logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಹೋದರಿ ಸ್ನೇಹಿತೆಯನ್ನೇ ಪ್ರೀತಿಸಿ ಮದುವೆಯಾದ ರವೀಂದ್ರ ಜಡೇಜಾ; ಶಾಸಕಿ ರಿವಾಬಾ ಕುರಿತ ಹಲವು ಮಾಹಿತಿ ಇಲ್ಲಿದೆ

ಸಹೋದರಿ ಸ್ನೇಹಿತೆಯನ್ನೇ ಪ್ರೀತಿಸಿ ಮದುವೆಯಾದ ರವೀಂದ್ರ ಜಡೇಜಾ; ಶಾಸಕಿ ರಿವಾಬಾ ಕುರಿತ ಹಲವು ಮಾಹಿತಿ ಇಲ್ಲಿದೆ

Feb 10, 2024 04:19 PM IST

Ravindra Jadeja Love Story : ಸೊಸೆಯ (ಜಡೇಜಾ ಪತ್ನಿ ರಿವಾಬಾ) ವಿರುದ್ಧ ಕ್ರಿಕೆಟಿಗನ ತಂದೆ ಅನಿರುದ್ಧ್ ಸಿನ್ಹಾ ಜಡೇಜಾ ಆರೋಪಿಸಿದ ಬೆನ್ನಲ್ಲೇ ರವೀಂದ್ರ ಜಡೇಜಾ ಮತ್ತು ರಿವಾಬಾ ಅವರ ನಡುವಿನ ಲವ್​ಸ್ಟೋರಿ ಬಗ್ಗೆ ಗೂಗಲ್​ನಲ್ಲಿ ಹೆಚ್ಚು ನಡೆಯುತ್ತಿದೆ.

  • Ravindra Jadeja Love Story : ಸೊಸೆಯ (ಜಡೇಜಾ ಪತ್ನಿ ರಿವಾಬಾ) ವಿರುದ್ಧ ಕ್ರಿಕೆಟಿಗನ ತಂದೆ ಅನಿರುದ್ಧ್ ಸಿನ್ಹಾ ಜಡೇಜಾ ಆರೋಪಿಸಿದ ಬೆನ್ನಲ್ಲೇ ರವೀಂದ್ರ ಜಡೇಜಾ ಮತ್ತು ರಿವಾಬಾ ಅವರ ನಡುವಿನ ಲವ್​ಸ್ಟೋರಿ ಬಗ್ಗೆ ಗೂಗಲ್​ನಲ್ಲಿ ಹೆಚ್ಚು ನಡೆಯುತ್ತಿದೆ.
ರವೀಂದ್ರ ಜಡೇಜಾ ಪತ್ನಿ ರಿವಾಬಾ ಅವರಿಂದ ನಮ್ಮ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಸೃಷ್ಟಿಯಾಗಿವೆ ಎಂದು ಜಡ್ಡು ತಂದೆ ಅನಿರುದ್ಧ್ ಸಿನ್ಹಾ ಆರೋಪಿಸಿದ್ದಾರೆ. ಆದರೆ ಜಡೇಜಾ, ನನ್ನ ಹೆಂಡತಿ ವರ್ಚಸ್ಸಿಗೆ ಧಕ್ಕೆ ತರಲಾಗುತ್ತಿದೆ ಎಂದು ತನ್ನ ತಂದೆಯ ವಿರುದ್ಧವೇ ಕಿಡಿಕಾರಿದ್ದಾರೆ. ಆರೋಪಗಳನ್ನು ತಳ್ಳಿಹಾಕಿದ್ದಾರೆ.
(1 / 9)

ರಿವಾಬಾ ಅವರಿಂದಲೇ ಕುಟುಂಬದಲ್ಲಿ ಕಲಹ ಉಂಟಾಗಿದೆ ಎಂದು ಅನಿರುದ್ಧ್ ಆರೋಪಿಸಿದ ಬೆನ್ನಲ್ಲೇ ಜಡೇಜಾ ಲವ್​ಸ್ಟೋರಿ ಬಗ್ಗೆ ಸರ್ಚ್ ಆಗುತ್ತಿದೆ. ಜಡೇಜಾಗೆ ರಿವಾಬಾ ಅವರ ಪರಿಚಯ ಹೇಗಾಯಿತು? ಲವ್​ ಹುಟ್ಟಿದ್ದೇಗೆ ಎನ್ನುವುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. 2016 ರಲ್ಲಿ ಪ್ರೇಮ ವಿವಾಹವಾದ ಜಡ್ಡು ಮತ್ತು ರಿವಾಬಾ ಲವ್​ಸ್ಟೋರಿ ಇಲ್ಲಿದೆ.
(2 / 9)

2009ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆಗೈದ ರವೀಂದ್ರ ಜಡೇಜಾ ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲೂ ಚತುರ. ಅವರು ವಿಶ್ವದ ಅಗ್ರ ಫೀಲ್ಡರ್‌ಗಳಲ್ಲಿ ಒಬ್ಬರು.
(3 / 9)

ಜಡೇಜಾ ರಜಪೂತ ಕುಟುಂಬದಲ್ಲಿ 1988ರ ಡಿಸೆಂಬರ್ 6ರಂದು ಜನಿಸಿದರು. ಬಾಲ್ಯದಿಂದಲೂ ಕ್ರಿಕೆಟ್‌ನಲ್ಲಿ ಒಲವು ಹೊಂದಿದ್ದ ಜಡ್ಡು 16ನೇ ವಯಸ್ಸಿನಿಂದಲೇ ಕ್ರಿಕೆಟ್ ನಿಯಮಿತವಾಗಿ ತರಬೇತಿ ಪಡೆದರು. 2008ರಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ನೀಡಿದ ಪ್ರದರ್ಶನ ಆಯ್ಕೆಗಾರರ ​​ಗಮನ ಸೆಳೆಯಿತು. 2009ರಲ್ಲಿ ಭಾರತ ತಂಡಕ್ಕೂ ಆಯ್ಕೆಯಾದರು.
(4 / 9)

2015ರಲ್ಲಿ ಸಹೋದರಿ ನೈನಾ ಅವರೊಂದಿಗೆ ಜಡೇಜಾ ಒಂದು ಪಾರ್ಟಿಗೆ ಹೋಗಿದ್ದರು. ಈ ವೇಳೆ ರಿವಾಬಾ ಅವರ ಪರಿಚಯವಾಯಿತು. ಅಚ್ಚರಿ ಅಂದರೆ ನೈನಾ ಅವರ ಸ್ನೇಹಿತೆ ರಿವಾಬಾ. ಅಲ್ಲಿ ರಿವಾಬಾರನ್ನು ಜಡೇಜಾಗೆ ನೈನಾ ಪರಿಚಯ ಮಾಡಿಕೊಟ್ಟಿದ್ದರು. ಆ ಪರಿಚಯದ ನಂತರ ಜಡ್ಡು-ರಿವಾಬಾ ಉತ್ತಮ ಸ್ನೇಹಿತರಾಗಿದ್ದರು.
(5 / 9)

ರಿವಾಬಾ ಅವರನ್ನು ನೋಡಿದ ಮೊದಲ ನೋಟಕ್ಕೆ ಜಡೇಜಾ ಇಷ್ಟಪಟ್ಟರು. ಮೊದಲ ಭೇಟಿಯ ನಂತರ ಇಬ್ಬರೂ ತಮ್ಮ ಫೋನ್‌ ನಂಬರ್‌ ವಿನಿಮಯ ಮಾಡಿಕೊಂಡಿದ್ದರು. ಈ ಪರಿಚಯ ಪ್ರೀತಿಗೆ ತಿರುಗಿತು. ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಡಲು ಆರಂಭಿಸಿದರು.
(6 / 9)

ಅಕ್ಕ ನೈನಾಗೆ ಗೊತ್ತಿಲ್ಲದಂತೆ ಜಡ್ಡು ಮತ್ತು ರಿವಾಬಾ ಡೇಟಿಂಗ್ ನಡೆಸಿದರು. ಕೊನೆಗೆ ಮದುವೆಯಾಗಲು ನಿರ್ಧರಿಸಿದ ಈ ಜೋಡಿ, ತಮ್ಮ ಪ್ರೀತಿಯ ವಿಷಯವನ್ನು ತಮ್ಮ ಕುಟುಂಬದೊಂದಿಗೆ ಹೇಳಿದ್ದರು. ಆದರೆ ಅವರ ಪ್ರೀತಿಗೆ ಒಪ್ಪಿಗೆ ಸೂಚಿಸದ ಜಡ್ಡು ತಂದೆ ಕೊನೆಗೆ ಸಮ್ಮತಿ ನೀಡಿದರು.
(7 / 9)

ರವೀಂದ್ರ ಜಡೇಜಾ ಮತ್ತು ರಿವಾಬಾ ಅವರು 2016ರ ಫೆಬ್ರವರಿ 5ರಂದು ನಿಶ್ಚಿತಾರ್ಥ ಮಾಡಿಕೊಂಡರು. ಅವರು ಅದೇ ವರ್ಷ ಏಪ್ರಿಲ್‌ 17ರಂದು ವಿವಾಹವಾದರು. ಜೋಡಿಗೆ 2017ರಲ್ಲಿ ಮುದ್ದಾದ ಮಗಳು ಜನಿಸಿದಳು. ಮಗಳ ಹೆಸರು ನಿಧ್ಯಾನ.
(8 / 9)

ರಿವಾಬಾ ಸೋಲಂಕಿ ಓದಿದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್. ಪ್ರಸ್ತುತ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ರಿವಾಬಾ ಮೂಲತಃ ಜುನಾಗಢದವರು. ಆಕೆ ತಂದೆ ಕಳೆದ ಕೆಲವು ದಿನಗಳಿಂದ ರಾಜ್‌ಕೋಟ್‌ನಲ್ಲಿ ನೆಲೆಸಿದ್ದಾರೆ. ರಿವಾಬಾ ಅವರ ತಂದೆ ಹರ್ದೇವ್ ಸಿಂಗ್ ಸೋಲಂಕಿ ದೊಡ್ಡ ಉದ್ಯಮಿ. ನಿಶ್ಚಿತಾರ್ಥದ ವೇಳೆ ರಿವಾಬಾ ತಂದೆ ಜಡೇಜಾಗೆ ಆಡಿ ಕ್ಯೂ7 ಕಾರನ್ನು ಉಡುಗೊರೆಯಾಗಿ ನೀಡಿದ್ದರು. 
(9 / 9)

    ಹಂಚಿಕೊಳ್ಳಲು ಲೇಖನಗಳು