logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮದುವೆ ಬಳಿಕ ಮರೆಯಾದರು ಎಂದವರಿಗೆ ಸರ್ಪ್ರೈಸ್ ಕೊಟ್ಟ ಹರಿಪ್ರಿಯಾ; ‘ಅಹನ ಅಗ್ನಿಹೋತ್ರ’ ಮೂಲಕ ಕಿರುತೆರೆಗೆ ಎಂಟ್ರಿ!

ಮದುವೆ ಬಳಿಕ ಮರೆಯಾದರು ಎಂದವರಿಗೆ ಸರ್ಪ್ರೈಸ್ ಕೊಟ್ಟ ಹರಿಪ್ರಿಯಾ; ‘ಅಹನ ಅಗ್ನಿಹೋತ್ರ’ ಮೂಲಕ ಕಿರುತೆರೆಗೆ ಎಂಟ್ರಿ!

Apr 06, 2024 06:16 PM IST

ಸ್ಯಾಂಡಲ್‌ವುಡ್‌ ಜತೆಗೆ ಪರಭಾಷೆಯ ಸಿನಿಮಾಗಳಲ್ಲಿ ನಟಿಸಿದ ಹರಿಪ್ರಿಯಾ, ಮದುವೆ ಬಳಿಕ ನಟನೆಯಿಂದ ದೂರವೇ ಉಳಿದಿದ್ದರು. ಹೋದಲ್ಲಿ ಬಂದಲ್ಲಿ ಮುಂದಿನ ಪ್ರಾಜೆಕ್ಟ್‌ ಬಗ್ಗೆಯೇ ಮಾತುಗಳನ್ನು ಎದುರಿಸುತ್ತಿದ್ದರು. ಈಗ ಅದೆಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ. ಸಿನಿಮಾ ಜತೆಗೆ, ಕಿರುತೆರೆಗೂ ಮತ್ತೆ ಎಂಟ್ರಿಕೊಟ್ಟಿದ್ದಾರೆ. 

  • ಸ್ಯಾಂಡಲ್‌ವುಡ್‌ ಜತೆಗೆ ಪರಭಾಷೆಯ ಸಿನಿಮಾಗಳಲ್ಲಿ ನಟಿಸಿದ ಹರಿಪ್ರಿಯಾ, ಮದುವೆ ಬಳಿಕ ನಟನೆಯಿಂದ ದೂರವೇ ಉಳಿದಿದ್ದರು. ಹೋದಲ್ಲಿ ಬಂದಲ್ಲಿ ಮುಂದಿನ ಪ್ರಾಜೆಕ್ಟ್‌ ಬಗ್ಗೆಯೇ ಮಾತುಗಳನ್ನು ಎದುರಿಸುತ್ತಿದ್ದರು. ಈಗ ಅದೆಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ. ಸಿನಿಮಾ ಜತೆಗೆ, ಕಿರುತೆರೆಗೂ ಮತ್ತೆ ಎಂಟ್ರಿಕೊಟ್ಟಿದ್ದಾರೆ. 
ಸ್ಯಾಂಡಲ್‌ವುಡ್‌ನಲ್ಲಿ ದಶಕ ಪೂರೈಸಿರುವ ಬೆರಳೆಣಿಕೆ ನಟಿಯರಲ್ಲಿ ಹರಿಪ್ರಿಯಾ ಸಹ ಒಬ್ಬರು. ಚಂದನವನದ ಸ್ಟಾರ್‌ ನಟರ ಜತೆಗೂ ತೆರೆ ಹಂಚಿಕೊಂಡಿದ್ದಾರೆ ಈ ನಟಿ. 
(1 / 8)
ಸ್ಯಾಂಡಲ್‌ವುಡ್‌ನಲ್ಲಿ ದಶಕ ಪೂರೈಸಿರುವ ಬೆರಳೆಣಿಕೆ ನಟಿಯರಲ್ಲಿ ಹರಿಪ್ರಿಯಾ ಸಹ ಒಬ್ಬರು. ಚಂದನವನದ ಸ್ಟಾರ್‌ ನಟರ ಜತೆಗೂ ತೆರೆ ಹಂಚಿಕೊಂಡಿದ್ದಾರೆ ಈ ನಟಿ. (instagram/ Star Suvarna)
2007ರಲ್ಲಿ ತುಳುವಿನ ಬದಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದ ಈ ಚೆಲುವೆ, ಅದಾದ ಬಳಿಕ ಹಿಂದೆ ತಿರುಗಿ ನೋಡಲೇ ಇಲ್ಲ. 
(2 / 8)
2007ರಲ್ಲಿ ತುಳುವಿನ ಬದಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದ ಈ ಚೆಲುವೆ, ಅದಾದ ಬಳಿಕ ಹಿಂದೆ ತಿರುಗಿ ನೋಡಲೇ ಇಲ್ಲ. 
ಸಾಲು ಸಾಲು ಕನ್ನಡದ ಸಿನಿಮಾಗಳ ಅವಕಾಶಗಳು ಈ ನಟಿಗೆ ಒಲಿದು ಬಂದವು. ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲೂ ನಟಿಸಿದರು. 
(3 / 8)
ಸಾಲು ಸಾಲು ಕನ್ನಡದ ಸಿನಿಮಾಗಳ ಅವಕಾಶಗಳು ಈ ನಟಿಗೆ ಒಲಿದು ಬಂದವು. ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲೂ ನಟಿಸಿದರು. 
ಹೀಗಿರುವಾಗಲೇ ಇದೀಗ ನಟಿ ಇದೀಗ ಕಿರುತೆರೆಗೆ ಹೊರಳಿದ್ದಾರೆ. ಅಂದರೆ, ಸೀರಿಯಲ್‌ ಕಡೆ ಮುಖ ಮಾಡಿದ್ದಾರೆ. ಪೂರ್ಣಪ್ರಮಾಣದ ನಾಯಕಿಯಾಗಿ ಅಲ್ಲ. ಬದಲಿಗೆ ಅತಿಥಿ ಪಾತ್ರದಲ್ಲಿ. 
(4 / 8)
ಹೀಗಿರುವಾಗಲೇ ಇದೀಗ ನಟಿ ಇದೀಗ ಕಿರುತೆರೆಗೆ ಹೊರಳಿದ್ದಾರೆ. ಅಂದರೆ, ಸೀರಿಯಲ್‌ ಕಡೆ ಮುಖ ಮಾಡಿದ್ದಾರೆ. ಪೂರ್ಣಪ್ರಮಾಣದ ನಾಯಕಿಯಾಗಿ ಅಲ್ಲ. ಬದಲಿಗೆ ಅತಿಥಿ ಪಾತ್ರದಲ್ಲಿ. 
ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಇಂದು (ಏ. 6) ಹೊಸ ಸೀರಿಯಲ್‌ ಪ್ರೋಮೋ ಬಿಡುಗಡೆ ಆಗಿದೆ. ಈ ಪ್ರೋಮೋದಲ್ಲಿ ಹರಿಪ್ರಿಯಾ ಅಡ್ವೋಕೇಟ್‌ ಆಗಿ ಎಂಟ್ರಿಕೊಟ್ಟಿದ್ದಾರೆ.
(5 / 8)
ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಇಂದು (ಏ. 6) ಹೊಸ ಸೀರಿಯಲ್‌ ಪ್ರೋಮೋ ಬಿಡುಗಡೆ ಆಗಿದೆ. ಈ ಪ್ರೋಮೋದಲ್ಲಿ ಹರಿಪ್ರಿಯಾ ಅಡ್ವೋಕೇಟ್‌ ಆಗಿ ಎಂಟ್ರಿಕೊಟ್ಟಿದ್ದಾರೆ.
ಈ ಹಿಂದೆ ಹಲವು ಸೀರಿಯಲ್‌ಗಳಲ್ಲಿ ಅತಿಥಿ ಪಾತ್ರದಲ್ಲಿ ಮಿಂಚಿದ್ದ ಇದೇ ನಟಿ. ಈಗ ಕೋಟ್‌ ಹಾಕಿ ಅಹನ ಅಗ್ನಿಹೋತ್ರ ಎಂಬ ಪಾತ್ರದ ಮೂಲಕ ಆಗಮಿಸುತ್ತಿದ್ದಾರೆ. ಹಾಗಾದರೆ, ಹರಿಪ್ರಿಯಾ ಯಾವ ಸೀರಿಯಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ? ಈ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ. 
(6 / 8)

ಖಡಕ್‌ ಅಡ್ವೋಕೇಟ್‌ ಪಾತ್ರದ ಪ್ರೋಮೋ ಬಿಡುಗಡೆಯಾಗಿದ್ದು, ಶೀಘ್ರದಲ್ಲಿ  ಶುರುವಾಗಲಿದೆ ಎಂಬ ಸುಳಿವೂ ನೀಡಿದ ಸ್ಟಾರ್‌ ಸುವರ್ಣ ವಾಹಿನಿ.  
(7 / 8)
ಖಡಕ್‌ ಅಡ್ವೋಕೇಟ್‌ ಪಾತ್ರದ ಪ್ರೋಮೋ ಬಿಡುಗಡೆಯಾಗಿದ್ದು, ಶೀಘ್ರದಲ್ಲಿ  ಶುರುವಾಗಲಿದೆ ಎಂಬ ಸುಳಿವೂ ನೀಡಿದ ಸ್ಟಾರ್‌ ಸುವರ್ಣ ವಾಹಿನಿ.  
ಸದ್ಯ ಹರಿಪ್ರಿಯಾ ನಟಿಸಿದ ಹಲವು ಸಿನಿಮಾಗಳ ಶೂಟಿಂಗ್‌ ಮುಕ್ತಾಯವಾಗಿದ್ದು, ಇನ್ನು ಕೆಲವು ಚಿತ್ರೀಕರಕಣ ಹಂತದಲ್ಲಿವೆ.  
(8 / 8)
ಸದ್ಯ ಹರಿಪ್ರಿಯಾ ನಟಿಸಿದ ಹಲವು ಸಿನಿಮಾಗಳ ಶೂಟಿಂಗ್‌ ಮುಕ್ತಾಯವಾಗಿದ್ದು, ಇನ್ನು ಕೆಲವು ಚಿತ್ರೀಕರಕಣ ಹಂತದಲ್ಲಿವೆ.  

    ಹಂಚಿಕೊಳ್ಳಲು ಲೇಖನಗಳು