logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ott Release: ಅನಿಮಲ್‌ನಿಂದ ಸ್ಯಾಮ್‌ ಬಹದ್ಧೂರ್‌ವರೆಗೆ; ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನ ಈ ವಾರ ಮನೆಯಲ್ಲೇ ನೋಡಿ

OTT Release: ಅನಿಮಲ್‌ನಿಂದ ಸ್ಯಾಮ್‌ ಬಹದ್ಧೂರ್‌ವರೆಗೆ; ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನ ಈ ವಾರ ಮನೆಯಲ್ಲೇ ನೋಡಿ

Jan 25, 2024 08:13 AM IST

OTT Release This Week: ಈ ವಾರ ರಣಬೀರ್‌ ಕಪೂರ್‌ ನಟನೆಯ ಅನಿಮಲ್‌, ವಿಕ್ಕಿ ಕೌಶಲ್‌ ನಟನೆಯ ಸ್ಯಾಮ್‌ ಬಹದ್ದೂರ್‌, ಕರ್ಮಾ ಕಾಲಿಂಗ್‌ ಸೇರಿದಂತೆ ಹಲವು ಸಿನೆಮಾಗಳು, ವೆಬ್‌ ಸರಣಿಗಳು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗಲಿವೆ.

ಒಟಿಟಿಯಲ್ಲಿ ಸಿನೆಮಾ, ವೆಬ್‌ ಸರಣಿ ನೋಡುವವರಿಗೆ ಈ ವಾರ ಹಬ್ಬವೆಂದೇ ಹೇಳಬಹುದು. ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿರುವ ಹಲವು ಸಿನೆಮಾಗಳು ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ. ರಣಬೀರ್‌ ಕಪೂರ್‌ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಅನಿಮಲ್‌, ವಿಕ್ಕಿ ಕೌಶಲ್‌ ನಟನೆಯ ಸ್ಯಾಂ ಬಹದ್ದೂರ್‌ ಮುಂತಾದ ಚಿತ್ರಗಳು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ. 
(1 / 6)

ಅನಿಮಲ್‌ ಒಟಿಟಿ ಬಿಡುಗಡೆ:  ಬಾಲಿವುಡ್ ನಟ ರಣಬೀರ್ ಕಪೂರ್ ಅವರ ಬ್ಲಾಕ್‌ಬಸ್ಟರ್ ಚಲನಚಿತ್ರ 'ಅನಿಮಲ್' ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿಲ್ಲದೆ ಇದ್ದರೆ, ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು. ಅನಿಮಲ್‌ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಜನವರಿ 26ರಂದು ಬಿಡುಗಡೆಯಾಗಲಿದೆ.
(2 / 6)

ಕರ್ಮಾ ಕಾಲಿಂಗ್‌: ರವೀನಾ ಟಂಡನ್ ಅವರ ವೆಬ್ ಸರಣಿ 'ಕರ್ಮ ಕಾಲಿಂಗ್' ಈ ಶುಕ್ರವಾರ ಬಿಡುಗಡೆಯಾಗುತ್ತಿದೆ.. ಈ ವೆಬ್ ಸರಣಿಯು ಜನವರಿ 26 ರಂದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ.
(3 / 6)

ಸ್ಯಾಮ್‌ ಬಹುದ್ಧೂರ್‌: ಜನವರಿ 26ರಂದು ಝೀ5ನಲ್ಲಿ ಸ್ಯಾಮ್‌ ಬಹುದ್ಧೂರ್‌ ಬಿಡುಗಡೆಯಾಗಲಿದೆ. ಗಣರಾಜ್ಯೋತ್ಸವದ ಸಮಯದಲ್ಲಿ ಈ ದೇಶಭಕ್ತಿಯ ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದು. ವಿಕ್ಕಿ ಕೌಶಲ್‌ ನಟನೆಯ ಸ್ಯಾಮ್‌ ಬಹದ್ಧೂರ್‌ ಸಿನಿಮಾವು ಚಿತ್ರಪ್ರೇಮಿಗಳಿಂದ ಉತ್ತಮ ವಿಮರ್ಶೆ ಪಡೆದುಕೊಂಡಿದೆ.
(4 / 6)

ಏಜೆಂಟ್‌: ಏಜೆಂಟ್‌ ಎಂಬ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.  'ಏಜೆಂಟ್' ಜನವರಿ 26 ರಂದು ಸೋನಿ ಲೈವ್‌ನಲ್ಲಿ ಬಿಡುಗಡೆಯಾಗಲಿದೆ. ಅಖಿಲ್ ಅಕ್ಕಿನೇನಿ, ಮಮ್ಮುಟ್ಟಿ, ಡಿನೋ ಮೋರಿಯಾ ಮತ್ತು ಸಾಕ್ಷಿ ವೈದ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
(5 / 6)

ಒಟಿಟಿ ಬೇಡ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡ್ತಿವಿ ಎನ್ನುವವರಿಗೆ ಈ ವಾರ ಹಲವು ಸಿನಿಮಾಗಳಿವೆ. ಕನ್ನಡದಲ್ಲಿ ಬ್ಯಾಚುಲರ್‌ ಪಾರ್ಟಿ, ಉಪಾಧ್ಯಕ್ಷ, ಕೇಸ್‌ ಆಫ್‌ ಕೊಂಡಾಣದಂತಹ ಹಲವು ಸಿನೆಮಾಗಳು ಬಿಡುಗಡೆಯಾಗಲಿದೆ. ಹಿಂದಿಯಲ್ಲಿ ಫೈಟರ್‌ ಬಿಡುಗಡೆಯಾಗಲಿದೆ. 
(6 / 6)

    ಹಂಚಿಕೊಳ್ಳಲು ಲೇಖನಗಳು