logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪಿಎಸ್‌ಎಲ್‌ ಪ್ಲೇ ಆಫ್‌ ಪಂದ್ಯಗಳಿಗೆ ಸ್ಟೇಡಿಯಂ ಖಾಲಿ ಖಾಲಿ; ಇದು ಮುಜುಗರದ ಸಂಗತಿ ಎಂದ ವಾಸಿಂ ಅಕ್ರಮ್

ಪಿಎಸ್‌ಎಲ್‌ ಪ್ಲೇ ಆಫ್‌ ಪಂದ್ಯಗಳಿಗೆ ಸ್ಟೇಡಿಯಂ ಖಾಲಿ ಖಾಲಿ; ಇದು ಮುಜುಗರದ ಸಂಗತಿ ಎಂದ ವಾಸಿಂ ಅಕ್ರಮ್

Mar 17, 2024 07:54 PM IST

Pakistan Super League: ಭಾರತದಲ್ಲಿ ಐಪಿಎಲ್‌ನಂತೆಯೇ, ಪಾಕಿಸ್ತಾನದಲ್ಲಿ ಪಾಕಿಸ್ತಾನ್ ಸೂಪರ್ ಲೀಗ್ (PSL) ನಡೆಯುತ್ತದೆ. ಪಿಎಸ್‌ಎಲ್‌ ಒಂಬತ್ತನೇ ಆವೃತ್ತಿಯು ಅಂತಿಮ ಹಂತಕ್ಕೆ ಬಂದಿದ್ದು, ಮಾರ್ಚ್‌ 18ರಂದು ಫೈನಲ್‌ ಪಂದ್ಯ ನಡೆಯುತ್ತಿದೆ. ಆದರೆ ಈ ಬಾರಿಯ ಟೂರ್ನಿಯ ಪ್ಲೇ ಆಫ್‌ ಹಂತದ ಪಂದ್ಯಗಳು ಪ್ರೇಕ್ಷಕರ ಕೊರತೆಯಿಂದೆ ಸೊರಗಿದೆ.

  • Pakistan Super League: ಭಾರತದಲ್ಲಿ ಐಪಿಎಲ್‌ನಂತೆಯೇ, ಪಾಕಿಸ್ತಾನದಲ್ಲಿ ಪಾಕಿಸ್ತಾನ್ ಸೂಪರ್ ಲೀಗ್ (PSL) ನಡೆಯುತ್ತದೆ. ಪಿಎಸ್‌ಎಲ್‌ ಒಂಬತ್ತನೇ ಆವೃತ್ತಿಯು ಅಂತಿಮ ಹಂತಕ್ಕೆ ಬಂದಿದ್ದು, ಮಾರ್ಚ್‌ 18ರಂದು ಫೈನಲ್‌ ಪಂದ್ಯ ನಡೆಯುತ್ತಿದೆ. ಆದರೆ ಈ ಬಾರಿಯ ಟೂರ್ನಿಯ ಪ್ಲೇ ಆಫ್‌ ಹಂತದ ಪಂದ್ಯಗಳು ಪ್ರೇಕ್ಷಕರ ಕೊರತೆಯಿಂದೆ ಸೊರಗಿದೆ.
ಮಹತ್ವದ ಎಲಿಮನೇಟರ್‌ ಪಂದ್ಯ ನಡೆಯುತ್ತಿದ್ದರೂ, ಮೈದಾನವಿಡಿ ಖಾಲಿ ಖಾಲಿ ಕಂಡುಬಂದಿದೆ. ಇದು ಜಾಗತಿಕ ಮಟ್ಟದಲ್ಲಿ ಟೀಕೆಗೂ ಕಾರಣವಾಗಿದೆ. ಮೊಹಮ್ಮದ್ ರಿಜ್ವಾನ್ ನೇತೃತ್ವದ ಮುಲ್ತಾನ್ ಸುಲ್ತಾನ್ ತಂಡವು ಕ್ವಾಲಿಫೈಯರ್‌ನಲ್ಲಿ ಬಾಬರ್ ಅಜಮ್‌ ನೇತೃತ್ವದ ಪೇಶಾವರ್ ಜಲ್ಮಿ ತಂಡವನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. ಈ ಪಂದ್ಯದಲ್ಲೂ ಅಭಿಮಾನಿಗಳ ಸಂಖ್ಯೆ ಕಡಿಮೆ ಇತ್ತು.
(1 / 5)
ಮಹತ್ವದ ಎಲಿಮನೇಟರ್‌ ಪಂದ್ಯ ನಡೆಯುತ್ತಿದ್ದರೂ, ಮೈದಾನವಿಡಿ ಖಾಲಿ ಖಾಲಿ ಕಂಡುಬಂದಿದೆ. ಇದು ಜಾಗತಿಕ ಮಟ್ಟದಲ್ಲಿ ಟೀಕೆಗೂ ಕಾರಣವಾಗಿದೆ. ಮೊಹಮ್ಮದ್ ರಿಜ್ವಾನ್ ನೇತೃತ್ವದ ಮುಲ್ತಾನ್ ಸುಲ್ತಾನ್ ತಂಡವು ಕ್ವಾಲಿಫೈಯರ್‌ನಲ್ಲಿ ಬಾಬರ್ ಅಜಮ್‌ ನೇತೃತ್ವದ ಪೇಶಾವರ್ ಜಲ್ಮಿ ತಂಡವನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. ಈ ಪಂದ್ಯದಲ್ಲೂ ಅಭಿಮಾನಿಗಳ ಸಂಖ್ಯೆ ಕಡಿಮೆ ಇತ್ತು.(X)
ಪಿಎಸ್‌ಎಲ್ ಟೂರ್ನಿಯಲ್ಲಿ ಮಹತ್ವದ ಪ್ಲೇಆಫ್‌ ಪಂದ್ಯವನ್ನು ವೀಕ್ಷಿಸಲು ಅಪಾರ ಸಂಖ್ಯೆಯ ಪ್ರೇಕ್ಷಕರು ಬರುವ ನಿರೀಕ್ಷೆ ಇತ್ತು. ಕರಾಚಿಯಲ್ಲಿ ನಡೆದ ಪಂದ್ಯ ವೀಕ್ಷಣೆಗೆ ಅಭಿಮಾನಿಗಳ ಕೊರತೆಯು ಪಾಕ್‌ ಜನತೆ ಹಾಗೂ ಕ್ರಿಕೆಟಿಗರ ಕಳವಳಕ್ಕೆ ಕಾರಣವಾಗಿದೆ.
(2 / 5)
ಪಿಎಸ್‌ಎಲ್ ಟೂರ್ನಿಯಲ್ಲಿ ಮಹತ್ವದ ಪ್ಲೇಆಫ್‌ ಪಂದ್ಯವನ್ನು ವೀಕ್ಷಿಸಲು ಅಪಾರ ಸಂಖ್ಯೆಯ ಪ್ರೇಕ್ಷಕರು ಬರುವ ನಿರೀಕ್ಷೆ ಇತ್ತು. ಕರಾಚಿಯಲ್ಲಿ ನಡೆದ ಪಂದ್ಯ ವೀಕ್ಷಣೆಗೆ ಅಭಿಮಾನಿಗಳ ಕೊರತೆಯು ಪಾಕ್‌ ಜನತೆ ಹಾಗೂ ಕ್ರಿಕೆಟಿಗರ ಕಳವಳಕ್ಕೆ ಕಾರಣವಾಗಿದೆ.(X)
ಶುಕ್ರವಾರ ನಡೆದ ಪಂದ್ಯದಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ಎಲಿಮಿನೇಟರ್ 1ರಲ್ಲಿ ಮುಖಾಮುಖಿಯಾಗಿದ್ದವು. ಆದರೆ, ನಿರ್ಣಾಯಕ ಪಂದ್ಯವು ಬಹುತೇಕ ಖಾಲಿ ಮೈದಾನದಲ್ಲಿ ನಡೆಯಿತು. ಇದು ವ್ಯಾಪಕ ಟೀಕೆಗೂ ಕಾರಣವಾಗಿದೆ.
(3 / 5)
ಶುಕ್ರವಾರ ನಡೆದ ಪಂದ್ಯದಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ಎಲಿಮಿನೇಟರ್ 1ರಲ್ಲಿ ಮುಖಾಮುಖಿಯಾಗಿದ್ದವು. ಆದರೆ, ನಿರ್ಣಾಯಕ ಪಂದ್ಯವು ಬಹುತೇಕ ಖಾಲಿ ಮೈದಾನದಲ್ಲಿ ನಡೆಯಿತು. ಇದು ವ್ಯಾಪಕ ಟೀಕೆಗೂ ಕಾರಣವಾಗಿದೆ.(X)
ಪಂದ್ಯಾವಳಿಯು ಲಾಹೋರ್‌, ರಾವಲ್ಪಿಂಡಿ ಮತ್ತು ಮುಲ್ತಾನ್‌ನಲ್ಲಿ ನಡೆದಾಗ ಬಹುತೇಕ ಸ್ಟೇಡಿಯಂಗಳು ಭರ್ತಿಯಾಗಿದ್ದವು. ಆದರೆ ಕರಾಚಿ ಲೆಗ್‌ನಲ್ಲಿ ಪ್ರೇಕ್ಷಕರ ಹಾಜರಾತಿ ನೀರಸವಾಗಿದೆ.
(4 / 5)
ಪಂದ್ಯಾವಳಿಯು ಲಾಹೋರ್‌, ರಾವಲ್ಪಿಂಡಿ ಮತ್ತು ಮುಲ್ತಾನ್‌ನಲ್ಲಿ ನಡೆದಾಗ ಬಹುತೇಕ ಸ್ಟೇಡಿಯಂಗಳು ಭರ್ತಿಯಾಗಿದ್ದವು. ಆದರೆ ಕರಾಚಿ ಲೆಗ್‌ನಲ್ಲಿ ಪ್ರೇಕ್ಷಕರ ಹಾಜರಾತಿ ನೀರಸವಾಗಿದೆ.
ಖಾಲಿ ಸ್ಟೇಡಿಯಂ ಕುರಿತು ಮಾತನಾಡಿದ ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಂ, ಪ್ಲೇಆಫ್‌ ಪಂದ್ಯ ನೋಡಲು ಕರಾಚಿಯಲ್ಲಿ ಸ್ಟೇಡಿಯಂಗಳು ಖಾಲಿ ಕಾಣುತ್ತಿರುವುದು ಮುಜುಗರದ ಸಂಗತಿ ಎಂದು ಹೇಳಿದ್ದಾರೆ.
(5 / 5)
ಖಾಲಿ ಸ್ಟೇಡಿಯಂ ಕುರಿತು ಮಾತನಾಡಿದ ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಂ, ಪ್ಲೇಆಫ್‌ ಪಂದ್ಯ ನೋಡಲು ಕರಾಚಿಯಲ್ಲಿ ಸ್ಟೇಡಿಯಂಗಳು ಖಾಲಿ ಕಾಣುತ್ತಿರುವುದು ಮುಜುಗರದ ಸಂಗತಿ ಎಂದು ಹೇಳಿದ್ದಾರೆ.(AP)

    ಹಂಚಿಕೊಳ್ಳಲು ಲೇಖನಗಳು