logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pathaan Star Cast Fee: ‘ಪಠಾಣ್‌’ ಚಿತ್ರಕ್ಕಾಗಿ ಶಾರುಖ್‌, ದೀಪಿಕಾ, ಜಾನ್‌ ಅಬ್ರಹಾಂ ಪಡೆದ ಸಂಭಾವನೆ ನಿಮ್ಮನ್ನು ಅಚ್ಚರಿಗೆ ದೂಡಬಹುದು...

Pathaan Star Cast Fee: ‘ಪಠಾಣ್‌’ ಚಿತ್ರಕ್ಕಾಗಿ ಶಾರುಖ್‌, ದೀಪಿಕಾ, ಜಾನ್‌ ಅಬ್ರಹಾಂ ಪಡೆದ ಸಂಭಾವನೆ ನಿಮ್ಮನ್ನು ಅಚ್ಚರಿಗೆ ದೂಡಬಹುದು...

Jan 26, 2023 06:43 PM IST

Pathaan Star Cast Fee: ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ತಯಾರಾದ ‘ಪಠಾಣ್‌’ ಸಿನಿಮಾ ಇದೀಗ ಹಲವು ದಾಖಲೆಗಳನ್ನು ಬರೆಯುತ್ತಿದೆ. ಮೊದಲ ದಿನವೇ 55 ಕೋಟಿ ಗಳಿಕೆ ಕಂಡು ಹೊಸ ರೆಕಾರ್ಡ್‌ ತನ್ನದಾಗಿಸಿಕೊಂಡಿದೆ. ಹೀಗಿರುವಾಗ ಇದೇ ಚಿತ್ರದಲ್ಲಿ ನಟಿಸಿರುವ ಶಾರುಖ್‌ ಖಾನ್‌, ದೀಪಿಕಾ ಪಡುಕೋಣೆ, ಜಾನ್‌ ಅಬ್ರಹಾಂ, ಸಲ್ಮಾನ್‌ ಖಾನ್‌ ಪಡೆದ ಸಂಭಾವನೆ ಎಷ್ಟಿರಬಹುದು? ಇಲ್ಲಿದೆ ನೋಡಿ ಆ ಮಾಹಿತಿ..

  • Pathaan Star Cast Fee: ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ತಯಾರಾದ ‘ಪಠಾಣ್‌’ ಸಿನಿಮಾ ಇದೀಗ ಹಲವು ದಾಖಲೆಗಳನ್ನು ಬರೆಯುತ್ತಿದೆ. ಮೊದಲ ದಿನವೇ 55 ಕೋಟಿ ಗಳಿಕೆ ಕಂಡು ಹೊಸ ರೆಕಾರ್ಡ್‌ ತನ್ನದಾಗಿಸಿಕೊಂಡಿದೆ. ಹೀಗಿರುವಾಗ ಇದೇ ಚಿತ್ರದಲ್ಲಿ ನಟಿಸಿರುವ ಶಾರುಖ್‌ ಖಾನ್‌, ದೀಪಿಕಾ ಪಡುಕೋಣೆ, ಜಾನ್‌ ಅಬ್ರಹಾಂ, ಸಲ್ಮಾನ್‌ ಖಾನ್‌ ಪಡೆದ ಸಂಭಾವನೆ ಎಷ್ಟಿರಬಹುದು? ಇಲ್ಲಿದೆ ನೋಡಿ ಆ ಮಾಹಿತಿ..
ಪಠಾಣ್‌ ಸಿನಿಮಾ ನಿರ್ಮಾಣಕ್ಕೆ ಯಶ್‌ ರಾಜ್‌ ಫಿಲಂಸ್‌ ದೊಡ್ಡ ಮೊತ್ತವನ್ನೇ ಹೂಡಿಕೆ ಮಾಡಿದೆ. ಬರೋಬ್ಬರಿ 250 ಕೋಟಿ ರೂ ವೆಚ್ಚದಲ್ಲಿ ಈ ಸಿನಿಮಾ ಸಿದ್ಧವಾಗಿದೆ.   
(1 / 6)

ಶಾರುಖ್ ಖಾನ್: ಸೂಪರ್ ಸ್ಟಾರ್ ನಾಲ್ಕು ವರ್ಷಗಳ ನಂತರ ಪೂರ್ಣ ಪ್ರಮಾಣದ ಪಾತ್ರದಲ್ಲಿ ಮತ್ತೆ ಹಿರಿತೆರೆಗೆ ಮರಳಿದ್ದಾರೆ. 2018 ರಲ್ಲಿ ಬಿಡುಗಡೆಯಾದ ಜೀರೋ ಅವರ ಕೊನೆಯ ಸಿನಿಮಾ. ಇದೀಗ ಬಂದ ‘ಪಠಾಣ್‌’ ಹೊಸ ಹವಾ ಸೃಷ್ಟಿಸುತ್ತಿದೆ. ಈ ಚಿತ್ರಕ್ಕಾಗಿ ಶಾರುಖ್‌ ಖಾನ್‌ ಬರೋಬ್ಬರಿ 100 ಕೋಟಿ ಸಂಭಾವನೆ ಪಡೆದಿದ್ದಾರೆ.   
(2 / 6)

ಸಲ್ಮಾನ್ ಖಾನ್: ಅದೇ ರೀತಿ ‘ಪಠಾಣ್‌’ ಚಿತ್ರದಲ್ಲಿ ಸಲ್ಮಾನ್ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಚ್ಚರಿಯ ವಿಚಾರ ಏನೆಂದರೆ ಈ ಸಿನಿಮಾದಲ್ಲಿನ ಸಣ್ಣ ಪಾತ್ರಕ್ಕೆ ಅವರು ಯಾವುದೇ ಸಂಭಾವನೆ ಪಡೆದಿಲ್ಲ.   
(3 / 6)

ಜಾನ್ ಅಬ್ರಹಾಂ: ಪಠಾಣ್ ಚಿತ್ರದಲ್ಲಿ ಜಾನ್ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ 20 ಕೋಟಿ ಸಂಭಾವನೆ ಪಡೆದಿದ್ದಾರೆ ಜಾನ್.‌   
(4 / 6)

ದೀಪಿಕಾ ಪಡುಕೋಣೆ: ಬೇಷರಮ್‌ ರಂಗ್‌ ಹಾಡಿನಲ್ಲಿ ತಮ್ಮ ಮಾದಕತೆಯ ಮೂಲಕವೇ ಬೆರಗುಗೊಳಿಸಿದ್ದ ನಟಿ ದೀಪಿಕಾ ಪಡುಕೋಣೆ, ಈ ಸಿನಿಮಾದಲ್ಲಿನ ನಟನೆಗಾಗಿ ಬರೋಬ್ಬರಿ 15 ಕೋಟಿ ಸಂಭಾವನೆ ಪಡೆದಿದ್ದಾರೆ.   
(5 / 6)

ಸಿದ್ಧಾರ್ಥ್ ಆನಂದ್: ಚಿತ್ರದ ನಿರ್ದೇಶಕ ಸಿದ್ಧಾರ್ಥ್ ಸದ್ಯ ಬಾಲಿವುಡ್‌ನಲ್ಲಿ ಹವಾ ಸೃಷ್ಟಿಸಿಕೊಂಡ ನಿರ್ದೇಶಕ, ಅವರು ಈ ಹಿಂದೆ ‘ಬ್ಯಾಂಗ್ ಬ್ಯಾಂಗ್’ ಮತ್ತು ‘ವಾರ್ ’ ಚಿತ್ರಗಳನ್ನು ನಿರ್ದೇಶಿಸಿದ್ದರು. ಇದೀಗ ‘ಪಠಾಣ್‌’ ಚಿತ್ರ ನಿರ್ದೇಶಿಸಲು 6 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ವರದಿಯಾಗಿದೆ.
(6 / 6)

    ಹಂಚಿಕೊಳ್ಳಲು ಲೇಖನಗಳು