logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕರ್ನಾಟಕದಲ್ಲಿ ಮತೋತ್ಸಾಹ, ಬಿಸಿಲನ್ನೂ ಲೆಕ್ಕಿಸದೇ ಹಕ್ಕು ಚಲಾಯಿಸಿದ ಯುವ ಜನತೆ, ಹಿರಿಯರು ಹೀಗಿದೆ ಚಿತ್ರ ನೋಟ

ಕರ್ನಾಟಕದಲ್ಲಿ ಮತೋತ್ಸಾಹ, ಬಿಸಿಲನ್ನೂ ಲೆಕ್ಕಿಸದೇ ಹಕ್ಕು ಚಲಾಯಿಸಿದ ಯುವ ಜನತೆ, ಹಿರಿಯರು ಹೀಗಿದೆ ಚಿತ್ರ ನೋಟ

May 07, 2024 02:25 PM IST

ಮತದಾನ ಪವಿತ್ರ ಹಕ್ಕು. ಅದನ್ನು ಚಲಾಯಿಸಲೆಂದೇ ಸಾಕಷ್ಟು ವ್ಯವಸ್ಥೆ ಮಾಡಲಾಗುತ್ತದೆ. ಕರ್ನಾಟಕದಲ್ಲೂ ಎರಡನೇ ಹಂತದ ಮತದಾನದ ವೇಳೆ ಉತ್ಸಾಹ ಕಂಡು ಬಂದಿತು. ಇದರ ಭಿನ್ನ ನೋಟ ಇಲ್ಲಿದೆ.

  • ಮತದಾನ ಪವಿತ್ರ ಹಕ್ಕು. ಅದನ್ನು ಚಲಾಯಿಸಲೆಂದೇ ಸಾಕಷ್ಟು ವ್ಯವಸ್ಥೆ ಮಾಡಲಾಗುತ್ತದೆ. ಕರ್ನಾಟಕದಲ್ಲೂ ಎರಡನೇ ಹಂತದ ಮತದಾನದ ವೇಳೆ ಉತ್ಸಾಹ ಕಂಡು ಬಂದಿತು. ಇದರ ಭಿನ್ನ ನೋಟ ಇಲ್ಲಿದೆ.
ಗುಲಬರ್ಗಾ ದಕ್ಷಿಣ ವಿಧಾನಸಬಾ ಕ್ಷೇತ್ರದ ಕೋಟನೂರ ಮತಗಟ್ಟೆಯಲ್ಲಿ ಯುವ ಮತದಾರು ಅತ್ಯಂತ ಹುಮ್ಮಸ್ಸಿನಿಂದ ಮೊದಲ ಬಾರಿಗೆ ತಮ್ಮ ಮತ ಚಲಾಯಿಸಿ ಸಂಭ್ರಮಿಸಿದರು.
(1 / 11)

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕುರ್ವೆ ಯ ಮೋಹನ್ ಮತ್ತು ಸವಿತಾ ದಂಪತಿಗಳು ಸ್ವಂತ ದೋಣಿಯ ಮೂಲಕ  ದಂಡೆಭಾಗದ ಶಾಲೆ ಮತಗಟ್ಟೆಗೆ ಆಗಮಿಸಿ ಸಂತಸದಿಂದ ಮತ ಚಲಾಯಿಸಿದರು.
(2 / 11)

ಬೆಳಗಾವಿ ಜಿಲ್ಲೆ  ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದ 103 ವಯಸ್ಸಿನ ಹಿರಿಯ ಮಹಿಳೆ ನೀಲವ್ವ ಶಿವಗೌಡ ಗಾಳಿ ಅವರು ಉತ್ಸಾಹದಿಂದ ಮತ ಚಲಾಯಿಸಿದರು 
(3 / 11)

ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಶೇಷ ಚೇತನ ಮತ್ತು ಹಿರಿಯ ನಾಗರಿಕರಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಲು ಅನುಕೂಲವಾಗುವಂತೆ ಉಚಿತ ವಾಹನ ವ್ಯವಸ್ಥೆ ಮಾಡಲಾಗಿದ್ದು ಈ ಸೌಲಭ್ಯ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತ ಚಲಾಯಿಸಲು ಮುಂದಾಗುವಂತೆ ಅನುವು ಮಾಡಿ ಕೊಡುತ್ತಿದೆ
(4 / 11)

ಗುಲಬರ್ಗಾ ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಗುಲಬರ್ಗಾ ದಕ್ಷಿಣ ಮತಕ್ಷೇತ್ರದ ಜಗತ್ ಪ್ರದೇಶದ ಮತಗಟ್ಟೆಯಲ್ಲಿ ಸರದಿಯಲ್ಲಿ ನಿಂತು ಮತ ಚಲಾಯಿಸಿದರು. ಇದೇ ಸಂದರ್ಭದಲ್ಲಿ ಮತ ಚಲಾಯಿಸಲು ಬಂದ ಹಿರಿಯ ನಾಗರಿಕರಿಗೆ ನೆರವಾದರು
(5 / 11)

ದಾವಣಗೆರೆಯ ಮತಗಟ್ಟೆಯಲ್ಲಿ ಸಹಾಯಕ್ಕಾಗಿ ಸ್ಕೌಟ್ಸ್ ಅಂಡ್ ಗೈಡ್ ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದ್ದು ಹಿರಿಯ ನಾಗರಿಕರನ್ನು ವ್ಹೀಲ್ ಚೇರ್ ನಲ್ಲಿ ಮತಗಟ್ಟೆಗೆ ಕರೆದೊಯ್ದರು.
(6 / 11)

ಮತದಾನ ಬಹಿಷ್ಕಾರ ಮಾಡಿದ್ದ ಬಳ್ಳಾರಿ ತಾಲ್ಲೂಕು ಕೃಷ್ಣನಗರ ಕ್ಯಾಂಪ್ ನಲ್ಲಿ ವಿವಿಧ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಮನವೊಲಿಸಿದ ಬಳಿಕ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿದರು. ಮತದಾನದ ಮಹತ್ವ ಅರಿತು ಜವಾಬ್ದಾರಿಯನ್ನು ಪೂರೈಸಿದರು.
(7 / 11)

ಕೊಪ್ಪಳ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ  ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆ ತಾವು ಮತ ಚಲಾಯಿಸುವುದರ ಜೊತೆಗೆ ಸಖಿ ಮತಗಟ್ಟೆ ಹಾಗೂ ವಿಕಲಚೇತನರ ಮತಗಟ್ಟೆಗಳಿಗೆ ಭೇಟಿ ನೀಡಿದರು
(8 / 11)

ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಉಪ್ಪಾರಗೇರಿಯಲ್ಲಿ ಮತದಾರರನ್ನು ಆಕರ್ಷಿಸುತ್ತಿರುವ  ಸಾಂಪ್ರದಾಯಿಕ ಮತಗಟ್ಟೆ ಲಂಬಾಣಿ ದಿರಿಸಿನಲ್ಲಿ ಕಂಡು ಬಂದ ವಿಶೇಷ ಸಂದರ್ಭ.,
(9 / 11)

ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ತೃತೀಯ ಲಿಂಗಿ ಮತದಾರರು ಹೆಮ್ಮೆಯಿಂದ ಮತ ಚಲಾಯಿಸಿ ತಮ್ಮ ಹಕ್ಕನ್ನು ಎತ್ತಿ ಹಿಡಿದರು.  'ಪ್ರಜಾಪ್ರಭುತ್ವ ಹಬ್ಬದಲ್ಲಿ ಎಲ್ಲರಿಗೂ ಮತ ಚಲಾಯಿಸುವ ಹಕ್ಕು ಇದ್ದು, ನಾವು ಮತ ಹಾಕಿದ್ದೇವೆ ನೀವು ಮತ ಹಾಕಿ ನಿಮ್ಮ ಹಕ್ಕು ಚಲಾಯಿಸಿ' ಎಂದರು
(10 / 11)

ವಿಜಯನಗರ ಜಿಲ್ಲೆಯ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಮೇ 7ರಂದು ಹೊಸಪೇಟೆ ನಗರದ ಸಂಡೂರ ರಸ್ತೆಯಲ್ಲಿನ ಕ್ಷೇತ್ರ ಶಿಕ್ಷಾಧಿಕಾರಿಗಳ ಕಚೇರಿ ಆವರಣಕ್ಕೆ ದಂಪತಿ ಸಮೇತ ಆಗಮಿಸಿ ಮತ ಚಲಾಯಿಸಿದರು.
(11 / 11)

    ಹಂಚಿಕೊಳ್ಳಲು ಲೇಖನಗಳು