logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Before Market Opens: ಷೇರುಪೇಟೆಗೆ ಬೆಳಗ್ಗೆ ಬಂದ ಕರಡಿ, ಇಂದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮುನ್ನ ಈ ಅಂಶಗಳನ್ನು ಗಮನದಲ್ಲಿಡಿ

Before Market Opens: ಷೇರುಪೇಟೆಗೆ ಬೆಳಗ್ಗೆ ಬಂದ ಕರಡಿ, ಇಂದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮುನ್ನ ಈ ಅಂಶಗಳನ್ನು ಗಮನದಲ್ಲಿಡಿ

Jun 01, 2023 09:30 AM IST

ಜೂನ್‌ ತಿಂಗಳಲ್ಲಿ ಫೆಡರಲ್‌ ದರ ಏರಿಕೆ ಭೀತಿಯಿಂದಾಗಿ ಜಾಗತಿಕವಾಗಿ ಇಂದು ಷೇರು ಪೇಟೆಯಲ್ಲಿ ಹೂಡಿಕೆದಾರರು ತುಸು ಆತಂಕದಲ್ಲಿದ್ದಾರೆ. ಎಸ್‌ಜಿಎಕ್ಸ್ ನಿಫ್ಟಿ ಬೆಳಗಿನ ವಹಿವಾಟಿನಲ್ಲಿ 57 ಪಾಯಿಂಟ್‌ ಕಡಿಮೆಯಾಗಿದೆ. ಇಂದು 9 ಗಂಟೆಯ ವೇಳೆಗೆ ಷೇರು ಪೇಟೆಯ ಪ್ರಮುಖ ಮಾರುಕಟ್ಟೆ ಸೂಚನೆಗಳನ್ನು ನೋಡೋಣ.

ಜೂನ್‌ ತಿಂಗಳಲ್ಲಿ ಫೆಡರಲ್‌ ದರ ಏರಿಕೆ ಭೀತಿಯಿಂದಾಗಿ ಜಾಗತಿಕವಾಗಿ ಇಂದು ಷೇರು ಪೇಟೆಯಲ್ಲಿ ಹೂಡಿಕೆದಾರರು ತುಸು ಆತಂಕದಲ್ಲಿದ್ದಾರೆ. ಎಸ್‌ಜಿಎಕ್ಸ್ ನಿಫ್ಟಿ ಬೆಳಗಿನ ವಹಿವಾಟಿನಲ್ಲಿ 57 ಪಾಯಿಂಟ್‌ ಕಡಿಮೆಯಾಗಿದೆ. ಇಂದು 9 ಗಂಟೆಯ ವೇಳೆಗೆ ಷೇರು ಪೇಟೆಯ ಪ್ರಮುಖ ಮಾರುಕಟ್ಟೆ ಸೂಚನೆಗಳನ್ನು ನೋಡೋಣ.
ಸಾಲದ ಸೀಲಿಂಗ್‌ ಹೆಚ್ಚಳ ಮಾಡುವ ಫೆಡರಲ್‌ ಸರಕಾರದ ನಿರ್ಧಾರದಿಂದಾಗಿ ಅಮೆರಿಕದ ಷೇರುಗಳು ನಿನ್ನೆ ಕುಸಿತ ಕಂಡವು. ಜೂನ್‌ನಲ್ಲಿ ಫೆಡರಲ್‌ ಸರಕಾರ ಮತ್ತೆ ಬಡ್ಡಿದರ ಹೆಚ್ಚಿಸಬಹುದೆಂಬ ಭಯವು ಹೂಡಿಕೆದಾರರನ್ನು ಕೆರಳಿಸಿದೆ.  ಡೌ ಜೋನ್ಸ್ ಇಂಡಸ್ಟ್ರಿಯಲ್ ಸರಾಸರಿಯು  47 ಅಂಕಗಳು ಅಥವಾ 0.14 ಪ್ರತಿಶತದಷ್ಟು ಕುಸಿದಿದೆ. ಎಸ್‌ಪಿ 500 ಫ್ಯೂಚರ್ಸ್ ಮತ್ತು ನಾಸ್ಡಾಕ್ 100 ಫ್ಯೂಚರ್ಸ್ ಎರಡೂ ಕುಸಿದಿವೆ. 
(1 / 9)
ಸಾಲದ ಸೀಲಿಂಗ್‌ ಹೆಚ್ಚಳ ಮಾಡುವ ಫೆಡರಲ್‌ ಸರಕಾರದ ನಿರ್ಧಾರದಿಂದಾಗಿ ಅಮೆರಿಕದ ಷೇರುಗಳು ನಿನ್ನೆ ಕುಸಿತ ಕಂಡವು. ಜೂನ್‌ನಲ್ಲಿ ಫೆಡರಲ್‌ ಸರಕಾರ ಮತ್ತೆ ಬಡ್ಡಿದರ ಹೆಚ್ಚಿಸಬಹುದೆಂಬ ಭಯವು ಹೂಡಿಕೆದಾರರನ್ನು ಕೆರಳಿಸಿದೆ.  ಡೌ ಜೋನ್ಸ್ ಇಂಡಸ್ಟ್ರಿಯಲ್ ಸರಾಸರಿಯು  47 ಅಂಕಗಳು ಅಥವಾ 0.14 ಪ್ರತಿಶತದಷ್ಟು ಕುಸಿದಿದೆ. ಎಸ್‌ಪಿ 500 ಫ್ಯೂಚರ್ಸ್ ಮತ್ತು ನಾಸ್ಡಾಕ್ 100 ಫ್ಯೂಚರ್ಸ್ ಎರಡೂ ಕುಸಿದಿವೆ. (AFP)
ವಾಲ್ ಸ್ಟ್ರೀಟ್ ಕುಸಿತದ ಬಳಿಕ ಏಷ್ಯನ್ ಸ್ಟಾಕ್ ಫ್ಯೂಚರ್ಸ್ ಕುಸಿಯಿತು. ಸಾಲದ ಮಿತಿ ಮೀರಿದ ಬಡ್ಡಿದರ ಮತ್ತು ಗಳಿಕೆಯ ವರದಿಗಳ ಮೇಲೆ ಹೂಡಿಕೆದಾರರು ಗಮನಹರಿಸಿದ್ದು  ಇದಕ್ಕೆ ಕಾರಣ. ಜಪಾನ್‌ನಲ್ಲಿ ನಿಕೈ, ದಕ್ಷಿಣ ಕೊರಿಯಾದ ಕೋಸ್ಪಿ ಮತ್ತು ಕೋಸ್ಡಾಕ್‌ ಕೊಂಚ ಏರಿಕೆ ಕಂಡಿವೆ. 
(2 / 9)
ವಾಲ್ ಸ್ಟ್ರೀಟ್ ಕುಸಿತದ ಬಳಿಕ ಏಷ್ಯನ್ ಸ್ಟಾಕ್ ಫ್ಯೂಚರ್ಸ್ ಕುಸಿಯಿತು. ಸಾಲದ ಮಿತಿ ಮೀರಿದ ಬಡ್ಡಿದರ ಮತ್ತು ಗಳಿಕೆಯ ವರದಿಗಳ ಮೇಲೆ ಹೂಡಿಕೆದಾರರು ಗಮನಹರಿಸಿದ್ದು  ಇದಕ್ಕೆ ಕಾರಣ. ಜಪಾನ್‌ನಲ್ಲಿ ನಿಕೈ, ದಕ್ಷಿಣ ಕೊರಿಯಾದ ಕೋಸ್ಪಿ ಮತ್ತು ಕೋಸ್ಡಾಕ್‌ ಕೊಂಚ ಏರಿಕೆ ಕಂಡಿವೆ. (PIxabay)
ಇಂದು 8:20 ಗಂಟೆಗೆ ಎಸ್‌ಜಿಎಕ್ಸ್‌ ನಿಫ್ಟಿಯು 18,606ಕ್ಕೆ ತಲುಪಿದ್ದು 57 ಪಾಯಿಂಟ್‌ ಅಥವಾ 0.31 ಇಳಿಕೆ ಕಂಡಿತ್ತು. ಈ ಮೂಲಕ ಭಾರತದ ಷೇರುಪೇಟೆಯ ದುರ್ಬಲ ಆರಂಭವನ್ನು ಸೂಚಿಸಿದೆ. 
(3 / 9)
ಇಂದು 8:20 ಗಂಟೆಗೆ ಎಸ್‌ಜಿಎಕ್ಸ್‌ ನಿಫ್ಟಿಯು 18,606ಕ್ಕೆ ತಲುಪಿದ್ದು 57 ಪಾಯಿಂಟ್‌ ಅಥವಾ 0.31 ಇಳಿಕೆ ಕಂಡಿತ್ತು. ಈ ಮೂಲಕ ಭಾರತದ ಷೇರುಪೇಟೆಯ ದುರ್ಬಲ ಆರಂಭವನ್ನು ಸೂಚಿಸಿದೆ. (Image by StartupStockPhotos from Pixabay)
ಭಾರತೀಯ ಷೇರುಗಳು ಬುಧವಾರ ಕುಸಿದಿದೆ.  ನಾಲ್ಕು ದಿನಗಳ ಗೆಲುವಿನ ಸರಣಿ ಉಡೀಸ್‌ ಮಾಡಿದೆ.  ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಹಣಕಾಸು ಸ್ಟಾಕ್‌ಗಳ ಮೇಲೆ ಕೆಟ್ಟ ಪರಿಣಾಮ ಬೀರಿತ್ತು. ಬ್ಲೂ-ಚಿಪ್ ನಿಫ್ಟಿ 50 ಸೂಚ್ಯಂಕವು ಶೇಕಡ 0.53 ಕಳೆದುಕೊಂಡು 18,534.40 ಕ್ಕೆ ತಲುಪಿದೆ. ಬಿಎಸ್‌ಇ ಸೂಚ್ಯಂಕವು ಶೇಕಡ 0.55ನಷ್ಟು ಕಡಿಮೆಯಾಗಿ 62,622.24 ಕ್ಕೆ ತಲುಪಿದೆ.
(4 / 9)
ಭಾರತೀಯ ಷೇರುಗಳು ಬುಧವಾರ ಕುಸಿದಿದೆ.  ನಾಲ್ಕು ದಿನಗಳ ಗೆಲುವಿನ ಸರಣಿ ಉಡೀಸ್‌ ಮಾಡಿದೆ.  ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಹಣಕಾಸು ಸ್ಟಾಕ್‌ಗಳ ಮೇಲೆ ಕೆಟ್ಟ ಪರಿಣಾಮ ಬೀರಿತ್ತು. ಬ್ಲೂ-ಚಿಪ್ ನಿಫ್ಟಿ 50 ಸೂಚ್ಯಂಕವು ಶೇಕಡ 0.53 ಕಳೆದುಕೊಂಡು 18,534.40 ಕ್ಕೆ ತಲುಪಿದೆ. ಬಿಎಸ್‌ಇ ಸೂಚ್ಯಂಕವು ಶೇಕಡ 0.55ನಷ್ಟು ಕಡಿಮೆಯಾಗಿ 62,622.24 ಕ್ಕೆ ತಲುಪಿದೆ.(Image by Sergei Tokmakov Terms.Law from Pixabay)
ಅಮೆರಿಕದ ಡಾಲರ್‌ ಸದೃಢವಾದ ಪರಿಣಾಮ ಮತ್ತು ಪ್ರಮುಖ ತೈಲ ಆಮದುದಾರ ಚೀನಾದ ದುರ್ಬಲ ವರದಿಗಳಿಂದ ನಿನ್ನೆ ತೈಲ ದರ ಕುಸಿದಿದೆ. ಇದು ತೈಲ ಷೇರುಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ.  
(5 / 9)
ಅಮೆರಿಕದ ಡಾಲರ್‌ ಸದೃಢವಾದ ಪರಿಣಾಮ ಮತ್ತು ಪ್ರಮುಖ ತೈಲ ಆಮದುದಾರ ಚೀನಾದ ದುರ್ಬಲ ವರದಿಗಳಿಂದ ನಿನ್ನೆ ತೈಲ ದರ ಕುಸಿದಿದೆ. ಇದು ತೈಲ ಷೇರುಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ.  (AP)
ಭಾರತದ ಒಟ್ಟು ದೇಶೀಯ ಉತ್ಪನ್ನ (GDP) ಬೆಳವಣಿಗೆ ದರವು ಜನವರಿ-ಮಾರ್ಚ್‌ನಲ್ಲಿ ಮೊದಲ ಬಾರಿಗೆ ಮೂರು ತ್ರೈಮಾಸಿಕಗಳಲ್ಲಿ 6.1 ಶೇಕಡಾಕ್ಕೆ ಏರಿದೆ ಎಂದು ಸಾಂಖ್ಯಿಕ ಸಚಿವಾಲಯ ತಿಳಿಸಿದೆ. ತಾತ್ಕಾಲಿಕ ಅಂದಾಜು ಜಿಡಿಪಿಯನ್ನು ಶೇಕಡಾ 7.2 ಕ್ಕೆ ನಿಗದಿಪಡಿಸಿದೆ. 
(6 / 9)
ಭಾರತದ ಒಟ್ಟು ದೇಶೀಯ ಉತ್ಪನ್ನ (GDP) ಬೆಳವಣಿಗೆ ದರವು ಜನವರಿ-ಮಾರ್ಚ್‌ನಲ್ಲಿ ಮೊದಲ ಬಾರಿಗೆ ಮೂರು ತ್ರೈಮಾಸಿಕಗಳಲ್ಲಿ 6.1 ಶೇಕಡಾಕ್ಕೆ ಏರಿದೆ ಎಂದು ಸಾಂಖ್ಯಿಕ ಸಚಿವಾಲಯ ತಿಳಿಸಿದೆ. ತಾತ್ಕಾಲಿಕ ಅಂದಾಜು ಜಿಡಿಪಿಯನ್ನು ಶೇಕಡಾ 7.2 ಕ್ಕೆ ನಿಗದಿಪಡಿಸಿದೆ. (MINT_PRINT)
ಮೇ 31ರಂದು ವಿದೇಶಿ ಸಾಂಸ್ಥಿಕ ಹೂಡಿಕೆದಾರರು 3,405.90 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀಸಿದ್ದಾರೆ. ಆದರೆ, ದೇಶಿ ಸಾಂಸ್ಥಿಕ ಹೂಡಿಕೆದಾರರು 2,528.52 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. 
(7 / 9)
ಮೇ 31ರಂದು ವಿದೇಶಿ ಸಾಂಸ್ಥಿಕ ಹೂಡಿಕೆದಾರರು 3,405.90 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀಸಿದ್ದಾರೆ. ಆದರೆ, ದೇಶಿ ಸಾಂಸ್ಥಿಕ ಹೂಡಿಕೆದಾರರು 2,528.52 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. 
ನಿನ್ನೆ ಚಿನ್ನದ ದರ ಏರಿಕೆ ಕಂಡಿದೆ. ಅಮೆರಿಕದ ಸಾಲದ ಡೀಲ್‌ನಿಂದಾಗಿ ಚಿನ್ನದ ಮೇಲೆ ಹೂಡಿಕೆ ಹೆಚ್ಚಾಯಿತು. ಇಂದು ಷೇರುಪೇಟೆಯ ಮೇಲೆ ಹೂಡಿಕೆ ಮಾಡುವ ಮೊದಲು ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡಿ. 
(8 / 9)
ನಿನ್ನೆ ಚಿನ್ನದ ದರ ಏರಿಕೆ ಕಂಡಿದೆ. ಅಮೆರಿಕದ ಸಾಲದ ಡೀಲ್‌ನಿಂದಾಗಿ ಚಿನ್ನದ ಮೇಲೆ ಹೂಡಿಕೆ ಹೆಚ್ಚಾಯಿತು. ಇಂದು ಷೇರುಪೇಟೆಯ ಮೇಲೆ ಹೂಡಿಕೆ ಮಾಡುವ ಮೊದಲು ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡಿ. (MINT_PRINT)
ಸತತ ಮೂರನೇ ಅವಧಿಯಲ್ಲಿ ಅಮೆರಿಕದ ಡಾಲರ್‌ ಎದುರು ಬುಧವಾರ ರೂಪಾಯಿ ಮೌಲ್ಯ 82.75 ರೂ.ಗೆ ತಲುಪಿ ಎಂಟು ಪೈಸೆ ಇಳಿಕೆ ಕಂಡಿದೆ. ಇದರಿಂದ ದೇಶೀಯ ಈಕ್ವಿಟಿಗಳನ್ನು ಮಾರಾಟ ಮಾಡುವ ಒತ್ತಡಕ್ಕೆ ಹೂಡಿಕೆದಾರರು ಸಿಲುಕಿದ್ದರೂ, ಜಾಗತಿಕ ಮಾರುಕಟ್ಟೆಯ ಮೇಲೆ ಗಮನದಲ್ಲಿಟ್ಟುಕೊಂಡು ಹೂಡಿಕೆದಾರರು ಯೋಚನೆ ಮಾಡುತ್ತಿದ್ದಾರೆ. 
(9 / 9)
ಸತತ ಮೂರನೇ ಅವಧಿಯಲ್ಲಿ ಅಮೆರಿಕದ ಡಾಲರ್‌ ಎದುರು ಬುಧವಾರ ರೂಪಾಯಿ ಮೌಲ್ಯ 82.75 ರೂ.ಗೆ ತಲುಪಿ ಎಂಟು ಪೈಸೆ ಇಳಿಕೆ ಕಂಡಿದೆ. ಇದರಿಂದ ದೇಶೀಯ ಈಕ್ವಿಟಿಗಳನ್ನು ಮಾರಾಟ ಮಾಡುವ ಒತ್ತಡಕ್ಕೆ ಹೂಡಿಕೆದಾರರು ಸಿಲುಕಿದ್ದರೂ, ಜಾಗತಿಕ ಮಾರುಕಟ್ಟೆಯ ಮೇಲೆ ಗಮನದಲ್ಲಿಟ್ಟುಕೊಂಡು ಹೂಡಿಕೆದಾರರು ಯೋಚನೆ ಮಾಡುತ್ತಿದ್ದಾರೆ. (Bloomberg)

    ಹಂಚಿಕೊಳ್ಳಲು ಲೇಖನಗಳು