಾನ್ಸ್​ ವಿರುದ್ಧ ಸೋಲನುಭವಿಸಿತು. ಶುಭ್​ಮನ್​ ಗಿಲ್​ ಅವರ ಭರ್ಜರಿ ಅರ್ಧಶತಕದಾಟದಿಂದ ಮೊದಲ ಪಂದ್ಯದಲ್ಲೇ ಸಿಎಸ್​ಕೆ ಮಕಾಡೆ ಮಲಗಿತು. ಆದರೆ ಈ ಪಂದ್ಯದಲ್ಲಿ ಯಾವೆಲ್ಲಾ ದಾಖಲೆಗಳು ದಾಖಲಾಗಿವೆ ಎಂಬುದನ್ನು ಈ ಮುಂದೆ ನೋಡೋಣ.!
ರಂಗುರಂಗಿನ ಐಪಿಎಲ್​​ಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಉದ್ಘಾಟನಾ ಪಂದ್ಯದಲ್ಲಿ ಗುಜರಾತ್​​​ ಟೈಟಾನ್ಸ್​ ತಂಡಕ್ಕೆ ಭರ್ಜರಿ ಗೆಲುವು ದೊರೆತಿದೆ. ಬಲಿಷ್ಠ ತಂಡವನ್ನೇ ಹೊಂದಿದ್ದ ಚೆನ್ನೈ ಸೂಪರ್ ಕಿಂಗ್ಸ್​​ ಸೋಲಿನ ರುಚಿ ನೋಡಿತು. 5 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದ ಹಾಲಿ ಚಾಂಪಿಯನ್​ ಗುಜರಾತ್​
(1 / 7)
ರಂಗುರಂಗಿನ ಐಪಿಎಲ್​​ಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಉದ್ಘಾಟನಾ ಪಂದ್ಯದಲ್ಲಿ ಗುಜರಾತ್​​​ ಟೈಟಾನ್ಸ್​ ತಂಡಕ್ಕೆ ಭರ್ಜರಿ ಗೆಲುವು ದೊರೆತಿದೆ. ಬಲಿಷ್ಠ ತಂಡವನ್ನೇ ಹೊಂದಿದ್ದ ಚೆನ್ನೈ ಸೂಪರ್ ಕಿಂಗ್ಸ್​​ ಸೋಲಿನ ರುಚಿ ನೋಡಿತು. 5 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದ ಹಾಲಿ ಚಾಂಪಿಯನ್​ ಗುಜರಾತ್​(PTI)
ಋತುರಾಜ್​ ಗಾಯಕ್ವಾಡ್ (92), ಉದ್ಘಾಟನಾ ಪಂದ್ಯವೊಂದರಲ್ಲಿ ಹೆಚ್ಚು ರನ್​ ಕಲೆ ಹಾಕಿದ 3ನೇ ಆಟಗಾರ ಎನಿಸಿದ್ದಾರೆ. ಮೊದಲ ಸ್ಥಾನದಲ್ಲಿ ಬ್ರೆಂಡನ್​ ಮೆಕಲಮ್​ (158*), ಎರಡನೇ ಸ್ಥಾನದಲ್ಲಿ ರೋಹಿತ್​ ಶರ್ಮಾ (98*) ಇದ್ದಾರೆ.
(2 / 7)
ಋತುರಾಜ್​ ಗಾಯಕ್ವಾಡ್ (92), ಉದ್ಘಾಟನಾ ಪಂದ್ಯವೊಂದರಲ್ಲಿ ಹೆಚ್ಚು ರನ್​ ಕಲೆ ಹಾಕಿದ 3ನೇ ಆಟಗಾರ ಎನಿಸಿದ್ದಾರೆ. ಮೊದಲ ಸ್ಥಾನದಲ್ಲಿ ಬ್ರೆಂಡನ್​ ಮೆಕಲಮ್​ (158*), ಎರಡನೇ ಸ್ಥಾನದಲ್ಲಿ ರೋಹಿತ್​ ಶರ್ಮಾ (98*) ಇದ್ದಾರೆ.(AFP)
ಅಲ್ಲದೆ, ಇನ್ನಿಂಗ್ಸ್​​ವೊಂದರಲ್ಲಿ ಸಿಎಸ್​ಕೆ ಪರ ಹೆಚ್ಚು ಸಿಕ್ಸರ್​​ ಸಿಡಿಸಿದ 5ನೇ ಆಟಗಾರ ಎನಿಸಿದ್ದಾರೆ. ಮುರಳಿ ವಿಜಯ್​ 11 ಸಿಕ್ಸರ್, ಋತುರಾಜ್​, ರಾಬಿನ್​​​​ ಉತ್ತಪ್ಪ, ಬ್ರೆಂಡನ್​ ಮೆಕಲಮ್​​​, ಮೈಕಲ್​ ಹಸ್ಸಿ ತಲಾ 9 ಸಿಕ್ಸರ್​ ಸಿಡಿಸಿದ್ದಾರೆ.
(3 / 7)
ಅಲ್ಲದೆ, ಇನ್ನಿಂಗ್ಸ್​​ವೊಂದರಲ್ಲಿ ಸಿಎಸ್​ಕೆ ಪರ ಹೆಚ್ಚು ಸಿಕ್ಸರ್​​ ಸಿಡಿಸಿದ 5ನೇ ಆಟಗಾರ ಎನಿಸಿದ್ದಾರೆ. ಮುರಳಿ ವಿಜಯ್​ 11 ಸಿಕ್ಸರ್, ಋತುರಾಜ್​, ರಾಬಿನ್​​​​ ಉತ್ತಪ್ಪ, ಬ್ರೆಂಡನ್​ ಮೆಕಲಮ್​​​, ಮೈಕಲ್​ ಹಸ್ಸಿ ತಲಾ 9 ಸಿಕ್ಸರ್​ ಸಿಡಿಸಿದ್ದಾರೆ.(IPL/Twitter)
ಮಹೇಂದ್ರ ಸಿಂಗ್​ ಧೋನಿ ಪಂದ್ಯದಲ್ಲಿ 1 ಸಿಕ್ಸರ್​ ಸಿಡಿಸುವ ಮೂಲಕ ಐಪಿಎಲ್​​​​ನಲ್ಲಿ 200 ಸಿಕ್ಸರ್​​ಗಳ ಕ್ಲಬ್​ ಸೇರಿದ್ದಾರೆ. ನಾಯಕನಾಗಿಯೂ ದಾಖಲೆ ಬರೆದಿದ್ದಾರೆ. ಐಪಿಎಲ್​ನಲ್ಲಿ ಕಣಕ್ಕಿಳಿದ ಅತ್ಯಂತ ಹಿರಿಯ ನಾಯಕ ಎಂಬ ದಾಖಲೆಯನ್ನು ಧೋನಿ ತಮ್ಮದಾಗಿಸಿಕೊಂಡರು.
(4 / 7)
ಮಹೇಂದ್ರ ಸಿಂಗ್​ ಧೋನಿ ಪಂದ್ಯದಲ್ಲಿ 1 ಸಿಕ್ಸರ್​ ಸಿಡಿಸುವ ಮೂಲಕ ಐಪಿಎಲ್​​​​ನಲ್ಲಿ 200 ಸಿಕ್ಸರ್​​ಗಳ ಕ್ಲಬ್​ ಸೇರಿದ್ದಾರೆ. ನಾಯಕನಾಗಿಯೂ ದಾಖಲೆ ಬರೆದಿದ್ದಾರೆ. ಐಪಿಎಲ್​ನಲ್ಲಿ ಕಣಕ್ಕಿಳಿದ ಅತ್ಯಂತ ಹಿರಿಯ ನಾಯಕ ಎಂಬ ದಾಖಲೆಯನ್ನು ಧೋನಿ ತಮ್ಮದಾಗಿಸಿಕೊಂಡರು.(PTI)
ತುಷಾರ್ ದೇಶಪಾಂಡೆ ಐಪಿಎಲ್​ ಇತಿಹಾಸದಲ್ಲಿ ಮೊದಲ ‘ಇಂಪ್ಯಾಕ್ಟ್ ಪ್ಲೇಯರ್’ ಎಂಬ ದಾಖಲೆ ಬರೆದಿದ್ದಾರೆ. ಅಂಬಟಿ ರಾಯುಡು ಅವರ ಸ್ಥಾನದಲ್ಲಿ ಅವಕಾಶ ಪಡೆದರು.
(5 / 7)
ತುಷಾರ್ ದೇಶಪಾಂಡೆ ಐಪಿಎಲ್​ ಇತಿಹಾಸದಲ್ಲಿ ಮೊದಲ ‘ಇಂಪ್ಯಾಕ್ಟ್ ಪ್ಲೇಯರ್’ ಎಂಬ ದಾಖಲೆ ಬರೆದಿದ್ದಾರೆ. ಅಂಬಟಿ ರಾಯುಡು ಅವರ ಸ್ಥಾನದಲ್ಲಿ ಅವಕಾಶ ಪಡೆದರು.
ಮೊಹಮ್ಮದ್ ಶಮಿ 16ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಡೆವೋನ್​ ಕಾನ್ವೆ ಅವರ ಮೊದಲ ವಿಕೆಟ್​ ಪಡೆಯುವ ಮೂಲಕ ಐಪಿಎಲ್​ನಲ್ಲಿ 100 ವಿಕೆಟ್​ಗಳ ಸಾಧನೆ ಮಾಡಿದರು.
(6 / 7)
ಮೊಹಮ್ಮದ್ ಶಮಿ 16ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಡೆವೋನ್​ ಕಾನ್ವೆ ಅವರ ಮೊದಲ ವಿಕೆಟ್​ ಪಡೆಯುವ ಮೂಲಕ ಐಪಿಎಲ್​ನಲ್ಲಿ 100 ವಿಕೆಟ್​ಗಳ ಸಾಧನೆ ಮಾಡಿದರು.(Twitter)
ಚೆನ್ನೈ ಸೂಪರ್ ಕಿಂಗ್ಸ್​ ತಂಡವು, ಗುಜರಾತ್​​​​​​​​​​​​​​​​​​​​​​​​​ ಟೈಟಾನ್ಸ್​​​ ಸತತ ಮೂರನೇ ಗೆಲುವು ದಾಖಲಿಸಿದೆ. ಚೇಸಿಂಗ್​​​ನಲ್ಲಿ ಗುಜರಾತ್​​ ಆಡಿದ 10 ಪಂದ್ಯಗಳಲ್ಲಿ 9ರಲ್ಲಿ ಗೆಲುವು ಸಾಧಿಸಿದ್ದಾರೆ. ಒಂದರಲ್ಲಿ ಸೋಲು ಕಂಡಿದೆ. ಅದರಲ್ಲಿ 8 ಪಂದ್ಯಗಳು ಕೊನೆಯ ಓವರ್​​ನಲ್ಲೇ ಗೆಲುವು ಸಾಧಿಸಿದೆ.
(7 / 7)
ಚೆನ್ನೈ ಸೂಪರ್ ಕಿಂಗ್ಸ್​ ತಂಡವು, ಗುಜರಾತ್​​​​​​​​​​​​​​​​​​​​​​​​​ ಟೈಟಾನ್ಸ್​​​ ಸತತ ಮೂರನೇ ಗೆಲುವು ದಾಖಲಿಸಿದೆ. ಚೇಸಿಂಗ್​​​ನಲ್ಲಿ ಗುಜರಾತ್​​ ಆಡಿದ 10 ಪಂದ್ಯಗಳಲ್ಲಿ 9ರಲ್ಲಿ ಗೆಲುವು ಸಾಧಿಸಿದ್ದಾರೆ. ಒಂದರಲ್ಲಿ ಸೋಲು ಕಂಡಿದೆ. ಅದರಲ್ಲಿ 8 ಪಂದ್ಯಗಳು ಕೊನೆಯ ಓವರ್​​ನಲ್ಲೇ ಗೆಲುವು ಸಾಧಿಸಿದೆ.

    ಹಂಚಿಕೊಳ್ಳಲು ಲೇಖನಗಳು