logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mahalakshmi Ravindra: ಸೋಷಿಯಲ್‌ ಮೀಡಿಯಾದಲ್ಲಿ ಪತಿ ಫೋಟೋ ಹಾಕಲು ಮಹಾಲಕ್ಷ್ಮೀ ಹಿಂದೇಟು; ಪತ್ನಿಯ ವರ್ತನೆಗೆ ರವೀಂದ್ರ ಚಂದ್ರಶೇಖರನ್‌ ಕಳವಳ

Mahalakshmi Ravindra: ಸೋಷಿಯಲ್‌ ಮೀಡಿಯಾದಲ್ಲಿ ಪತಿ ಫೋಟೋ ಹಾಕಲು ಮಹಾಲಕ್ಷ್ಮೀ ಹಿಂದೇಟು; ಪತ್ನಿಯ ವರ್ತನೆಗೆ ರವೀಂದ್ರ ಚಂದ್ರಶೇಖರನ್‌ ಕಳವಳ

May 27, 2023 10:31 AM IST

Mahalakshmi Ravindra: ಕಾಲಿವುಡ್‌ ನಿರ್ಮಾಪಕ ರವೀಂದ್ರ ಚಂದ್ರಶೇಖರನ್‌ ಮತ್ತು ಮಹಾಲಕ್ಷ್ಮೀ ಮದುವೆ ಆದ ಮೇಲಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಮೆಚ್ಚುಗೆಗಿಂತ ಈ ಜೋಡಿಯನ್ನು ಟ್ರೋಲ್‌ ಮಾಡಿದವರೇ ಹೆಚ್ಚು. ಅದ್ಯಾವುದಕ್ಕೂ ಈ ಜೋಡಿ ತಲೆ ಕೆಡಿಸಿಕೊಳ್ಳದೆ ಸುತ್ತಾಡುತ್ತಿದೆ. ಈ ನಡುವೆಯೇ ಇದೀಗ ಪತ್ನಿ ಮಹಾಲಕ್ಷ್ಮೀಯ ಈ ವರ್ತನೆಗೆ ರವೀಂದ್ರ ಬೇಸರಗೊಂಡಿದ್ದಾರೆ.

  • Mahalakshmi Ravindra: ಕಾಲಿವುಡ್‌ ನಿರ್ಮಾಪಕ ರವೀಂದ್ರ ಚಂದ್ರಶೇಖರನ್‌ ಮತ್ತು ಮಹಾಲಕ್ಷ್ಮೀ ಮದುವೆ ಆದ ಮೇಲಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಮೆಚ್ಚುಗೆಗಿಂತ ಈ ಜೋಡಿಯನ್ನು ಟ್ರೋಲ್‌ ಮಾಡಿದವರೇ ಹೆಚ್ಚು. ಅದ್ಯಾವುದಕ್ಕೂ ಈ ಜೋಡಿ ತಲೆ ಕೆಡಿಸಿಕೊಳ್ಳದೆ ಸುತ್ತಾಡುತ್ತಿದೆ. ಈ ನಡುವೆಯೇ ಇದೀಗ ಪತ್ನಿ ಮಹಾಲಕ್ಷ್ಮೀಯ ಈ ವರ್ತನೆಗೆ ರವೀಂದ್ರ ಬೇಸರಗೊಂಡಿದ್ದಾರೆ.
ಸೋಷಿಯಲ್‌ ಮೀಡಿಯಾದಲ್ಲಿ ತಮಿಳು ಸಿನಿಮಾ ನಿರ್ಮಾಪಕ ರವೀಂದ್ರ ಚಂದ್ರಶೇಖರನ್‌ ಮತ್ತು ಅವರ ಪತ್ನಿ ಮಹಾಲಕ್ಷ್ಮೀ ಸದಾ ಸಕ್ರಿಯರು. (Instagram\ mahalakshmi_actress_official)
(1 / 7)

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಮದುವೆಯಾದ ಈ ಜೋಡಿ ಹೋದ ಕಡೆಗಳಲ್ಲೆಲ್ಲ ಫೋಟೋ ಕ್ಲಿಕ್ಕಿಸಿಕೊಂಡು ಅವುಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡುತ್ತಿರುತ್ತಾರೆ. (Instagram\ mahalakshmi_actress_official)
(2 / 7)

ಆ ಫೋಟೋಗಳಿಗೆ ಚೆಂದದ ಪದಪುಂಜಗಳಲ್ಲಿ ಹೆಂಡತಿಯನ್ನು ಗಂಡ, ಪತಿಯನ್ನು ಪತ್ನಿ ವರ್ಣನೆ ಮಾಡಿ ಪೋಸ್ಟ್‌ ಮಾಡಿದ ಉದಾಹರಣೆಗಳು ಸಾಕಷ್ಟಿವೆ. (Instagram\ mahalakshmi_actress_official)
(3 / 7)

ಹೀಗಿರುವಾಗಲೇ ಇದೀಗ ಮದುವೆಯಾಗಿ 8 ತಿಂಗಳು ಕಳೆಯುವಷ್ಟರಲ್ಲಿ ಪತ್ನಿ ಮಹಾಲಕ್ಷ್ಮೀಗೆ ಬೇಸರವಾದ್ರಾ ರವೀಂದ್ರ ಚಂದ್ರಶೇಖರನ್‌? ಹೀಗೊಂದು ಅನುಮಾನ ಇದೀಗ ಹರಿದಾಡುತ್ತಿದೆ. (Instagram\ mahalakshmi_actress_official)
(4 / 7)

ಸೋಷಿಯಲ್‌ ಮೀಡಿಯಾದಲ್ಲಿ ಮಹಾಲಕ್ಷ್ಮೀ ಕೇವಲ ತಮ್ಮೊಬ್ಬರ ಫೋಟೋಗಳನ್ನು ಮಾತ್ರ ಶೇರ್‌ ಮಾಡುತ್ತಿದ್ದಾರೆ. ಹೀಗೆ ಫೋಟೋ ಹಂಚಿಕೊಳ್ಳುತ್ತಿದ್ದಂತೆ, ನೆಟ್ಟಿಗರು ಬಗೆಬಗೆ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ. (Instagram\ mahalakshmi_actress_official)
(5 / 7)

ಈ ಜೋಡಿಗೆ ನಿಮ್ಮದು ಡಿವೋರ್ಸ್‌ ಆಯಿತಾ? ಇಬ್ಬರೂ ದೂರವಾದ್ರಾ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇದರಿಂದ ಬೇಸತ್ತ ರವೀಂದ್ರ, ಪತ್ನಿಗೆ ಹೀಗೆ ಹೇಳಿದ್ದಾರೆ. (Instagram\ mahalakshmi_actress_official) 
(6 / 7)

ಡಿಯರ್‌ ನಿನಗೆ ಎಷ್ಟು ಸಲ ಹೇಳಲಿ, ನೀನೊಬ್ಬಳೇ ಇರುವ ಫೋಟೋಗಳನ್ನು ಯಾವತ್ತೂ ಶೇರ್‌ ಮಾಡಬೇಡ. ಹೀಗೆ ಒಬ್ಬಳೇ ಇರುವ ಫೋಟೋ ಹಂಚಿಕೊಂಡರೆ, ನೋಡಿದವರು ನೀವು ಬೇರೆ ಬೇರೆ ಆದ್ರಾ ಎಂದು ಪ್ರಶ್ನಿಸುತ್ತಾರೆ. ಈ ತಪ್ಪನ್ನು ಮತ್ತೆಂದೂ ಪುನರಾವರ್ತಿಸ ಬೇಡ. ಯೂಟ್ಯೂಬ್‌ನಲ್ಲಿ ಇದೇ ವಿಚಾರವೀಗ ಟ್ರೆಂಡ್‌, ಇದಕ್ಕಿಲ್ಲ ಎಂಡ್‌ ಎಂದು ಬರೆದುಕೊಂಡು ಕೊನೆಗೆ ನಾವಿಬ್ಬರೂ ತುಂಬ ಸಂತೋಷದಿಂದ ಇದ್ದೇವೆ ಎಂದಿದ್ದಾರೆ. (Instagram\ mahalakshmi_actress_official)
(7 / 7)

    ಹಂಚಿಕೊಳ್ಳಲು ಲೇಖನಗಳು