logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಿಡಿಗೇಡಿಗಳಿಗೆ ಹೆದರಿದ್ರಾ ನಟಿ? ಕಾಮೆಂಟ್‌ ಬಾಕ್ಸ್‌ ಆಫ್‌ ಮಾಡಿ, ಹೀಗೂ ಸೀರೆ ಉಡಬಹುದು ಅಂತ ತೋರಿಸಿಕೊಟ್ಟ ಚೈತ್ರಾ ಆಚಾರ್

ಕಿಡಿಗೇಡಿಗಳಿಗೆ ಹೆದರಿದ್ರಾ ನಟಿ? ಕಾಮೆಂಟ್‌ ಬಾಕ್ಸ್‌ ಆಫ್‌ ಮಾಡಿ, ಹೀಗೂ ಸೀರೆ ಉಡಬಹುದು ಅಂತ ತೋರಿಸಿಕೊಟ್ಟ ಚೈತ್ರಾ ಆಚಾರ್

Apr 18, 2024 02:26 PM IST

Chaithra J Achar: ಇತ್ತೀಚಿನ ಕೆಲ ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಬೋಲ್ಡ್‌ ಬಿಂಕ ಬಿನ್ನಾಣದಿಂದಲೇ ಹಲ್‌ಚಲ್‌ ಸೃಷ್ಟಿಸುತ್ತಿದ್ದಾರೆ ನಟಿ ಚೈತ್ರಾ ಜೆ ಆಚಾರ್.‌ ತುಂಡುಡುಗೆಯಲ್ಲಿ ಮನಸೆಳೆದ ಈ ನಟಿ ಸೀರೆಯಲ್ಲೂ ಮನಮೋಹಕ. ಈಗ ಹೀಗೂ ಸೀರೆ ಉಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

  • Chaithra J Achar: ಇತ್ತೀಚಿನ ಕೆಲ ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಬೋಲ್ಡ್‌ ಬಿಂಕ ಬಿನ್ನಾಣದಿಂದಲೇ ಹಲ್‌ಚಲ್‌ ಸೃಷ್ಟಿಸುತ್ತಿದ್ದಾರೆ ನಟಿ ಚೈತ್ರಾ ಜೆ ಆಚಾರ್.‌ ತುಂಡುಡುಗೆಯಲ್ಲಿ ಮನಸೆಳೆದ ಈ ನಟಿ ಸೀರೆಯಲ್ಲೂ ಮನಮೋಹಕ. ಈಗ ಹೀಗೂ ಸೀರೆ ಉಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಮಹಿರಾ, ತಲೆದಂಡದಲ್ಲಿ ನಟಿಸಿದರೂ, ಟೋಬಿ ಸಿನಿಮಾ ಮೂಲಕ ಹೆಚ್ಚು ಪ್ರಚಲಿತಕ್ಕೆ ಬಂದ ನಟಿ ಚೈತ್ರಾ ಜೆ ಆಚಾರ್‌. ಆ ಸಿನಿಮಾದಲ್ಲಿನ ಪಾತ್ರದಿಂದ ಕನ್ನಡಿಗರ ಗಮನ ಸೆಳೆದರು.
(1 / 7)
ಮಹಿರಾ, ತಲೆದಂಡದಲ್ಲಿ ನಟಿಸಿದರೂ, ಟೋಬಿ ಸಿನಿಮಾ ಮೂಲಕ ಹೆಚ್ಚು ಪ್ರಚಲಿತಕ್ಕೆ ಬಂದ ನಟಿ ಚೈತ್ರಾ ಜೆ ಆಚಾರ್‌. ಆ ಸಿನಿಮಾದಲ್ಲಿನ ಪಾತ್ರದಿಂದ ಕನ್ನಡಿಗರ ಗಮನ ಸೆಳೆದರು.(Instagram/ Chaithra J Achar)
ಅದಾದ ಬಳಿಕ ಬಂದ  ಸಪ್ತಸಾಗರದಾಚೆ ಎಲ್ಲೋ ಸೈಡ್‌ ಬಿ ಸಹ ನೋಡುಗರಿಗೆ ಇಷ್ಟವಾಯ್ತು. ಚೈತ್ರಾ ವೇಶ್ಯೆಯ ಪಾತ್ರಕ್ಕೆ ಬಣ್ಣ ಹಚ್ಚಿ ಪಾತ್ರ ಪರಕಾಯ ಪ್ರವೇಶಿಸಿದ್ದರು. ಬ್ಲಿಂಕ್‌ ಚಿತ್ರದಲ್ಲಿನ ಪಾತ್ರಕ್ಕೂ ಮೆಚ್ಚುಗೆ ಸಿಕ್ಕಿತ್ತು. 
(2 / 7)
ಅದಾದ ಬಳಿಕ ಬಂದ  ಸಪ್ತಸಾಗರದಾಚೆ ಎಲ್ಲೋ ಸೈಡ್‌ ಬಿ ಸಹ ನೋಡುಗರಿಗೆ ಇಷ್ಟವಾಯ್ತು. ಚೈತ್ರಾ ವೇಶ್ಯೆಯ ಪಾತ್ರಕ್ಕೆ ಬಣ್ಣ ಹಚ್ಚಿ ಪಾತ್ರ ಪರಕಾಯ ಪ್ರವೇಶಿಸಿದ್ದರು. ಬ್ಲಿಂಕ್‌ ಚಿತ್ರದಲ್ಲಿನ ಪಾತ್ರಕ್ಕೂ ಮೆಚ್ಚುಗೆ ಸಿಕ್ಕಿತ್ತು. 
ಹೀಗೆ ನಟನೆಯ ಮೂಲಕವೇ ಬ್ಯಾಕ್‌ ಟು ಬ್ಯಾಕ್‌ ಸಿನಿಮಾ ಆಫರ್‌ ಗಿಟ್ಟಿಸಿಕೊಳ್ಳುತ್ತಿರುವ ಇದೇ ಚೈತ್ರಾ, ಇತ್ತೀಚೆಗಷ್ಟೇ ಉತ್ತರಕಾಂಡ ಸಿನಿಮಾಕ್ಕೂ ಆಯ್ಕೆಯಾಗಿದ್ದರು.
(3 / 7)
ಹೀಗೆ ನಟನೆಯ ಮೂಲಕವೇ ಬ್ಯಾಕ್‌ ಟು ಬ್ಯಾಕ್‌ ಸಿನಿಮಾ ಆಫರ್‌ ಗಿಟ್ಟಿಸಿಕೊಳ್ಳುತ್ತಿರುವ ಇದೇ ಚೈತ್ರಾ, ಇತ್ತೀಚೆಗಷ್ಟೇ ಉತ್ತರಕಾಂಡ ಸಿನಿಮಾಕ್ಕೂ ಆಯ್ಕೆಯಾಗಿದ್ದರು.
ಹೀಗೆ ಒಳ್ಳೊಳ್ಳೆಯ ಸಿನಿಮಾ ತಂಡಗಳನ್ನೇ ಸೇರುತ್ತ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ ನಟಿ ಚೈತ್ರಾ ಆಚಾರ್.
(4 / 7)
ಹೀಗೆ ಒಳ್ಳೊಳ್ಳೆಯ ಸಿನಿಮಾ ತಂಡಗಳನ್ನೇ ಸೇರುತ್ತ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ ನಟಿ ಚೈತ್ರಾ ಆಚಾರ್.
ಸಿನಿಮಾ ಮಾತ್ರವಲ್ಲದೆ ಸೋಷಿಯಲ್‌ ಮೀಡಿಯಾದಲ್ಲೂ ಚೈತ್ರಾ ಸಕ್ರಿಯರು. ನಾರ್ಮಲ್‌ ಲುಕ್‌ನಲ್ಲಿ ಕಾಣಿಸಿಕೊಳ್ಳದ ಚೈತ್ರಾ, ಕೊಂಚ ಬೋಲ್ಡ್‌ ವರಸೆಯಲ್ಲಿ ಪ್ರತ್ಯಕ್ಷರಾಗುತ್ತಾರೆ.
(5 / 7)
ಸಿನಿಮಾ ಮಾತ್ರವಲ್ಲದೆ ಸೋಷಿಯಲ್‌ ಮೀಡಿಯಾದಲ್ಲೂ ಚೈತ್ರಾ ಸಕ್ರಿಯರು. ನಾರ್ಮಲ್‌ ಲುಕ್‌ನಲ್ಲಿ ಕಾಣಿಸಿಕೊಳ್ಳದ ಚೈತ್ರಾ, ಕೊಂಚ ಬೋಲ್ಡ್‌ ವರಸೆಯಲ್ಲಿ ಪ್ರತ್ಯಕ್ಷರಾಗುತ್ತಾರೆ.
ಈಗ ಸೀರೆಯ ಫೋಟೋಶೂಟ್‌ ಜತೆಗೆ ಆಗಮಿಸಿದ್ದಾರೆ. ಸೀರೆಯಲ್ಲೂ ಕೊಂಚ ಮಾದಕತೆ ಉಕ್ಕಿಸಿದ್ದಾರೆ ಚೈತ್ರಾ. ಆದರೆ, ಕಿಡಿಗೇಡಿಗಳ ಕಾಟಕ್ಕೆ ಬೇಸತ್ತಿದ್ದಾರೆ. 
(6 / 7)
ಈಗ ಸೀರೆಯ ಫೋಟೋಶೂಟ್‌ ಜತೆಗೆ ಆಗಮಿಸಿದ್ದಾರೆ. ಸೀರೆಯಲ್ಲೂ ಕೊಂಚ ಮಾದಕತೆ ಉಕ್ಕಿಸಿದ್ದಾರೆ ಚೈತ್ರಾ. ಆದರೆ, ಕಿಡಿಗೇಡಿಗಳ ಕಾಟಕ್ಕೆ ಬೇಸತ್ತಿದ್ದಾರೆ. 
ಈ ಹಿಂದೆ ಬೋಲ್ಡ್‌ ಫೋಟೋ ಶೇರ್‌ ಮಾಡಿದ್ದಕ್ಕೆ, ಚೈತ್ರಾ ಬಗ್ಗೆ ನೆಗೆಟಿವ್‌ ಕಾಮೆಂಟ್‌ಗಳೇ ಹೆಚ್ಚು ಸಂದಾಯವಾಗಿದ್ದವು. ಈಗಿನ ಫೋಟೋಗಳಿಗೂ ಕೆಟ್ಟ ಕಾಮೆಂಟ್‌ಗಳೇ ಬರಬಹುದು ಎಂಬ ಕಾರಣಕ್ಕೆ, ಕಾಮೆಂಟ್‌ ಬಾಕ್ಸ್‌ ಆಫ್‌ ಮಾಡಿ ಫೋಟೋ ಹಂಚಿಕೊಂಡಿದ್ದಾರೆ. 
(7 / 7)

    ಹಂಚಿಕೊಳ್ಳಲು ಲೇಖನಗಳು