logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  1,739 ದಿನಗಳ ನಂತರ ಶಕೀಬ್ ಆಳ್ವಿಕೆ ಅಂತ್ಯ; ಏಕದಿನ ನಂಬರ್ 1 ಆಲ್​ರೌಂಡರ್ ಪಟ್ಟಕ್ಕೇರಿ ದಾಖಲೆ ಬರೆದ ಮೊಹಮ್ಮದ್​ ನಬಿ

1,739 ದಿನಗಳ ನಂತರ ಶಕೀಬ್ ಆಳ್ವಿಕೆ ಅಂತ್ಯ; ಏಕದಿನ ನಂಬರ್ 1 ಆಲ್​ರೌಂಡರ್ ಪಟ್ಟಕ್ಕೇರಿ ದಾಖಲೆ ಬರೆದ ಮೊಹಮ್ಮದ್​ ನಬಿ

Feb 14, 2024 08:11 PM IST

Shakib Al Hasan : ಐಸಿಸಿ ಏಕದಿನ ಶ್ರೇಯಾಂಕದ ಅಲ್​ರೌಂಡರ್​​ ವಿಭಾಗದಲ್ಲಿ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಆಳ್ವಿಕೆ ಕೊನೆಗೊಂಡಿದೆ. ಮೊಹಮ್ಮದ್ ನಬಿ ನಂಬರ್ 1 ಆಲ್​ರೌಂಡರ್ ಪಟ್ಟ ಅಲಂಕರಿಸಿದ್ದಾರೆ.

  • Shakib Al Hasan : ಐಸಿಸಿ ಏಕದಿನ ಶ್ರೇಯಾಂಕದ ಅಲ್​ರೌಂಡರ್​​ ವಿಭಾಗದಲ್ಲಿ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಆಳ್ವಿಕೆ ಕೊನೆಗೊಂಡಿದೆ. ಮೊಹಮ್ಮದ್ ನಬಿ ನಂಬರ್ 1 ಆಲ್​ರೌಂಡರ್ ಪಟ್ಟ ಅಲಂಕರಿಸಿದ್ದಾರೆ.
ಅಫ್ಘಾನಿಸ್ತಾನದ ಮೊಹಮ್ಮದ್ ನಬಿ ಬುಧವಾರ ಐಸಿಸಿ ಏಕದಿನ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ ದಾಖಲೆ ಬರೆದಿದ್ದಾರೆ. ಆ ಮೂಲಕ ನಂಬರ್ 1 ಸ್ಥಾನ ಪಡೆದ ಅತ್ಯಂತ ಹಿರಿಯ ಆಟಗಾರ ಎಂಬ ಇತಿಹಾಸವನ್ನು ನಿರ್ಮಿಸಿದ್ದಾರೆ. ಅಲ್ಲದೆ. ಶಕೀಬ್ ಅಲ್ ಹಸನ್ ಅವರ ಸುದೀರ್ಘ ಆಳ್ವಿಕೆಯನ್ನು ಅಗ್ರಸ್ಥಾನಕ್ಕೇರಿ ಕೊನೆಗೊಳಿಸಿದ್ದಾರೆ.
(1 / 7)

39 ವರ್ಷ ಮತ್ತು 1 ತಿಂಗಳ ವಯಸ್ಸಿನ ನಬಿ ಅವರು ಶ್ರೀಲಂಕಾ ವಿರುದ್ಧದ ಅಫ್ಘಾನಿಸ್ತಾನದ ಮೂರು ಪಂದ್ಯಗಳ ಏಕದಿನ ಸರಣಿಯ ಆರಂಭಿಕ ಪಂದ್ಯದಲ್ಲಿ 136 ರನ್ ಗಳಿಸಿದರು. ಜೊತೆಗೆ ಒಂದು ವಿಕೆಟ್ ಪಡೆದು ಪ್ರಭಾವಿ ಪ್ರದರ್ಶನದ ನಂತರ ನಂ 1 ಸ್ಥಾನ ತಲುಪಿದರು. ಆ ಮೂಲಕ ತಿಲಕತ್ನೆ ದಿಲ್ಶನ್ ದಾಖಲೆ ಮುರಿದರು.
(2 / 7)

2015ರ ಜೂನ್​​ನಲ್ಲಿ 38 ವರ್ಷ 8 ತಿಂಗಳ ವಯಸ್ಸಿನ ಶ್ರೀಲಂಕಾದ ತಿಲಕರತ್ನೆ ದಿಲ್ಶನ್ ನಂಬರ್ 1 ಆಲ್​ರೌಂಡರ್​ ಆಗಿದ್ದರು. ಆದರೀಗ ನಬಿ ರ್ಯಾಂಕಿಂಗ್​​ ದಾಖಲೆ ಮುರಿದಿದ್ದಾರೆ. ಅಲ್ಲದೆ, 1739 ದಿನಗಳ ಅಂದರೆ ನಾಲ್ಕೂವರೆ ವರ್ಷಗಳ ನಂತರ ಶಕೀಬ್ ಅಲ್ ಹಸನ್​ ನಂಬರ್​ 1 ಪಟ್ಟದಿಂದ ಕೆಳಗಿಳಿದಿದ್ದಾರೆ.
(3 / 7)

ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್, ರಶೀದ್ ಖಾನ್‌ ಅವರಿಂದ ಅಧಿಕಾರ ವಹಿಸಿಕೊಂಡ ಮೇ 7, 2019 ರಿಂದ ಈವರೆಗೂ 1739 ದಿನಗಳ ಕಾಲ ಸುದೀರ್ಘವಾಗಿ ನಂಬರ್ 1 ಸ್ಥಾನದಲ್ಲಿದ್ದರು. ನಬಿ ಅವರ ಫಾರ್ಮ್​ನಿಂದ ಶ್ರೇಯಾಂಕದಲ್ಲಿ ಬದಲಾವಣೆಯಾಗಿದೆ. ಮತ್ತೊಂದೆಡೆ ಶಕೀಬ್​ ರಾಜಕೀಯಕ್ಕೆ ತೆರಳಿ ಕ್ರಿಕೆಟ್​ನಿಂದ ದೂರ ಉಳಿದಿದ್ದಾರೆ.
(4 / 7)

ಫೆಬ್ರವರಿ 9 ರಂದು ಪಲ್ಲೆಕೆಲೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನಬಿ 136 ರನ್ ಗಳಿಸಿದರು. 15 ಬೌಂಡರಿ, ಮೂರು ಸಿಕ್ಸರ್​​ ಬಾರಿಸಿದ ನಬಿ, ಆ ಪಂದ್ಯದಲ್ಲಿ ಅಫ್ಘಾನಿಸ್ತಾನ ಸೋತರೂ ನಬಿ ಇತಿಹಾಸ ನಿರ್ಮಿಸಿದರು.
(5 / 7)
ಫೆಬ್ರವರಿ 9 ರಂದು ಪಲ್ಲೆಕೆಲೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನಬಿ 136 ರನ್ ಗಳಿಸಿದರು. 15 ಬೌಂಡರಿ, ಮೂರು ಸಿಕ್ಸರ್​​ ಬಾರಿಸಿದ ನಬಿ, ಆ ಪಂದ್ಯದಲ್ಲಿ ಅಫ್ಘಾನಿಸ್ತಾನ ಸೋತರೂ ನಬಿ ಇತಿಹಾಸ ನಿರ್ಮಿಸಿದರು.(AFP)
ಆಲ್​ರೌಂಡರ್​ ಮೊಹಮ್ಮದ್ ನಬಿ 314 ಅಂಕ ಪಡೆದಿದ್ದರೆ, ಅಗ್ರಸ್ಥಾನದಿಂದ ಕುಸಿದ ಶಕೀಬ್ 310 ಪಾಯಿಂಟ್ಸ್ ಪಡೆದಿದ್ದಾರೆ. ಜಿಂಬಾಬ್ವೆ ಸ್ಟಾರ್ ಸಿಕಂದರ್ ರಾಜಾ ಮೂರನೇ ಸ್ಥಾನದಲ್ಲಿದ್ದಾರೆ. ಅವರ ರೇಟಿಂಗ್ ಪಾಯಿಂಟ್ 288.
(6 / 7)

ಅಫ್ಘಾನಿಸ್ತಾನದ ಸ್ಟಾರ್ ರಶೀದ್ ಖಾನ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರ ರೇಟಿಂಗ್ ಪಾಯಿಂಟ್ 255. ರವೀಂದ್ರ ಜಡೇಜಾ ಅಗ್ರ ಹತ್ತರಲ್ಲಿರುವ ಏಕೈಕ ಭಾರತೀಯ. ರೇಟಿಂಗ್ ಅಂಕಗಳು 209.
(7 / 7)

    ಹಂಚಿಕೊಳ್ಳಲು ಲೇಖನಗಳು