logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kannada Rajyotsava: ಕನ್ನಡದ ಈ ಆರು ಹಾಡುಗಳನ್ನು ಆಲಿಸಿ: ರಾಜ್ಯೋತ್ಸವ ಸಡಗರ ಹೆಚ್ಚಿಸಿ

Kannada Rajyotsava: ಕನ್ನಡದ ಈ ಆರು ಹಾಡುಗಳನ್ನು ಆಲಿಸಿ: ರಾಜ್ಯೋತ್ಸವ ಸಡಗರ ಹೆಚ್ಚಿಸಿ

Nov 01, 2023 10:07 AM IST

Kannada Songs ಕನ್ನಡ ನಾಡು ನುಡಿ ಬಿಂಬಿಸುವ ಹತ್ತಾರು ಹಾಡುಗಳಿವೆ. ಅದರಲ್ಲಿ ಹಲವು ಗೀತೆಗಳಂತೂ ಈಗಲೂ ಜನಮಾನಸದಲ್ಲಿ ಉಳಿದಿದೆ. ಅಂತಹ ಕೆಲವು ಗೀತೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. 

  • Kannada Songs ಕನ್ನಡ ನಾಡು ನುಡಿ ಬಿಂಬಿಸುವ ಹತ್ತಾರು ಹಾಡುಗಳಿವೆ. ಅದರಲ್ಲಿ ಹಲವು ಗೀತೆಗಳಂತೂ ಈಗಲೂ ಜನಮಾನಸದಲ್ಲಿ ಉಳಿದಿದೆ. ಅಂತಹ ಕೆಲವು ಗೀತೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. 
ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ, ತಾಯ್ನಾಡ ಜಯಭೇರಿ ನಾವಾದೆವೆನ್ನಿ …….ಕನ್ನಡದ ಮಕ್ಕಳೆಲ್ಲ ಹಾಡಿನ ಸಾಹಿತ್ಯವನ್ನು1969ರಲ್ಲಿ ಬಿಡುಗಡೆಯಾದ ಕಣ್ತೆರೆದು ನೋಡು ಚಿತ್ರಕ್ಕಾಗಿ  ಬರೆದವರು ಜಿ. ವಿ. ಅಯ್ಯರ್ . ರಾಜಕುಮಾರ್, ಲೀಲಾವತಿ, ಬಾಲಕೃಷ್ಣ, ರಾಜಶ್ರೀ, ನರಸಿಂಹರಾಜು, ರಮಾದೇವಿ, ಜಿ. ವಿ. ಅಯ್ಯರ್, & ಜಯಶ್ರೀ ಅವರು ನಟಿಸಿದ ಚಿತ್ರವಿದು.  ಚಿತ್ರ ನಿರ್ದೇಶಿಸಿದವರು ಟಿ. ವಿ. ಸಿಂಗ್ ಥಾಕುರ್ ಮತ್ತು ನಿರ್ಮಾಪಕರು ಎ. ಕೆ. ವೇಲನ್. ಕನ್ನಡದ ಮಕ್ಕಳೆಲ್ಲ ಹಾಡಿಗೆ ಸಂಗೀತ ಕೊಟ್ಟು ಹಾಡಿದವರೂ ಸಂಗೀತ ದಿಗ್ಗಜ ಜಿ. ಕೆ. ವೆಂಕಟೇಶ್ .
(1 / 6)

ಕನ್ನಡ ನಾಡಿನ ಕರಾವಳಿ ಕನ್ನಡ ದೇವಿಯ ಪ್ರಭಾವಳಿ………..ಕನ್ನಡ ನಾಡಿನ ಕರಾವಳಿ, ಕನ್ನಡ ದೇವಿಯ ಪ್ರಭಾವಳಿ ಎನ್ನುವುದು ಪುಟ್ಟಣ್ಣ ಕಣಗಾಲ್‌ ನಿರ್ದೇಶನದ  1984 ರಲ್ಲಿ ಬಿಡುಗಡೆ ಕಂಡ ಮಸಣದ ಹೂವು ಚಿತ್ರದ ಗೀತೆ. ಕರ್ನಾಟಕದ ಕರಾವಳಿಯನ್ನು ಅದ್ಭುತವಾಗಿ ಸಾಲುಗಳಲ್ಲಿ ಚಿತ್ರಿಸಲಾಗಿದೆ. ಈ ಹಾಡನ್ನು ರಚಿಸಿದವರು ಹಿರಿಯ ಸಾಹಿತಿ ಸು.ರಂ. ಎಕ್ಕುಂಡಿ. ಸಂಗೀತ ನೀಡಿದ್ದವರು ವಿಜಯಭಾಸ್ಕರ್‌ ಹಾಗೂ ಹಾಡಿದ್ದವರು ವಾಣಿ ಜಯರಾಂ ಹಾಗೂ ಪಿ. ಜಯಚಂದ್ರನ್‌.
(2 / 6)

ಕನ್ನಡ  ಹೊನ್ನುಡಿ ದೇವಿಯ ಪೂಜಿಸುವೆ ನಾ ಆರಾಧಿಸುವೆ………………..ಈ ಹಾಡು 1992ಬಿಡುಗಡೆಯಾದ ಒಂದು ಸಿನಿಮಾ ಕಥೆ ಚಿತ್ರದ್ದು. ಕನ್ನಡ ಹೊನ್ನುಡಿ ದೇವಿಯನ್ನು ಹಾಡಿನ ಸಾಹಿತ್ಯ ಬರೆದವರು ಚಿ ಉದಯಶಂಕರ್. ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ.  ಹಾಡಿಗೆ ಸಂಗೀತ  ಸಂಯೋಜನೆ ನೀಡಿದವರು ರಾಜನ್-ನಾಗೇಂದ್ರ.  ಅನಂತ್ ನಾಗ್,ಅಂಜನಾ, ಅಭಿಲಾಷ, ಮುಖ್ಯಮಂತ್ರಿ ಚಂದ್ರು, ರಮೇಶ್, & ಎಂ. ಎಸ್. ಉಮೇಶ್ ಅವರು ನಟಿಸಿದ್ದರು. ಒಂದು ಸಿನಿಮಾ ಕಥೆ ಚಿತ್ರ ನಿರ್ದೇಶಿಸಿದವರು ಫಣಿ ರಾಮಚಂದ್ರ.
(3 / 6)

ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ………….1995 ರಲ್ಲಿ ಬಿಡುಗಡೆಯಾದ ವಿಷ್ಣುವರ್ಧನ್ ರವರು ಹಾಗು ಶ್ರುತಿ ರವರು ನಟಿಸಿದ ಮೋಜುಗಾರ ಸೊಗಸುಗಾರ ಚಿತ್ರದ ಹಾಡಿದು. ಕನ್ನಡವೇ ನಮ್ಮಮ್ಮ ಹಾಡಿನ ಸಾಹಿತ್ಯ ಬರೆದವರು ನಾದಬ್ರಹ್ಮ ಹಂಸಲೇಖ. ಈ ಹಾಡನ್ನು ಹಾಡಿದವರು ವಿಷ್ಣುವರ್ಧನ್ ರವರು. ಈ ಹಾಡು  ಈ ಚಿತ್ರ ನಟ ವಿಷ್ಣುವರ್ಧನ್ ರವರು ನಟಿಸಿದ   150 ನೇ ಚಿತ್ರ ಎನ್ನುವುದು ವಿಶೇಷ.- 
(4 / 6)

ಕನ್ನಡದ ಮಾತು ಚೆನ್ನ ಕನ್ನಡದ ನೆಲ ಚೆನ್ನ ಕನ್ನಡಿಗರ ಮನಸ್ಸು ಚಿನ್ನ………………ಶಿವರಾಜ್‌ ಕುಮಾರ್‌ ಅಭಿನಯದ ಸಮರ ಚಿತ್ರದ ಗೀತೆಯಿದು.1995ರಲ್ಲಿ ಬಿಡುಗಡೆಯಾದ ಸಮಯ ಚಿತ್ರಕ್ಕೆ ವಿ.ಮನೋಹರ್‌ ಸಾಹಿತ್ಯ ನೀಡಿದ್ದರು. ಅವರು ರಚಿಸಿದ್ದ ಗೀತೆಗಳಲ್ಲಿ ಇದೂ ಒಂದು. ಕೌಸ್ತುಭ ಅವರ ಸಂಗೀತ ನಿರ್ದೇಶನದಲ್ಲಿ ಈ ಹಾಡು ಹಾಡಿದ್ದವರು ವರನಟ ಡಾ.ರಾಜಕುಮಾರ್‌. 
(5 / 6)

ನಾನು ಕನ್ನಡಿಗ ಕನ್ನಡದ ಕಾವಲಿಗ……ಚಾಲೆಂಜಿಗ್‌ ಸ್ಟಾರ್‌ ದರ್ಶನ್‌ ಅಭಿನಯದ ಬೃಂದಾವನದ ಚಿತ್ರದ ಹಾಡಿದು. ಇದಕ್ಕೆ ದರ್ಶನ್‌ ಅಭಿನಯವೂ ಅಷ್ಟೇ ಚೆನ್ನಾಗಿದೆ. ವಿ.ನಾಗೇಂದ್ರಪ್ರಸಾದ್‌ ಅವರ ಸಾಲುಗಳಿಗೆ ದನಿಯಾದವರು ಹೇಮಂತ್‌ ಹಾಗೂ ಶ್ರೇಯಾ ಘೋಷಾಲ್‌. ಸಂಗೀತ ನೀಡಿದವರು ವಿ.ಹರಿಕೃಷ್ಣ. 2013 ರಲ್ಲಿ ಬಿಡುಗಡೆಯಾದ ಬೃಂದಾವನ ಚಿತ್ರದ ಈ ಹಾಡು ಈಗಲೂ ಬಲು ಜನಪ್ರಿಯ.
(6 / 6)

    ಹಂಚಿಕೊಳ್ಳಲು ಲೇಖನಗಳು