logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  India-china Border Clash: ತವಾಂಗ್‌ ಘರ್ಷಣೆ: ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳದ್ದು 'ಒಂದೇ ಧ್ವನಿ'!

India-China Border Clash: ತವಾಂಗ್‌ ಘರ್ಷಣೆ: ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳದ್ದು 'ಒಂದೇ ಧ್ವನಿ'!

Dec 13, 2022 04:27 PM IST

ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್‌ ಬಳಿಯ ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ) ಬಳಿ ನಡೆದ, ಭಾರತ-ಚೀನಾ ಯೋಧರ ನಡುವಿನ ಘರ್ಷಣೆ ಸಂಸತ್ತಿನಲ್ಲಿ ಪ್ರತಿಧ್ವನಿಸಿದೆ. ಈ ಕುರಿತು ವಿಪಕ್ಷಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ವಿಪಕ್ಷ ನಾಯಕರ ಹೇಳಿಕೆಗಳ ಬಗೆಗಿನ ಮಾಹಿತಿ ಇಲ್ಲಿದೆ..

  • ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್‌ ಬಳಿಯ ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ) ಬಳಿ ನಡೆದ, ಭಾರತ-ಚೀನಾ ಯೋಧರ ನಡುವಿನ ಘರ್ಷಣೆ ಸಂಸತ್ತಿನಲ್ಲಿ ಪ್ರತಿಧ್ವನಿಸಿದೆ. ಈ ಕುರಿತು ವಿಪಕ್ಷಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ವಿಪಕ್ಷ ನಾಯಕರ ಹೇಳಿಕೆಗಳ ಬಗೆಗಿನ ಮಾಹಿತಿ ಇಲ್ಲಿದೆ..
ಅರುಣಾಚಲ ಪ್ರದೇಶದ ತವಾಂಗ್‌ ಬಳಿಯ ಎಲ್‌ಎಸಿ ಬಳಿ ನಡೆದ ಭಾರತ-ಚೀನಾ ಯೋಧರ ನಡುವಿನ ಘರ್ಷಣೆ ಬಗ್ಗೆ, ವಿಪಕ್ಷಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಈ ಕುರಿತು ವಿಪಕ್ಷ ನಾಯಕರು ನೀಡಿರುವ ಹೇಳಿಕೆ ದೇಶದ ಗಮನ ಸೆಳೆದಿದೆ.
(1 / 5)
ಅರುಣಾಚಲ ಪ್ರದೇಶದ ತವಾಂಗ್‌ ಬಳಿಯ ಎಲ್‌ಎಸಿ ಬಳಿ ನಡೆದ ಭಾರತ-ಚೀನಾ ಯೋಧರ ನಡುವಿನ ಘರ್ಷಣೆ ಬಗ್ಗೆ, ವಿಪಕ್ಷಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಈ ಕುರಿತು ವಿಪಕ್ಷ ನಾಯಕರು ನೀಡಿರುವ ಹೇಳಿಕೆ ದೇಶದ ಗಮನ ಸೆಳೆದಿದೆ.(AP)
ತವಾಂಗ್‌ ಘರ್ಷಣೆ ಬಗ್ಗೆ ಮಾತನಾಡಿರುವ ಭಾರತ ಕಮ್ಯೂನಿಸ್ಟ್‌ ಪಕ್ಷ(ಸಿಪಿಐ)ದ ನಾಯಕ ಬಿನೋಯ್‌ ವಿಶ್ವಂ, ಗಡಿ ವಿವಾದಗಳನ್ನು ಶಾಂತಿಯುತ ರಾಜತಾಂತ್ರಿಕ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳಬೇಕು ಎಂಬುದು ಸಿಪಿಐ ನಿಲುವಾಗಿದೆ ಎಂದು ಹೇಳಿದ್ದಾರೆ.ಮಿಲಿಟರಿ ಕಾರ್ಯಾಚರಣೆಗಳು ಸಮಸ್ಯೆಗೆ ಪರಿಹಾರ ಒದಗಿಸುವುದಿಲ್ಲ. ಭಾರತ-ಚೀನಾ ಸಾಂಪ್ರದಾಯಿಕವಾಗಿ ಉತ್ತಮ ಸ್ನೇಹಪರ ರಾಷ್ಟ್ರಗಳಾಗಿದ್ದು, ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು. ಆದರೆ ಭಾರತೀಯರಿಗೆ ತಮ್ಮ ಒಂದಿಂಚು ಭೂಮಿಯೂ ಅತ್ಯಮೂಲ್ಯ ಎಂಬುದನ್ನು ಚೀನಾ ಅರಿಯಬೇಕು ಎಂದು ಬಿನೋಯ್‌ ವಿಶ್ವಂ ಹೇಳಿದ್ದಾರೆ. 
(2 / 5)
ತವಾಂಗ್‌ ಘರ್ಷಣೆ ಬಗ್ಗೆ ಮಾತನಾಡಿರುವ ಭಾರತ ಕಮ್ಯೂನಿಸ್ಟ್‌ ಪಕ್ಷ(ಸಿಪಿಐ)ದ ನಾಯಕ ಬಿನೋಯ್‌ ವಿಶ್ವಂ, ಗಡಿ ವಿವಾದಗಳನ್ನು ಶಾಂತಿಯುತ ರಾಜತಾಂತ್ರಿಕ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳಬೇಕು ಎಂಬುದು ಸಿಪಿಐ ನಿಲುವಾಗಿದೆ ಎಂದು ಹೇಳಿದ್ದಾರೆ.ಮಿಲಿಟರಿ ಕಾರ್ಯಾಚರಣೆಗಳು ಸಮಸ್ಯೆಗೆ ಪರಿಹಾರ ಒದಗಿಸುವುದಿಲ್ಲ. ಭಾರತ-ಚೀನಾ ಸಾಂಪ್ರದಾಯಿಕವಾಗಿ ಉತ್ತಮ ಸ್ನೇಹಪರ ರಾಷ್ಟ್ರಗಳಾಗಿದ್ದು, ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು. ಆದರೆ ಭಾರತೀಯರಿಗೆ ತಮ್ಮ ಒಂದಿಂಚು ಭೂಮಿಯೂ ಅತ್ಯಮೂಲ್ಯ ಎಂಬುದನ್ನು ಚೀನಾ ಅರಿಯಬೇಕು ಎಂದು ಬಿನೋಯ್‌ ವಿಶ್ವಂ ಹೇಳಿದ್ದಾರೆ. (ANI)
ಚೀನಾ ತವಾಂಗ್‌ನ ಮೇಲೆ ಕಣ್ಣಿಟ್ಟಿದೆ ಎಂಬುದರಲ್ಲಿ ಸಂದೇಹವಿಲ್ಲ. ನಾವು ಅಲ್ಲಿ ಬಹಳ ಜಾಗರೂಕರಾಗಿರಬೇಕು. ಸರ್ಕಾರ ಮತ್ತು ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ದೇಶದ ಜನತೆ ಭಾರತೀಯ ಸೇನೆಗೆ ಬೆಂಬಲವಾಗಿ ನಿಂತಿದ್ದಾರೆ. ಸರ್ಕಾರ ಈ ದಿಸೆಯಲ್ಲಿ ಕೈಗೊಳ್ಳುವ ನಿರ್ಧಾರವನ್ನು ನಾವು ಬೆಂಬಲಿಸುತ್ತೇವೆ ಎಂದು ರಾಜನಾಥ್‌ ಸಿಂಗ್‌ ಅವರಿಗೆ ಹೇಳಿದ್ದಾಗಿ, ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಸ್ಪಷ್ಟಪಡಿಸಿದ್ದಾರೆ.
(3 / 5)
ಚೀನಾ ತವಾಂಗ್‌ನ ಮೇಲೆ ಕಣ್ಣಿಟ್ಟಿದೆ ಎಂಬುದರಲ್ಲಿ ಸಂದೇಹವಿಲ್ಲ. ನಾವು ಅಲ್ಲಿ ಬಹಳ ಜಾಗರೂಕರಾಗಿರಬೇಕು. ಸರ್ಕಾರ ಮತ್ತು ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ದೇಶದ ಜನತೆ ಭಾರತೀಯ ಸೇನೆಗೆ ಬೆಂಬಲವಾಗಿ ನಿಂತಿದ್ದಾರೆ. ಸರ್ಕಾರ ಈ ದಿಸೆಯಲ್ಲಿ ಕೈಗೊಳ್ಳುವ ನಿರ್ಧಾರವನ್ನು ನಾವು ಬೆಂಬಲಿಸುತ್ತೇವೆ ಎಂದು ರಾಜನಾಥ್‌ ಸಿಂಗ್‌ ಅವರಿಗೆ ಹೇಳಿದ್ದಾಗಿ, ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಸ್ಪಷ್ಟಪಡಿಸಿದ್ದಾರೆ.(ANI)
ಇದೇ ವಿಚಾರವಾಗಿ ಮಾತನಾಡಿರುವ ನ್ಯಾಶನಲ್‌ ಕಾನ್ಫರೆನ್ಸ್‌ ನಾಯಕ ಓಮರ್‌ ಅಬ್ದುಲ್ಲಾ, ನಮ್ಮ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ಸಾಧ್ಯವಾಗದಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ. ಪಾಕಿಸ್ತಾನದೊಂದಿಗಿನ ನಮ್ಮ ಸಂಬಂಧಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಚೀನಾದೊಂದಿಗೆ ನಾವು ಉತ್ತಮ ಸಂಬಂಧವನ್ನು ಸ್ಥಾಪಿಸಲು ಸಾಧ್ಯವಾಗುತ್ತಿಲ್ಲ ಎಂದು ಓಮರ್‌ ಅಬ್ದುಲ್ಲಾ ಹೇಳಿದ್ದಾರೆ.
(4 / 5)
ಇದೇ ವಿಚಾರವಾಗಿ ಮಾತನಾಡಿರುವ ನ್ಯಾಶನಲ್‌ ಕಾನ್ಫರೆನ್ಸ್‌ ನಾಯಕ ಓಮರ್‌ ಅಬ್ದುಲ್ಲಾ, ನಮ್ಮ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ಸಾಧ್ಯವಾಗದಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ. ಪಾಕಿಸ್ತಾನದೊಂದಿಗಿನ ನಮ್ಮ ಸಂಬಂಧಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಚೀನಾದೊಂದಿಗೆ ನಾವು ಉತ್ತಮ ಸಂಬಂಧವನ್ನು ಸ್ಥಾಪಿಸಲು ಸಾಧ್ಯವಾಗುತ್ತಿಲ್ಲ ಎಂದು ಓಮರ್‌ ಅಬ್ದುಲ್ಲಾ ಹೇಳಿದ್ದಾರೆ.(ANI)
ಒಟ್ಟಿನಲ್ಲಿ ತವಾಂಗ್‌ ಘರ್ಷಣೆಗೆ ಸಂಬಂಧಿಸಿದಂತೆ, ಮೋದಿ ಸರ್ಕಾರವನ್ನು ಇಕ್ಕಿಟ್ಟಿಗೆ ಸಿಲುಕಿಸಲು ವಿಪಕ್ಷಗಳು ಸಿದ್ಧವಾಗಿವೆ. ತವಾಂಗ್‌ ಘರ್ಷಣೆ ಇನ್ನೂ ಕೆಲವು ದಿನಗಳ ಕಾಲ ಸಂಸತ್ತಿನಲ್ಲಿ ಪ್ರತಿಧ್ವನಿಸಲಿದೆ ಎಂಬುದು ಸ್ಪಷ್ಟ. (ಸಂಗ್ರಹ ಚಿತ್ರ)
(5 / 5)
ಒಟ್ಟಿನಲ್ಲಿ ತವಾಂಗ್‌ ಘರ್ಷಣೆಗೆ ಸಂಬಂಧಿಸಿದಂತೆ, ಮೋದಿ ಸರ್ಕಾರವನ್ನು ಇಕ್ಕಿಟ್ಟಿಗೆ ಸಿಲುಕಿಸಲು ವಿಪಕ್ಷಗಳು ಸಿದ್ಧವಾಗಿವೆ. ತವಾಂಗ್‌ ಘರ್ಷಣೆ ಇನ್ನೂ ಕೆಲವು ದಿನಗಳ ಕಾಲ ಸಂಸತ್ತಿನಲ್ಲಿ ಪ್ರತಿಧ್ವನಿಸಲಿದೆ ಎಂಬುದು ಸ್ಪಷ್ಟ. (ಸಂಗ್ರಹ ಚಿತ್ರ)(PTI)

    ಹಂಚಿಕೊಳ್ಳಲು ಲೇಖನಗಳು