logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜೈಸ್ವಾಲ್ ದ್ವಿಶತಕದ ನಡುವೆ ಸದ್ಧಿಲ್ಲದೆ ದಾಖಲೆ ಬರೆದ ಸರ್ಫರಾಜ್ ಖಾನ್; ಗವಾಸ್ಕರ್, ಅಯ್ಯರ್ ಪಟ್ಟಿಗೆ ಸೇರಿದ ಮುಂಬೈಕರ್

ಜೈಸ್ವಾಲ್ ದ್ವಿಶತಕದ ನಡುವೆ ಸದ್ಧಿಲ್ಲದೆ ದಾಖಲೆ ಬರೆದ ಸರ್ಫರಾಜ್ ಖಾನ್; ಗವಾಸ್ಕರ್, ಅಯ್ಯರ್ ಪಟ್ಟಿಗೆ ಸೇರಿದ ಮುಂಬೈಕರ್

Feb 18, 2024 06:37 PM IST

Sarfaraz Khan : ಸರ್ಫರಾಜ್ ಖಾನ್ ಚೊಚ್ಚಲ ಟೆಸ್ಟ್​ ಪಂದ್ಯದ ಎರಡೂ ಇನ್ನಿಂಗ್ಸ್​​ನಲ್ಲಿ ಅರ್ಧಶತಕ ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ. ಆ ಮೂಲಕ ಸುನಿಲ್ ಗವಾಸ್ಕರ್, ಶ್ರೇಯಸ್ ಅಯ್ಯರ್ ಸಾಲಿಗೆ ಸೇರಿದ್ದಾರೆ.

  • Sarfaraz Khan : ಸರ್ಫರಾಜ್ ಖಾನ್ ಚೊಚ್ಚಲ ಟೆಸ್ಟ್​ ಪಂದ್ಯದ ಎರಡೂ ಇನ್ನಿಂಗ್ಸ್​​ನಲ್ಲಿ ಅರ್ಧಶತಕ ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ. ಆ ಮೂಲಕ ಸುನಿಲ್ ಗವಾಸ್ಕರ್, ಶ್ರೇಯಸ್ ಅಯ್ಯರ್ ಸಾಲಿಗೆ ಸೇರಿದ್ದಾರೆ.
ಇಂಗ್ಲೆಂಡ್​ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯಕ್ಕೆ ಪದಾರ್ಪಣೆ ಮಾಡಿದ ಯುವ ಆಟಗಾರ ಸರ್ಫರಾಜ್ ಖಾನ್, ತನ್ನ ಚೊಚ್ಚಲ ಪಂದ್ಯದಲ್ಲೇ ದಾಖಲೆ ಬರೆದಿದ್ದಾರೆ. ಮೊದಲ ಟೆಸ್ಟ್‌ನಲ್ಲೇ ಗಮನ ಸೆಳೆದ ಮುಂಬೈಕರ್​ ಎರಡೂ ಇನ್ನಿಂಗ್ಸ್​​ಗಳಲ್ಲಿ ಕ್ರಮವಾಗಿ 62 ರನ್ ಮತ್ತು ಅಜೇಯ 68 ರನ್‌ ಕಲೆಹಾಕಿದರು.
(1 / 8)

ಚೊಚ್ಚಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ 50 ಪ್ಲಸ್ ರನ್ಸ ಬಾರಿಸಿದ ಭಾರತದ ನಾಲ್ಕನೇ ಆಟಗಾರ ಎಂಬ ದಾಖಲೆಗೆ ಪಾತ್ರರಾದರು. ದಿಗ್ಗಜರಾದ ದಿಲ್ವಾರ್ ಹೊಸೈನ್, ಸುನಿಲ್ ಗವಾಸ್ಕರ್, ಶ್ರೇಯಸ್ ಅಯ್ಯರ್ ಅವರ ನಂತರ ಸರ್ಫರಾಜ್ ಸ್ಥಾನ ಪಡೆದಿದ್ದಾರೆ.
(2 / 8)

ದಿಲ್ವಾರ್​ ಹೊಸೈನ್ 1934ರಲ್ಲಿ ಇಂಗ್ಲೆಂಡ್ ವಿರುದ್ಧ ಪದಾರ್ಪಣೆ ಮಾಡಿದರು. ಆ ಪಂದ್ಯದಲ್ಲಿ 59 ಮತ್ತು 57 ರನ್ ಕಲೆ ಹಾಕಿದರು. 1971ರಲ್ಲಿ ಸುನಿಲ್ ಗವಾಸ್ಕರ್​ ವೆಸ್ಟ್ ಇಂಡೀಸ್ ವಿರುದ್ಧ ಡೆಬ್ಯೂ ಮಾಡಿದ ಪಂದ್ಯದಲ್ಲಿ 65 ಮತ್ತು 67 ರನ್ ಗಳಿಸಿದ್ದರು.
(3 / 8)

ಮತ್ತೊಂದೆಡೆ ಶ್ರೇಯಸ್ 2021ರಲ್ಲಿ ನ್ಯೂಜಿಲೆಂಡ್ ಎದುರು ಪದಾರ್ಪಣೆ ಮಾಡಿದರು. ಈ ಪಂದ್ಯದಲ್ಲಿ 105 ಮತ್ತು 65 ರನ್ ಕಲೆ ಹಾಕಿದರು. ಸರ್ಫರಾಜ್ 62 ಮತ್ತು 68* ರನ್ ಕಲೆ ಹಾಕಿ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಆಟಗಾರ ಎನಿಸಿದ್ದಾರೆ.
(4 / 8)
ಮತ್ತೊಂದೆಡೆ ಶ್ರೇಯಸ್ 2021ರಲ್ಲಿ ನ್ಯೂಜಿಲೆಂಡ್ ಎದುರು ಪದಾರ್ಪಣೆ ಮಾಡಿದರು. ಈ ಪಂದ್ಯದಲ್ಲಿ 105 ಮತ್ತು 65 ರನ್ ಕಲೆ ಹಾಕಿದರು. ಸರ್ಫರಾಜ್ 62 ಮತ್ತು 68* ರನ್ ಕಲೆ ಹಾಕಿ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಆಟಗಾರ ಎನಿಸಿದ್ದಾರೆ.
ರಾಜ್‌ಕೋಟ್ ಟೆಸ್ಟ್‌ನ ಭಾರತದ 2ನೇ ಇನ್ನಿಂಗ್ಸ್‌ನಲ್ಲಿ ಸರ್ಫರಾಜ್ 72 ಎಸೆತಗಳಲ್ಲಿ ಅಜೇಯ 68 ರನ್ ಗಳಿಸಿದರು. ಆದರೆ ಸರ್ಫರಾಜ್ ಶತಕ ಸಿಡಿಸಿದ ಬಳಿಕ ಡಿಕ್ಲೇರ್ ಘೋಷಿಸಿ ಎಂದು ಅಭಿಮಾನಿಗಳು ರೋಹಿತ್​ಗೆ ಮನವಿ ಮಾಡಿದರು.
(5 / 8)
ರಾಜ್‌ಕೋಟ್ ಟೆಸ್ಟ್‌ನ ಭಾರತದ 2ನೇ ಇನ್ನಿಂಗ್ಸ್‌ನಲ್ಲಿ ಸರ್ಫರಾಜ್ 72 ಎಸೆತಗಳಲ್ಲಿ ಅಜೇಯ 68 ರನ್ ಗಳಿಸಿದರು. ಆದರೆ ಸರ್ಫರಾಜ್ ಶತಕ ಸಿಡಿಸಿದ ಬಳಿಕ ಡಿಕ್ಲೇರ್ ಘೋಷಿಸಿ ಎಂದು ಅಭಿಮಾನಿಗಳು ರೋಹಿತ್​ಗೆ ಮನವಿ ಮಾಡಿದರು.
ಸರ್ಫರಾಜ್ ಖಾನ್ ಅವರು ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರಿಂದ ಟೆಸ್ಟ್ ಕ್ಯಾಪ್ ಅನ್ನು ಪಡೆದರು. ದೇಶೀಯ ಕ್ರಿಕೆಟ್​ನಲ್ಲಿ ರನ್ ಮಳೆ ಹರಿಸಿದ್ದರೂ ಮೊದಲು ಅವಕಾಶ ಸಿಕ್ಕಿರಲಿಲ್ಲ. ಇದೀಗ ಕೊನೆಗೂ ಅವಕಾಶ ಸಿಕ್ಕಿದ್ದು ಅದ್ಭುತ ಪ್ರದರ್ಶನ ನೀಡಿದ್ದಾರೆ.
(6 / 8)
ಸರ್ಫರಾಜ್ ಖಾನ್ ಅವರು ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರಿಂದ ಟೆಸ್ಟ್ ಕ್ಯಾಪ್ ಅನ್ನು ಪಡೆದರು. ದೇಶೀಯ ಕ್ರಿಕೆಟ್​ನಲ್ಲಿ ರನ್ ಮಳೆ ಹರಿಸಿದ್ದರೂ ಮೊದಲು ಅವಕಾಶ ಸಿಕ್ಕಿರಲಿಲ್ಲ. ಇದೀಗ ಕೊನೆಗೂ ಅವಕಾಶ ಸಿಕ್ಕಿದ್ದು ಅದ್ಭುತ ಪ್ರದರ್ಶನ ನೀಡಿದ್ದಾರೆ.(ANI)
ಮೂರನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ 434 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಇಂಗ್ಲೆಂಡ್ ವಿರುದ್ದದ 5ನೇ ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಪಡೆದಿದೆ.
(7 / 8)
ಮೂರನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ 434 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಇಂಗ್ಲೆಂಡ್ ವಿರುದ್ದದ 5ನೇ ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಪಡೆದಿದೆ.(PTI)
ಕ್ಷಣಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
(8 / 8)
ಕ್ಷಣಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.

    ಹಂಚಿಕೊಳ್ಳಲು ಲೇಖನಗಳು