logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pratap Simha: ಮೈಸೂರಿನ ಗುಂಬಜ್‌ ಬಸ್‌ ನಿಲ್ದಾಣದ 2 ಚಿಕ್ಕ ಗೋಪುರ ತೆರವು: ಪ್ರತಾಪ್‌ ಸಿಂಹ ಟ್ವೀಟ್‌ನಲ್ಲೇನಿದೆ?

Pratap Simha: ಮೈಸೂರಿನ ಗುಂಬಜ್‌ ಬಸ್‌ ನಿಲ್ದಾಣದ 2 ಚಿಕ್ಕ ಗೋಪುರ ತೆರವು: ಪ್ರತಾಪ್‌ ಸಿಂಹ ಟ್ವೀಟ್‌ನಲ್ಲೇನಿದೆ?

Nov 27, 2022 08:42 AM IST

ಮೈಸೂರು: ಮೈಸೂರಿನ ವಿವಾದಿತ ಗುಂಬಜ್ ಬಸ್ ನಿಲ್ದಾಣದ ಮೂರು ಗೋಪುರಗಳ ಪೈಕಿ, ಇದೀಗ 2 ಚಿಕ್ಕ ಗೋಪುರಗಳನ್ನು ತೆರವುಗೊಳಿಸಲಾಗಿದೆ. ಈ ಕುರಿತು ಟ್ವೀಟ್‌ ಮಾಡಿರುವ ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ, ಗುಂಬಜ್‌ ಬಸ್‌ ನಿಲ್ದಾಣದ ತೆರವು ವಾಗ್ದಾನವನ್ನು ಈಡೇರಿಸಿರುವುದಾಗಿ ಹೇಳಿದ್ದಾರೆ. ಗುಂಬಜ್‌ ಮಾದರಿಯ ಈ ಬಸ್‌ ನಿಲ್ದಾಣಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಕುರಿತಾದ ಮಾಹಿತಿ ಇಲ್ಲಿದೆ..

  • ಮೈಸೂರು: ಮೈಸೂರಿನ ವಿವಾದಿತ ಗುಂಬಜ್ ಬಸ್ ನಿಲ್ದಾಣದ ಮೂರು ಗೋಪುರಗಳ ಪೈಕಿ, ಇದೀಗ 2 ಚಿಕ್ಕ ಗೋಪುರಗಳನ್ನು ತೆರವುಗೊಳಿಸಲಾಗಿದೆ. ಈ ಕುರಿತು ಟ್ವೀಟ್‌ ಮಾಡಿರುವ ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ, ಗುಂಬಜ್‌ ಬಸ್‌ ನಿಲ್ದಾಣದ ತೆರವು ವಾಗ್ದಾನವನ್ನು ಈಡೇರಿಸಿರುವುದಾಗಿ ಹೇಳಿದ್ದಾರೆ. ಗುಂಬಜ್‌ ಮಾದರಿಯ ಈ ಬಸ್‌ ನಿಲ್ದಾಣಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಕುರಿತಾದ ಮಾಹಿತಿ ಇಲ್ಲಿದೆ..
ಮೈಸೂರಿನ ಊಟಿ ಮುಖ್ಯ ರಸ್ತೆಯಲ್ಲಿ ಗುಂಬಜ್‌ ಮಾದರಿಯ ಬಸ್‌ ನಿಲ್ದಾಣವನ್ನು ನಿರ್ಮಿಸಲಾಗಿತ್ತು. ಆದರೆ ಈ ಬಸ್‌ ನಿಲ್ದಾಣದ ಮಾದರಿ ಮಸೀದಿಯಂತೆ ಇದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದು ವಿವಾದವಾಗಿ ಮಾರ್ಪಟ್ಟ ಬಳಿಕ, ಒಂದು ದೊಡ್ಡ ಗೋಪುರವನ್ನು ಉಳಿಸಿಕೊಂಡು ಅದರ ಅಕ್ಕಪಕ್ಕ ಇದ್ದ ಎರಡು ಚಿಕ್ಕ ಗೋಪುರಗಳನ್ನು ತೆರವು ಮಾಡಲಾಗಿದೆ.
(1 / 5)
ಮೈಸೂರಿನ ಊಟಿ ಮುಖ್ಯ ರಸ್ತೆಯಲ್ಲಿ ಗುಂಬಜ್‌ ಮಾದರಿಯ ಬಸ್‌ ನಿಲ್ದಾಣವನ್ನು ನಿರ್ಮಿಸಲಾಗಿತ್ತು. ಆದರೆ ಈ ಬಸ್‌ ನಿಲ್ದಾಣದ ಮಾದರಿ ಮಸೀದಿಯಂತೆ ಇದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದು ವಿವಾದವಾಗಿ ಮಾರ್ಪಟ್ಟ ಬಳಿಕ, ಒಂದು ದೊಡ್ಡ ಗೋಪುರವನ್ನು ಉಳಿಸಿಕೊಂಡು ಅದರ ಅಕ್ಕಪಕ್ಕ ಇದ್ದ ಎರಡು ಚಿಕ್ಕ ಗೋಪುರಗಳನ್ನು ತೆರವು ಮಾಡಲಾಗಿದೆ.(Verified Twitter)
ಈ ಕುರಿತು ಟ್ವೀಟ್‌ ಮಾಡಿರುವ ಪ್ರತಾಪ್‌ ಸಿಂಹ, ''ಮಧ್ಯದಲ್ಲೊಂದು ದೊಡ್ಡ ಗುಂಬಜ್, ಅಕ್ಕಪಕ್ಕ ಎರಡು ಚಿಕ್ಕ ಗುಂಬಜ್ ಇದ್ದರೆ ಅದು ಮಸೀದೀನೇ, ಅದನ್ನು ತೆರವು ಮಾಡಿಸುತ್ತೇನೆ ಎಂದಿದ್ದೆ ಮತ್ತು ಅದರಂತೆ ನಡೆದುಕೊಂಡಿದ್ದೇನೆ. ಕಾಲಾವಕಾಶ ಕೇಳಿ ಮಾತಿನಂತೆ ನಡೆದುಕೊಂಡ ಜಿಲ್ಲಾಧಿಕಾರಿಗಳಿಗೆ ಹಾಗು ವಾಸ್ತವ ಅರಿತು ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್ ಜಿ ಅವರಿಗೂ ಧನ್ಯವಾದಗಳು..'' ಎಂದು ಹೇಳಿದ್ದಾರೆ.
(2 / 5)
ಈ ಕುರಿತು ಟ್ವೀಟ್‌ ಮಾಡಿರುವ ಪ್ರತಾಪ್‌ ಸಿಂಹ, ''ಮಧ್ಯದಲ್ಲೊಂದು ದೊಡ್ಡ ಗುಂಬಜ್, ಅಕ್ಕಪಕ್ಕ ಎರಡು ಚಿಕ್ಕ ಗುಂಬಜ್ ಇದ್ದರೆ ಅದು ಮಸೀದೀನೇ, ಅದನ್ನು ತೆರವು ಮಾಡಿಸುತ್ತೇನೆ ಎಂದಿದ್ದೆ ಮತ್ತು ಅದರಂತೆ ನಡೆದುಕೊಂಡಿದ್ದೇನೆ. ಕಾಲಾವಕಾಶ ಕೇಳಿ ಮಾತಿನಂತೆ ನಡೆದುಕೊಂಡ ಜಿಲ್ಲಾಧಿಕಾರಿಗಳಿಗೆ ಹಾಗು ವಾಸ್ತವ ಅರಿತು ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್ ಜಿ ಅವರಿಗೂ ಧನ್ಯವಾದಗಳು..'' ಎಂದು ಹೇಳಿದ್ದಾರೆ.(Verified Twitter)
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ ರಾಮದಾಸ್, ಅರಮನೆ ಮಾದರಿ ಬಸ್‌ ನಿಲ್ದಾಣ ನಿರ್ಮಾಣ ಮಾಡುವುದು ನನ್ನ ಉದ್ದೇಶವಾಗಿತ್ತು. ಆದರೆ ಅನವಶ್ಯಕವಾಗಿ ಧರ್ಮದ ಲೇಪನ ಮಾಡಿರುವುದು ತೀವ್ರ ನೋವು ತಂದಿದೆ. ಹೀಗಾಗಿ ಈ ನಿಲ್ದಾಣ ವಿವಾದದ ಕೇಂದ್ರವಾಗಬಾರದು ಎಂಬ ಉದ್ದೇಶದಿಂದ, ಎರಡು ಚಿಕ್ಕ ಗೋಪುರಗಳನ್ನು ತೆರವುಗೊಳಿಸಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ. (ಸಂಗ್ರಹ ಚಿತ್ರ)
(3 / 5)
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ ರಾಮದಾಸ್, ಅರಮನೆ ಮಾದರಿ ಬಸ್‌ ನಿಲ್ದಾಣ ನಿರ್ಮಾಣ ಮಾಡುವುದು ನನ್ನ ಉದ್ದೇಶವಾಗಿತ್ತು. ಆದರೆ ಅನವಶ್ಯಕವಾಗಿ ಧರ್ಮದ ಲೇಪನ ಮಾಡಿರುವುದು ತೀವ್ರ ನೋವು ತಂದಿದೆ. ಹೀಗಾಗಿ ಈ ನಿಲ್ದಾಣ ವಿವಾದದ ಕೇಂದ್ರವಾಗಬಾರದು ಎಂಬ ಉದ್ದೇಶದಿಂದ, ಎರಡು ಚಿಕ್ಕ ಗೋಪುರಗಳನ್ನು ತೆರವುಗೊಳಿಸಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ. (ಸಂಗ್ರಹ ಚಿತ್ರ)(Verified Twitter)
ಗುಂಬಜ್ ಮಾದರಿಯ ಬಸ್ ನಿಲ್ದಾಣ ನಿರ್ಮಾಣಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೇ, ಬಸ್ ನಿಲ್ದಾಣಕ್ಕೆ ರಾತ್ರೋರಾತ್ರಿ ಜೆಎಸ್‍ಎಸ್ ಕಾಲೇಜ್ ಬಸ್ ನಿಲ್ದಾಣ ಎಂದು ನಾಮಫಲಕ ಅಳವಡಿಸಲಾಗಿತ್ತು. ಅಲ್ಲದೇ ಫಲಕದ ಒಂದು ಬದಿಯಲ್ಲಿ ಸುತ್ತೂರು ಆದಿ ಜಗದ್ಗುರುಗಳ ಹಾಗೂ ಸುತ್ತೂರು ಶ್ರೀ ರಾಜೇಂದ್ರ ಸ್ವಾಮೀಜಿಗಳ ಫೋಟೋ ಹಾಕಲಾಗಿತ್ತು. ಮತ್ತೊಂದು ಬದಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೋಟೋಗಳನ್ನು ಹಾಕಲಾಗಿತ್ತು. (ಸಂಗ್ರಹ ಚಿತ್ರ)
(4 / 5)
ಗುಂಬಜ್ ಮಾದರಿಯ ಬಸ್ ನಿಲ್ದಾಣ ನಿರ್ಮಾಣಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೇ, ಬಸ್ ನಿಲ್ದಾಣಕ್ಕೆ ರಾತ್ರೋರಾತ್ರಿ ಜೆಎಸ್‍ಎಸ್ ಕಾಲೇಜ್ ಬಸ್ ನಿಲ್ದಾಣ ಎಂದು ನಾಮಫಲಕ ಅಳವಡಿಸಲಾಗಿತ್ತು. ಅಲ್ಲದೇ ಫಲಕದ ಒಂದು ಬದಿಯಲ್ಲಿ ಸುತ್ತೂರು ಆದಿ ಜಗದ್ಗುರುಗಳ ಹಾಗೂ ಸುತ್ತೂರು ಶ್ರೀ ರಾಜೇಂದ್ರ ಸ್ವಾಮೀಜಿಗಳ ಫೋಟೋ ಹಾಕಲಾಗಿತ್ತು. ಮತ್ತೊಂದು ಬದಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೋಟೋಗಳನ್ನು ಹಾಕಲಾಗಿತ್ತು. (ಸಂಗ್ರಹ ಚಿತ್ರ)(Verified Twitter)
ಒಟ್ಟಿನಲ್ಲಿ ವಿವಾದದ ಕೇಂದ್ರ ಬಿಂದುವಾಗಿದ್ದ ಮೈಸೂರಿನ ಗುಂಬಜ್‌ ಬಸ್‌ ನಿಲ್ದಾಣದ ಎರಡು ಚಿಕ್ಕ ಗೋಪುರಗಳನ್ನು ಇದೀಗ ತೆರವುಗೊಳಿಸಲಾಗಿದ್ದು, ಮಧ್ಯದ ಒಂದು ದೊಡ್ಡ ಗೋಪುರವನ್ನು ಮಾತ್ರ ಉಳಿಸಿಕೊಳ್ಳಲಾಗಿದೆ.
(5 / 5)
ಒಟ್ಟಿನಲ್ಲಿ ವಿವಾದದ ಕೇಂದ್ರ ಬಿಂದುವಾಗಿದ್ದ ಮೈಸೂರಿನ ಗುಂಬಜ್‌ ಬಸ್‌ ನಿಲ್ದಾಣದ ಎರಡು ಚಿಕ್ಕ ಗೋಪುರಗಳನ್ನು ಇದೀಗ ತೆರವುಗೊಳಿಸಲಾಗಿದ್ದು, ಮಧ್ಯದ ಒಂದು ದೊಡ್ಡ ಗೋಪುರವನ್ನು ಮಾತ್ರ ಉಳಿಸಿಕೊಳ್ಳಲಾಗಿದೆ.(Verified Twitter)

    ಹಂಚಿಕೊಳ್ಳಲು ಲೇಖನಗಳು