logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ipl Auction 2024: 17ನೇ ಆವೃತ್ತಿಯ ಐಪಿಎಲ್‌ಗೆ ಸಿದ್ಧತೆಗಳನ್ನ ಆರಂಭಿಸಿದ ಬಿಸಿಸಿಐ; ಇದೇ ದಿನ ಆಟಗಾರರ ಹರಾಜು

IPL Auction 2024: 17ನೇ ಆವೃತ್ತಿಯ ಐಪಿಎಲ್‌ಗೆ ಸಿದ್ಧತೆಗಳನ್ನ ಆರಂಭಿಸಿದ ಬಿಸಿಸಿಐ; ಇದೇ ದಿನ ಆಟಗಾರರ ಹರಾಜು

Oct 27, 2023 10:23 AM IST

2024ರ 17ನೇ ಆವೃತ್ತಿಯ ಐಪಿಎಲ್‌ ಹರಾಜು ಈ ಬಾರಿ ದುಬೈನಲ್ಲಿ ನಡೆಯುವ ಸಾಧ್ಯತೆ ಇದೆ. ಇದಕ್ಕಾಗಿ ಬಿಸಿಸಿಐ ಸಿದ್ಧತೆಗಳನ್ನು ನಡೆಸುತ್ತಿದೆ. ಡಿಸೆಂಬರ್ 15 ಮತ್ತು 19ರ ನಡುವೆ ಆಟಗಾರರ ಹರಾಜು ನಡೆಯಲಿದೆ ಎಂದು ವರದಿಯಾಗಿದೆ. ಐಪಿಎಲ್ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ.

2024ರ 17ನೇ ಆವೃತ್ತಿಯ ಐಪಿಎಲ್‌ ಹರಾಜು ಈ ಬಾರಿ ದುಬೈನಲ್ಲಿ ನಡೆಯುವ ಸಾಧ್ಯತೆ ಇದೆ. ಇದಕ್ಕಾಗಿ ಬಿಸಿಸಿಐ ಸಿದ್ಧತೆಗಳನ್ನು ನಡೆಸುತ್ತಿದೆ. ಡಿಸೆಂಬರ್ 15 ಮತ್ತು 19ರ ನಡುವೆ ಆಟಗಾರರ ಹರಾಜು ನಡೆಯಲಿದೆ ಎಂದು ವರದಿಯಾಗಿದೆ. ಐಪಿಎಲ್ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ.
ಭಾರತದಲ್ಲಿ ಐಸಿಸಿ ಏಕದಿನ ವಿಶ್ವಕಪ್ ಫೀವರ್ ಜೋರಾಗಿಯೇ ಇದೆ. ಇದರ ನಡುವೆಯೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ-ಬಿಸಿಸಿಐ ಮುಂಬರುವ ಐಪಿಎಲ್‌ಗೆ ಹರಾಜಿಗೆ ಸಿದ್ದತೆಗಳನ್ನು ಆರಂಭಿಸಿದೆ. ಬಿಸಿಸಿಐ ಐಪಿಎಲ್‌ಗೆ ಮಾತ್ರವಲ್ಲದೆ, ಮಹಿಳಾ ಪ್ರೀಮಿಯರ್ ಲೀಗ್‌ (WPL)ಗೂ ಪ್ಲಾನ್‌ಗಳನ್ನು ಮಾಡಿಕೊಳ್ಳುತ್ತಿದೆ. ಈ ಎರಡೂ ಟೂರ್ನಿಗಳ ಆಟಗಾರರ ಹರಾಜು  2023ರ ಡಿಸೆಂಬರ್‌ನಲ್ಲಿ ನಡೆಯಲಿದೆ.
(1 / 5)
ಭಾರತದಲ್ಲಿ ಐಸಿಸಿ ಏಕದಿನ ವಿಶ್ವಕಪ್ ಫೀವರ್ ಜೋರಾಗಿಯೇ ಇದೆ. ಇದರ ನಡುವೆಯೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ-ಬಿಸಿಸಿಐ ಮುಂಬರುವ ಐಪಿಎಲ್‌ಗೆ ಹರಾಜಿಗೆ ಸಿದ್ದತೆಗಳನ್ನು ಆರಂಭಿಸಿದೆ. ಬಿಸಿಸಿಐ ಐಪಿಎಲ್‌ಗೆ ಮಾತ್ರವಲ್ಲದೆ, ಮಹಿಳಾ ಪ್ರೀಮಿಯರ್ ಲೀಗ್‌ (WPL)ಗೂ ಪ್ಲಾನ್‌ಗಳನ್ನು ಮಾಡಿಕೊಳ್ಳುತ್ತಿದೆ. ಈ ಎರಡೂ ಟೂರ್ನಿಗಳ ಆಟಗಾರರ ಹರಾಜು  2023ರ ಡಿಸೆಂಬರ್‌ನಲ್ಲಿ ನಡೆಯಲಿದೆ.(IPL)
ಐಪಿಎಲ್‌ ಹರಾಜು ದುಬೈನಲ್ಲಿ ನಡೆಯಬಹುದು. ಇದಕ್ಕಾಗಿ ಬಿಸಿಸಿಐ ಸಿದ್ಧತೆ ನಡೆಸಿದೆ. ಮಂಡಳಿಯು ಡಿಸೆಂಬರ್ 15 ಮತ್ತು 19ರ ನಡುವೆ ಹರಾಜು ನಡೆಸಲಿದೆ ಎಂದು ವರದಿಯಾಗಿದೆ. ಮಹಿಳೆಯರ ಪ್ರೀಮಿಯರ್ ಲೀಗ್‌ ಡಿಸೆಂಬರ್ 9 ರಂದು ನಡಯಲಿದೆ ಎಂದು ನಿರೀಕ್ಷಿಸಲಾಗಿದೆ. ಡಬ್ಲ್ಯೂಪಿಎಲ್ ಹರಾಜಿನ ಸ್ಥಳವನ್ನು ನಿಗದಿಪಡಿಸಿಲ್ಲ. ಆದರೆ ಇದು ಭಾರತದಲ್ಲೇ ನಡೆಯುವ ಸಾಧ್ಯತೆ ಇದೆ. 
(2 / 5)
ಐಪಿಎಲ್‌ ಹರಾಜು ದುಬೈನಲ್ಲಿ ನಡೆಯಬಹುದು. ಇದಕ್ಕಾಗಿ ಬಿಸಿಸಿಐ ಸಿದ್ಧತೆ ನಡೆಸಿದೆ. ಮಂಡಳಿಯು ಡಿಸೆಂಬರ್ 15 ಮತ್ತು 19ರ ನಡುವೆ ಹರಾಜು ನಡೆಸಲಿದೆ ಎಂದು ವರದಿಯಾಗಿದೆ. ಮಹಿಳೆಯರ ಪ್ರೀಮಿಯರ್ ಲೀಗ್‌ ಡಿಸೆಂಬರ್ 9 ರಂದು ನಡಯಲಿದೆ ಎಂದು ನಿರೀಕ್ಷಿಸಲಾಗಿದೆ. ಡಬ್ಲ್ಯೂಪಿಎಲ್ ಹರಾಜಿನ ಸ್ಥಳವನ್ನು ನಿಗದಿಪಡಿಸಿಲ್ಲ. ಆದರೆ ಇದು ಭಾರತದಲ್ಲೇ ನಡೆಯುವ ಸಾಧ್ಯತೆ ಇದೆ. (IPL)
ಐಪಿಎಲ್ ಹರಾಜಿಗೆ ಸಂಬಂಧಿಸಿದಂತೆ ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿಯನ್ನು ಫ್ರಾಂಚೈಸಿಗಳಿಗೆ ಕಳುಹಿಸಿಲ್ಲ. ಆದರೆ ಈ ಹರಾಜು ದುಬೈನಲ್ಲಿ ನಡೆಯಲಿದೆ ಎಂಬ ಚರ್ಚೆ ಜೋರಾಗಿದೆ. ಐಪಿಎಲ್ ಹರಾಜು ಡಿಸೆಂಬರ್ 18 ಅಥವಾ 19 ರಂದು ನಡೆಯಲಿದೆ. ಬಿಸಿಸಿಐ ಕಳೆದ ವರ್ಷದ ಹರಾಜನ್ನು ಇಸ್ತಾಂಬುಲ್‌ನಲ್ಲಿ ನಡೆಸಲು ಯೋಜಿಸಿತ್ತು. ಆದರೆ ಅಂತಿಮವಾಗಿ ಕೊಚ್ಚಿಯಲ್ಲಿ ನಡೆಸಿತ್ತು.
(3 / 5)
ಐಪಿಎಲ್ ಹರಾಜಿಗೆ ಸಂಬಂಧಿಸಿದಂತೆ ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿಯನ್ನು ಫ್ರಾಂಚೈಸಿಗಳಿಗೆ ಕಳುಹಿಸಿಲ್ಲ. ಆದರೆ ಈ ಹರಾಜು ದುಬೈನಲ್ಲಿ ನಡೆಯಲಿದೆ ಎಂಬ ಚರ್ಚೆ ಜೋರಾಗಿದೆ. ಐಪಿಎಲ್ ಹರಾಜು ಡಿಸೆಂಬರ್ 18 ಅಥವಾ 19 ರಂದು ನಡೆಯಲಿದೆ. ಬಿಸಿಸಿಐ ಕಳೆದ ವರ್ಷದ ಹರಾಜನ್ನು ಇಸ್ತಾಂಬುಲ್‌ನಲ್ಲಿ ನಡೆಸಲು ಯೋಜಿಸಿತ್ತು. ಆದರೆ ಅಂತಿಮವಾಗಿ ಕೊಚ್ಚಿಯಲ್ಲಿ ನಡೆಸಿತ್ತು.(IPL)
ಪ್ಲೇಯರ್ ಟ್ರೇಡಿಂಗ್ ವಿಂಡೋ ಪ್ರಸ್ತುತ ತೆರೆದಿದೆ. ಆದರೆ ಇಲ್ಲಿಯವರಿಗೆ ಯಾವುದೇ ಆಟಗಾರನು ಐಪಿಎಲ್‌ ಫ್ರಾಂಚೈಸಿಗಳ ನಡುವೆ ವಿನಿಮಯ ಮಾಡಿಕೊಂಡಿಲ್ಲ. ಕೆಲವು ದುಬಾರಿ ಆಟಗಾರರನ್ನು ಹರಾಜಿಗೂ ಮುನ್ನ ಬಿಡುಗಡೆ ಮಾಡಬಹುದು. ಇದಕ್ಕಾಗಿ ಫ್ರಾಂಚೈಸಿಗಳಿಗೆ ಸಾಕಷ್ಟು ಸಮಯ ನೀಡಲಾಗುತ್ತದೆ. 
(4 / 5)
ಪ್ಲೇಯರ್ ಟ್ರೇಡಿಂಗ್ ವಿಂಡೋ ಪ್ರಸ್ತುತ ತೆರೆದಿದೆ. ಆದರೆ ಇಲ್ಲಿಯವರಿಗೆ ಯಾವುದೇ ಆಟಗಾರನು ಐಪಿಎಲ್‌ ಫ್ರಾಂಚೈಸಿಗಳ ನಡುವೆ ವಿನಿಮಯ ಮಾಡಿಕೊಂಡಿಲ್ಲ. ಕೆಲವು ದುಬಾರಿ ಆಟಗಾರರನ್ನು ಹರಾಜಿಗೂ ಮುನ್ನ ಬಿಡುಗಡೆ ಮಾಡಬಹುದು. ಇದಕ್ಕಾಗಿ ಫ್ರಾಂಚೈಸಿಗಳಿಗೆ ಸಾಕಷ್ಟು ಸಮಯ ನೀಡಲಾಗುತ್ತದೆ. (IPL)
ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನ ಸ್ಥಳ ಮತ್ತು ದಿನಾಂಕಗಳ ಬಗ್ಗೆ ಬಿಸಿಸಿಐ ಇನ್ನೂ ಮಾಲೀಕರಿಗೆ ತಿಳಿಸಿಲ್ಲ. ಮುಂದಿನ ವರ್ಷದ ಫೆಬ್ರವರಿಯಲ್ಲಿ WPL ನಡೆಯಬಹುದು. ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಜನವರಿ ಮಧ್ಯದವರೆಗೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬ್ಯುಸಿಯಾಗಿರುತ್ತದೆ. ಇದರ ನಂತರ ಮಹಿಳಾ ಪ್ರೀಮಿಯರ್ ಲೀಗ್ ಆಯೋಜಿಸಬಹುದು. 
(5 / 5)
ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನ ಸ್ಥಳ ಮತ್ತು ದಿನಾಂಕಗಳ ಬಗ್ಗೆ ಬಿಸಿಸಿಐ ಇನ್ನೂ ಮಾಲೀಕರಿಗೆ ತಿಳಿಸಿಲ್ಲ. ಮುಂದಿನ ವರ್ಷದ ಫೆಬ್ರವರಿಯಲ್ಲಿ WPL ನಡೆಯಬಹುದು. ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಜನವರಿ ಮಧ್ಯದವರೆಗೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬ್ಯುಸಿಯಾಗಿರುತ್ತದೆ. ಇದರ ನಂತರ ಮಹಿಳಾ ಪ್ರೀಮಿಯರ್ ಲೀಗ್ ಆಯೋಜಿಸಬಹುದು. (IPL)

    ಹಂಚಿಕೊಳ್ಳಲು ಲೇಖನಗಳು