logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Jio World Plaza: ಜಿಯೋ ವರ್ಲ್ಡ್ ಪ್ಲಾಜಾ ಕುರಿತು ನೀವು ತಿಳಿದಿರಬೇಕಾದ ಮಾಹಿತಿ ಮತ್ತು ರಿಲಯನ್ಸ್‌ನ ಐಷಾರಾಮಿ ಮಾಲ್‌ನ ಆಕರ್ಷಕ ಫೋಟೋಸ್

Jio World Plaza: ಜಿಯೋ ವರ್ಲ್ಡ್ ಪ್ಲಾಜಾ ಕುರಿತು ನೀವು ತಿಳಿದಿರಬೇಕಾದ ಮಾಹಿತಿ ಮತ್ತು ರಿಲಯನ್ಸ್‌ನ ಐಷಾರಾಮಿ ಮಾಲ್‌ನ ಆಕರ್ಷಕ ಫೋಟೋಸ್

Nov 01, 2023 08:16 PM IST

ಜಿಯೋ ವರ್ಲ್ಡ್‌ ಪ್ಲಾಜಾ ನಿನ್ನೆ (ಅ.31) ಉದ್ಘಾಟನೆಯಾಗಿದ್ದು, ಇಂದು ಸಾರ್ವಜನಿಕರಿಗೆ ತೆರೆದುಕೊಂಡಿದೆ. ರಿಲಯನ್ಸ್‌ನ ಐಷಾರಾಮಿ ಮಾಲ್‌ ಕುರಿತಾದ ಮಾಹಿತಿ ಮತ್ತು ಆಕರ್ಷಕ ಒಳಾಂಗಣ ಫೋಟೋ ವರದಿ ಇಲ್ಲಿದೆ.

  • ಜಿಯೋ ವರ್ಲ್ಡ್‌ ಪ್ಲಾಜಾ ನಿನ್ನೆ (ಅ.31) ಉದ್ಘಾಟನೆಯಾಗಿದ್ದು, ಇಂದು ಸಾರ್ವಜನಿಕರಿಗೆ ತೆರೆದುಕೊಂಡಿದೆ. ರಿಲಯನ್ಸ್‌ನ ಐಷಾರಾಮಿ ಮಾಲ್‌ ಕುರಿತಾದ ಮಾಹಿತಿ ಮತ್ತು ಆಕರ್ಷಕ ಒಳಾಂಗಣ ಫೋಟೋ ವರದಿ ಇಲ್ಲಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಂಬೈನಲ್ಲಿ ತನ್ನ ಐಷಾರಾಮಿ ಜಿಯೋ ವರ್ಲ್ಡ್ ಪ್ಲಾಜಾ (ಜೆಡಬ್ಲ್ಯೂಪಿ) ಅನ್ನು ಅಕ್ಟೋಬರ್ 31 ರಂದು ಅನಾವರಣಗೊಳಿಸಿತು. ಜೆಡಬ್ಲ್ಯೂಪಿಯು ಮುಂಬೈನ ಹೃದಯಭಾಗದಲ್ಲಿರುವ ಜನದಟ್ಟಣೆಯ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಲ್ಲಿದೆ.
(1 / 6)
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಂಬೈನಲ್ಲಿ ತನ್ನ ಐಷಾರಾಮಿ ಜಿಯೋ ವರ್ಲ್ಡ್ ಪ್ಲಾಜಾ (ಜೆಡಬ್ಲ್ಯೂಪಿ) ಅನ್ನು ಅಕ್ಟೋಬರ್ 31 ರಂದು ಅನಾವರಣಗೊಳಿಸಿತು. ಜೆಡಬ್ಲ್ಯೂಪಿಯು ಮುಂಬೈನ ಹೃದಯಭಾಗದಲ್ಲಿರುವ ಜನದಟ್ಟಣೆಯ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಲ್ಲಿದೆ.(Twitter/@@RIL_Updates)
ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್, ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಮತ್ತು ಜಿಯೋ ವರ್ಲ್ಡ್ ಗಾರ್ಡನ್‌ ಮುಂತಾದವು ಇದೇ ಪ್ಲಾಜಾದಲ್ಲಿವೆ. ಇದು ಸಮಗ್ರ ಶಾಪಿಂಗ್ ಮಾಲ್‌ ಆಗಿ ಅನುಕೂಲ ಉಂಟುಮಾಡಲಿದೆ. 
(2 / 6)
ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್, ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಮತ್ತು ಜಿಯೋ ವರ್ಲ್ಡ್ ಗಾರ್ಡನ್‌ ಮುಂತಾದವು ಇದೇ ಪ್ಲಾಜಾದಲ್ಲಿವೆ. ಇದು ಸಮಗ್ರ ಶಾಪಿಂಗ್ ಮಾಲ್‌ ಆಗಿ ಅನುಕೂಲ ಉಂಟುಮಾಡಲಿದೆ. 
ಜಿಯೋ ವರ್ಲ್ಡ್ ಪ್ಲಾಜಾ (ಜೆಡಬ್ಲ್ಯೂಪಿ) ಚಿಲ್ಲರೆ ವ್ಯಾಪಾರ, ವಿರಾಮ ಅನುಭವಿಸಲು ಮತ್ತು ಭೋಜನಕ್ಕೆ ವಿಶೇಷ ಕೇಂದ್ರವಾಗಿ ರೂಪುಗೊಂಡಿದೆ. ಇದು ನಾಲ್ಕು ಮಹಡಿಯ ಪ್ಲಾಜಾವಾಗಿದ್ದು, 750,000 ಚದರ ಅಡಿ ಪ್ರದೇಶವನ್ನು ಹೊಂದಿದೆ.
(3 / 6)
ಜಿಯೋ ವರ್ಲ್ಡ್ ಪ್ಲಾಜಾ (ಜೆಡಬ್ಲ್ಯೂಪಿ) ಚಿಲ್ಲರೆ ವ್ಯಾಪಾರ, ವಿರಾಮ ಅನುಭವಿಸಲು ಮತ್ತು ಭೋಜನಕ್ಕೆ ವಿಶೇಷ ಕೇಂದ್ರವಾಗಿ ರೂಪುಗೊಂಡಿದೆ. ಇದು ನಾಲ್ಕು ಮಹಡಿಯ ಪ್ಲಾಜಾವಾಗಿದ್ದು, 750,000 ಚದರ ಅಡಿ ಪ್ರದೇಶವನ್ನು ಹೊಂದಿದೆ.(Twitter/@@RIL_Updates)
ಬಾಲೆನ್ಸಿಯಾಗ, ಜಾರ್ಜಿಯೊ ಅರ್ಮಾನಿ ಕೆಫೆ, ಪಾಟರಿ ಬಾರ್ನ್ ಕಿಡ್ಸ್, ಸ್ಯಾಮ್‌ಸಂಗ್ ಎಕ್ಸ್‌ಪೀರಿಯೆನ್ಸ್ ಸೆಂಟರ್, ಇಲ್ಯಾಂಡ್ ಎನ್ ಕೆಫೆ ಮತ್ತು ರಿಮೋವಾ ಭಾರತೀಯ ಮಾರುಕಟ್ಟೆಯಲ್ಲಿ ಗಮನಾರ್ಹವಾದ ಅಂತರರಾಷ್ಟ್ರೀಯ ಚೊಚ್ಚಲ ಪ್ರದರ್ಶನ ವ್ಯವಸ್ಥೆಯ ಜತೆಗೆ ಜಿಯೋ ವರ್ಲ್ಡ್ ಪ್ಲಾಜಾ 66 ಐಷಾರಾಮಿ ಬ್ರಾಂಡ್‌ಗಳ ಪ್ರಭಾವಶಾಲಿ ಶ್ರೇಣಿಯೂ ಇದೆ. ಮುಂಬೈ ಈಗ ವ್ಯಾಲೆಂಟಿನೋ, ಟೋರಿ ಬರ್ಚ್, ವೈಎಸ್‌ಎಲ್, ವರ್ಸೇಸ್, ಟಿಫಾನಿ, ಲಾಡುರೀ ಮತ್ತು ಪಾಟರಿ ಬಾರ್ನ್‌ಗಳ ಚೊಚ್ಚಲ ಮಳಿಗೆಗಳಿವೆ. ಇವುಗಳ ನಡುವೆ, ಲೂಯಿಸ್ ವಿಟಾನ್, ಗುಸ್ಸಿ, ಕಾರ್ಟಿಯರ್, ಬ್ಯಾಲಿ, ಜಾರ್ಜಿಯೊ ಅರ್ಮಾನಿ, ಡಿಯರ್, ವೈಎಸ್ಎಲ್ ಮತ್ತು ಬಲ್ಗೇರಿಯಂತಹ ಇತರ ಪ್ರಸಿದ್ಧ ಬ್ರ್ಯಾಂಡ್‌ಗಳು ಸೇರಿವೆ.
(4 / 6)
ಬಾಲೆನ್ಸಿಯಾಗ, ಜಾರ್ಜಿಯೊ ಅರ್ಮಾನಿ ಕೆಫೆ, ಪಾಟರಿ ಬಾರ್ನ್ ಕಿಡ್ಸ್, ಸ್ಯಾಮ್‌ಸಂಗ್ ಎಕ್ಸ್‌ಪೀರಿಯೆನ್ಸ್ ಸೆಂಟರ್, ಇಲ್ಯಾಂಡ್ ಎನ್ ಕೆಫೆ ಮತ್ತು ರಿಮೋವಾ ಭಾರತೀಯ ಮಾರುಕಟ್ಟೆಯಲ್ಲಿ ಗಮನಾರ್ಹವಾದ ಅಂತರರಾಷ್ಟ್ರೀಯ ಚೊಚ್ಚಲ ಪ್ರದರ್ಶನ ವ್ಯವಸ್ಥೆಯ ಜತೆಗೆ ಜಿಯೋ ವರ್ಲ್ಡ್ ಪ್ಲಾಜಾ 66 ಐಷಾರಾಮಿ ಬ್ರಾಂಡ್‌ಗಳ ಪ್ರಭಾವಶಾಲಿ ಶ್ರೇಣಿಯೂ ಇದೆ. ಮುಂಬೈ ಈಗ ವ್ಯಾಲೆಂಟಿನೋ, ಟೋರಿ ಬರ್ಚ್, ವೈಎಸ್‌ಎಲ್, ವರ್ಸೇಸ್, ಟಿಫಾನಿ, ಲಾಡುರೀ ಮತ್ತು ಪಾಟರಿ ಬಾರ್ನ್‌ಗಳ ಚೊಚ್ಚಲ ಮಳಿಗೆಗಳಿವೆ. ಇವುಗಳ ನಡುವೆ, ಲೂಯಿಸ್ ವಿಟಾನ್, ಗುಸ್ಸಿ, ಕಾರ್ಟಿಯರ್, ಬ್ಯಾಲಿ, ಜಾರ್ಜಿಯೊ ಅರ್ಮಾನಿ, ಡಿಯರ್, ವೈಎಸ್ಎಲ್ ಮತ್ತು ಬಲ್ಗೇರಿಯಂತಹ ಇತರ ಪ್ರಸಿದ್ಧ ಬ್ರ್ಯಾಂಡ್‌ಗಳು ಸೇರಿವೆ.(Twitter/@@RIL_Updates)
ಜಿಯೋ ವರ್ಲ್ಡ್ ಪ್ಲಾಜಾ (ಜೆಡಬ್ಲ್ಯೂಪಿ) ಮನೀಶ್ ಮಲ್ಹೋತ್ರಾ, ಅಬು ಜಾನಿ-ಸಂದೀಪ್ ಖೋಸ್ಲಾ, ರಾಹುಲ್ ಮಿಶ್ರಾ, ಫಲ್ಗುಣಿ ಮತ್ತು ಶೇನ್ ಪೀಕಾಕ್ ಮತ್ತು ರಿ ಬೈ ರಿತು ಕುಮಾರ್ ಅವರಂತಹ ಪ್ರಸಿದ್ಧ ವಿನ್ಯಾಸಕರ ಉತ್ಪನ್ನಗಳನ್ನು ಸಹ ಪ್ರದರ್ಶಿಸುತ್ತದೆ.
(5 / 6)
ಜಿಯೋ ವರ್ಲ್ಡ್ ಪ್ಲಾಜಾ (ಜೆಡಬ್ಲ್ಯೂಪಿ) ಮನೀಶ್ ಮಲ್ಹೋತ್ರಾ, ಅಬು ಜಾನಿ-ಸಂದೀಪ್ ಖೋಸ್ಲಾ, ರಾಹುಲ್ ಮಿಶ್ರಾ, ಫಲ್ಗುಣಿ ಮತ್ತು ಶೇನ್ ಪೀಕಾಕ್ ಮತ್ತು ರಿ ಬೈ ರಿತು ಕುಮಾರ್ ಅವರಂತಹ ಪ್ರಸಿದ್ಧ ವಿನ್ಯಾಸಕರ ಉತ್ಪನ್ನಗಳನ್ನು ಸಹ ಪ್ರದರ್ಶಿಸುತ್ತದೆ.(Twitter/@@RIL_Updates)
ಕಮಲದ ಹೂವು ಮತ್ತು ಪ್ರಕೃತಿಯ ವಿವಿಧ ಅಂಶಗಳಿಂದ ಸ್ಫೂರ್ತಿ ಪಡೆದ ದಿ ಪ್ಲಾಜಾದ ವಾಸ್ತುಶಿಲ್ಪದ ವಿನ್ಯಾಸವನ್ನು ಟಿವಿಎಸ್, ಯುನೈಟೆಡ್ ಸ್ಟೇಟ್ಸ್ ಮೂಲದ ಪ್ರಸಿದ್ಧ ಅಂತರರಾಷ್ಟ್ರೀಯ ವಾಸ್ತುಶಿಲ್ಪ ಮತ್ತು ವಿನ್ಯಾಸ ಸಂಸ್ಥೆ ಮತ್ತು ರಿಲಯನ್ಸ್ ತಂಡದ ನಡುವಿನ ಪಾಲುದಾರಿಕೆಯ ಮೂಲಕ ಮಾಡಿಸಿಕೊಂಡಿದೆ. 
(6 / 6)
ಕಮಲದ ಹೂವು ಮತ್ತು ಪ್ರಕೃತಿಯ ವಿವಿಧ ಅಂಶಗಳಿಂದ ಸ್ಫೂರ್ತಿ ಪಡೆದ ದಿ ಪ್ಲಾಜಾದ ವಾಸ್ತುಶಿಲ್ಪದ ವಿನ್ಯಾಸವನ್ನು ಟಿವಿಎಸ್, ಯುನೈಟೆಡ್ ಸ್ಟೇಟ್ಸ್ ಮೂಲದ ಪ್ರಸಿದ್ಧ ಅಂತರರಾಷ್ಟ್ರೀಯ ವಾಸ್ತುಶಿಲ್ಪ ಮತ್ತು ವಿನ್ಯಾಸ ಸಂಸ್ಥೆ ಮತ್ತು ರಿಲಯನ್ಸ್ ತಂಡದ ನಡುವಿನ ಪಾಲುದಾರಿಕೆಯ ಮೂಲಕ ಮಾಡಿಸಿಕೊಂಡಿದೆ. (HT Photo/Vijay Bate)

    ಹಂಚಿಕೊಳ್ಳಲು ಲೇಖನಗಳು