logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Shani Jayanti 2023: ಶುಕ್ರವಾರ ಶನಿ ಜಯಂತಿ; ಈ ಮೂರೂ ರಾಶಿಯವರಿಗೆ ಮಂಗಳ ಯೋಗದೊಂದಿಗೆ ಅದೃಷ್ಟದ ಬಾಗಿಲು ತೆರೆಯುವ ದಿನ

Shani Jayanti 2023: ಶುಕ್ರವಾರ ಶನಿ ಜಯಂತಿ; ಈ ಮೂರೂ ರಾಶಿಯವರಿಗೆ ಮಂಗಳ ಯೋಗದೊಂದಿಗೆ ಅದೃಷ್ಟದ ಬಾಗಿಲು ತೆರೆಯುವ ದಿನ

May 17, 2023 01:27 PM IST

ಈ ವರ್ಷ 19 ಮೇ ಶುಕ್ರವಾರ ಶನಿ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಬಾರಿಯ ಶನಿ ಜಯಂತಿಯು 3 ರಾಶಿಯವರಿಗೆ ಬಹಳ ಮಂಗಳಕರವಾಗಿರುತ್ತದೆ. ಯಾವ ರಾಶಿಯವರಿಗೆ ಏನೆಲ್ಲಾ ಶುಭ ಫಲಗಳನ್ನು ಪಡೆಯಲಿದ್ದಾರೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

  • ಈ ವರ್ಷ 19 ಮೇ ಶುಕ್ರವಾರ ಶನಿ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಬಾರಿಯ ಶನಿ ಜಯಂತಿಯು 3 ರಾಶಿಯವರಿಗೆ ಬಹಳ ಮಂಗಳಕರವಾಗಿರುತ್ತದೆ. ಯಾವ ರಾಶಿಯವರಿಗೆ ಏನೆಲ್ಲಾ ಶುಭ ಫಲಗಳನ್ನು ಪಡೆಯಲಿದ್ದಾರೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಈ ಬಾರಿ ಮೇ 19 ಶುಕ್ರವಾರದಂದು ಶನಿ ಜಯಂತಿ ಇದೆ. ಈ ದಿನ ಜೇಷ್ಠ ಅಮವಾಸ್ಯೆ, ಶನಿ ದೇವನು ಈ ದಿನಾಂಕದಂದು ಜನಿಸಿದನು. ಈ ಬಾರಿ ಶನಿ ಜಯಂತಿಯಂದು ಗಜಕೇಸರಿ, ಶಶ ಮತ್ತು ಶೋಭನ 3 ಮಂಗಳ ಯೋಗಗಳು ರೂಪುಗೊಳ್ಳುತ್ತಿವೆ. ಶನಿ ಜಯಂತಿಯ ದಿನದಂದು ಶನಿದೇವನು ತನ್ನದೇ ಆದ ಕುಂಭ ರಾಶಿಯಲ್ಲಿ ನೆಲೆಸುತ್ತಾನೆ. ಈ ವರ್ಷ ಶನಿ ಜಯಂತಿಯು 3 ರಾಶಿಯವರಿಗೆ ಬಹಳ ಮಂಗಳಕರವಾಗಿರುತ್ತದೆ. ಈ ರಾಶಿಯವರು ಶನಿದೇವನಿಂದ ಆಶೀರ್ವದಿಸಲ್ಪಡುತ್ತಾರೆ. ಇದರಿಂದಾಗಿ ಅವರ ಜೀವನದಲ್ಲಿ ಸಂಪತ್ತು, ಸಮೃದ್ಧಿ, ಸಂತೋಷ ಇತ್ಯಾದಿಗಳು ಹೆಚ್ಚಾಗುತ್ತದೆ.  
(1 / 7)

ಮೇಷ: ಈ ರಾಶಿಯವರಿಗೆ ಶನಿ ಜಯಂತಿಯಂದು ಗಜಕೇಸರಿ ಯೋಗವು ಪ್ರಗತಿದಾಯಕವಾಗಿರುತ್ತದೆ. ಈ ದಿನ ಮೇಷ ರಾಶಿಯಲ್ಲಿ ಚಂದ್ರ ಮತ್ತು ಗುರುಗಳ ಸಂಯೋಗದಿಂದ ಗಜಕೇಸರಿ ಯೋಗವು ರೂಪುಗೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮೇಷ ರಾಶಿಯವರ ಸಂಪತ್ತು, ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನೀವು ಏನು ಮಾಡಬೇಕೆಂದು ಬಯಸುತ್ತೀರೋ ಅದನ್ನು ಮಾಡಿ. ನೀವು ಯಶಸ್ಸನ್ನು ಪಡೆಯುತ್ತೀರಿ. ನಿಮಗೆ ಶನಿದೇವನ ಆಶೀರ್ವಾದ ಸಿಗಲಿದೆ. ಇದರಿಂದ ಸಾಲದ ಸಮಸ್ಯೆ ಬಗೆಹರಿಯಲಿದೆ. ಗೃಹ ವ್ಯಾಜ್ಯಗಳೂ ದೂರವಾಗುತ್ತವೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಆದಾಯವು ಹೆಚ್ಚಾಗುತ್ತದೆ ಮತ್ತು ನೀವು ಹೆಚ್ಚುವರಿ ಆದಾಯಕ್ಕಾಗಿ ಪ್ರಯತ್ನಿಸುತ್ತೀರಿ, ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಹೊಸ ಆದಾಯದ ಮೂಲಗಳನ್ನು ಸಹ ರಚಿಸಬಹುದು. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
(2 / 7)

ಮಿಥುನ: ಶನಿ ಜಯಂತಿಯು ನಿಮ್ಮ ಅದೃಷ್ಟಕ್ಕೆ ಕಾರಣವಾಗಿದೆ. ಸ್ಥಾನ ಮತ್ತು ಖ್ಯಾತಿ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಉದ್ಯೋಗಿಗಳು ದೊಡ್ಡ ಹುದ್ದೆ ಅಥವಾ ಹೊಸ ಜವಾಬ್ದಾರಿಯನ್ನು ಪಡೆಯಬಹುದು, ಇದು ನಿಮ್ಮ ವೃತ್ತಿ ಜೀವನವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ. ನಿಮ್ಮ ಕೆಲಸ ಮತ್ತು ನಿರ್ಧಾರವನ್ನು ಪ್ರಶಂಸಿಸಲಾಗುತ್ತದೆ. ಸದ್ಯದ ಕೆಲಸದಿಂದ ತೃಪ್ತರಾಗದೇ ಹೊಸ ಉದ್ಯೋಗ ಹುಡುಕುತ್ತಿರುವವರು ಶುಭ ಸುದ್ದಿ ಪಡೆಯಬಹುದು. ಶನಿದೇವನ ಆಶೀರ್ವಾದದೊಂದಿಗೆ ಅದೃಷ್ಟವು ನಿಮ್ಮೊಂದಿಗೆ ಇರುತ್ತದೆ. ಸ್ಥಿರಾಸ್ತಿ ವಿಚಾರದಲ್ಲಿ ನಿರ್ಧಾರ ನಿಮ್ಮ ಪರವಾಗಿ ಬರಬಹುದು. ಕೆಲಸದಲ್ಲಿ ಯಶಸ್ಸು ಸಿಗಲಿದೆ.
(3 / 7)

ತುಲಾ: ಈ ರಾಶಿಯವರು ಯಾವಾಗಲೂ ಶನಿಯ ಆಶೀರ್ವಾದವನ್ನು ಹೊಂದಿರುತ್ತಾರೆ. ಈ ವರ್ಷ, ಶನಿ ಜಯಂತಿ ನಿಮ್ಮ ಬದುಕಿನಲ್ಲಿ ಸಂಪತ್ತು, ಸಂತೋಷ, ಸಮೃದ್ಧಿ, ಖ್ಯಾತಿ ಇತ್ಯಾದಿಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ. ಶನಿ ಜಯಂತಿಯಂದು ನೀವು ಉದ್ಯೋಗ ಅಥವಾ ವ್ಯವಹಾರದಲ್ಲಿ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಶನಿಯ ಅನುಗ್ರಹವು ನಿಮ್ಮ ವೃತ್ತಿ ಜೀವನವನ್ನು ಸುಧಾರಿಸುತ್ತದೆ. ಯಾವುದೇ ವಿಚಾರದಲ್ಲಿ ನಿಮಗೆ ಕೊರತೆ ಇರುವುದಿಲ್ಲ. ಒಟ್ಟಿನಲ್ಲಿ ಈ ಶನಿ ಜಯಂತಿಯು ನಿಮಗೆ ಸಕಲ ಮಂಗಳವನ್ನು ಉಂಟು ಮಾಡುತ್ತದೆ.  
(4 / 7)

ಯಾರೇ ಆಗಲಿ ಜೀವನದಲ್ಲಿ ಯಶಸ್ಸನ್ನು ಪಡೆಯಲು ಬಯಸಿದರೆ, ನಿಯಮಿತವಾಗಿ ಶನಿ ದೇವನನ್ನು ಆರಾಧಿಸಬೇಕು. ಪ್ರತಿದಿನ ಸಾಧ್ಯವಾಗದಿದ್ದರೆ ಶನಿವಾರದ ದಿನ ತಪ್ಪದೆ ಶನಿದೇವರ ಪೂಜೆಯನ್ನು ಮಾಡಿ. ಶನೈಶ್ಚರ ಅಷ್ಟೋತ್ತರ ಶತನಾಮಾವಳಿಯನ್ನು ಪಠಿಸಿ. ಸಾಧ್ಯವಾದರೆ ಶನಿ ದೇವಸ್ಥಾನಕ್ಕೆ ಹೋಗಿ ಬನ್ನಿ. 
(5 / 7)

ನಿಮ್ಮ ಮನೆಯ ಸಮೀಪ ಶನಿ ದೇವಸ್ಥಾನ ಇಲ್ಲದಿದ್ದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕೂಡಾ ಹೋಗಿ ಬರಬಹುದು. ಶನೈಶ್ಚರ ಮಂತ್ರದೊಂದಿಗೆ ಆಂಜನೇಯ ಅಷ್ಟೋತ್ತರ ಹಾಗೂ ಮಂತ್ರಗಳನ್ನು ಪಠಿಸಿದರೆ ಉತ್ತಮ. 
(6 / 7)

ಶನಿ ವೈದಿಕ ಮಂತ್ರ: ಓಂ ಶನ್ನೋದೇವಿರಾಭಿಷ್ಟಯ ಆಪೋ ಭವಂತು ಶನ್ಯೋರಭಿಸ್ತವಂತು ನಃಶನಿ ಮಹಾಮಂತ್ರ : ಶ್ರೀ ನೀಲಾಂಜನ ಸಮಾಭಾಸಂ ರವಿ ಪುತ್ರಂ ಯಮಾಗ್ರಜಂಛಾಯಾ ಮಾರ್ತಾಂಡ ಸಂಭೂತಾಂ ತಂ ನಮಾಮಿ ಶನೈಶ್ಚರಂಶನಿ ಬೀಜ ಮಂತ್ರ: ಓಂ ಶನೈಶ್ಚರಾಯ ನಮಃಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ​ಶನಿ ಗಾಯತ್ರಿ ಮಂತ್ರ: ಓಂ ಕೃಷ್ಣಾಂಗಾಯ ವಿದ್ಮಯೇ, ರವಿ ಪುತ್ರಾಯ ಧೀಮಹೀ ತನ್ನಃ ಸೌರೀಃ ಪ್ರಚೋದಯಾತ್‌ಈ ಮಂತ್ರಗಳನ್ನು ತಪ್ಪದೆ ಪಠಿಸಿ 
(7 / 7)

    ಹಂಚಿಕೊಳ್ಳಲು ಲೇಖನಗಳು