logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  International Dance Day: ಮೈಸೂರು ಖ್ಯಾತ ನೃತ್ಯಪಟುಗಳ ತವರೂ ಹೌದು, ಹಿರಿಮೆ ಹೆಚ್ಚಿಸಿದ ಕಲಾವಿದರು ಯಾರು Photos

International Dance Day: ಮೈಸೂರು ಖ್ಯಾತ ನೃತ್ಯಪಟುಗಳ ತವರೂ ಹೌದು, ಹಿರಿಮೆ ಹೆಚ್ಚಿಸಿದ ಕಲಾವಿದರು ಯಾರು photos

Apr 29, 2024 02:56 PM IST

ನೃತ್ಯ ಪ್ರಮುಖ ಪ್ರದರ್ಶಕ ಕಲೆ. ಇದು ದೈಹಿಕ ಹಾಗೂ ಮಾನಸಿಕ ಸಮನ್ವಯದ ಕಲೆ. ಇಂತಹ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮೈಸೂರಿನ ಹಲವು ಕಲಾವಿದರು ಶ್ರಮಿಸಿದ್ದಾರೆ. ಈಗಲೂ ಸಕ್ರಿಯರಾಗಿರುವವರು ಇದ್ದಾರೆ.ಅಂತರಾಷ್ಟ್ರೀಯ ನೃತ್ಯ ದಿನ(International Dance Day) ಕಲಾವಿದರ ಕಿರು ಪರಿಚಯ ಇಲ್ಲಿದೆ.

  • ನೃತ್ಯ ಪ್ರಮುಖ ಪ್ರದರ್ಶಕ ಕಲೆ. ಇದು ದೈಹಿಕ ಹಾಗೂ ಮಾನಸಿಕ ಸಮನ್ವಯದ ಕಲೆ. ಇಂತಹ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮೈಸೂರಿನ ಹಲವು ಕಲಾವಿದರು ಶ್ರಮಿಸಿದ್ದಾರೆ. ಈಗಲೂ ಸಕ್ರಿಯರಾಗಿರುವವರು ಇದ್ದಾರೆ.ಅಂತರಾಷ್ಟ್ರೀಯ ನೃತ್ಯ ದಿನ(International Dance Day) ಕಲಾವಿದರ ಕಿರು ಪರಿಚಯ ಇಲ್ಲಿದೆ.
ಇವರ ಹೆಸರು ಕೆ. ವೆಂಕಟಲಕ್ಷಮ್ಮ( K Venkatalakshamma), ದಶಕಗಳ ಹಿಂದೆಯೇ ಮೈಸೂರು ಶೈಲಿಯ ನೃತ್ಯ ಪರಿಚಯಿಸಿದರು. ಚಿಕ್ಕಮಗಳೂರು ಜಿಲ್ಲೆ ಕಡೂರಿನವರಾದ, ಲಂಬಾಣಿ ಸಮುದಾಯದಲ್ಲಿ ಜನಿಸಿ ಆಗಲೇ ನೃತ್ಯ ಪ್ರಯೋಗಗಳ ಮೂಲಕ ಗಮನ ಸೆಳೆದವರು. ಮೈಸೂರು ಆಸ್ಥಾನದಲ್ಲೂ ಕಾರ್ಯಕ್ರಮ ನೀಡಿ ನೂರಾರು ಕಲಾವಿದರನ್ನು ನೀಡಿದ ಹಿರಿಮೆ. ಎರಡು ದಶಕದ ಹಿಂದೆಯೇ ಕಾಲವಾಗಿದ್ದಾರೆ.
(1 / 10)

ಮೈಸೂರಿನ ಮತ್ತೊಬ್ಬ ಹಿರಿಯ ಕಲಾವಿದೆ ನಂದಿನಿ ಈಶ್ವರ್‌( Nandini Eshwar), ರಾಸವೃಂದ ಎನ್ನುವ ನೃತ್ಯ ಶಾಲೆ ಮೂಲಕ ನಾಲ್ಕು ದಶಕದಿಂದಲೂ ತರಬೇತಿ, ಕಾರ್ಯಕ್ರಮ ನೀಡುತ್ತಾ ಗಮನ ಸೆಳೆದವರು. ಹೊರ ದೇಶದವರೂ ಇವರಲ್ಲಿ ತರಬೇತಿ ಪಡೆಯುಲು ಬರುತ್ತಾರೆ. ಅವರ ಪುತ್ರ ಕೂಡ ನೃತ್ಯಪಟುವೇ. 
(2 / 10)

ಡಾ.ವಸುಂಧರಾ ದೊರೆಸ್ವಾಮಿ( Vasundhara Doreswamy) ನೃತ್ಯ ಕ್ಷೇತ್ರದಲ್ಲಿ ದೊಡ್ಡ ಹೆಸರು. ವಸುಂಧರಾ ಪ್ರದರ್ಶಕ ಕಲೆಗಳ ಕೇಂದ್ರ ಆರಂಭಿಸಿ ನಾಲ್ಕು ದಶಕದಿಂದ ತರಬೇತಿ ನಿರತರು. ದೇಶ, ಹೊರ ದೇಶದಲ್ಲೂ ನಿರಂತರ ಕಾರ್ಯಕ್ರಮ ನೀಡುವ ವಸುಂಧರಾ ಅವರು ಸಣ್ಣ ವಯಸ್ಸಿನಲ್ಲಿಯೇ ನೃತ್ಯ ಕ್ಷೇತ್ರ ಪ್ರವೇಶಿಸಿ ಸಹಸ್ರಾರು ವಿದ್ಯಾರ್ಥಿಗಳನ್ನು ರೂಪಿಸಿದ್ದಾರೆ.
(3 / 10)

ಮೈಸೂರಿನವರಾದ ತುಳಸಿ ರಾಮಚಂದ್ರ( Tulasi Ramachadra) ಅವರು 1979 ರಲ್ಲಿಯೇ ನೃತ್ಯಾಲಯ ಸಂಸ್ಥೆ ಹುಟ್ಟು ಹಾಕಿ ಆಗಿನಿಂದಲೂ ಕಾರ್ಯಕ್ರಮ ನೀಡುತ್ತಾ ಬಂದಿದ್ದಾರೆ. ತಮ್ಮದೇ ಹೊಸ ನೃತ್ಯ ರೂಪಗಳನ್ನು ಹುಟ್ಟು ಹಾಕಿದ ಹಿರಿಮೆ ಇವರದ್ದು. ಈಗಲೂ ನಿತ್ಯ ತರಬೇತಿ ನೀಡುತ್ತಾ ಹೊಸ ಪೀಳಿಗೆಯನ್ನು ನೃತ್ಯ ಕ್ಷೇತ್ರದಲ್ಲಿ ಸೃಷ್ಟಿಸಿದ್ದಾರೆ.
(4 / 10)

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದರೂ ಮೈಸೂರಿನಲ್ಲಿಯೇ ಮೂರು ದಶಕದಿಂದ ನೆಲೆಸಿ ನೃತ್ಯಗಿರಿ ಎನ್ನುವ ಸಂಸ್ಥೆಯನ್ನು ಆರಂಭಿಸಿದ್ದಾರೆ ಕೃಪಾ ಫಡ್ಕೆ( Kripa Phadke). ತಾವೊಬ್ಬ ಅತ್ಯುತ್ತಮ ಕಲಾವಿದೆ ಎನ್ನುವ ಜತೆಗೆ ಮಕ್ಕಳಿಗೆ ಹೇಳಿಕೊಡುವ ಗುರುವೂ ಹೌದು. ಜನಪದ, ಪೌರಾಣಿಕ ಸೇರಿದಂತೆ ಹಲವು ವಿಷಯಗಳ ನೃತ್ಯ ರೂಪಕ ರೂಪಿಸುವ ಕೃಪಾ ಅವರು ಸದ್ಯ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರು.
(5 / 10)

ಖ್ಯಾತ ಭರತ ನಾಟ್ಯ ಕಲಾವಿದರಾಗಿರುವ ರಾಧಿಕಾ ನಂದಕುಮಾರ್‌( Radhijka Nandakumar) ಅವರು ಬ್ರಹ್ಮವಿದ್ಯಾ ಕಲಾ ಸಂಸ್ಥೆ ಮೂಲಕ ಭರತನಾಟ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಾಯಿಯಿಂದಲೇ ಸಂಗೀತ ಕಲಿತು ನಂತರ ಸ್ವಯಂ ಪ್ರಯತ್ನಗಳಿಂದ ಪ್ರವರ್ಧಮಾನಕ್ಕೆ ಬಂದವರು. ಅವರ ಪತಿ ನಂದಕುಮಾರ್‌ ಕೂಡ ಹಿರಿಯ ಕಲಾವಿದರಾಗಿರುವುದರಿಂದ ರಾಧಿಕ ಅವರ ಸಾಧನೆಗೆ ಬಲ ಸಿಕ್ಕಿದೆ.
(6 / 10)

ಕರಾವಳಿ ಭಾಗದವರಾದ ಸುನೀತಾ ಚಂದ್ರಕುಮಾರ್‌( Suneeta Chandrakumar) ಮೈಸೂರಿನಲ್ಲಿ ನೆಲೆಸಿದ್ದಾರೆ. ರಘುಲೀಲಾ ಸಂಗೀತ ಮಂದಿರದ ಮೂಲಕ ನೃತ್ಯ, ರಾಗ ಸಂಯೋಜನೆಯನ್ನು ತೊಡಗಿಕೊಂಡವರು. ಕಳೆದ ವರ್ಷ ಕರಾವಳಿಯಲ್ಲಿ ಅವರ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ನಡೆಸಿಕೊಟ್ಟ ಕೀರ್ತನೆ ಹಾಗೂ ಸಾಹಿತಿ ಜಿ.ಎಸ್.ಶಿವರುದ್ರಪ್ಪ ಅವರ ಸಾಲುಗಳ ನೃತ್ಯ ರೂಪಕ ಗಮನ ಸೆಳೆದಿತ್ತು.
(7 / 10)

ಮೈಸೂರಿನಲ್ಲಿ ನಾದವಿದ್ಯಾಲಯ ಸಂಗೀತ ಹಾಗೂ ನೃತ್ಯ ಅಕಾಡೆಮಿ ಮೂಲಕ ತಾವೊಬ್ಬ ಕಲಾವಿದೆ ಹಾಗೂ ಗುರುವಾಗಿ ಗುರುತಿಸಿಕೊಂಡವರು ಮಿತ್ರ ನವೀನ್‌(Mithra Naveen). ಮೈಸೂರಿನಲ್ಲಿ ನಿರಂತರ ನೃತ್ಯ ಚಟುವಟಿಕೆ ಮೂಲಕ ಗಮನ ಸೆಳಯದವರು. ಅವರ ಪತಿ ನವೀನ್‌ ಕೂಡ ಕಲಾವಿದರು.
(8 / 10)

ಮಂಡ್ಯ ಹಾಗೂ ಮೈಸೂರು ಎರಡು ಕಡೆಯಲ್ಲೂ ಗುರುದೇವಾ ಸಂಗೀತ ಶಾಲೆಯ ಮೂಲಕ ನೃತ್ಯ ಚಟುವಟಿಕೆಗಳನ್ನು ವಿಸ್ತರಿಸಿದವರು ಚೇತನಾ ರಾಧಾಕೃಷ್ಣ( Chetana Radhakrishna). ಸ್ವತಃ ಅತ್ಯುತ್ತಮ ಕಲಾವಿದೆಯಾಗಿ ಹೊಸ ಪ್ರಯೋಗಗಳ ಮೂಲಕ ನೃತ್ಯ ಪೀಳಿಗೆಯನ್ನು ಬೆಳೆಸುತ್ತಿದ್ದಾರೆ.
(9 / 10)

ಪೂಜಾ ಐಗೂರ್‌ ಜೋಶಿ(pooja Aigoor Joshi) ಅವರು ಬಿಯಾಂಡ್‌ ತಾಳಾಸ್‌ ಎನ್ನುವ ಸಂಸ್ಥೆಯನ್ನು ಒಂದೂವರೆ ದಶಕದ ಹಿಂದೆ ಹುಟ್ಟು ಹಾಕಿ ಹೊಸ ಶೈಲಿಯ ಹಾಗೂ ನವ್ಯ ನೃತ್ಯ ಪ್ರಕಾರಗಳನ್ನು ಪರಿಚಯಿಸಿದವರು.
(10 / 10)

    ಹಂಚಿಕೊಳ್ಳಲು ಲೇಖನಗಳು