logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tagaru Palya: ಹೇಗಿದೆ ಅಮೃತಾ ಪ್ರೇಮ್‌ ನಾಗಭೂಷಣ್‌ ಜೋಡಿ; ಟಗರು ಪಲ್ಯ ಮೇಕಿಂಗ್‌ ಸ್ಟಿಲ್ಸ್‌ ಇಲ್ಲಿವೆ ನೋಡಿ

Tagaru Palya: ಹೇಗಿದೆ ಅಮೃತಾ ಪ್ರೇಮ್‌ ನಾಗಭೂಷಣ್‌ ಜೋಡಿ; ಟಗರು ಪಲ್ಯ ಮೇಕಿಂಗ್‌ ಸ್ಟಿಲ್ಸ್‌ ಇಲ್ಲಿವೆ ನೋಡಿ

Oct 26, 2023 03:25 PM IST

ಡಾಲಿ ಪಿಕ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ ನಟ ಧನಂಜಯ್‌ ನಿರ್ಮಿಸಿರುವ ಟಗರು ಪಲ್ಯ ಸಿನಿಮಾ ಅಕ್ಟೋಬರ್‌ 27 ರಂದು ತೆರೆ ಕಾಣುತ್ತಿದೆ. 

ರಾಜ್ಯಾದ್ಯಂತ ಸುಮಾರು 175 ಥಿಯೇಟರ್‌ಗಳಲ್ಲಿ ಟಗರು ಪಲ್ಯ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ಇಕ್ಕಟ್‌ ಖ್ಯಾತಿಯ ನಾಗಭೂಷಣ್‌ ಹಾಗೂ ಪ್ರೇಮ್‌ ಪುತ್ರಿ ಅಮೃತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 
(1 / 9)

ಟಗರು ಪಲ್ಯ ಮೇಕಿಂಗ್‌ ಫೋಟೋಗಳು ರಿವೀಲ್‌ ಆಗಿವೆ. ಈ ಚಿತ್ರದಲ್ಲಿ ನಾಗಭೂಷಣ್‌, ಅಮೃತಾ ಪ್ರೇಮ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರೂ ಹೆಸರಿಗೆ ತಕ್ಕಂತೆ ಟಗರೇ ಈ ಚಿತ್ರದ ಹೀರೋ. 
(2 / 9)

ಕೆಲವು ದಿನಗಳ ಹಿಂದಷ್ಟೇ ಟಗರು ಪಲ್ಯ ಚಿತ್ರದ ಟ್ರೇಲರ್‌ ರಿಲೀಸ್‌ ಆಗಿತ್ತು. ಟ್ರೇಲರ್‌ ನೋಡಿ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದು ಸಿನಿಮಾ ನೋಡಲು ಕಾಯುತ್ತಿದ್ದಾರೆ. 
(3 / 9)

ಟಗರು ಪಲ್ಯ ಚಿತ್ರದಲ್ಲಿ ಗ್ರಾಮೀಣ ಭಾಗದ ಆಚರಣೆಯನ್ನು ತೋರಿಸಲಾಗಿದೆ. ಸಾಮಾನ್ಯವಾಗಿ ನಾನ್‌ವೆಜ್‌ ಕಾರ್ಯಕ್ರಮಗಳಿಗೆ ಕುರಿ, ಮೇಕೆಗಳನ್ನು ಕಡಿಯುವಾಗ ಅದು ತಲೆ ಒದರದಿದ್ದರೆ ಅದನ್ನು ಕಡಿಯಬಾರದು ಎಂಬ ನಂಬಿಕೆ ಇದೆ. ಟ್ರೈಲರ್‌ನಲ್ಲಿ ಕೂಡಾ ಅದನ್ನೇ ತೋರಿಸಲಾಗಿದೆ. 
(4 / 9)

ನಾಯಕಿಯ ತಂದೆ ತಾಯಿ ನಾನ್‌ ವೆಜ್‌ ಊಟಕ್ಕೆಂದು ಸಂಬಂಧಿಕರು, ಆಪ್ತರನ್ನು ಆಹ್ವಾನಿಸುತ್ತಾರೆ. ಆದರೆ ಟಗರು ತಲೆ ಒದರದ ಕಾರಣ ಅದನ್ನು ಕತ್ತರಿಸಲಾಗುವುದಿಲ್ಲ. ಊಟಕ್ಕೆ ಬಂದ ನೆಂಟರಿಷ್ಟರಿಗೆ ಮಾಂಸಾಹಾರ ತಯಾರಿದೆ ವೆಜಿಟೆಬಲ್‌ ಪಲಾವ್‌ ತಯಾರಿಸುವಂತೆ ನಾಯಕಿಯ ತಂದೆ ಹೇಳುವ ಡೈಲಾಗ್‌ಗಳು ಟ್ರೈಲರ್‌ನಲ್ಲಿ ಗಮನ ಸೆಳೆಯುತ್ತದೆ. 
(5 / 9)

ಚಿತ್ರದಲ್ಲಿ ನಾಯಕಿಯ ತಾಯಿ ಪಾತ್ರದಲ್ಲಿ ತಾರಾ ಅನುರಾಧಾ, ತಂದೆ ಪಾತ್ರದಲ್ಲಿ ರಂಗಾಯಣ ರಘು ನಟಿಸಿದ್ದಾರೆ. 
(6 / 9)

ಅಮೃತಾಗೆ ಇದು ಮೊದಲ ಸಿನಿಮಾ ಆದರೂ, ಆಕೆ ಬಹಳ ಅನುಭವ ಇರುವ ನಟಿ ಎನಿಸಿದು ಎಂದು ತಾರಾ, ಟಗರು ಪಲ್ಯ ಪ್ರೆಸ್‌ಮೀಟ್‌ನಲ್ಲಿ ಅಮೃತಾ ನಟನೆಯನ್ನು ಹೊಗಳಿದ್ದರು. 
(7 / 9)

ಉಮೇಶ್‌ ಕೃಪ ನಿರ್ದೇಶನದ ಟಗರು ಪಲ್ಯ ಚಿತ್ರಕ್ಕೆ ವಾಸುಕಿ ವೈಭವ್‌ ಸಂಗೀತ ನೀಡಿದ್ದು ಚಿತ್ರದಲ್ಲಿ ಒಂದು ಪಾತ್ರ ಕೂಡಾ ಮಾಡಿದ್ದಾರೆ. ಉಳಿದಂತೆ ಮೈಸೂರು ಆರ್ಕೆಸ್ಟ್ರಾ ಖ್ಯಾತಿಯ ಪೂರ್ಣಚಂದ್ರ, ಹಿರಿಯ ನಟ ವೈಜನಾಥ್‌ ಬಿರಾದಾರ್‌, ಚಿತ್ರಾ ಶೆಣೈ, ಶ್ರೀನಾಥ್‌ ವಸಿಷ್ಠ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ. 
(8 / 9)

ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಟಗರು ಪಲ್ಯ ಸಿನಿಮಾ ನೋಡಿ ಮೆಚ್ಚಿದ್ದು ಅಕ್ಟೋಬರ್‌ 27ರಂದು ಅವರು ಸಿನಿಮಾ ನೋಡಲಿದ್ದಾರೆ. 
(9 / 9)

    ಹಂಚಿಕೊಳ್ಳಲು ಲೇಖನಗಳು