logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕತ್ತರಿಸಿ ಹೋಗಿದೆ ಪ್ಯಾಟ್ ಕಮಿನ್ಸ್​ ಮಧ್ಯದ ಬೆರಳು; ಈ ಭಯಾನಕ ಕಥೆ ಕೇಳಿ ದಂಗಾದ ಸೂರ್ಯ-ಹಾರ್ದಿಕ್

ಕತ್ತರಿಸಿ ಹೋಗಿದೆ ಪ್ಯಾಟ್ ಕಮಿನ್ಸ್​ ಮಧ್ಯದ ಬೆರಳು; ಈ ಭಯಾನಕ ಕಥೆ ಕೇಳಿ ದಂಗಾದ ಸೂರ್ಯ-ಹಾರ್ದಿಕ್

May 08, 2024 08:00 AM IST

Pat Cummins : ಚಿಕ್ಕಂದನಲ್ಲೇ ವೇಗಿ ಪ್ಯಾಟ್ ಕಮಿನ್ಸ್ ಅವರ ಮಧ್ಯದ ಬೆರಳು ಕತ್ತರಿಸಿದ್ದರೂ ಭಯಾನಕ ಬೌಲಿಂಗ್​ ಮೂಲಕ ಗಮನ ಸೆಳೆದಿದ್ದಾರೆ. ಬೆರಳು ತುಂಡರಿಸಿರುವುದನ್ನು ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್​ಗೆ ತೋರಿಸುತ್ತಿರುವ ಫೋಟೋಗಳು ವೈರಲ್ ಆಗುತ್ತಿವೆ.

  • Pat Cummins : ಚಿಕ್ಕಂದನಲ್ಲೇ ವೇಗಿ ಪ್ಯಾಟ್ ಕಮಿನ್ಸ್ ಅವರ ಮಧ್ಯದ ಬೆರಳು ಕತ್ತರಿಸಿದ್ದರೂ ಭಯಾನಕ ಬೌಲಿಂಗ್​ ಮೂಲಕ ಗಮನ ಸೆಳೆದಿದ್ದಾರೆ. ಬೆರಳು ತುಂಡರಿಸಿರುವುದನ್ನು ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್​ಗೆ ತೋರಿಸುತ್ತಿರುವ ಫೋಟೋಗಳು ವೈರಲ್ ಆಗುತ್ತಿವೆ.
ನಿಮಗಿದು ಗೊತ್ತಾ? ಆಸ್ಟ್ರೇಲಿಯಾ ತಂಡದ ಹಾಗೂ ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್ ಅವರಿಗೆ ಮಧ್ಯದ ಬೆರಳು (ಮಿಡಲ್ ಫಿಂಗರ್) ತುಂಡರಿಸಿದೆ. ಸೋಮವಾರ (ಮೇ 6) ಎಸ್​ಆರ್​​ಹೆಚ್​ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಈ ಸ್ಟೋರಿ ಕೇಳಿ ಶಾಕ್​ ಆಗಿದ್ದಾರೆ.
(1 / 6)

ಪಂದ್ಯದ ನಂತರ ಚಾಟ್ ನಡೆಸುತ್ತಿರುವ ವೇಳೆ ಪ್ಯಾಟ್ ಕಮಿನ್ಸ್, ಮಧ್ಯದ ಬೆರಳು ಕತ್ತರಿಸಿರುವ ಕಥೆಯನ್ನು ಕೇಳಿ ನಿಜಕ್ಕೂ ದಂಗಾಗಿ ಹೋಗಿದ್ದಾರೆ. ಮಿಡಲ್ ಫಿಂಗರ್ ಕಾಲು ಭಾಗ ಕತ್ತರಿಸಿರುವುದನ್ನು ಫೋಟೋದಲ್ಲಿ ಕಾಣಬಹುದು. ಆದರೂ ಖತರ್ನಾಕ್ ಬೌಲಿಂಗ್ ಮೂಲಕ ಗಮನ ಸೆಳೆದಿದ್ದಾರೆ ಆಸೀಸ್ ನಾಯಕ.
(2 / 6)

ಮೊದಲು ಪ್ಯಾಟ್ ಕಮಿನ್ಸ್ ಅವರ ಕತ್ತರಿಸಿದ ಬೆರಳು ನೋಡಿ ಹಾರ್ದಿಕ್ ಮತ್ತು ಸೂರ್ಯ, ಆಘಾತಕ್ಕೆ ಒಳಗಾದರು. ಅವರ ಬಲ ಮಧ್ಯದ ಬೆರಳಿನ ಮೇಲ್ಭಾಗ ತುಂಡರಿಸಿತ್ತು. ಬಳಿಕ ಏನಾಗಿತ್ತು ಎಂಬುದರ ಕುರಿತು ಕಮಿನ್ಸ್ ಬಳಿ ಕೇಳಿದ್ದಾರೆ. ಬಾಲ್ಯದಲ್ಲಿ ಈ ಘಟನೆ ಸಂಭವಿಸಿತು ಎಂದು ವಿವರಿಸಿದ್ದಾರೆ.
(3 / 6)

ಮೂರು ಅಥವಾ ನಾಲ್ಕು ವರ್ಷ ವಯಸ್ಸಾಗಿದ್ದಾಗ ಸಹೋದರಿ ಜೊತೆ ಆಟವಾಡುವ ಸಮಯದಲ್ಲಿ ಆಕೆ ಬಾಗಿಲು ಮುಚ್ಚುವಾಗ ಕಮಿನ್ಸ್ ಬೆರಳುಗಳು ಸಿಲುಕಿಕೊಂಡಿದ್ದವು. ಕೂಡಲೇ ವೈದ್ಯರ ಬಳಿಗೆ ಕರೆದೊಯ್ದ ನಂತರ, ಬಲಗೈಯ ಮಧ್ಯದ ಬೆರಳಿನ ಮೇಲ್ಭಾಗವು ಮುರಿದಿತ್ತು. ಯಾವುದೇ ರೀತಿಯಲ್ಲಿ ಅದನ್ನು ಹಿಂದಿನ ಸ್ಥಿತಿಗೆ ತರಲು ಸಾಧ್ಯವಾಗದ ಕಾರಣ ಕತ್ತರಿಸಲಾಗಿತ್ತು.
(4 / 6)

ಆದಾಗ್ಯೂ, ಬೆರಳು ಸ್ವಲ್ಪ ಚಿಕ್ಕದಾಗಿದ್ದರೂ ಕಮಿನ್ಸ್​ಗೆ ಬೌಲಿಂಗ್ ಮಾಡಲು ಯಾವುದೇ ಸಮಸ್ಯೆ ಕಂಡು ಬರಲಿಲ್ಲ. ಅವರ ವೇಗ, ಬೌನ್ಸ್ ಅದ್ಭುತವಾಗಿದೆ. ಚೆಂಡನ್ನು ಹಿಡಿಯಲು ಸಹ ಯಾವುದೇ ತೊಂದರೆ ಇಲ್ಲ. ವೇಗಿಗಳಿಗೆ ಮಧ್ಯಮ ಬೆರಳು ಬಹಳ ಮುಖ್ಯ. ಸ್ವಿಂಗ್ ಮಾಡಲು ಈ ಬೆರಳನ್ನೇ ಹೆಚ್ಚು ಬಳಸಲಾಗುತ್ತದೆ.
(5 / 6)

ಆದರೆ, ಈ ಕಿರುಬೆರಳು ಕಮಿನ್ಸ್ ಅವರಿಗೆ ಎಂದೂ ಸಮಸ್ಯೆ ಕಂಡು ಬರಲಿಲ್ಲ. ವೇಗ, ಬೌನ್ಸ್, ಸ್ವಿಂಗ್ ಅನ್ನು ಸಲೀಸಾಗಿ ಮಾಡುತ್ತಾರೆ. ಕತ್ತರಿಸಿದ ಬೆರಳು ತನ್ನ ಬೌಲಿಂಗ್ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕಮಿನ್ಸ್ ಈ ಹಿಂದೆ 2017ರಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ ಹೇಳಿದ್ದರು. 
(6 / 6)
ಆದರೆ, ಈ ಕಿರುಬೆರಳು ಕಮಿನ್ಸ್ ಅವರಿಗೆ ಎಂದೂ ಸಮಸ್ಯೆ ಕಂಡು ಬರಲಿಲ್ಲ. ವೇಗ, ಬೌನ್ಸ್, ಸ್ವಿಂಗ್ ಅನ್ನು ಸಲೀಸಾಗಿ ಮಾಡುತ್ತಾರೆ. ಕತ್ತರಿಸಿದ ಬೆರಳು ತನ್ನ ಬೌಲಿಂಗ್ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕಮಿನ್ಸ್ ಈ ಹಿಂದೆ 2017ರಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ ಹೇಳಿದ್ದರು. (AP)

    ಹಂಚಿಕೊಳ್ಳಲು ಲೇಖನಗಳು