logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lok Sabha Elections2024:ಕರ್ನಾಟಕದ 2ನೇ ಹಂತದ ಬಹಿರಂಗ ಪ್ರಚಾರಕ್ಕೆ ತೆರೆ, ಹೀಗಿತ್ತು ಕೊನೆ ದಿನದ ಅಬ್ಬರ

Lok Sabha Elections2024:ಕರ್ನಾಟಕದ 2ನೇ ಹಂತದ ಬಹಿರಂಗ ಪ್ರಚಾರಕ್ಕೆ ತೆರೆ, ಹೀಗಿತ್ತು ಕೊನೆ ದಿನದ ಅಬ್ಬರ

May 05, 2024 09:51 PM IST

ಲೋಕಸಭೆ ಚುನಾವಣೆಗೆ ಮಂಗಳವಾರ ನಡೆಯಲಿರುವ ಮತದಾನಕ್ಕೂ ಮುನ್ನ ಬಹಿರಂಗ ಪ್ರಚಾರಕ್ಕೆ ಕರ್ನಾಟಕದಲ್ಲಿ ತೆರೆ ಬಿದ್ದಿತು.ಕಡೆಯ ಕ್ಷಣವರೆಗೂ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಪ್ರಯತ್ನಿಸಿದರು.

  • ಲೋಕಸಭೆ ಚುನಾವಣೆಗೆ ಮಂಗಳವಾರ ನಡೆಯಲಿರುವ ಮತದಾನಕ್ಕೂ ಮುನ್ನ ಬಹಿರಂಗ ಪ್ರಚಾರಕ್ಕೆ ಕರ್ನಾಟಕದಲ್ಲಿ ತೆರೆ ಬಿದ್ದಿತು.ಕಡೆಯ ಕ್ಷಣವರೆಗೂ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಪ್ರಯತ್ನಿಸಿದರು.
ಮುಖ್ಯ ಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆಯ ನಿಮಿತ್ತ ಹರಿಹರದಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ -02 ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿಯಾದ  ಪ್ರಭಾಮಲ್ಲಿಕಾರ್ಜುನ ರವರ ಪರವಾಗಿ ಮತದಾರರಲ್ಲಿ ಮತ ಯಾಚನೆ ಮಾಡಿದರು.
(1 / 10)

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಾವೇರಿಯಲ್ಲಿ ಛಲವಾದಿ ಸಮುದಾಯದ ಸಭೆಯಲ್ಲಿ  ಡಾ.ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್. ವೀರಯ್ಯ, ಬಿಜೆಪಿ ಮುಖಂಡ ಕ್ರಾಂತಿ ಕಿರಣ್ ಹಾಜರಿದ್ದರು
(2 / 10)

ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ತಮ್ಮ ಪತ್ನಿ ಗೀತಾ ಅವರ ಪರವಾಗಿ ನಟ ಶಿವರಾಜ್‌ಕುಮಾರ್‌ ಮತ ಯಾಚಿಸಿದರು.
(3 / 10)

ಕಲಬುರಗಿ ಗ್ರಾಮೀಣ ಭಾಗದಲ್ಲಿ ಬಿಜೆಪ ಅಭ್ಯರ್ಥಿ ಡಾ.ಉಮೇಶ್‌ ಜಾಧವ್‌ ಅವರು ಮತ ಯಾಚಿಸಿದರು.
(4 / 10)
ಕಲಬುರಗಿ ಗ್ರಾಮೀಣ ಭಾಗದಲ್ಲಿ ಬಿಜೆಪ ಅಭ್ಯರ್ಥಿ ಡಾ.ಉಮೇಶ್‌ ಜಾಧವ್‌ ಅವರು ಮತ ಯಾಚಿಸಿದರು.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಮತ ಯಾಚಿಸಲು ಆಗಮಿಸಿ ಕೃಷಿ ಸಚಿವರಿಗೆ ಆರತಿ ಎತ್ತಿ ಸ್ವಾಗತಿಸಲಾಯಿತು. 
(5 / 10)

ಕೊಪ್ಪಳ ಲೋಕಸಭಾ ಚುನಾವಣಾ ಪ್ರಚಾರ ನಿಮಿತ್ತ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ  ಹೊಸ ದೇಶನೂರು,ಹಳೆ ದೇಶನೂರು, ಹಾಗೂ ವಿರುಪಾಪುರ ಗೆಡ್ಡೆ ಗ್ರಾಮಗಳಲ್ಲಿ ಭೇಟಿ ನೀಡಿ  ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿಯಾದ ಡಾ. ಬಸವರಾಜ್ ಕೆ ಶರಣಪ್ಪ ಅವರನ್ನು ಗೆಲ್ಲಿಸುವಂತೆ ಚುನಾವಣೆ ಪ್ರಚಾರ ಮಾಡಲಾಯಿತು. 
(6 / 10)

ಇಳಕಲ್ ನಗರದ ದುರ್ಗಾದೇವಿ ನಗರದಲ್ಲಿ ನಡೆದ ವಾರ್ಡ್_ಮಟ್ಟದ ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಬಾಗಲಕೋಟ ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀಮತಿ ಸಂಯುಕ್ತ ಪಾಟೀಲ ಅವರು ಪರ ಮತಯಾಚಿಸಿದ ಶಾಸಕ ವಿಜಯಾನಂದ ಕಾಶಪ್ಪನವರ್.
(7 / 10)

ವಿಜಯಪುರ ನಗರದ ವಾರ್ಡ್ ನಂಬರ್ 8 ರಲ್ಲಿ  ಭಾರತೀಯ ಜನತಾ ಪಕ್ಷ ಲೋಕಸಭಾ ಚುನಾವಣೆ ಪ್ರಚಾರ ಮಾಡಲಾಯಿತು. ಅಭ್ಯರ್ಥಿಯಾದ  ರಮೇಶ್ ಜಿಗಜಿಣಗಿ ಹಾಗೂ ಭಾರತೀಯ ಜನತಾ ಪಕ್ಷದ ಮುಖಂಡರು ಉಪಸ್ಥಿತರಿದ್ದರು
(8 / 10)

ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಾಜುಅಲಗೂರ ಪರ ಸಚಿವ ಡಾ.ಎಂ.ಬಿ.ಪಾಟೀಲ್‌ ಮತ ಯಾಚಿಸಿದರು.
(9 / 10)

ಬಳ್ಳಾರಿಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರ ನೇತೃತ್ವದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರವಾಗಿ ಲೋಕಸಭಾ ಚುನಾವಣೆ ಪ್ರಚಾರ ಆರಂಭಕ್ಕೂ ಮುನ್ನ ಮೋತಿ ಸರ್ಕಲ್ ಬಳಿಯ ಶ್ರೀ ಜಗಜ್ಯೋತಿ ಬಸವೇಶ್ವರ ಪ್ರತಿಮೆಗೆ, ಕುಮಾರಸ್ವಾಮಿ ಸರ್ಕಲ್ ನಲ್ಲಿನ ಭಕ್ತ ಶ್ರೀ ಕನಕದಾಸರ ಪ್ರತಿಮೆ, ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ, ಶ್ರೀ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಹಾಗೂ ಸಮಾಜ ಸುಧಾರಕರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಯಿತು. ಅರುಣಾಲಕ್ಷ್ಮಿ ಜನಾರ್ಧನ ರೆಡ್ಡಿ ಮತ್ತಿರರರು ಹಾಜರಿದ್ದರು.
(10 / 10)

    ಹಂಚಿಕೊಳ್ಳಲು ಲೇಖನಗಳು