logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  B-town Independence Day: ಬಾಲಿವುಡ್​ ಮಂದಿಯ ಸ್ವಾತಂತ್ರೋತ್ಸವದ ಸಂಭ್ರಮವನ್ನು ಪೋಟೋಗಳಲ್ಲಿ ನೋಡಿ..

B-Town Independence Day: ಬಾಲಿವುಡ್​ ಮಂದಿಯ ಸ್ವಾತಂತ್ರೋತ್ಸವದ ಸಂಭ್ರಮವನ್ನು ಪೋಟೋಗಳಲ್ಲಿ ನೋಡಿ..

Aug 15, 2022 05:26 PM IST

ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯಲ್ಲಿ ಮುಳುಗಿದೆ. ಹರ್​ ಘರ್​ ತಿರಂಗಾ ಅಭಿಯಾನದ ಭಾಗವಾಗಿ ದೇಶದ ಬಹುತೇಕ ಎಲ್ಲಾ ಮನೆಗಳಲ್ಲೂ ತಿರಂಗ ಹಾರಿಸಲಾಗಿದೆ. ಬಾಲಿವುಡ್​ ತಾರೆಯರು ಸಹ ತಮ್ಮ ತಮ್ಮ ನಿವಾಸಗಳ ಮೇಲೆ ರಾಷ್ಟ್ರಧ್ವಜ ಹಾರಿಸಿ ದೇಶಪ್ರೇಮ ಮೆರೆದಿದ್ದಾರೆ. ಕೆಲವರು ಬಾವುಟದೊಂದಿಗಿನ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. ಬಾಲಿವುಡ್​ ಮಂದಿಯ ಸ್ವಾತಂತ್ರೋತ್ಸವದ ಸಂಭ್ರಮವನ್ನು ಪೋಟೋಗಳಲ್ಲಿ ನೋಡಿ..

ನಟಿ ಸೋನಾಲಿ ಬೇಂದ್ರೆ ಅವರು ಅಮೆರಿಕಾದಲ್ಲಿ ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದಾರೆ. ಅಲ್ಲಿನ ಧ್ವಜಾರೋಹಣ ಸಮಾರಂಭದ ಚಿತ್ರಗಳನ್ನು ಸಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
(1 / 13)

ರಾಷ್ಟ್ರಧ್ವಜವನ್ನು ಹಿಡಿದಿರುವ ಫೋಟೋವನ್ನು ಹಂಚಿಕೊಂಡಿರುವ ನಟ ಅರ್ಜುನ್ ಕಪೂರ್ "ಝಂಡಾ ಊಂಚಾ ರಹೇ ಹಮಾರಾ" ಎಂದು ಬರೆದುಕೊಂಡಿದ್ದಾರೆ.
(2 / 13)

ಬಾಲಿವುಡ್​ನ ಸ್ಟಾರ್ ದಂಪತಿಯಾದ ಕುನಾಲ್ ಕೆಮ್ಮು ಹಾಗೂ ಸೋಹಾ ಅಲಿ ಖಾನ್ ಅವರು ತಮ್ಮ ಮಗಳು ಇನಾಯಾ ನೌಮಿ ಕೆಮ್ಮು ಜೊತೆಗೆ ಧ್ವಜಾರೋಹಣ ಮಾಡುತ್ತಿರುವ ಫೋಟೋ ಇದಾಗಿದೆ.
(3 / 13)

ಖ್ಯಾತ ನಟ ವರುಣ್ ಧವನ್ ಅವರು ತಮ್ಮ ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದಿರುವ ಫೋಟೋ ಶೇರ್ ಮಾಡಿದ್ದು, "ಹಮ್‌ ಜಹಾನ್ ಭಿ ರಹೇಂ, ಝಂಡಾ ಊಂಚಾ ರಹೇ ಹುಮಾರಾ" ಎಂದು ಕ್ಯಾಪ್ಶನ್​ ನೀಡಿದ್ದಾರೆ.
(4 / 13)

'ಲೈಗರ್'​ ಚಿತ್ರದ ಮೂಲಕ ಬಾಲಿವುಡ್​ಗೆ ಕಾಲಿಟ್ಟಿರುವ ತೆಲುಗು ಖ್ಯಾತ ನಟ ವಿಜಯ್ ದೇವರಕೊಂಡ ಅವರು ರಾಷ್ಟ್ರಧ್ವಜದೊಂದಿಗೆ ತಮ್ಮ ಫೋಟೋವನ್ನು ಹಂಚಿಕೊಂಡು ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದ್ದಾರೆ.
(5 / 13)

ಬಾಲಿವುಡ್​ ಬಾದ್​ಷಾ ಶಾರುಖ್ ಖಾನ್ ಅವರು ತಮ್ಮ ಪತ್ನಿ ಗೌರಿ ಖಾನ್, ಪುತ್ರರಾದ ಅಬ್ರಾಮ್ ಖಾನ್ ಮತ್ತು ಆರ್ಯನ್ ಖಾನ್ ಅವರೊಂದಿಗೆ ತಮ್ಮ ನಿವಾಸ 'ಮನ್ನತ್​' ಮೇಲೆ ಧ್ವಜ ಹಾರಿಸಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರು. ಎಲ್ಲರೂ ಬಿಳಿ ಬಟ್ಟೆ ಧರಿಸಿ ರಾಷ್ಟ್ರಧ್ವಜದ ಮುಂದೆ ಪೋಸ್ ನೀಡಿರುವ ಫೋಟೋ ಇದಾಗಿದೆ.
(6 / 13)

ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆ ಖ್ಯಾತ ನಟ ಸಲ್ಮಾನ್​ ಖಾನ್​ ಆಗಸ್ಟ್ 11ರಂದು ತಮ್ಮ ಇಡೀ ದಿನವನ್ನು ವಿಶಾಖಪಟ್ಟಣಂನಲ್ಲಿನ ಭಾರತೀಯ ನೌಕಾಪಡೆಯ ಸೈನಿಕರ ಜತೆಗೆ ಕಳೆಯುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ಆಚಿಸಿದ್ದಾರೆ.
(7 / 13)

ನಟಿ ಪ್ರೀತಿ ಝಿಂಟಾ ಕೂಡ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದಿರುವ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
(8 / 13)

ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ತಮ್ಮ ಪತಿ ವಿರಾಟ್​ ಕೊಹ್ಲಿ ಜೊತೆ ರಾಷ್ಟ್ರಧ್ವಜದ ಮುಂದೆ ಪೋಸ್​ ನೀಡಿರುವ ಫೋಟೋ ಹಂಚಿಕೊಂಡಿದ್ದು, ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದ್ದಾರೆ.
(9 / 13)

ಬಾಲಿವುಡ್​ ಹಾಗೂ ದಕ್ಷಿಣ ಭಾರತದ ನಟಿ ರಕುಲ್​ ಪ್ರೀತ್​ ಸಿಂಗ್​ ಅವರು ಬಿಳಿ ಉಡುಪು ಧರಿಸಿ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದಿರುವ ಫೋಟೋ ಹಂಚಿಕೊಂಡಿದ್ದಾರೆ.
(10 / 13)

ನಟ ಕಾರ್ತಿಕ್ ಆರ್ಯನ್ ಭಾರತೀಯ ನೌಕಾಪಡೆಯ ಅಧಿಕಾರಿಗಳನ್ನು ಭೇಟಿಯಾಗಿ ಅವರೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಿರುವ ಫೋಟೋವನ್ನು ಶೇರ್​ ಮಾಡಿದ್ದಾರೆ. "ಭಾರತೀಯನಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು" ಎಂದು ಶೀರ್ಷಿಕೆ ನೀಡಿದ್ದಾರೆ.
(11 / 13)

ನಟಿ ಸಾರಾ ಅಲಿ ಖಾನ್​ ಕೇಸರಿ, ಬಳಿ, ಹಸಿರು ಬಣ್ಣದ ಉಡುಪು ಧರಿಸಿರುವ ಮೂರು ಫೋಟೋಗಳನ್ನು ಮರ್ಜ್​ ಮಾಡಿ ಸ್ವಾತಂತ್ರ್ಯ ದಿನವಾದ ಇಂದು ಹಂಚಿಕೊಂಡಿದ್ದಾರೆ.
(12 / 13)

ಬಾಲಿವುಡ್​ ಮಂದಿಯ ಸ್ವಾತಂತ್ರೋತ್ಸವದ ಸಂಭ್ರಮ
(13 / 13)
ಬಾಲಿವುಡ್​ ಮಂದಿಯ ಸ್ವಾತಂತ್ರೋತ್ಸವದ ಸಂಭ್ರಮ

    ಹಂಚಿಕೊಳ್ಳಲು ಲೇಖನಗಳು