logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಾಲ್ಕೇ ನಿಮಿಷ ಬ್ಯಾಟಿಂಗ್ ನಡೆಸಿ ಸಿಎಸ್​ಕೆ ಪರ ಎಂಎಸ್ ಧೋನಿ ವಿಶೇಷ ದಾಖಲೆ; ಈ ಸಾಧನೆ ಮಾಡಿದ ಎರಡನೇ ಬ್ಯಾಟರ್

ನಾಲ್ಕೇ ನಿಮಿಷ ಬ್ಯಾಟಿಂಗ್ ನಡೆಸಿ ಸಿಎಸ್​ಕೆ ಪರ ಎಂಎಸ್ ಧೋನಿ ವಿಶೇಷ ದಾಖಲೆ; ಈ ಸಾಧನೆ ಮಾಡಿದ ಎರಡನೇ ಬ್ಯಾಟರ್

Apr 15, 2024 08:00 AM IST

MS Dhoni Record: ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಎಲ್ 2024 ರ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ತಮ್ಮ ವೈಯಕ್ತಿಕ ಮೈಲಿಗಲ್ಲನ್ನು ಮುರಿದಿದ್ದಾರೆ.

  • MS Dhoni Record: ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಎಲ್ 2024 ರ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ತಮ್ಮ ವೈಯಕ್ತಿಕ ಮೈಲಿಗಲ್ಲನ್ನು ಮುರಿದಿದ್ದಾರೆ.
ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಕೇವಲ 4 ಎಸೆತಗಳಲ್ಲಿ 20 ರನ್ ಗಳಿಸಿದರು. ಮಾಹಿ 500 ಸ್ಟ್ರೈಕ್​ರೇಟ್​​​​ನಲ್ಲಿ ಮೂರು ಸಿಕ್ಸರ್​ ಸಹಿತ 20 ರನ್ ಚಚ್ಚಿದರು. ವಿನಾಶಕಾರಿ ಬ್ಯಾಟಿಂಗ್​​ ಮೂಲಕ ವೈಯಕ್ತಿಕ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ಮೂಲಕ ಸುರೇಶ್ ರೈನಾ ನಂತರ ಸಿಎಸ್​ಕೆ ಪರ ಈ ದಾಖಲೆ ಬರೆದ 2ನೇ ಬ್ಯಾಟ್ಸ್​​ಮನ್​ ಎಂಬ ಮೈಲಿಗಲ್ಲು ತಲುಪಿದ್ದಾರೆ.
(1 / 5)

ಚೆನ್ನೈ ಪರ 5000 ರನ್ ಗಳಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾದರು. ಮೈದಾನಕ್ಕೆ ಬಂದು ಮೊದಲ ಎಸೆತದಲ್ಲಿ ಸಿಕ್ಸರ್ ಹೊಡೆಯುವ ಮೂಲಕ ಮೈಲಿಗಲ್ಲನ್ನು ದಾಟಿದರು. ಐಪಿಎಲ್ ಮತ್ತು ಚಾಂಪಿಯನ್ಸ್ ಲೀಗ್ ಟಿ20 ಸೇರಿದಂತೆ ಚೆನ್ನೈ ಪರ 250 ಪಂದ್ಯಗಳ 218 ಇನ್ನಿಂಗ್ಸ್​​ಗಳಲ್ಲಿ ಧೋನಿ 5016 ರನ್ ಗಳಿಸಿದ್ದಾರೆ. ಯಾವುದೇ ಶತಕ ಗಳಿಸದಿದ್ದರೂ, 23 ಅರ್ಧಶತಕ ಗಳಿಸಿದ್ದಾರೆ. ಮಾಹಿ ಚೆನ್ನೈ ಜರ್ಸಿಯಲ್ಲಿ 348 ಬೌಂಡರಿ, 241 ಸಿಕ್ಸರ್​ಬಾರಿಸಿದ್ದಾರೆ.
(2 / 5)

ಮಹೇಂದ್ರ ಸಿಂಗ್ ಧೋನಿ ಐಪಿಎಲ್​​​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ ಆಡಿದ್ದಾರೆ. ಧೋನಿ 256 ಐಪಿಎಲ್ ಪಂದ್ಯಗಳಲ್ಲಿ 222 ಇನ್ನಿಂಗ್ಸ್​​​ಗಳಲ್ಲಿ 5141 ರನ್ ಗಳಿಸಿದ್ದಾರೆ. ಐಪಿಎಲ್​​​ನಲ್ಲಿ ಧೋನಿ ಎರಡೂ ತಂಡಗಳಿಗಾಗಿ ಒಟ್ಟು 353 ಬೌಂಡರಿ, 245 ಸಿಕ್ಸರ್ ಬಾರಿಸಿದ್ದಾರೆ.
(3 / 5)

ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಚಾಂಪಿಯನ್ಸ್ ಲೀಗ್ ಟಿ20ಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಸುರೇಶ್ ರೈನಾ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಚೆನ್ನೈ ಪರ 200 ಪಂದ್ಯಗಳಲ್ಲಿ 195 ಇನ್ನಿಂಗ್ಸ್​​ಗಳಲ್ಲಿ 5529 ರನ್ ಗಳಿಸಿದ್ದಾರೆ. ಸಿಎಸ್​​ಕೆ ಪರ ರೈನಾ 2 ಶತಕ, 38 ಅರ್ಧಶತಕ ಬಾರಿಸಿದ್ದಾರೆ. ಚೆನ್ನೈ ಪರ ರೈನಾ 494 ಬೌಂಡರಿ, 219 ಸಿಕ್ಸರ್ ಸಿಡಿಸಿದ್ದಾರೆ.
(4 / 5)

ಸುರೇಶ್ ರೈನಾ ಮತ್ತು ಧೋನಿ ನಂತರ ಚೆನ್ನೈ ಪರ ಅತಿ ಹೆಚ್ಚು ರನ್ ಗಳಿಸಿದ 3ನೇ ಆಟಗಾರ ಫಾಫ್ ಡು ಪ್ಲೆಸಿಸ್. 100 ಪಂದ್ಯಗಳ 93 ಇನ್ನಿಂಗ್ಸ್​​​ಗಳಲ್ಲಿ ಒಟ್ಟು 2932 ರನ್ ಗಳಿಸಿದ್ದಾರೆ. ಫಾಫ್ ಯಾವುದೇ ಶತಕ ಗಳಿಸದಿದ್ದರೂ 21 ಅರ್ಧಶತಕ ಗಳಿಸಿದ್ದರು.
(5 / 5)

    ಹಂಚಿಕೊಳ್ಳಲು ಲೇಖನಗಳು