logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mauni Amavasya 2024: ಮೌನಿ ಅಮಾವಾಸ್ಯೆ ಯಾವಾಗ, ಆಚರಣೆ ಹೇಗೆ; ಈ ದಿನ ದಾನ ಮಾಡುವುದು ಏಕೆ ಶ್ರೇಷ್ಠ?

Mauni Amavasya 2024: ಮೌನಿ ಅಮಾವಾಸ್ಯೆ ಯಾವಾಗ, ಆಚರಣೆ ಹೇಗೆ; ಈ ದಿನ ದಾನ ಮಾಡುವುದು ಏಕೆ ಶ್ರೇಷ್ಠ?

Feb 02, 2024 03:49 PM IST

Mauni amavasya 2024: ಜ್ಯೋತಿಷ್ಯದ ಪ್ರಕಾರ ಹುಣ್ಣಿಮೆಗೆ ಎಷ್ಟು ಮಹತ್ವವಿದೆಯೋ, ಅಮಾವಾಸ್ಯೆಗೆ ಕೂಡಾ ಅಷ್ಟೇ ಮಹತ್ವ ಇದೆ. ಅದರಲ್ಲೂ ಮೌನಿ ಅಮಾವಾಸ್ಯೆಗೆ ಬಹಳ ಪ್ರಾಮುಖ್ಯತೆ ಇದೆ. ಈ ಬಾರಿ ಮೌನಿ ಅಮಾವಾಸ್ಯೆ ಯಾವಾಗ, ಆಚರಣೆಯ ವಿಧಾನ ಹೇಗೆ ತಿಳಿಯೋಣ.

ಮೌನಿ ಅಮಾವಾಸ್ಯೆ ದಿನವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಈ ದಿನ ಪವಿತ್ರ ನದಿಯಲ್ಲಿ ಮಿಂದು, ಉಪವಾಸ  ಮಾಡುವುದು ಬಹಳ ಒಳ್ಳೆಯದು. ಮೌನಿ ಅಮಾವಾಸ್ಯೆಯ ದಿನ ಮೌನವ್ರತವನ್ನು ಆಚರಿಸುವ ಮೂಲಕ ಉಪವಾಸವನ್ನು ಆಚರಿಸುತ್ತಾರೆ. 2024 ರಲ್ಲಿ, ಮಾಘ ಮಾಸ, ಫೆಬ್ರವರಿ 9 ರಂದು ಮೌನಿ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. 
(1 / 5)

ಮೌನಿ ಅಮವಾಸ್ಯೆಯ ದಿನ ನದಿಯಲ್ಲಿ ಸ್ನಾನ ಮಾಡುವುದು ಮಾತ್ರವಲ್ಲದೆ ದಾನ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ ಎಂದು ನಂಬಲಾಗಿದೆ. ಈ ದಿನ ದಾನ ಮಾಡುವುದರಿಂದ 16 ಪಟ್ಟು ಹೆಚ್ಚು ಫಲ ಸಿಗುತ್ತದೆ ಎಂದು ನಂಬಲಾಗಿದೆ.
(2 / 5)

ಮೌನಿ ಅಮಾವಾಸ್ಯೆಯ ದಿನ ವಸ್ತ್ರ, ಹೊದಿಕೆ, ಅನ್ನ, ತುಪ್ಪ, ಬೆಲ್ಲ, ಕಪ್ಪು ಎಳ್ಳು, ಚಿನ್ನ, ಹಸು ಇತ್ಯಾದಿಗಳನ್ನು ದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
(3 / 5)

ಒಂದು ವೇಳೆ ನಿಮಗೆ ಅಮಾವಾಸ್ಯೆಯ ದಿನ ನದಿ ಸ್ನಾನ ಸಾಧ್ಯವಾಗದಿದ್ದರೆ ಮನೆಯಲ್ಲೇ ಸ್ನಾನ ಮಾಡಿ.  ಸೂರ್ಯ ಭಗವಂತನಿಗೆ ನೀರನ್ನು ಅರ್ಪಿಸಲು ಮರೆಯಬೇಡಿ.
(4 / 5)

ಮೌನಿ ಅಮಾವಾಸ್ಯೆ ದಿನ ಗೋಧಿ ಅಥವಾ ಅಕ್ಕಿಹಿಟ್ಟನ್ನುು ಸಣ್ಣ ಉಂಡೆಗಳಾಗಿ ಮಾಡಿ ಮೀನುಗಳಿಗೆ ಆಹಾರವಾಗಿ ತಿನ್ನಿಸಿ. ಜೊತೆಗೆ ಇರುವೆಗಳಿಗೆ ಸಕ್ಕರೆ ಸೇರಿಸಿ ಕೊಡಿ. ಜೊತೆಗೆ ಹಸುವಿಗೆ ಎಳ್ಳು ಬೆರೆಸಿದ ಹಿಟ್ಟನ್ನು ತಿನ್ನಿಸಿದರೆ ಶುಭಫಲಗಳು ದೊರೆಯುತ್ತದೆ. 
(5 / 5)

    ಹಂಚಿಕೊಳ್ಳಲು ಲೇಖನಗಳು