logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kodagu Hockey: ಕೊಡಗಿನಲ್ಲಿ ಹಾಕಿ ವೈಭವ, ಹೀಗಿರಲಿದೆ ತಿಂಗಳ ಕಾಲ ಕೊಡವ 360 ಕುಟುಂಬಗಳ ಕಲರವ Photos

Kodagu Hockey: ಕೊಡಗಿನಲ್ಲಿ ಹಾಕಿ ವೈಭವ, ಹೀಗಿರಲಿದೆ ತಿಂಗಳ ಕಾಲ ಕೊಡವ 360 ಕುಟುಂಬಗಳ ಕಲರವ photos

Mar 31, 2024 04:31 PM IST

ಕರ್ನಾಟಕದ ಕಾಶ್ಮೀರ ಎಂದು ಕರೆಯಿಸಿಕೊಳ್ಳುವ ಕೊಡಗಿನಲ್ಲಿ ಹಾಕಿ ಪ್ರಮುಖ ಕ್ರೀಡೆ. ಪ್ರತಿ ಮನೆಯಲ್ಲಿ ಸೈನಿಕರು, ಹಾಕಿ ಆಟಗಾರರು ಇದ್ದೇ ಇರುತ್ತಾರೆ. ಕೊಡವರ ಹಾಕಿ ಹಬ್ಬವೂ(Hockey Carnival 2024) ಅಷ್ಟೇ ಜನಪ್ರಿಯ. 24 ವರ್ಷದ ಪಂದ್ಯಾವಳಿಯನ್ನು ಈ ಬಾರಿ ಕುಂಡ್ಯೋಳಂಡ(Kundyolanda) ಕುಟುಂಬ ಆಯೋಜಿಸಿದೆ. 360 ಕೊಡವ ತಂಡಗಳು ಭಾಗವಹಿಸಿವೆ. ಇದರ ಚಿತ್ರ ನೋಟ ಇಲ್ಲಿದೆ.

  • ಕರ್ನಾಟಕದ ಕಾಶ್ಮೀರ ಎಂದು ಕರೆಯಿಸಿಕೊಳ್ಳುವ ಕೊಡಗಿನಲ್ಲಿ ಹಾಕಿ ಪ್ರಮುಖ ಕ್ರೀಡೆ. ಪ್ರತಿ ಮನೆಯಲ್ಲಿ ಸೈನಿಕರು, ಹಾಕಿ ಆಟಗಾರರು ಇದ್ದೇ ಇರುತ್ತಾರೆ. ಕೊಡವರ ಹಾಕಿ ಹಬ್ಬವೂ(Hockey Carnival 2024) ಅಷ್ಟೇ ಜನಪ್ರಿಯ. 24 ವರ್ಷದ ಪಂದ್ಯಾವಳಿಯನ್ನು ಈ ಬಾರಿ ಕುಂಡ್ಯೋಳಂಡ(Kundyolanda) ಕುಟುಂಬ ಆಯೋಜಿಸಿದೆ. 360 ಕೊಡವ ತಂಡಗಳು ಭಾಗವಹಿಸಿವೆ. ಇದರ ಚಿತ್ರ ನೋಟ ಇಲ್ಲಿದೆ.
ಕೊಡಗಿನ ನಾಪೋಕ್ಲುವಿನಲ್ಲಿ ಕೊಡವ ಕುಟುಂಬಗಳ ಒಂದು ತಿಂಗಳ ಹಾಕಿ ಹಬ್ಬ ಶನಿವಾರ ಆರಂಭಗೊಂಡಿದೆ. ನಾಪೋಕ್ಲುವಿನಲ್ಲಿ ಹಾಕಿರುವ ಸ್ವಾಗತ ಕಮಾನು.
(1 / 10)

ನಾಪೋಕ್ಲು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ  ಕುಂಡ್ಯೋಳಂಡ  ಹಾಕಿ ಹಬ್ಬಕ್ಕೆ ಚಾಲನೆ ನೀಡಿದರು. ಶಾಸಕ ಎ ಎಸ್ ಪೊನ್ನಣ್ಣ,  ಒಲಂಪಿಯನ್ ಹಾಕಿ ಕನಾ೯ಟಕದ ಕಾಯ೯ದಶಿ೯ ಡಾ. ಅಂಜಪರವಂಡ ಸುಬ್ಬಯ್ಯ ,ಹಾಕಿ ಅಕಾಡೆಮಿ ಅಧ್ಯಕ್ಷ  ಪಾಂಡಂಡ ಬೋಪಣ್ಣ, ಜಿಲ್ಲಾಧಿಕಾರಿ ವೆಂಕಟರಾಜ  ಪೊಲೀಸ್ ವರಿಷ್ಟಾಧಿಕಾರಿ ಕೆ. ರಾಮರಾಜನ್,  ಕುಂಡ್ಯೋಳಂಡ  ಕುಟುಂಬದ ಪಟ್ಟೇದಾರ ಎ.ನಾಣಯ್ಯ, ಹಾಕಿ ಹಬ್ಬದ ಅಧ್ಯಕ್ಷ  ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಹಾಕಿ ಕನಾ೯ಟಕದ ಕಾಯ೯ದಶಿ೯ ಡಾ. ಅಂಜಪರವಂಡ ಸುಬ್ಬಯ್ಯ, ಸಾಹಿತಿ ಕಂಬೀರಂಡ ಕಾವೇರಿ ಸುಬ್ಬಯ್ಯ , ಬಾಂಡ್ ಗಣಪತಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
(2 / 10)

ನಾಪೋಕ್ಲು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕುಂಡ್ಯೋಳಂಡ ಹಾಕಿ ಹಬ್ಬಕ್ಕೆ ಚಾಲನೆ ನೀಡಿದ ವಿಧಾನಪರಿಷತ್‌ ಸದಸ್ಯ ಸುಜಾ ಕುಶಾಲಪ್ಪ ಹಾಗೂ ಗಣ್ಯರು ಆಟಗಾರರ ಪರಿಚಯ ಮಾಡಿಕೊಂಡರು.
(3 / 10)

ಕೊಡಗಿನಲ್ಲಿ ಹಾಕಿ ಉತ್ಸವ ಪ್ರತಿ ವರ್ಷ ಆಚರಣೆಗೊಳ್ಳುತ್ತದೆ. ಈ ಬಾರಿಯ ಪಂದ್ಯಾಟಗಳಿಗೆ ಚಾಲನೆ ನೀಡಿದ ಸುಜಾ ಕುಶಾಲಪ್ಪ ಅವರನ್ನು ಕುಂಡ್ಯೋಳಂಡ ಕುಟುಂಬ ಸಮಿತಿಯಿಂದ ಸ್ವಾಗತಿಸಲಾಯಿತು.
(4 / 10)

ಕೊಡಗು ಜಿಲ್ಲಾಧಿಕಾರಿ ವೆಂಕಟರಾಜ ಕೂಡ ಕೊಡವ ಕುಟುಂಬಗಳ ಹಾಕಿ ಪಂದ್ಯಾಟದಲ್ಲಿ ಭಾಗಿಯಾಗಿ ಆಟವಾಡಿದ್ದು ವಿಶೇಷ, 
(5 / 10)

ಈ ಬಾರಿಯ ಕೊಡವ ಹಾಕಿ ಉತ್ಸವಕ್ಕೆ ಚಾಲನೆ ನೀಡಿದ ನಂತರ ಕುಂಡ್ಯೋಳಂಡ ಹಾಕಿ ನಮ್ಮೆ ಪ್ರದರ್ಶನ ಪಂದ್ಯದಲ್ಲಿ ಆಟಗಾರರೊಂದಿಗೆ ಗಣ್ಯರು ಸಮೂಹ ಚಿತ್ರ ತೆಗೆಯಿಸಿಕೊಂಡರು.
(6 / 10)

ಕೊಡಗಿನ ಕುಂಡ್ಯೋಳಂಡ ಕುಟುಂಬ ಆಯೋಜಿಸಿರುವ ಹಾಕಿ ಪಂದ್ಯಾವಳಿಯ ಉದ್ಘಾಟನೆ ವೇಳೆ ಕೊಡಗಿನ ಯುವತಿಯರು, ಕುಟುಂಬದವರು ಭಾಗಿ ಖುಷಿ ಹೆಚ್ಚಿಸಿದರು.
(7 / 10)

ಕೊಡಗಿನಲ್ಲಿ ಹಾಕಿ ಚಟುವಟಿಕೆ ಚುರುಕಾಗಿರಲು ಕೊಡವ ಹಾಕಿ ಅಕಾಡೆಮಿಯೂ ಕಾರ್ಯನಿರ್ವಹಿಸುತ್ತಿದೆ. ಕೊಡಗಿನಲ್ಲಿ ಹಾಕಿ ಆಟಕ್ಕೆ ಬರೋಬ್ಬರಿ  139 ವರ್ಷಗಳ ಇತಿಹಾಸವಿದ್ದು, ಈಗಲೂ ಯುವಕ, ಯುವತಿಯರು ಹಾಕಿಯಲ್ಲಿ ಭಾಗಿಯಾಗುತ್ತಿದ್ದಾರೆ.
(8 / 10)

ಕೊಡಗಿನಲ್ಲಿ ಕುಂಡ್ಯೋಳಂಡ ಹಾಕಿ ಉತ್ಸವದಲ್ಲಿ ಭಾಗಿಯಾದ ಕುಟುಂದ ತಂಡದೊಂದಿಗೆ ಹಿರಿಯರು ಪಾಲ್ಗೊಂಡಿದ್ದು ವಿಶೇಷ. 
(9 / 10)

ಕೊಡಗಿನಲ್ಲಿ ಈ ಬಾರಿ ಕುಂಡ್ಯೋಳಂಡ ಕಪ್ ಗಾಗಿ ಭಾಗವಹಿಸಿರುವುದು  360 ತಂಡಗಳು. ಭಾರೀ ಸೆಣೆಸಾಟ ಒಂದು ತಿಂಗಲ ಕಾಲ ಕಾಣಬಹದು. ಇದರೊಟ್ಟಿಗೆ ಕ್ರೀಡೋತ್ಸವವೂ ಅಷ್ಟೇ ಜೋರಾಗಿ ಇರಲಿದೆ. 
(10 / 10)

    ಹಂಚಿಕೊಳ್ಳಲು ಲೇಖನಗಳು