logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Delhi Kamakhya Train: ಬಿಹಾರದಲ್ಲಿ ರಾತ್ರಿ ವೇಳೆ ಏಕಾಏಕಿ ಹಳಿ ತಪ್ಪಿದ ಎಕ್ಸ್‌ಪ್ರೆಸ್‌ ರೈಲು: ಹೀಗಿತ್ತು ಅಪಘಾತದ ಚಿತ್ರಣ

Delhi Kamakhya Train: ಬಿಹಾರದಲ್ಲಿ ರಾತ್ರಿ ವೇಳೆ ಏಕಾಏಕಿ ಹಳಿ ತಪ್ಪಿದ ಎಕ್ಸ್‌ಪ್ರೆಸ್‌ ರೈಲು: ಹೀಗಿತ್ತು ಅಪಘಾತದ ಚಿತ್ರಣ

Oct 12, 2023 07:04 AM IST

ಇನ್ನೇನು ನಿದ್ರೆಗೆ ಜಾರಬೇಕು ಎನ್ನುವಾಗಲೇ ಏಕಾಏಕಿ ರೈಲು ಉರುಳಿತು. 23 ಕೋಚ್‌ಗಳಲ್ಲಿ 6 ಕೋಚ್‌ಗಳು ಉರುಳಿ ಬಿದ್ದವು. ಕೋಚ್‌ನಲ್ಲಿದ್ದ 4 ಪ್ರಯಾಣಿಕರು ಮೃತಪಟ್ಟರೆ ಹಲವರು ಗಾಯಗೊಂಡರು. ಬಿಹಾರದ ರಘುನಾಥ ಪುರ ಎಂಬಲ್ಲಿ ದೆಹಲಿ ಕಾಮಾಕ್ಯ ಈಶಾನ್ಯ ರೈಲು( Dehli Kamakhya North East express) ಹಳಿ ತಪ್ಪಿತು. ಘಟನೆ, ನಂತರದ ರಕ್ಷಣಾ ಕಾರ್ಯದ ಚಿತ್ರಣ ಇಲ್ಲಿದೆ.

  • ಇನ್ನೇನು ನಿದ್ರೆಗೆ ಜಾರಬೇಕು ಎನ್ನುವಾಗಲೇ ಏಕಾಏಕಿ ರೈಲು ಉರುಳಿತು. 23 ಕೋಚ್‌ಗಳಲ್ಲಿ 6 ಕೋಚ್‌ಗಳು ಉರುಳಿ ಬಿದ್ದವು. ಕೋಚ್‌ನಲ್ಲಿದ್ದ 4 ಪ್ರಯಾಣಿಕರು ಮೃತಪಟ್ಟರೆ ಹಲವರು ಗಾಯಗೊಂಡರು. ಬಿಹಾರದ ರಘುನಾಥ ಪುರ ಎಂಬಲ್ಲಿ ದೆಹಲಿ ಕಾಮಾಕ್ಯ ಈಶಾನ್ಯ ರೈಲು( Dehli Kamakhya North East express) ಹಳಿ ತಪ್ಪಿತು. ಘಟನೆ, ನಂತರದ ರಕ್ಷಣಾ ಕಾರ್ಯದ ಚಿತ್ರಣ ಇಲ್ಲಿದೆ.
ದೆಹಲಿಯಿಂದ ಅಸ್ಸಾಂನ ಗುವಾಹಟಿ ನಗರಕ್ಕೆ ಸಮೀಪದಲ್ಲಿರುವ ಕಾಮಾಕ್ಯಕ್ಕೆ ಹೊರಟಿದ್ದ ದೆಹಲಿ-ಕಾಮಾಕ್ಯ ಈಶಾನ್ಯ ಎಕ್ಸ್‌ಪ್ರೆಸ್‌ ರೈಲು ಬಿಹಾರದಲ್ಲಿ ಹಳಿ ತಪ್ಪಿತು.
(1 / 7)
ದೆಹಲಿಯಿಂದ ಅಸ್ಸಾಂನ ಗುವಾಹಟಿ ನಗರಕ್ಕೆ ಸಮೀಪದಲ್ಲಿರುವ ಕಾಮಾಕ್ಯಕ್ಕೆ ಹೊರಟಿದ್ದ ದೆಹಲಿ-ಕಾಮಾಕ್ಯ ಈಶಾನ್ಯ ಎಕ್ಸ್‌ಪ್ರೆಸ್‌ ರೈಲು ಬಿಹಾರದಲ್ಲಿ ಹಳಿ ತಪ್ಪಿತು.
ದೆಹಲಿ ಕಾಮಾಕ್ಯ ರೈಲು ಬಿಹಾರದ ಬುಕ್ಸಾರ್‌ ಜಿಲ್ಲೆಯ ರಘುನಾಥಪುರ ನಿಲ್ದಾಣದ ಸಮೀಪದಲ್ಲಿ ಬುಧವಾರ ರಾತ್ರಿ ಹಳಿ ತಪ್ಪಿತು. ಘಟನೆಯಲ್ಲಿ ನಾಲ್ವರು ಮೃತಪಟ್ಟು ಹಲವರು ಗಾಯಗೊಂಡಿದ್ದು ರಕ್ಷಣಾ ಕಾರ್ಯ ಕೈಗೊಳ್ಳಲಾಯಿತು.
(2 / 7)
ದೆಹಲಿ ಕಾಮಾಕ್ಯ ರೈಲು ಬಿಹಾರದ ಬುಕ್ಸಾರ್‌ ಜಿಲ್ಲೆಯ ರಘುನಾಥಪುರ ನಿಲ್ದಾಣದ ಸಮೀಪದಲ್ಲಿ ಬುಧವಾರ ರಾತ್ರಿ ಹಳಿ ತಪ್ಪಿತು. ಘಟನೆಯಲ್ಲಿ ನಾಲ್ವರು ಮೃತಪಟ್ಟು ಹಲವರು ಗಾಯಗೊಂಡಿದ್ದು ರಕ್ಷಣಾ ಕಾರ್ಯ ಕೈಗೊಳ್ಳಲಾಯಿತು.
ಹಳಿ ತಪ್ಪಿದ ರೈಲಿನ ಆರು ಬೋಗಿಗಳಲ್ಲಿ ಎರಡು ಉರುಳಿಬಿದ್ದರೆ ಇನ್ನು ನಾಲ್ಕು ಬೋಗಿಗಳು ಹಳಿ ತಪ್ಪಿದ್ದವು. ಅದರಲ್ಲೂ ಎಸಿ ಬೋಗಿಗಳು ಉರುಳಿ ಅದರಲ್ಲಿದ್ದ ಪ್ರಯಾಣಿಕರು ಮೃತಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡಿದ್ದಾರೆ, 
(3 / 7)
ಹಳಿ ತಪ್ಪಿದ ರೈಲಿನ ಆರು ಬೋಗಿಗಳಲ್ಲಿ ಎರಡು ಉರುಳಿಬಿದ್ದರೆ ಇನ್ನು ನಾಲ್ಕು ಬೋಗಿಗಳು ಹಳಿ ತಪ್ಪಿದ್ದವು. ಅದರಲ್ಲೂ ಎಸಿ ಬೋಗಿಗಳು ಉರುಳಿ ಅದರಲ್ಲಿದ್ದ ಪ್ರಯಾಣಿಕರು ಮೃತಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡಿದ್ದಾರೆ, 
ಬಿಹಾರದಲ್ಲಿ ರೈಲು ಹಳಿ ತಪ್ಪಿದ ಘಟನೆ ನಂತರ ಸ್ಥಳಕ್ಕೆ ಧಾವಿಸಿದ ವಿವಿಧ ರಕ್ಷಣಾ ಪಡೆಗಳ ಸಿಬ್ಬಂದಿ ರಾತ್ರಿಯಿಡೀ ಕಾರ್ಯಾಚರಣೆ ಕೈಗೊಂಡು ಹಳಿಯಿಂದ ಬೋಗಿಗಳನ್ನು ಹೊರ ತೆಗೆಯಲು ಶ್ರಮಿಸಿದರು.
(4 / 7)
ಬಿಹಾರದಲ್ಲಿ ರೈಲು ಹಳಿ ತಪ್ಪಿದ ಘಟನೆ ನಂತರ ಸ್ಥಳಕ್ಕೆ ಧಾವಿಸಿದ ವಿವಿಧ ರಕ್ಷಣಾ ಪಡೆಗಳ ಸಿಬ್ಬಂದಿ ರಾತ್ರಿಯಿಡೀ ಕಾರ್ಯಾಚರಣೆ ಕೈಗೊಂಡು ಹಳಿಯಿಂದ ಬೋಗಿಗಳನ್ನು ಹೊರ ತೆಗೆಯಲು ಶ್ರಮಿಸಿದರು.(PTI)
ದೆಹಲಿ ಕಾಮಾಕ್ಯ ರೈಲಿನ ಬೋಗಿ ಉರುಳಿ ಬಿದ್ದುದರಿಂದ ಅದರಲ್ಲಿದ್ದ ಪ್ರಯಾಣಿಕರು ಹೊರ ಬರಲು ಹರಸಾಹಸ ಪಡಬೇಕಾಯಿತು. ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಕೂಡ ಸಹಕರಿಸಿದರು.
(5 / 7)
ದೆಹಲಿ ಕಾಮಾಕ್ಯ ರೈಲಿನ ಬೋಗಿ ಉರುಳಿ ಬಿದ್ದುದರಿಂದ ಅದರಲ್ಲಿದ್ದ ಪ್ರಯಾಣಿಕರು ಹೊರ ಬರಲು ಹರಸಾಹಸ ಪಡಬೇಕಾಯಿತು. ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಕೂಡ ಸಹಕರಿಸಿದರು.
ರಲು ಏಕಾಏಕಿ ಹಳಿ ತಪ್ಪಿದ್ದರಿಂದ ಕತ್ತಲೆಯ ನಡುವೆಯೇ ತುರ್ತು ನಿರ್ಗಮನಾ ಕಿಟಕಿಗಳನ್ನು ಬಳಸಿ ಪ್ರಯಾಣಿಕರನ್ನು ರಕ್ಷಣಾ ಸಿಬ್ಬಂದಿ ಹೊರ ತರಲು ಹರಸಾಹಸ ಪಟ್ಟರು.
(6 / 7)
ರಲು ಏಕಾಏಕಿ ಹಳಿ ತಪ್ಪಿದ್ದರಿಂದ ಕತ್ತಲೆಯ ನಡುವೆಯೇ ತುರ್ತು ನಿರ್ಗಮನಾ ಕಿಟಕಿಗಳನ್ನು ಬಳಸಿ ಪ್ರಯಾಣಿಕರನ್ನು ರಕ್ಷಣಾ ಸಿಬ್ಬಂದಿ ಹೊರ ತರಲು ಹರಸಾಹಸ ಪಟ್ಟರು.
ದೆಹಲಿ ಕಾಮಾಕ್ಯ ರೈಲಿನ ಬೋಗಿಗಳು ಹಳಿ ತಪ್ಪಿ ಹೊರಗೆ ಬಂದಾಗ ಕೆಲ ಬೋಗಿಗಳಲ್ಲಿದ್ದ ಮಹಿಳಾ ಪ್ರಯಾಣಿಕರನ್ನೂ ಸುರಕ್ಷಿತವಾಗಿ ಕೆಳಕ್ಕಿಳಿಸಿ ಗಾಯಗೊಂಡವರಿಗೆ ಚಿಕಿತ್ಸೆಯನ್ನು ರೈಲ್ವೆ ವಾಹನದ ಮೂಲಕ ನೀಡಲಾಯಿತು.
(7 / 7)
ದೆಹಲಿ ಕಾಮಾಕ್ಯ ರೈಲಿನ ಬೋಗಿಗಳು ಹಳಿ ತಪ್ಪಿ ಹೊರಗೆ ಬಂದಾಗ ಕೆಲ ಬೋಗಿಗಳಲ್ಲಿದ್ದ ಮಹಿಳಾ ಪ್ರಯಾಣಿಕರನ್ನೂ ಸುರಕ್ಷಿತವಾಗಿ ಕೆಳಕ್ಕಿಳಿಸಿ ಗಾಯಗೊಂಡವರಿಗೆ ಚಿಕಿತ್ಸೆಯನ್ನು ರೈಲ್ವೆ ವಾಹನದ ಮೂಲಕ ನೀಡಲಾಯಿತು.

    ಹಂಚಿಕೊಳ್ಳಲು ಲೇಖನಗಳು