logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Gujarat Bjp: ನೂತನ ಗುಜರಾತ್‌ ಬಿಜೆಪಿ ಶಾಸಕರಿಗೆ ಪಕ್ಷದ ಕಚೇರಿಯಲ್ಲಿ ಹೀಗಿತ್ತು ಸ್ವಾಗತ: ಹಾರ್ದಿಕ್‌ ಪಟೇಲ್‌ಗೆ ಸಿಗುತ್ತಾ ಸಚಿವ ಸ್ಥಾನ?

Gujarat BJP: ನೂತನ ಗುಜರಾತ್‌ ಬಿಜೆಪಿ ಶಾಸಕರಿಗೆ ಪಕ್ಷದ ಕಚೇರಿಯಲ್ಲಿ ಹೀಗಿತ್ತು ಸ್ವಾಗತ: ಹಾರ್ದಿಕ್‌ ಪಟೇಲ್‌ಗೆ ಸಿಗುತ್ತಾ ಸಚಿವ ಸ್ಥಾನ?

Dec 10, 2022 12:48 PM IST

ಗಾಂಧಿನಗರ: ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಜಯಶಾಲಿಯಾಗಿರುವ 156 ನೂತನ ಬಿಜೆಪಿ ಶಾಸಕರಿಗೆ, ಗಾಂಧಿನಗರದ ಪಕ್ಷದ ಕಚೇರಿಯಲ್ಲಿ ಭರ್ಜರಿ ಸ್ವಾಗತ ದೊರೆತಿದೆ. ಶಾಸಕರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಪಕ್ಷದ ಕಚೇರಿ ಪ್ರವೇಶಿಸಿದ ನೂತನ ಬಿಜೆಪಿ ಶಾಸಕರು, ಉನ್ನತ ನಾಯಕರೊಂದಿಗೆ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಕುರಿತು ಇಲ್ಲಿದೆ ವಿವರ..

  • ಗಾಂಧಿನಗರ: ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಜಯಶಾಲಿಯಾಗಿರುವ 156 ನೂತನ ಬಿಜೆಪಿ ಶಾಸಕರಿಗೆ, ಗಾಂಧಿನಗರದ ಪಕ್ಷದ ಕಚೇರಿಯಲ್ಲಿ ಭರ್ಜರಿ ಸ್ವಾಗತ ದೊರೆತಿದೆ. ಶಾಸಕರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಪಕ್ಷದ ಕಚೇರಿ ಪ್ರವೇಶಿಸಿದ ನೂತನ ಬಿಜೆಪಿ ಶಾಸಕರು, ಉನ್ನತ ನಾಯಕರೊಂದಿಗೆ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಕುರಿತು ಇಲ್ಲಿದೆ ವಿವರ..
ಗುಜರಾತ್‌ ರಾಜಧಾನಿ ಗಾಂಧಿನಗರದಲ್ಲಿರುವ ಬಿಜೆಪಿ ರಾಜ್ಯ ಪ್ರಧಾನ ಕಚೇರಿಗೆ ಆಗಮಿಸಿದ ಪಕ್ಷದ ನೂತನ ಶಾಸಕರಿಗೆ, ಪಕ್ಷದ ಮಹಿಳಾ ಕಾರ್ಯಕರ್ತರು ಸಾಂಪ್ರದಾಯಿಕ ಸ್ವಾಗತ ಕೋರಿದರು. ಈ ವೇಳೆ ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿ ಕೂಡ ಉಪಸ್ಥಿತರಿದ್ದರು.
(1 / 5)
ಗುಜರಾತ್‌ ರಾಜಧಾನಿ ಗಾಂಧಿನಗರದಲ್ಲಿರುವ ಬಿಜೆಪಿ ರಾಜ್ಯ ಪ್ರಧಾನ ಕಚೇರಿಗೆ ಆಗಮಿಸಿದ ಪಕ್ಷದ ನೂತನ ಶಾಸಕರಿಗೆ, ಪಕ್ಷದ ಮಹಿಳಾ ಕಾರ್ಯಕರ್ತರು ಸಾಂಪ್ರದಾಯಿಕ ಸ್ವಾಗತ ಕೋರಿದರು. ಈ ವೇಳೆ ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿ ಕೂಡ ಉಪಸ್ಥಿತರಿದ್ದರು.(ANI)
ಈ ವೇಳೆ ಮಾತನಾಡಿದ ಗಾಂಧಿನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅಲ್ಪೇಶ್‌ ಠಾಕೂರ್‌, ಗುಜರಾತ್‌ನಲ್ಲಿ ಬಿಜೆಪಿ ಭೂತಪೂರ್ವ ಗೆಲುವಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ನೇತೃತ್ವ ಕಾರಣ ಎಂದು ಹೇಳಿದರು.
(2 / 5)
ಈ ವೇಳೆ ಮಾತನಾಡಿದ ಗಾಂಧಿನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅಲ್ಪೇಶ್‌ ಠಾಕೂರ್‌, ಗುಜರಾತ್‌ನಲ್ಲಿ ಬಿಜೆಪಿ ಭೂತಪೂರ್ವ ಗೆಲುವಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ನೇತೃತ್ವ ಕಾರಣ ಎಂದು ಹೇಳಿದರು.(ANI)
ನನಗೆ ಅದ್ಧೂರಿ ಗೆಲುವು ನೀಡಿದ ಜನತೆಗೆ ಕೃತಜ್ಞತೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಅಭಿವೃದ್ಧಿಯ ರಾಜಕಾರಣಕ್ಕಾಗಿ ಜನರು ನರೇಂದ್ರ ಮೋದಿ ಅವರನ್ನು ನಂಬುತ್ತಾರೆ ಎಂದು ಅಲ್ಪೇಶ್‌ ಠಾಕೂರ್‌ ಹೇಳಿದರು.
(3 / 5)
ನನಗೆ ಅದ್ಧೂರಿ ಗೆಲುವು ನೀಡಿದ ಜನತೆಗೆ ಕೃತಜ್ಞತೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಅಭಿವೃದ್ಧಿಯ ರಾಜಕಾರಣಕ್ಕಾಗಿ ಜನರು ನರೇಂದ್ರ ಮೋದಿ ಅವರನ್ನು ನಂಬುತ್ತಾರೆ ಎಂದು ಅಲ್ಪೇಶ್‌ ಠಾಕೂರ್‌ ಹೇಳಿದರು.(ANI)
ಇನ್ನು ಗುಜರಾತ್ ಬಿಜೆಪಿ ಗೆಲುವಿನ ಕುರಿತು ಮಾತನಾಡಿರುವ ನೂತನ ಶಾಸಕ ಹಾರ್ದಿಕ್‌ ಪಟೇಲ್‌,  5-10 ವರ್ಷಗಳಲ್ಲಿ ಗುಜರಾತ್‌ ಹೇಗೆ ಅಭಿವೃದ್ಧಿ ಕಾಣಲಿದೆ ಎಂಬುದು ಅತ್ಯಂತ ಮುಖ್ಯ ಎಂದು ನುಡಿದರು.   
(4 / 5)
ಇನ್ನು ಗುಜರಾತ್ ಬಿಜೆಪಿ ಗೆಲುವಿನ ಕುರಿತು ಮಾತನಾಡಿರುವ ನೂತನ ಶಾಸಕ ಹಾರ್ದಿಕ್‌ ಪಟೇಲ್‌,  5-10 ವರ್ಷಗಳಲ್ಲಿ ಗುಜರಾತ್‌ ಹೇಗೆ ಅಭಿವೃದ್ಧಿ ಕಾಣಲಿದೆ ಎಂಬುದು ಅತ್ಯಂತ ಮುಖ್ಯ ಎಂದು ನುಡಿದರು.   (‌ANI)
ಇನ್ನು ತಮಗೆ ಸಚಿವ ಸ್ಥಾನ ದೊರೆಯಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಹಾರ್ದಿಕ್‌ ಪಟೇಲ್‌, ನಾನು ಪಕ್ಷದ ಶಿಸ್ತಿನಿ ಸಿಪಾಯಿಯಾಗಿದ್ದು, ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧ ಎಂದು ಸ್ಪಷ್ಟಪಡಿಸಿದರು.
(5 / 5)
ಇನ್ನು ತಮಗೆ ಸಚಿವ ಸ್ಥಾನ ದೊರೆಯಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಹಾರ್ದಿಕ್‌ ಪಟೇಲ್‌, ನಾನು ಪಕ್ಷದ ಶಿಸ್ತಿನಿ ಸಿಪಾಯಿಯಾಗಿದ್ದು, ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧ ಎಂದು ಸ್ಪಷ್ಟಪಡಿಸಿದರು.(ANI)

    ಹಂಚಿಕೊಳ್ಳಲು ಲೇಖನಗಳು