logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sandalwood: ಕರ್ನಾಟಕ ವಿಧಾನಸಭೆ ಚುನಾವಣೆ ರಿಸಲ್ಟ್‌; ಚಂದನವನದ ನಟ ನಿರ್ದೇಶಕರು ಏನಂದ್ರು?

Sandalwood: ಕರ್ನಾಟಕ ವಿಧಾನಸಭೆ ಚುನಾವಣೆ ರಿಸಲ್ಟ್‌; ಚಂದನವನದ ನಟ ನಿರ್ದೇಶಕರು ಏನಂದ್ರು?

May 14, 2023 04:32 PM IST

Karnataka Assembly Election 2023: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದು ಬೀಗಿದೆ. ಯಾರ ಬೆಂಬಲ ಪಡೆಯದೇ ಸ್ಪಷ್ಟ ಬಹುಮತ ಗಿಟ್ಟಿಸಿಕೊಂಡ ಕಾಂಗ್ರೆಸ್‌ ಅಧಿಕಾರದ ಗದ್ದುಗೆ ಏರಲು ಕಾತರದಲ್ಲಿದೆ. ಇತ್ತ ಸೋತ ಬಿಜೆಪಿ ನಾಯಕರು, ನಾಡಿನ ಜನ ನೀಡಿದ ತೀರ್ಪಿಗೆ ತಲೆಬಾಗಿದ್ದಾರೆ. ಈ ಬಗ್ಗೆ ಚಂದನವನದ ನಟ, ನಿರ್ದೇಶಕರು ಪ್ರತಿಕ್ರಿಯಿಸಿದ್ದಾರೆ.

  • Karnataka Assembly Election 2023: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದು ಬೀಗಿದೆ. ಯಾರ ಬೆಂಬಲ ಪಡೆಯದೇ ಸ್ಪಷ್ಟ ಬಹುಮತ ಗಿಟ್ಟಿಸಿಕೊಂಡ ಕಾಂಗ್ರೆಸ್‌ ಅಧಿಕಾರದ ಗದ್ದುಗೆ ಏರಲು ಕಾತರದಲ್ಲಿದೆ. ಇತ್ತ ಸೋತ ಬಿಜೆಪಿ ನಾಯಕರು, ನಾಡಿನ ಜನ ನೀಡಿದ ತೀರ್ಪಿಗೆ ತಲೆಬಾಗಿದ್ದಾರೆ. ಈ ಬಗ್ಗೆ ಚಂದನವನದ ನಟ, ನಿರ್ದೇಶಕರು ಪ್ರತಿಕ್ರಿಯಿಸಿದ್ದಾರೆ.
ಚುನಾವಣೆ ಸೋಲು ಗೆಲುವಿನ ಬಗ್ಗೆ ಚಂದನವನದ ನಟ, ನಿರ್ದೇಶಕರ ಪ್ರತಿಕ್ರಿಯೆ ಹೀಗಿವೆ. 
(1 / 7)
ಚುನಾವಣೆ ಸೋಲು ಗೆಲುವಿನ ಬಗ್ಗೆ ಚಂದನವನದ ನಟ, ನಿರ್ದೇಶಕರ ಪ್ರತಿಕ್ರಿಯೆ ಹೀಗಿವೆ. 
ಜಗ್ಗೇಶ್:‌ ಕೂಟ್ಟ ಕುದುರೆ ಏರದವ ವೀರನು ಅಲ್ಲಾ ಶೂರನು ಅಲ್ಲಾ! ಧನ್ಯವಾದ ಹಗಲಿರುಳು ಶ್ರಮಿಸಿದ ಭಾಜಪ ಸೈನಿಕರಿಗೆ ಸೋಲು ಮುಂದಿನ ಗೆಲುವಿಗೆ ಸೋಪಾನ ಹಗಲಾದಮೇಲೆ ಇರುಳು! ಮತ್ತೆ ಮೂಡುವುದು ಹಗಲು, ಇದು ಪ್ರಕೃತಿ ನಿಯಮ
(2 / 7)

ನಿರ್ದೇಶಕ ಮಂಸೋರೆ: ಬಸವಣ್ಣ ಹುಟ್ಟಿದ ನಾಡಿದು. Thank you ಕರ್ನಾಟಕ ಹಾಗೂ ಕರುನಾಡಿನ ಜನತೆಗೆ, ಅವರ ಜವಾಬ್ದಾರಿಯುತ ನಿರ್ಣಯಕ್ಕೆ. ಈ ಗೆಲುವು ಕಾಂಗ್ರೆಸ್ ಪಕ್ಷಕ್ಕೆ ಕೇವಲ 5 ವರ್ಷಗಳಿಗೆ ಮಾತ್ರ ಎನ್ನುವುದು ಆ ಪಕ್ಷದವರು ಮರೆಯದಿರಲಿ. ಜನಪರ, ಜನರ ಆಶಯಗಳಿಗೆ ಸ್ಪಂದಿಸದಿದ್ದರೆ, ಜನರೊಂದಿಗೆ ಸಂಯಮದಿಂದ ವರ್ತಿಸದಿದ್ದರೆ ಈ ಹಿಂದಿನ ಸರ್ಕಾರಕ್ಕೆ ಬಂದ ಫಲಿತಾಂಶವೇ ಮುಂದೆ ಕಾಂಗ್ರೆಸ್‌ಗೂ ಬರಬಹುದು ಎಂದು ನೆನಪಿನಲ್ಲಿರಿಸಿಕೊಳ್ಳಲಿ. ಜವಾಬ್ದಾರಿಯುತವಾಗಿ ಕರ್ನಾಟಕವನ್ನು ಮುನ್ನಡೆಸಲಿ. 
(3 / 7)

ನಾಗತಿಹಳ್ಳಿ ಚಂದ್ರಶೇಖರ್: ಈಗ ಇಷ್ಟು. ಗೆದ್ದವರು ಬೀಗಬೇಡಿ. ಎಲ್ಲರನ್ನೂ ಒಳಗೊಳ್ಳಿ. ದ್ವೇಷ ಬೇಡ. ತಬ್ಭಲಿ ಜಾತಿಗಳ ಯೋಗ್ಯ ನಾಯಕರಿಗೆ ಸೂಕ್ತ ಜಾಗ ಕೊಡಿ. ಬ್ರಾಹ್ಮಣ, ವಕ್ಕಲಿಗ, ಲಿಂಗಾಯತ, ಕುರುಬ ಮುಂತಾದ ಮೇಲಿನವರನ್ನು ಅಧಿಕಾರದಿಂದ  ದೂರವಿಡಿ. ಕನಿಷ್ಠ 10% ಭ್ರಷ್ಟಾಚಾರದಿಂದಲಾದರೂ ದೂರವಿರಿ. ಸೋತವರು ಆತ್ಮಾವಲೋಕನ ಮಾಡಿಕೊಳ್ಳಿ. ಗೆದ್ದವರು  ಭಯಂಕರ ವಿನಯವಂತರಾಗಿರಿ.
(4 / 7)

ದುನಿಯಾ ವಿಜಯ್:‌ ಚುನಾವಣೆ ಮುಗಿದು ಫಲಿತಾಂಶವೂ ಬಂದಾಯಿತು. ಇನ್ನೇನಿದ್ರು ಹೊಸ ಸರ್ಕಾರದ ಆಟ. ಅತಂತ್ರ ವಿಧಾನಸಭೆ ಸೃಷ್ಟಿಯಾಗಿ ಎಲ್ಲರ ಬದುಕು ಅತಂತ್ರವಾಗುತ್ತದೆ ಎಂಬ ಸುದ್ದಿಗಳು ಹರಿದಾಡಿದವು. ಆದರೆ ಕರುನಾಡಿನ ಜನ  ಸಂಪೂರ್ಣ ಬಹುಮತವನ್ನು ಒಂದು ಪಕ್ಷಕ್ಕೆ ನೀಡಿ ತಾವು  ಪ್ರಜ್ಞಾವಂತರು ಎಂಬುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಗೆದ್ದವರಿಗೆಲ್ಲ ಶುಭಾಶಯಗಳು, ಸೋತವರು ಆತ್ಮ‌ ವಿಮರ್ಶೆ ಮಾಡಿಕೊಳ್ಳವ ಕಾಲ. ಸಂಪೂರ್ಣ ಬಹುಮುತ ಪಡೆದುಕೊಂಡ ಕಾಂಗ್ರೆಸ್ ಪಕ್ಷಕ್ಕೆ ಶುಭಾಶಯಗಳು.  ಸಾಮಾನ್ಯ ಜನ ನೆಮ್ಮದಿಯಿಂದ ಜೀವನ ನಡೆಸುವಂತೆ ಉತ್ತಮ ಆಡಳಿತ ನೀಡಿ.
(5 / 7)

ನಿರ್ದೇಶಕ ಪವನ್‌ ಒಡೆಯರ್:‌ ಕರ್ನಾಟಕದ ಪ್ರಾಚೀನ ಜಾನಪದ ಕಲೆ ಡೊಳ್ಳು ಕುಣಿತದ ಕುರಿತು ನಿರ್ಮಿಸಿದ್ದ ಡೊಳ್ಳು ಚಿತ್ರಕ್ಕೆ ರಾಷ್ಟೀಯ ಪ್ರಶಸ್ತಿ ಬಂದಾಗ, ಬೊಮ್ಮಾಯಿ ಮಾಮಗೆ ಚಿತ್ರ ವೀಕ್ಷಿಸಲು ಕೋರಿದ್ದೆವು. ಮಾಮ ತೋರಿದ ದುರಹಂಕಾರ ನನ್ನ ಕಣ್ಣಿನಲ್ಲಿ ಇನ್ನೂ ಹಾಗೆ ಇದೆ. ತೆಲುಗು ಚಿತ್ರದ ಕಾರ್ಯಕ್ರಮಕ್ಕೆ ಮಾಮ 3 ತಾಸು ಕುಳಿತು ಕೊಳ್ಳುವಷ್ಟು ಸಮಯ ಇದೆ. ಕನ್ನಡಿಗರು ಮುಠ್ಠಾಳರಲ್ಲ. ಸಿದ್ದರಾಮಯ್ಯ ಸರ್ ಗೆ ಒಂದೇ ಒಂದು ಬಾರಿ ಕರೆ ಮಾಡಿದ್ದೆವು. ಹೌದಾ, ಡೊಳ್ಳು ಕುಣಿತ ನಂಗೆ ಭಾರಿ ಇಷ್ಟ ರೀ ಎಂದು ಕರೆಕೊಟ್ಟ ಸಂಜೆಯೇ ಬಂದು ಚಿತ್ರ ವೀಕ್ಷಿಸಿ, ಹಾರೈಸಿ, ಹಲವಾರು ಕಡೆ ಹೆಮ್ಮೆ ಇಂದ ಮಾತನಾಡಿದ್ದರು. ಕನ್ನಡ ಭಾಷೆ, ಕರ್ನಾಟಕ ಸಂಸ್ಕೃತಿ, ಜಾನಪದ ಕಲೆ. ಇವೆಲ್ಲವನ್ನೂ ಜನ ಮಾರಿಕೊಳ್ಳಲ್ಲ. 
(6 / 7)

ನಿರ್ದೇಶಕ ಸಿಂಪಲ್‌ ಸುನಿ: ಮಡಚಿದ್ದ ಕೈ ಮೇಲೇದ್ದಿದೆ.. ಅರಳಿದ ತಾವರೆ ಮುದುಡಿದೆ... ತೆನೆ ಹೊತ್ತ ಮಹಿಳೆಗೆ ಕಣವಿಲ್ಲ.. ಪ್ರಜೆಗಳಿಗೆ ರಾಜಕೀಯ ನಡೆ ಬೇಕು.. ಪ್ರಜಾಕೀಯ ನುಡಿ ಬೇಕಿಲ್ಲ... ಇತರೆಯವರನ್ನ ಕೇಳೋರಿಲ್ಲ... ರೆಸಾರ್ಟ್ ರಾಜಕೀಯ ನಡೆಯೋಲ್ಲ.. ಸಾಮಾಜಿಕ ಜಾಲತಾಣ ನಿಜವಲ್ಲ.. ಯಾವುದೇ ಪಕ್ಷವಿರಲಿ.. ಕರ್ನಾಟಕ ಅಭಿವೃದ್ಧಿಯಾಗಲಿ…
(7 / 7)

    ಹಂಚಿಕೊಳ್ಳಲು ಲೇಖನಗಳು