logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sandalwood Actors: ಗಾರೆ ಕೆಲಸ, ವಾಟರ್ ಸಪ್ಲೈ...ಸಿನಿಮಾಗೆ ಬರೋ ಮುನ್ನ ಯಾವ್ಯಾವ ನಟರು ಏನು ಕೆಲಸ ಮಾಡ್ತಿದ್ರು ನೋಡಿ..?

Sandalwood actors: ಗಾರೆ ಕೆಲಸ, ವಾಟರ್ ಸಪ್ಲೈ...ಸಿನಿಮಾಗೆ ಬರೋ ಮುನ್ನ ಯಾವ್ಯಾವ ನಟರು ಏನು ಕೆಲಸ ಮಾಡ್ತಿದ್ರು ನೋಡಿ..?

Aug 12, 2022 09:34 PM IST

ಸಿನಿಮಾ ನಟರು ಎಂದರೆ ನಮ್ಮ ಕಣ್ಣ ಮುಂದೆ ಬರುವುದು ಅವರ ವೈಭೋಗದ ಜೀವನ. ಕಾರು, ದೊಡ್ಡ ಮನೆ, ಆಳು ಕಾಳುಗಳು. ಹಣ-ಹೆಸರು ಮಾಡಿರುವ ನಟರು ನಿಜಕ್ಕೂ ಅದೃಷ್ಟವಂತರು ಎಂದುಕೊಳ್ಳುತ್ತೇವೆ. ಆದರೆ ಆ ಹಂತಕ್ಕೆ ಬರುವ ಮುನ್ನ ಒಬ್ಬೊಬ್ಬರದ್ದು ಒಂದೊಂದು ಕಥೆ-ವ್ಯಥೆ ಇರುತ್ತದೆ.

  • ಸಿನಿಮಾ ನಟರು ಎಂದರೆ ನಮ್ಮ ಕಣ್ಣ ಮುಂದೆ ಬರುವುದು ಅವರ ವೈಭೋಗದ ಜೀವನ. ಕಾರು, ದೊಡ್ಡ ಮನೆ, ಆಳು ಕಾಳುಗಳು. ಹಣ-ಹೆಸರು ಮಾಡಿರುವ ನಟರು ನಿಜಕ್ಕೂ ಅದೃಷ್ಟವಂತರು ಎಂದುಕೊಳ್ಳುತ್ತೇವೆ. ಆದರೆ ಆ ಹಂತಕ್ಕೆ ಬರುವ ಮುನ್ನ ಒಬ್ಬೊಬ್ಬರದ್ದು ಒಂದೊಂದು ಕಥೆ-ವ್ಯಥೆ ಇರುತ್ತದೆ.
ಚಿತ್ರರಂಗದಲ್ಲಿ ಈಗ ಹೆಸರು ಮಾಡಿರುವ ನಟರಲ್ಲಿ ಅನೇಕರು ಸಿನಿಮಾ ಹಿನ್ನೆಲೆಯಿಂದ ಬಂದವರಾಗಿದ್ದರೆ, ಇನ್ನೂ ಕೆಲವು ನಟರು ಬಹಳ ಕಷ್ಟದ ದಿನಗಳನ್ನು ನೋಡಿ ಬಂದವರಾಗಿದ್ದಾರೆ. ಅದರಲ್ಲಿ ಕೆಲವರು ಗಾರೆ ಕೆಲಸ, ಥಿಯೇಟರ್​​​​​ನಲ್ಲಿ ಟಿಕೆಟ್ ಹರಿಯುವ ಕೆಲಸ, ಪವರ್ ಹ್ಯಾಂಡ್​​​ ಲೂಮ್ ಕೆಲಸ ಮಾಡಿದ್ದಾರೆ. ಕೆಲವು ನಟರ ಹಿಂದಿನ ಕೆಲಸದ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.
(1 / 9)

ಡಾಲಿ ಧನಂಜಯ್: ಅಭಿಮಾನಿಗಳ ಬಳಿ ಪ್ರೀತಿಯಿಂದ ಡಾಲಿ ಎಂದೇ ಕರೆಸಿಕೊಳ್ಳುವ ಧನಂಜಯ್ ಕೈಯಲ್ಲಿ ಈಗ ಸಾಲು ಸಾಲು ಚಿತ್ರಗಳಿವೆ. ಅನೇಕ ಸಿನಿಮಾಗಳಲ್ಲಿ ನಟಿಸಿದರೂ ಅವರಿಗೆ ಚಿತ್ರರಂಗದಲ್ಲಿ ದೊಡ್ಡ ಬ್ರೇಕ್ ನೀಡಿದ್ದು 'ಟಗರು' ಸಿನಿಮಾ. ಚಿತ್ರರಂಗಕ್ಕೆ ಬರುವ ಮುನ್ನ ಧನಂಜಯ್ ಮೈಸೂರಿನ ಇನ್ಫೋಸಿಸ್​ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ನಟನೆಯಲ್ಲಿ ಆಸಕ್ತಿ ಇದ್ದಿದ್ದರಿಂದ ಸಿನಿಮಾದಲ್ಲಿ ನಟಿಸುವ ಮುನ್ನ ಅವರು ಕೆಲವೊಂದು ಕಿರುಚಿತ್ರಗಳಲ್ಲಿ ಕೂಡಾ ನಟಿಸಿದ್ದಾರೆ.
(2 / 9)

ದರ್ಶನ್​​​:  ಅಭಿಮಾನಿಗಳ ಪಾಲಿನ ಚಾಲೆಂಜಿಂಗ್ ಸ್ಟಾರ್ ದರ್ಶನ್, ಖ್ಯಾತ ಖಳನಟ ತೂಗುದೀಪ್ ಶ್ರೀನಿವಾಸ್ ಅವರ ಪುತ್ರ ಆದರೂ ಚಿತ್ರರಂಗಕ್ಕೆ ಬರುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಚಿತ್ರರಂಗಕ್ಕೆ ಬರಬೇಕು ಎಂಬ ಕನಸು ಕಾಣುವುದರ ಜೊತೆಗೆ ಅವರು ಹಾಲು ಮಾರುತ್ತಾ, ನಂತರದ ದಿನಗಳಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಲೈಟ್ ಬಾಯ್ ಆಗಿ ಕೆಲಸ ಮಾಡುತ್ತಾ ಮೇಲೆ ಬಂದವರು.
(3 / 9)

ನೀನಾಸಂ ಸತೀಶ್: ಕ್ವಾಟ್ಲೆ ಸತೀಶ ಎಂದೇ ಫೇಮಸ್ ಆಗಿರುವ ನೀನಾಸಂ ಸತೀಶ್ ಈಗ ಕನ್ನಡ ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರು. ಬಾಲ್ಯದಿಂದಲೇ ಚಿತ್ರರಂಗಕ್ಕೆ ಬರಬೇಕು ಎಂದು ಕನಸು ಕಂಡಿದ್ದ ಇವರು ನಟನಾಗುವ ಮುನ್ನ ಬೆಂಗಳೂರಿನ ಗೋಪಾಲ್ ಚಿತ್ರಮಂದಿರದಲ್ಲಿ ಟಿಕೆಟ್ ನೀಡುವ ಹಾಗೂ ಚಿತ್ರಮಂದಿರದಲ್ಲಿ ಟಾರ್ಚ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರಂತೆ. ಜೊತೆಗೆ ಕಲ್ಯಾಣ ಮಂಟಪದಲ್ಲಿ ಫ್ಲವರ್​​​​ ಡೆಕೋರೇಶನ್ ಕೂಡಾ ಮಾಡುತ್ತಿದ್ದರು.
(4 / 9)

ರಿಷಭ್ ಶೆಟ್ಟಿ:  ಚಿತ್ರರಂಗಕ್ಕೆ ಬರುವ ಕನಸು ಕಂಡಿದ್ದ ರಿಷಭ್ ಶೆಟ್ಟಿ ಸಿನಿಮಾ ತರಬೇತಿ ಜೊತೆಗೆ ಮಿನರಲ್ ವಾಟರ್ ಸಪ್ಲೈ ಮಾಡುತ್ತಿದ್ದಂತೆ. ಈ ವಿಚಾರವನ್ನು ಅವರು ಸಿನಿಮಾವೊಂದರ ಚಿತ್ರೀಕರಣದಲ್ಲಿ ಹೇಳಿಕೊಂಡಿದ್ದರು. ಬಾಟಲ್ ಹೊತ್ತೊಯ್ಯುವ ಫೋಟೋಗಳನ್ನು ಕೂಡಾ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ನಂತರ ಹೋಟೆಲ್ ಉದ್ಯಮ ಕೂಡಾ ಆರಂಭಿಸಿ ಕೈ ಸುಟ್ಟುಕೊಂಡಿದ್ದರಂತೆ.
(5 / 9)

ಚಿಕ್ಕಣ್ಣ: ಕನ್ನಡ ಚಿತ್ರರಂಗದಲ್ಲಿ ಚಿಕ್ಕಣ್ಣ ಈಗ ನಂಬರ್ ಒನ್ ಹಾಸ್ಯನಟ. ಇದೀಗ ಅವರು ನಾಯಕನಾಗಿ ಕೂಡಾ ನಟಿಸುತ್ತಿದ್ದಾರೆ. ಚಿಕ್ಕಣ್ಣ ಚಿತ್ರರಂಗಕ್ಕೆ ಬರುವ ಮುನ್ನ ಗಾರೆ ಕೆಲಸ ಮಾಡುತ್ತಿದ್ದರು. ನಾನು ಗಾರೆ ಕೆಲಸ ಮಾತ್ರವಲ್ಲ, ಹೂ ಮಾರಿದ್ದೇನೆ, ಬೋಂಡಾ ಮಾಡಿ ಮಾರಿದ್ಧೇನೆ ಎಂದು ಚಿಕ್ಕಣ್ಣ ಕೆಲವೊಂದು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಕೊರೊನಾ ಲಾಕ್​ ಡೌನ್​​​ ಸಮಯದಲ್ಲಿ ಮೈಸೂರಿನ ತಮ್ಮ ಫಾರ್ಮ್​ ಹೌಸ್​​​​ನಲ್ಲಿ ಕರಣಿ ಹಿಡಿದು ಗಾರೆ ಕೆಲಸ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು.
(6 / 9)

ಕಾಕ್ರೋಚ್ ಸುಧೀರ್: ಸಿನಿಮಾಗಳಲ್ಲಿ ವಿಲನ್ ಪಾತ್ರಗಳಿಂದಲೇ ಹೆಸರಾಗಿರುವ ಕಾಕ್ರೋಚ್ ಸುಧೀರ್ ಈಗ ಚಿತ್ರವೊಂದರಲ್ಲಿ ನಾಯಕನಾಗಿ ಕೂಡಾ ನಟಿಸುತ್ತಿದ್ದಾರೆ. ಚಿತ್ರರಂಗಕ್ಕೆ ಬರುವ ಮುನ್ನ ಸೈನ್ ಬೋರ್ಡ್, ವಾಲ್ ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಬೆಂಗಳೂರಿನ ವಿಜಯನಗರದಲ್ಲಿ ಕಾಕ್ರೋಚ್ ಸುಧೀರ್ ಅವರ ಶ್ರೀ ಆರ್ಟ್ಸ ಎಂಬ ಶಾಪ್ ಇದೆ. ಈಗಲೂ ಕೂಡಾ ಅವರು ಆ ಕೆಲಸ ಮಾಡುತ್ತಿದ್ದಾರೆ. ಶೂಟಿಂಗ್​ ಮುಗಿಸಿದ ನಂತರ ನಾನು ನೇರವಾಗಿ ಅಂಗಡಿಗೆ ಬಂದು ಪೇಂಟಿಂಗ್ ಕೆಲಸ ಮಾಡುತ್ತೇನೆ ಎನ್ನುತ್ತಾರೆ ಸುಧೀರ್.
(7 / 9)

ರಕ್ಷಿತ್ ಶೆಟ್ಟಿ: 'ನಮ್ ಏರಿಯಾಲ್ಲೊಂದು ದಿನ' ಚಿತ್ರದ ಮೂಲಕ ಸಿನಿರಂಗಕ್ಕೆ ಬಂದು 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ದೊಡ್ಡ ಯಶಸ್ಸು ಕಂಡ ರಕ್ಷಿತ್ ಶೆಟ್ಟಿ ಇಂಜಿನಿಯರಿಂಗ್ ಪದವೀಧರ. ಚಿತ್ರರಂಗಕ್ಕೆ ಬರುವ ಮುನ್ನ ಅವರು ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸಿನಿಮಾ ಬಗ್ಗೆ ಮೊದಲಿನಿಂದಲೂ ಒಲವಿದ್ದ ಅವರು ಕೆಲಸದ ಜೊತೆ ಜೊತೆಗೆ ಶಾರ್ಟ್ ಫಿಲ್ಮ್​​ಗಳಲ್ಲಿ ಕೂಡಾ ತೊಡಗಿಸಿಕೊಂಡಿದ್ದರು.
(8 / 9)

ನೆನಪಿರಲಿ ಪ್ರೇಮ್: ಧಾರಾವಾಹಿ ಮೂಲಕ ಬಣ್ಣದ ಪಯಣ ಆರಂಭಿಸಿ 'ಪ್ರಾಣ' ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟ ಪ್ರೇಮ್​​​​ ಚಿತ್ರರಂಗಕ್ಕೆ ಬರುವ ಮುನ್ನ ಸೀರೆ ನೇಯುವುದು ಹಾಗೂ ನಂತರ ಟೆಲಿಕಾಂ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಈಗ ಚಿತ್ರರಂಗದ ಸ್ಟಾರ್ ನಟರಲ್ಲಿ ಪ್ರೇಮ್ ಕೂಡಾ ಒಬ್ಬರು. ಪ್ರೇಮ್ ತಂದೆ ಕೂಡಾ ಪವರ್ ಲೂಮ್ ನೇಕಾರರಾಗಿ ಕೆಲಸ ಮಾಡುತ್ತಿದ್ದರಿಂದ ಪ್ರೇಮ್ ಕೂಡಾ ಆ ಕೆಲಸ ಕಲಿತಿದ್ದರು. ತಮ್ಮ ಮುದ್ದಿನ ಮಡದಿ ಜ್ಯೋತಿಗೆ ತಾವೇ ಕೈಯಾರೆ ನೇಯ್ದ ಸೀರೆಯನ್ನು ಕೂಡಾ ಅವರು ಗಿಫ್ಟ್ ಆಗಿ ನೀಡಿದ್ದ ವಿಚಾರವನ್ನು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿಕೊಂಡಿದ್ದರು.
(9 / 9)

    ಹಂಚಿಕೊಳ್ಳಲು ಲೇಖನಗಳು