logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Wtc Points Table: ಗೆಲುವಿನೊಂದಿಗೆ ಅಗ್ರಸ್ಥಾನಕ್ಕೇರಿದ ಕಿವೀಸ್; ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಕುಸಿದ ಭಾರತ

WTC Points Table: ಗೆಲುವಿನೊಂದಿಗೆ ಅಗ್ರಸ್ಥಾನಕ್ಕೇರಿದ ಕಿವೀಸ್; ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಕುಸಿದ ಭಾರತ

Feb 07, 2024 03:11 PM IST

ICC World Test Championship Points Table: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ನ್ಯೂಜಿಲ್ಯಾಂಡ್‌ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆ ಮೂಲಕ ಆಸ್ಟ್ರೇಲಿಯಾ ತಂಡ ಎರಡನೇ ಸ್ಥಾನಕ್ಕೆ ಜಾರಿದ್ದು, ಭಾರತ ತಂಡದ ಸ್ಥಾನವೂ ಬದಲಾಗಿದೆ

  • ICC World Test Championship Points Table: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ನ್ಯೂಜಿಲ್ಯಾಂಡ್‌ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆ ಮೂಲಕ ಆಸ್ಟ್ರೇಲಿಯಾ ತಂಡ ಎರಡನೇ ಸ್ಥಾನಕ್ಕೆ ಜಾರಿದ್ದು, ಭಾರತ ತಂಡದ ಸ್ಥಾನವೂ ಬದಲಾಗಿದೆ
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಕಿವೀಸ್‌ ಅಗ್ರಸ್ಥಾನಕ್ಕೆ ಏರಿದೆ. ಕಿವೀಸ್ 3 ಪಂದ್ಯಗಳಲ್ಲಿ 2 ಗೆಲುವಿನೊಂದಿಗೆ 24 ಅಂಕಗಳನ್ನು ಹೊಂದಿದೆ. 1 ಪಂದ್ಯದಲ್ಲಿ ಸೋತಿರುವ ತಂಡವು 66.66 ಪ್ರತಿಶತ ಅಂಕಗಳನ್ನು ಗಳಿಸಿ ಲೀಗ್ ಅಂಕಪಟ್ಟಿಯಲ್ಲಿ ನಂಬರ್ ವನ್ ಸ್ಥಾನವನ್ನು ಪಡೆದುಕೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲಿಸ್ಟ್‌ಗಳನ್ನು, ಆಯಾ ತಂಡಗಳ ಅಂಕಗಳ ಶೇಕಡಾವಾರು ಪ್ರಮಾಣದಿಂದ ನಿರ್ಧರಿಸಲಾಗುತ್ತದೆ. 
(1 / 7)

ಕಿವೀಸ್ ಗೆಲುವಿನಿಂದಾಗಿ, ಅಗ್ರಸ್ಥಾನ ಕಳೆದುಕೊಂಡಿರುವ ಆಸ್ಟ್ರೇಲಿಯ ಸದ್ಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 10 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ 66 ಅಂಕಗಳನ್ನು ಹೊಂದಿದೆ. ತಂಡ 3 ಪಂದ್ಯಗಳಲ್ಲಿ ಸೋತಿದ್ದು, 1 ಟೆಸ್ಟ್ ಡ್ರಾ ಮಾಡಿಕೊಂಡಿದೆ. ಸ್ಲೋ ಓವರ್ ರೇಟ್‌ನಿಂದಾಗಿ ತಂಡದ 10 ಅಂಕಗಳನ್ನು ಕಡಿತಗೊಳಿಸಲಾಗಿದೆ. ಸದ್ಯ ಆಸ್ಟ್ರೇಲಿಯಾವು ಶೇಕಡಾ 55.00 ಅಂಕಗಳನ್ನು ಹೊಂದಿದೆ. 
(2 / 7)

ಭಾರತ ತಂಡವು 6 ಪಂದ್ಯಗಳಿಂದ 3 ಗೆಲುವಿನೊಂದಿಗೆ 38 ಅಂಕ ಹೊಂದಿದೆ. ಟೀಮ್ ಇಂಡಿಯಾ 2 ಟೆಸ್ಟ್‌ನಲ್ಲಿ ಸೋಲನುಭವಿಸಿದ್ದು, 1 ಟೆಸ್ಟ್ ಡ್ರಾ ಮಾಡಿಕೊಂಡಿದೆ. ಸ್ಲೋ ಓವರ್ ರೇಟ್‌ಗಾಗಿ ಭಾರತದ 2 ಅಂಕಗಳನ್ನು ಕಡಿತಗೊಳಿಸಲಾಗಿದೆ. ಸದ್ಯಕ್ಕೆ ಟೀಮ್ ಇಂಡಿಯಾ 52.77 ಅಂಕಗಳೊಂದಿಗೆ ಲೀಗ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದ ನಂತರ ಭಾರತವು ಲೀಗ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿತ್ತು. ಆದರೆ, ನ್ಯೂಜಿಲ್ಯಾಂಡ್ ಗೆಲುವಿನಿಂದಾಗಿ ರೋಹಿತ್ ಶರ್ಮಾ ಬಳಗ ಪಾಯಿಂಟ್ ಪಟ್ಟಿಯಲ್ಲಿ ಹಿಂದೆ ಬಿದ್ದಿದೆ. 
(3 / 7)

ಬಾಂಗ್ಲಾದೇಶ ತಂಡವು ಎರಡು ಪಂದ್ಯಗಳಲ್ಲಿ 1 ಗೆಲುವು ಮತ್ತು 1 ಸೋಲಿನೊಂದಿಗೆ 50 ಶೇಕಡಾ ಅಂಕ ಹೊಂದಿದೆ. ತಂಡವು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಪಾಕಿಸ್ತಾನ 5 ಪಂದ್ಯಗಳಲ್ಲಿ 2 ಗೆದ್ದು 3 ಪಂದ್ಯಗಳಲ್ಲಿ ಸೋತಿದೆ. ನಿಧಾನಗತಿಯ ಓವರ್ ರೇಟ್‌ಗಾಗಿ ಪಾಕಿಸ್ತಾನ 2 ಅಂಕಗಳನ್ನು ಕಡಿತಗೊಳಿಸಲಾಗಿದೆ. 36.66 ಶೇಕಡಾ ಅಂಕಗಳೊಂದಿಗೆ ಸದ್ಯ ಪಾಕಿಸ್ತಾನ ಪಾಯಿಂಟ್‌ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. 
(4 / 7)

ವೆಸ್ಟ್ ಇಂಡೀಸ್ 4 ಪಂದ್ಯಗಳಲ್ಲಿ 1ರಲ್ಲಿ ಗೆದ್ದು, 2 ಪಂದ್ಯಗಳಲ್ಲಿ ಸೋತಿದೆ. 1 ಟೆಸ್ಟ್ ಡ್ರಾ ಆಗಿದೆ. ಕೆರಿಬಿಯನ್ನರು 33.33 ಶೇಕಡಾ ಅಂಕಗಳೊಂದಿಗೆ 16 ಅಂಕಗಳನ್ನು ಸಂಗ್ರಹಿಸಿದ್ದಾರೆ. ಅಂಕಪಟ್ಟಿಯಲ್ಲಿ ತಂಡ ಆರನೇ ಸ್ಥಾನದಲ್ಲಿದೆ. 
(5 / 7)

ಕಿವೀಸ್ ವಿರುದ್ಧದ ಸರಣಿಯ ಮೊದಲ ಟೆಸ್ಟ್‌ನಲ್ಲಿ ಸೋತ ದಕ್ಷಿಣ ಆಫ್ರಿಕಾ 12 ಅಂಕಗಳೊಂದಿಗೆ 33.33 ಶೇಕಡಾ ಪಾಯಿಂಟ್‌ ಕಲೆ ಹಾಕಿದೆ. ಆಡಿದ 3 ಪಂದ್ಯಗಳಲ್ಲಿ ತಂಡವು 1ರಲ್ಲಿ ಗೆದ್ದು, 2 ಟೆಸ್ಟ್‌ಗಳಲ್ಲಿ ಸೋತಿದೆ. ಪ್ರಸ್ತುತ, ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. 
(6 / 7)

ಇಂಗ್ಲೆಂಡ್ 7 ಪಂದ್ಯಗಳಲ್ಲಿ 3 ಗೆದ್ದು 3 ಪಂದ್ಯಗಳಲ್ಲಿ ಸೋತಿದೆ. ಆಂಗ್ಲರ ಬಳಗ 25.00 ಶೇಕಡಾ ಅಂಕ ಹೊಂದಿದೆ. ನಿಧಾನಗತಿಯ ಓವರ್ ರೇಟ್‌ಗಾಗಿ ಇಂಗ್ಲೆಂಡ್ ತಂಡದ 19 ಅಂಕಗಳನ್ನು ಕಡಿತಗೊಳಿಸಲಾಗಿದೆ. ಸದ್ಯ ಇಂಗ್ಲೆಂಡ್ ಲೀಗ್ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಶ್ರೀಲಂಕಾ 2 ಪಂದ್ಯಗಳನ್ನು ಆಡಿದ ನಂತರ ಇನ್ನೂ ಯಾವುದೇ ಅಂಕಗಳನ್ನು ಸಂಗ್ರಹಿಸಿಲ್ಲ ಹೀಗಾಗಿ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
(7 / 7)
ಇಂಗ್ಲೆಂಡ್ 7 ಪಂದ್ಯಗಳಲ್ಲಿ 3 ಗೆದ್ದು 3 ಪಂದ್ಯಗಳಲ್ಲಿ ಸೋತಿದೆ. ಆಂಗ್ಲರ ಬಳಗ 25.00 ಶೇಕಡಾ ಅಂಕ ಹೊಂದಿದೆ. ನಿಧಾನಗತಿಯ ಓವರ್ ರೇಟ್‌ಗಾಗಿ ಇಂಗ್ಲೆಂಡ್ ತಂಡದ 19 ಅಂಕಗಳನ್ನು ಕಡಿತಗೊಳಿಸಲಾಗಿದೆ. ಸದ್ಯ ಇಂಗ್ಲೆಂಡ್ ಲೀಗ್ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಶ್ರೀಲಂಕಾ 2 ಪಂದ್ಯಗಳನ್ನು ಆಡಿದ ನಂತರ ಇನ್ನೂ ಯಾವುದೇ ಅಂಕಗಳನ್ನು ಸಂಗ್ರಹಿಸಿಲ್ಲ ಹೀಗಾಗಿ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.(PTI)

    ಹಂಚಿಕೊಳ್ಳಲು ಲೇಖನಗಳು