logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Karnataka Election 2023: ಮತ ಚಲಾಯಿಸಿದ ಅಮೂಲ್ಯ ರಕ್ಷಿತ್‌ ಶೆಟ್ಟಿ ಜಗ್ಗೇಶ್‌; ನೀವೂ ತಪ್ಪದೆ ಮತದಾನ ಮಾಡಿ ಎಂದ ಸೆಲೆಬ್ರಿಟಿಗಳು

Karnataka Election 2023: ಮತ ಚಲಾಯಿಸಿದ ಅಮೂಲ್ಯ ರಕ್ಷಿತ್‌ ಶೆಟ್ಟಿ ಜಗ್ಗೇಶ್‌; ನೀವೂ ತಪ್ಪದೆ ಮತದಾನ ಮಾಡಿ ಎಂದ ಸೆಲೆಬ್ರಿಟಿಗಳು

May 10, 2023 10:47 AM IST

ಇಂದು ಬೆಳಗ್ಗಿನಿಂದಲೇ ಎಲ್ಲರೂ ಮತಗಟ್ಟೆಗೆ ತೆರಳಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ. ಜನಸಾಮಾನ್ಯರ ಜೊತೆಗೆ ಸೆಲೆಬ್ರಿಟಿಗಳು ಕೂಡಾ ಕ್ಯೂನಲ್ಲಿ ನಿಂತು ವೋಟ್‌ ಮಾಡಿದ್ದಾರೆ. 

  • ಇಂದು ಬೆಳಗ್ಗಿನಿಂದಲೇ ಎಲ್ಲರೂ ಮತಗಟ್ಟೆಗೆ ತೆರಳಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ. ಜನಸಾಮಾನ್ಯರ ಜೊತೆಗೆ ಸೆಲೆಬ್ರಿಟಿಗಳು ಕೂಡಾ ಕ್ಯೂನಲ್ಲಿ ನಿಂತು ವೋಟ್‌ ಮಾಡಿದ್ದಾರೆ. 
ಬೆಂಗಳೂರಿನಲ್ಲಿ ಉಪೇಂದ್ರ, ಅಮೂಲ್ಯ, ಜಗ್ಗೇಶ್‌ ಸೇರಿದಂತೆ ಅನೇಕ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ಮತ ಚಲಾಯಿಸಿದ್ದಾರೆ. ಅಲ್ಲದೆ ನೀವು ಮತ ಚಲಾಯಿಸಿ ಎಂದು ಜನರಿಗೆ ಸಂದೇಶ ನೀಡುತ್ತಿದ್ದಾರೆ. 
(1 / 8)

ಸ್ಯಾಂಡಲ್‌ವುಡ್‌ ನಟ ರಕ್ಷಿತ್ ಶೆಟ್ಟಿ ಉಡುಪಿಯ ಕುಕ್ಕಿಕಟ್ಟೆಯಲ್ಲಿ ಇಂದು ಬೆಳಗ್ಗೆ ಮತದಾನ ಮಾಡಿದರು.  ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಎಲ್ಲರೂ ಮತದಾನದಲ್ಲಿ ಭಾಗಿಯಾಗುವ ಮೂಲಕ ತಮ್ಮ ಹಕ್ಕು ಚಲಾಯಿಸಬೇಕು. ಮತಗಟ್ಟೆಗೆ ಬಂದು ಈ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. 
(2 / 8)

ಸ್ಯಾಂಡಲ್‌ವುಡ್‌ ಗೋಲ್ಡನ್‌ ಗರ್ಲ್‌ ಅಮೂಲ್ಯ ರಾಜರಾಜೇಶ್ವರಿ ನಗರದಲ್ಲಿ ತಮ್ಮ ಪತಿ ಜಗದೀಶ್‌ ಚಂದ್ರ ಜೊತೆ ಬಂದು ಮತ ಚಲಾಯಿಸಿದರು. ಅಭಿವೃದ್ಧಿಗಾಗಿ ಓಟು ಚಲಾಯಿಸಿ ಎಂದು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಸಂದೇಶ ನೀಡಿದ್ದಾರೆ. 
(3 / 8)

ಗೋಲ್ಡನ್‌ ಸ್ಟಾರ್‌ ಗಣೇಶ್‌ ತಮ್ಮ ಪತ್ನಿ ಶಿಲ್ಪಾ ಜೊತೆ ಆರ್‌ಆರ್‌ ನಗರದಲ್ಲಿ ಮತ ಚಲಾಯಿಸಿದರು. ನಮ್ಮ ಒಂದು ಕ್ಷಣದ ನಿರ್ಧಾರ ನಾಡಿನ ಭವಿಷ್ಯವನ್ನೇ ಬದಲಿಸಬಲ್ಲದು. ವಿವೇಚನೆಯಿಂದ ಮತ ಹಾಕೋಣ. ನಾನು ಮತ ಹಾಕಿ ಬಂದೆ.ನೀವು? ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. 
(4 / 8)

ನವರಸನಾಯಕ ಜಗ್ಗೇಶ್‌ ತಮ್ಮ ಪತ್ನಿ ಪರಿಮಳಾ ಜೊತೆಗೆ ಮಲ್ಲೇಶ್ವರಂ ಮತಗಟ್ಟೆಯೊಂದರಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. 
(5 / 8)

ಬಹುಭಾಷಾ ನಟ ಪ್ರಕಾಶ್‌ ರಾಜ್‌ ಬೆಂಗಳೂರಿನ ಶಾಂತಿನಗರದಲ್ಲಿ ಮತ ಚಲಾಯಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಸೂಕ್ತ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದು ನಮ್ಮೆಲ್ಲರ ಕರ್ತವ್ಯ, ಎಲ್ಲರೂ ಮತ ಹಾಕಿ ಎಂಬ ಸಂದೇಶ ನೀಡಿದರು. 
(6 / 8)

ಹಿರಿಯ ನಟ ರಮೇಶ್‌ ಅರವಿಂದ್‌ ಬೆಂಗಳೂರು ಬನಶಂಕರಿ ಬಿಎನ್ ಎಂ ಕಾಲೇಜಿನಲ್ಲಿ ಮತದಾನ ಮಾಡಿದರು. ಮತದಾನದ ಬಗ್ಗೆ ಅರಿವು ಮೂಡಿಸಲು ರಮೇಶ್‌ ಅರವಿಂದ್‌ ಸರ್ಕಾರದೊಂದಿಗೆ ಕೈ ಜೋಡಿಸಿದ್ದಾರೆ. ಫೋನ್‌ ಕಾಲರ್‌ ಟ್ಯೂನ್‌ಗಳಲ್ಲಿ ರಮೇಶ್‌ ಅರವಿಂದ್‌ ಅವರ ಧ್ವನಿಯನ್ನು ಕೇಳಿರಬಹುದು. 
(7 / 8)

ರಿಯಲ್‌ ಸ್ಟಾರ್‌ ಉಪೇಂದ್ರ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ಮತದಾನ ಮಾಡಿದ್ದಾರೆ. ಈ ಜನಾಬಿಪ್ರಾಯದ ಹಕ್ಕು, ಪ್ರಜಾಪ್ರಭುತ್ವ ನಿತ್ಯ, ನಿರಂತರ, ನೂತನವಾಗಿರಲಿ, ಅಕ್ಕ ತಂಗಿಯರೇ, ಅಣ್ಣ ತಮ್ಮಂದಿರೇ ಬಂದು ಮತದಾನ ಮಾಡಿ ಎಂದು ಉಪ್ಪಿ ಸಂದೇಶ ನೀಡಿದ್ದಾರೆ. 
(8 / 8)

    ಹಂಚಿಕೊಳ್ಳಲು ಲೇಖನಗಳು