logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಣಜಿ ಟ್ರೋಫಿ 2024: ಭಾರತ ತಂಡದಲ್ಲಿ ಸಿಗದ ಅವಕಾಶ; ಏಕಕಾಲಕ್ಕೆ ಕ್ರಿಕೆಟ್‌ಗೆ ವಿದಾಯ ಹೇಳಿದ ಐವರು ಕ್ರಿಕೆಟಿಗರು

ರಣಜಿ ಟ್ರೋಫಿ 2024: ಭಾರತ ತಂಡದಲ್ಲಿ ಸಿಗದ ಅವಕಾಶ; ಏಕಕಾಲಕ್ಕೆ ಕ್ರಿಕೆಟ್‌ಗೆ ವಿದಾಯ ಹೇಳಿದ ಐವರು ಕ್ರಿಕೆಟಿಗರು

Feb 20, 2024 01:04 PM IST

Ranji Trophy 2024: ರಣಜಿ ಟ್ರೋಫಿ ಅಭಿಯಾನದೊಂದಿಗೆ ಭಾರತದ ಐವರು ಕ್ರಿಕೆಟಿಗರು ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ದೇಶಿಯ ಕ್ರಿಕೆಟ್‌ನಲ್ಲಿ ಮಿಂಚಿದರೂ, ರಾಷ್ಟ್ರೀಯ ತಂಡದಲ್ಲಿ ಅವಕಾಶದ ಕೊರತೆಯಿಂದ, ಕ್ರಿಕೆಟ್‌ ಬದುಕಿಗೆ ಈ ಆಟಗಾರರು ನಿವೃತ್ತಿ ಹೇಳಿದ್ದಾರೆ.

  • Ranji Trophy 2024: ರಣಜಿ ಟ್ರೋಫಿ ಅಭಿಯಾನದೊಂದಿಗೆ ಭಾರತದ ಐವರು ಕ್ರಿಕೆಟಿಗರು ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ದೇಶಿಯ ಕ್ರಿಕೆಟ್‌ನಲ್ಲಿ ಮಿಂಚಿದರೂ, ರಾಷ್ಟ್ರೀಯ ತಂಡದಲ್ಲಿ ಅವಕಾಶದ ಕೊರತೆಯಿಂದ, ಕ್ರಿಕೆಟ್‌ ಬದುಕಿಗೆ ಈ ಆಟಗಾರರು ನಿವೃತ್ತಿ ಹೇಳಿದ್ದಾರೆ.
ಈ ಐವರು ಆಟಗಾರರು ಕೂಡಾ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ. ಇವರೆಲ್ಲರೂ ದೇಶಿ ಕ್ರಿಕೆಟ್‌ನ ಸೂಪರ್‌ಸ್ಟಾರ್‌ಗಳು. ಒಂದು ಸಾಮಾನ್ಯ ಸಂಗತಿಯೆಂದರೆ, ಇವರಲ್ಲಿ ಯಾರಿಗೂ ಟೀಮ್ ಇಂಡಿಯಾ ಪರ ಆಡಲು ಸಾಕಷ್ಟು ಅವಕಾಶ ಸಿಕ್ಕಿಲ್ಲ. ಭಾರತ ತಂಡದಲ್ಲಿ ನಿರ್ಲಕ್ಷ್ಯಕ್ಕೊಳಗಾದ ಐವರು ಕ್ರಿಕೆಟಿಗರು ಏಕಕಾಲದಲ್ಲಿ  ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ರಣಜಿ ಟ್ರೋಫಿಯ ಕೊನೆಯ ಗ್ರೂಪ್ ಪಂದ್ಯದ ನಂತರ, ನಾಲ್ವರು ಕೆಂಪು ಚೆಂಡು ಕ್ರಿಕೆಟ್‌ಗೆ ಶಾಶ್ವತವಾಗಿ ವಿದಾಯ ಹೇಳಿದರು. ಮತ್ತೊಬ್ಬರು ಅಂತಿಮವಾಗಿ ರಾಜ್ಯ ಕ್ರಿಕೆಟ್ ಸಂಸ್ಥೆಯ ಕೋರಿಕೆಯ ಮೇರೆಗೆ ತಮ್ಮ ರಣಜಿ ಅಭಿಯಾನದ ಕೊನೆಯವರೆಗೂ ಆಡುವುದನ್ನು ಮುಂದುವರಿಸಲು ನಿರ್ಧರಿಸಿದರು. 
(1 / 6)
ಈ ಐವರು ಆಟಗಾರರು ಕೂಡಾ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ. ಇವರೆಲ್ಲರೂ ದೇಶಿ ಕ್ರಿಕೆಟ್‌ನ ಸೂಪರ್‌ಸ್ಟಾರ್‌ಗಳು. ಒಂದು ಸಾಮಾನ್ಯ ಸಂಗತಿಯೆಂದರೆ, ಇವರಲ್ಲಿ ಯಾರಿಗೂ ಟೀಮ್ ಇಂಡಿಯಾ ಪರ ಆಡಲು ಸಾಕಷ್ಟು ಅವಕಾಶ ಸಿಕ್ಕಿಲ್ಲ. ಭಾರತ ತಂಡದಲ್ಲಿ ನಿರ್ಲಕ್ಷ್ಯಕ್ಕೊಳಗಾದ ಐವರು ಕ್ರಿಕೆಟಿಗರು ಏಕಕಾಲದಲ್ಲಿ  ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ರಣಜಿ ಟ್ರೋಫಿಯ ಕೊನೆಯ ಗ್ರೂಪ್ ಪಂದ್ಯದ ನಂತರ, ನಾಲ್ವರು ಕೆಂಪು ಚೆಂಡು ಕ್ರಿಕೆಟ್‌ಗೆ ಶಾಶ್ವತವಾಗಿ ವಿದಾಯ ಹೇಳಿದರು. ಮತ್ತೊಬ್ಬರು ಅಂತಿಮವಾಗಿ ರಾಜ್ಯ ಕ್ರಿಕೆಟ್ ಸಂಸ್ಥೆಯ ಕೋರಿಕೆಯ ಮೇರೆಗೆ ತಮ್ಮ ರಣಜಿ ಅಭಿಯಾನದ ಕೊನೆಯವರೆಗೂ ಆಡುವುದನ್ನು ಮುಂದುವರಿಸಲು ನಿರ್ಧರಿಸಿದರು. (AP AFP)
ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಬಿಹಾರ ವಿರುದ್ಧದ ರಣಜಿ ಪಂದ್ಯದ ನಂತರ ಬಂಗಾಳದ ನಾಯಕ ಮನೋಜ್ ತಿವಾರಿ ನಿವೃತ್ತರಾದರು. ಅವರು ಭಾರತದ ಪರ 12 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 1 ಶತಕ ಮತ್ತು 1 ಅರ್ಧ ಶತಕದೊಂದಿಗೆ 287 ರನ್ ಕಲೆಹಾಕಿದ್ದಾರೆ. ಒಟ್ಟಾರೆಯಾಗಿ ಮನೋಜ್ 148 ಪ್ರಥಮ ದರ್ಜೆ ಪಂದ್ಯಗಳಲ್ಲಿ 10195 ರನ್ ಕಲೆಹಾಕಿದ್ದಾರೆ. ಇದರಲ್ಲಿ 30 ಶತಕ ಮತ್ತು 45 ಅರ್ಧಶತಕಗಳಿವೆ. 
(2 / 6)
ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಬಿಹಾರ ವಿರುದ್ಧದ ರಣಜಿ ಪಂದ್ಯದ ನಂತರ ಬಂಗಾಳದ ನಾಯಕ ಮನೋಜ್ ತಿವಾರಿ ನಿವೃತ್ತರಾದರು. ಅವರು ಭಾರತದ ಪರ 12 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 1 ಶತಕ ಮತ್ತು 1 ಅರ್ಧ ಶತಕದೊಂದಿಗೆ 287 ರನ್ ಕಲೆಹಾಕಿದ್ದಾರೆ. ಒಟ್ಟಾರೆಯಾಗಿ ಮನೋಜ್ 148 ಪ್ರಥಮ ದರ್ಜೆ ಪಂದ್ಯಗಳಲ್ಲಿ 10195 ರನ್ ಕಲೆಹಾಕಿದ್ದಾರೆ. ಇದರಲ್ಲಿ 30 ಶತಕ ಮತ್ತು 45 ಅರ್ಧಶತಕಗಳಿವೆ. (CAB)
ಹರಿಯಾಣ ವಿರುದ್ಧದ ರಣಜಿ ಪಂದ್ಯದ ನಂತರ ವಿದರ್ಭದ ಫೈಜ್ ಫಜಲ್ ವಿದಾಯ ಹೇಳಿದರು. ಅವರು ಭಾರತದ ಪರ 1 ಏಕದಿನ ಪಂದ್ಯ ಆಡಿದ್ದಾರೆ. ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ನಡೆದ ಆ ಪಂದ್ಯದಲ್ಲಿ ಫಜಲ್ 55 ರನ್ ಗಳಿಸಿದ್ದರು. ಅರ್ಧಶತಕ ಬಾರಿಸಿದರೂ, ಆ ಬಳಿಕ ಟೀಂ ಇಂಡಿಯಾ ಪರ ಆಡುವ ಅವಕಾಶ ಸಿಕ್ಕಿರಲಿಲ್ಲ. ಫಜಲ್ 138 ಪ್ರಥಮ ದರ್ಜೆ ಪಂದ್ಯಗಳಲ್ಲಿ 9184 ರನ್ ಮತ್ತು 23 ವಿಕೆಟ್ ಕಬಳಿಸಿದ್ದಾರೆ. ಅವರು 24 ಶತಕ ಮತ್ತು 39 ಅರ್ಧ ಶತಕಗಳನ್ನು ಗಳಿಸಿದ್ದಾರೆ. 
(3 / 6)
ಹರಿಯಾಣ ವಿರುದ್ಧದ ರಣಜಿ ಪಂದ್ಯದ ನಂತರ ವಿದರ್ಭದ ಫೈಜ್ ಫಜಲ್ ವಿದಾಯ ಹೇಳಿದರು. ಅವರು ಭಾರತದ ಪರ 1 ಏಕದಿನ ಪಂದ್ಯ ಆಡಿದ್ದಾರೆ. ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ನಡೆದ ಆ ಪಂದ್ಯದಲ್ಲಿ ಫಜಲ್ 55 ರನ್ ಗಳಿಸಿದ್ದರು. ಅರ್ಧಶತಕ ಬಾರಿಸಿದರೂ, ಆ ಬಳಿಕ ಟೀಂ ಇಂಡಿಯಾ ಪರ ಆಡುವ ಅವಕಾಶ ಸಿಕ್ಕಿರಲಿಲ್ಲ. ಫಜಲ್ 138 ಪ್ರಥಮ ದರ್ಜೆ ಪಂದ್ಯಗಳಲ್ಲಿ 9184 ರನ್ ಮತ್ತು 23 ವಿಕೆಟ್ ಕಬಳಿಸಿದ್ದಾರೆ. ಅವರು 24 ಶತಕ ಮತ್ತು 39 ಅರ್ಧ ಶತಕಗಳನ್ನು ಗಳಿಸಿದ್ದಾರೆ. (PTI)
ರಾಜಸ್ಥಾನ ವಿರುದ್ಧದ ರಣಜಿ ಪಂದ್ಯದ ಬಳಿಕ ಜಾರ್ಖಂಡ್‌ನ ಸೌರಬ್ ತಿವಾರಿ ನಿವೃತ್ತರಾದರು. ಅವರು ಭಾರತದ ಪರ 3 ಏಕದಿನ ಪಂದ್ಯಗಳಲ್ಲಿ 49 ರನ್ ಗಳಿಸಿದ್ದರು. ಸೌರಬ್ 116 ಪ್ರಥಮ ದರ್ಜೆ ಪಂದ್ಯಗಳಲ್ಲಿ 8076 ರನ್ ಗಳಿಸಿದ್ದಾರೆ. 22 ಶತಕ ಮತ್ತು 34 ಅರ್ಧ ಶತಕಗಳನ್ನು‌ ತಮ್ಮ ಖಾತೆಯಲ್ಲಿ ಹೊಂದಿದ್ದಾರೆ. 
(4 / 6)
ರಾಜಸ್ಥಾನ ವಿರುದ್ಧದ ರಣಜಿ ಪಂದ್ಯದ ಬಳಿಕ ಜಾರ್ಖಂಡ್‌ನ ಸೌರಬ್ ತಿವಾರಿ ನಿವೃತ್ತರಾದರು. ಅವರು ಭಾರತದ ಪರ 3 ಏಕದಿನ ಪಂದ್ಯಗಳಲ್ಲಿ 49 ರನ್ ಗಳಿಸಿದ್ದರು. ಸೌರಬ್ 116 ಪ್ರಥಮ ದರ್ಜೆ ಪಂದ್ಯಗಳಲ್ಲಿ 8076 ರನ್ ಗಳಿಸಿದ್ದಾರೆ. 22 ಶತಕ ಮತ್ತು 34 ಅರ್ಧ ಶತಕಗಳನ್ನು‌ ತಮ್ಮ ಖಾತೆಯಲ್ಲಿ ಹೊಂದಿದ್ದಾರೆ. 
ರಾಜಸ್ಥಾನ ವಿರುದ್ಧದ ಕೊನೆಯ ರಣಜಿ ಲೀಗ್ ಪಂದ್ಯದ ಬಳಿಕ ಜಾರ್ಖಂಡ್ ವೇಗಿ ವರುಣ್ ಆರೋನ್ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತರಾದರು. ಅವರು ಭಾರತದ ಪರ 9 ಟೆಸ್ಟ್ ಮತ್ತು 9 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 29 ಅಂತಾರಾಷ್ಟ್ರೀಯ ವಿಕೆಟ್‌ ಕಬಳಿಸಿದ್ದಾರೆ. ಆಡಿದ 66 ಪ್ರಥಮ ದರ್ಜೆ ಪಂದ್ಯಗಳಲ್ಲಿ 173 ವಿಕೆಟ್‌ಗಳನ್ನು ಸುಲಭವಾಗಿ ಕಬಳಿಸಿದ್ದಾರೆ. 837 ರನ್ ಕೂಡಾ ಬಾರಿಸಿದ್ದಾರೆ. 
(5 / 6)
ರಾಜಸ್ಥಾನ ವಿರುದ್ಧದ ಕೊನೆಯ ರಣಜಿ ಲೀಗ್ ಪಂದ್ಯದ ಬಳಿಕ ಜಾರ್ಖಂಡ್ ವೇಗಿ ವರುಣ್ ಆರೋನ್ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತರಾದರು. ಅವರು ಭಾರತದ ಪರ 9 ಟೆಸ್ಟ್ ಮತ್ತು 9 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 29 ಅಂತಾರಾಷ್ಟ್ರೀಯ ವಿಕೆಟ್‌ ಕಬಳಿಸಿದ್ದಾರೆ. ಆಡಿದ 66 ಪ್ರಥಮ ದರ್ಜೆ ಪಂದ್ಯಗಳಲ್ಲಿ 173 ವಿಕೆಟ್‌ಗಳನ್ನು ಸುಲಭವಾಗಿ ಕಬಳಿಸಿದ್ದಾರೆ. 837 ರನ್ ಕೂಡಾ ಬಾರಿಸಿದ್ದಾರೆ. (AFP)
ಮುಂಬೈನ ಹಿರಿಯ ವೇಗಿ ಧವಳ್ ಕುಲಕರ್ಣಿ ಅಸ್ಸಾಂ ವಿರುದ್ಧದ ರಣಜಿ ಪಂದ್ಯದ ನಂತರ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ, ಮುಂಬೈ ಕ್ರಿಕೆಟ್ ಸಂಸ್ಥೆಯ ಮನವಿ ಮೇರೆಗೆ ನಾಕೌಟ್ ಪಂದ್ಯದಲ್ಲೂ ಆಡಲು ನಿರ್ಧರಿಸಿದ್ದಾರೆ. ಮುಂಬೈನ ರಣಜಿ ಅಭಿಯಾನ ಮುಗಿದ ನಂತರ ಅವರು ವಿದಾಯ ಹೇಳಲಿದ್ದಾರೆ. ಧವಳ್ ಭಾರತದ ಪರ 12 ಏಕದಿನ ಮತ್ತು 2 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ 22 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕುಲಕರ್ಣಿ 95 ಪ್ರಥಮ ದರ್ಜೆ ಪಂದ್ಯಗಳಲ್ಲಿ 281 ವಿಕೆಟ್ ಪಡೆದಿದ್ದಾರೆ. 
(6 / 6)
ಮುಂಬೈನ ಹಿರಿಯ ವೇಗಿ ಧವಳ್ ಕುಲಕರ್ಣಿ ಅಸ್ಸಾಂ ವಿರುದ್ಧದ ರಣಜಿ ಪಂದ್ಯದ ನಂತರ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ, ಮುಂಬೈ ಕ್ರಿಕೆಟ್ ಸಂಸ್ಥೆಯ ಮನವಿ ಮೇರೆಗೆ ನಾಕೌಟ್ ಪಂದ್ಯದಲ್ಲೂ ಆಡಲು ನಿರ್ಧರಿಸಿದ್ದಾರೆ. ಮುಂಬೈನ ರಣಜಿ ಅಭಿಯಾನ ಮುಗಿದ ನಂತರ ಅವರು ವಿದಾಯ ಹೇಳಲಿದ್ದಾರೆ. ಧವಳ್ ಭಾರತದ ಪರ 12 ಏಕದಿನ ಮತ್ತು 2 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ 22 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕುಲಕರ್ಣಿ 95 ಪ್ರಥಮ ದರ್ಜೆ ಪಂದ್ಯಗಳಲ್ಲಿ 281 ವಿಕೆಟ್ ಪಡೆದಿದ್ದಾರೆ. (AFP)

    ಹಂಚಿಕೊಳ್ಳಲು ಲೇಖನಗಳು