logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಚಿನ್​ರಿಂದ ಇಶಾಂತ್​ವರೆಗೆ; ಕಿರಿಯ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆಗೈದ 10 ಭಾರತೀಯ ಆಟಗಾರರು

ಸಚಿನ್​ರಿಂದ ಇಶಾಂತ್​ವರೆಗೆ; ಕಿರಿಯ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆಗೈದ 10 ಭಾರತೀಯ ಆಟಗಾರರು

Feb 01, 2024 06:58 PM IST

Top 10 Youngest Indian Players In Test Cricket: ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡದ ಪರ ಅತ್ಯಂತ ಕಡಿಮೆ ವಯಸ್ಸಿನಲ್ಲಿ ಪದಾರ್ಪಣೆ ಮಾಡಿರುವ 10 ಕಿರಿಯ ಭಾರತೀಯ ಆಟಗಾರರನ್ನು ಈ ಮುಂದೆ ನೋಡೋಣ.

  • Top 10 Youngest Indian Players In Test Cricket: ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡದ ಪರ ಅತ್ಯಂತ ಕಡಿಮೆ ವಯಸ್ಸಿನಲ್ಲಿ ಪದಾರ್ಪಣೆ ಮಾಡಿರುವ 10 ಕಿರಿಯ ಭಾರತೀಯ ಆಟಗಾರರನ್ನು ಈ ಮುಂದೆ ನೋಡೋಣ.
ಮಾಸ್ಟರ್​ ಬ್ಲಾಸ್ಟರ್​, ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡದ ಪರ ಆಡಿದ ಅತ್ಯಂತ ಕಿರಿಯ ಕ್ರಿಕೆಟಿಗ. ಅವರು 1989ರಲ್ಲಿ ಪಾಕಿಸ್ತಾನದ ವಿರುದ್ಧ ಕೇವಲ 16 ವರ್ಷ 205 ದಿನಗಳಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದರು. ಅವರು 200 ಟೆಸ್ಟ್​ ಪಂದ್ಯಗಳಲ್ಲಿ 51 ಶತಕ ಸಹಿತ 15921 ರನ್ ಗಳಿಸಿದ್ದಾರೆ.
(1 / 10)

ಪಿಯೂಷ್ ಚಾವ್ಲಾ ಭಾರತ ತಂಡಕ್ಕಾಗಿ ಕೇವಲ 3 ಟೆಸ್ಟ್ ಆಡಿದ್ದು, 7 ವಿಕೆಟ್ ಪಡೆದಿದ್ದಾರೆ. ಆದರೆ 2006ರಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 17 ವರ್ಷ ಮತ್ತು 75 ದಿನಗಳಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು.
(2 / 10)

ಎಲ್ ಶಿವರಾಮಕೃಷ್ಣನ್ ಅವರು 1983 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೇವಲ 17 ವರ್ಷ, 118 ದಿನಗಳ ವಯಸ್ಸಿನವರಾಗಿದ್ದಾಗ ಭಾರತ ತಂಡದ ಪರ ಟೆಸ್ಟ್ ಕ್ರಿಕೆಟ್​ಗೆ ಡೆಬ್ಯು ಮಾಡಿದ್ದರು. ಕೇವಲ 9 ಟೆಸ್ಟ್​ ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಶಿವರಾಮಕೃಷ್ಣನ್, 26 ವಿಕೆಟ್ ಉರುಳಿಸಿದ್ದಾರೆ.
(3 / 10)

ನಾಯಕ ಮತ್ತು ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಎಂಎಸ್ ಧೋನಿ ಅವರ ಯುಗದಲ್ಲಿ ಪಾರ್ಥಿವ್ ಪಟೇಲ್ ಭಾರತೀಯ ತಂಡದಲ್ಲಿ ಹೆಚ್ಚು ಸ್ಥಾನ ಪಡೆಯಲು ವಿಫಲರಾದರು. ಆದರೆ 2002ರಲ್ಲಿ ಇಂಗ್ಲೆಂಡ್ ವಿರುದ್ಧ 17 ವರ್ಷ, 252 ದಿನಗಳಲ್ಲಿ ಚೊಚ್ಚಲ ಟೆಸ್ಟ್ ಆಡಿದ್ದರು. 25 ಟೆಸ್ಟ್​ಗಳಲ್ಲಿ 934 ರನ್ ಮಾತ್ರ ಗಳಿಸಿದ್ದಾರೆ.
(4 / 10)

ಎಡಗೈ ಸ್ಪಿನ್ನರ್ ಮಣಿಂದರ್ ಸಿಂಗ್ ಅವರು ಭಾರತದ ಪರ 35 ಟೆಸ್ಟ್ ಪಂದ್ಯಗಳನ್ನು ಆಡಿದ್ದು 88 ವಿಕೆಟ್ ಪಡೆದಿದ್ದಾರೆ. 1982ರಲ್ಲಿ ಪಾಕಿಸ್ತಾನದ ವಿರುದ್ಧ 17 ವರ್ಷ, 193 ದಿನಗಳಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು.
(5 / 10)

9 ವರ್ಷಗಳ ಕಾಲ ಕ್ರಿಕೆಟ್​ನಲ್ಲಿ ಸೇವೆ ಸಲ್ಲಿಸಿದ ವಿಎಲ್ ಮೆಹ್ರಾ, ಭಾರತದ ಪರ ಕೇವಲ 8 ಟೆಸ್ಟ್ ಪಂದ್ಯ (329 ರನ್) ಆಡಿದ್ದಾರೆ. ಅವರು 1955 ರಲ್ಲಿ ನ್ಯೂಜಿಲೆಂಡ್ ವಿರುದ್ಧ 17 ವರ್ಷ, 265 ದಿನಗಳಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದರು.
(6 / 10)
9 ವರ್ಷಗಳ ಕಾಲ ಕ್ರಿಕೆಟ್​ನಲ್ಲಿ ಸೇವೆ ಸಲ್ಲಿಸಿದ ವಿಎಲ್ ಮೆಹ್ರಾ, ಭಾರತದ ಪರ ಕೇವಲ 8 ಟೆಸ್ಟ್ ಪಂದ್ಯ (329 ರನ್) ಆಡಿದ್ದಾರೆ. ಅವರು 1955 ರಲ್ಲಿ ನ್ಯೂಜಿಲೆಂಡ್ ವಿರುದ್ಧ 17 ವರ್ಷ, 265 ದಿನಗಳಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದರು.(Times Now website)
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತದ 4ನೇ ಹೆಚ್ಚು ವಿಕೆಟ್ (417) ಪಡೆದಿರುವ ಹರ್ಭಜನ್ ಸಿಂಗ್, 1998ರಲ್ಲಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೇವಲ 17 ವರ್ಷ, 265 ದಿನಗಳಲ್ಲಿ ಟೆಸ್ಟ್​ಗೆ ಡೆಬ್ಯು ಮಾಡಿದ್ದರು.
(7 / 10)

ಎಜಿ ಮಿಲ್ಕಾ ಸಿಂಗ್ 18 ವರ್ಷ, 13 ದಿನಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ 1960ರಲ್ಲಿ ಭಾರತಕ್ಕೆ ಪದಾರ್ಪಣೆ ಮಾಡಿದ್ದರು.
(8 / 10)

ಬಿಎಸ್ ಚಂದ್ರಶೇಖರ್ 242 ವಿಕೆಟ್ ಪಡೆದಿರುವ ಭಾರತದ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರು. ಅವರು 18 ವರ್ಷ, 249 ದಿನಗಳಲ್ಲಿ ಇಂಗ್ಲೆಂಡ್ ವಿರುದ್ಧ ಮುಂಬೈನಲ್ಲಿ (1964) ಭಾರತಕ್ಕಾಗಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದರು.
(9 / 10)

ಭಾರತ ಪರ 105 ಟೆಸ್ಟ್ ಪಂದ್ಯಗಳಲ್ಲಿ 311 ವಿಕೆಟ್ ಪಡೆದಿರುವ ವೇಗಿ ಇಶಾಂತ್ ಶರ್ಮಾ, 2007ರಲ್ಲಿ ಬಾಂಗ್ಲಾದೇಶ ವಿರುದ್ಧ 18 ವರ್ಷ, 265 ದಿನಗಳ ವಯಸ್ಸಿನಲ್ಲಿ ಪದಾರ್ಪಣೆ ಮಾಡಿದ್ದರು.
(10 / 10)

    ಹಂಚಿಕೊಳ್ಳಲು ಲೇಖನಗಳು