logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Before Market Opens: ಷೇರು ಮಾರುಕಟ್ಟೆ ಏರುಗತಿಯಲ್ಲಿ ಆರಂಭ ನಿರೀಕ್ಷೆ, ಇಂದು ಗಮನಿಸಬೇಕಾದ 9 ವಿಷಯಗಳು

Before Market Opens: ಷೇರು ಮಾರುಕಟ್ಟೆ ಏರುಗತಿಯಲ್ಲಿ ಆರಂಭ ನಿರೀಕ್ಷೆ, ಇಂದು ಗಮನಿಸಬೇಕಾದ 9 ವಿಷಯಗಳು

Jun 02, 2023 09:26 AM IST

ಭಾರತೀಯ ಮಾರುಕಟ್ಟೆಯು ಶುಕ್ರವಾರ ಏರುಗತಿಯಲ್ಲಿ ಆರಂಭವಾಗುವ ಸೂಚನೆಯಿದೆ. ಅಮೆರಿಕ ಫೆಡರಲ್‌ ಸರಕಾರದ ಸಾಲದ ಸೀಲಿಂಗ್‌ ಅನ್ನು ಅಮಾನತುಗೊಳಿಸಲು ಹೂಡಿಕೆದಾರರು ಕಾಂಗ್ರೆಸ್‌ ಅನ್ನು ಹುರಿದುಂಬಿಸಿರುವುದು ಷೇರುಪೇಟೆಗೆ ಉತ್ಸಾಹ ತುಂಬುವ ನಿರೀಕ್ಷೆಯಿದೆ. ಇಂದಿನ ಷೇರುಪೇಟೆ ಆರಂಭದ ಸಮಯದಲ್ಲಿ ಗಮನಿಸಬೇಕಾದ ಒಂಬತ್ತು ವಿಚಾರಗಳು ಇಲ್ಲಿವೆ.

ಭಾರತೀಯ ಮಾರುಕಟ್ಟೆಯು ಶುಕ್ರವಾರ ಏರುಗತಿಯಲ್ಲಿ ಆರಂಭವಾಗುವ ಸೂಚನೆಯಿದೆ. ಅಮೆರಿಕ ಫೆಡರಲ್‌ ಸರಕಾರದ ಸಾಲದ ಸೀಲಿಂಗ್‌ ಅನ್ನು ಅಮಾನತುಗೊಳಿಸಲು ಹೂಡಿಕೆದಾರರು ಕಾಂಗ್ರೆಸ್‌ ಅನ್ನು ಹುರಿದುಂಬಿಸಿರುವುದು ಷೇರುಪೇಟೆಗೆ ಉತ್ಸಾಹ ತುಂಬುವ ನಿರೀಕ್ಷೆಯಿದೆ. ಇಂದಿನ ಷೇರುಪೇಟೆ ಆರಂಭದ ಸಮಯದಲ್ಲಿ ಗಮನಿಸಬೇಕಾದ ಒಂಬತ್ತು ವಿಚಾರಗಳು ಇಲ್ಲಿವೆ.
ನಾಸ್ಡಾಕ್‌ ಮತ್ತು ಎಸ್‌ಆಂಡ್‌ಪಿಯು ಗುರುವಾರ ಒಂಬತ್ತು ತಿಂಗಳ ಮುಕ್ತಾಯದ ಗರಿಷ್ಠ ಮಟ್ಟಕ್ಕೆ ಏರಿದೆ.  ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಹೆಚ್ಚಿಸುವುದನ್ನು ನಿಲ್ಲಿಸಲು ಬಯಸಿರುವುದು ಮತ್ತು ಹೂಡಿಕೆದಾರರು ಅಮೆರಿಕದ ಸಾಲದ ಸೀಲಿಂಗ್‌ ಅಮಾನತುಗೊಳಿಸಲು ಕಾಂಗ್ರೆಸ್‌ಗೆ ಹುರಿದುಂಬಿಸಿದ್ದಾರೆ. ಡೌ ಜೋನ್ಸ್ ಇಂಡಸ್ಟ್ರಿಯಲ್ ಸರಾಸರಿ 154.09 ಪಾಯಿಂಟ್‌ಗಳು ಅಥವಾ ಶೇಕಡ 0.47ರಷ್ಟು ಏರಿಕೆಯಾಗಿ 33,062.36 ಕ್ಕೆ ತಲುಪಿದೆ. ಎಸ್‌ಆಂಡ್‌ಪಿಯು 41.26 ಪಾಯಿಂಟ್‌ ಮತ್ತು ನಾಸ್ಡಾಕ್‌ ಕಾಂಪೊಸಿಟ್‌ ಶೇಕಡ 0.99  ಗಳಿಸಿತು.  
(1 / 9)
ನಾಸ್ಡಾಕ್‌ ಮತ್ತು ಎಸ್‌ಆಂಡ್‌ಪಿಯು ಗುರುವಾರ ಒಂಬತ್ತು ತಿಂಗಳ ಮುಕ್ತಾಯದ ಗರಿಷ್ಠ ಮಟ್ಟಕ್ಕೆ ಏರಿದೆ.  ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಹೆಚ್ಚಿಸುವುದನ್ನು ನಿಲ್ಲಿಸಲು ಬಯಸಿರುವುದು ಮತ್ತು ಹೂಡಿಕೆದಾರರು ಅಮೆರಿಕದ ಸಾಲದ ಸೀಲಿಂಗ್‌ ಅಮಾನತುಗೊಳಿಸಲು ಕಾಂಗ್ರೆಸ್‌ಗೆ ಹುರಿದುಂಬಿಸಿದ್ದಾರೆ. ಡೌ ಜೋನ್ಸ್ ಇಂಡಸ್ಟ್ರಿಯಲ್ ಸರಾಸರಿ 154.09 ಪಾಯಿಂಟ್‌ಗಳು ಅಥವಾ ಶೇಕಡ 0.47ರಷ್ಟು ಏರಿಕೆಯಾಗಿ 33,062.36 ಕ್ಕೆ ತಲುಪಿದೆ. ಎಸ್‌ಆಂಡ್‌ಪಿಯು 41.26 ಪಾಯಿಂಟ್‌ ಮತ್ತು ನಾಸ್ಡಾಕ್‌ ಕಾಂಪೊಸಿಟ್‌ ಶೇಕಡ 0.99  ಗಳಿಸಿತು.  (AFP)
ಅಮೆರಿಕವು ಸಾಲದ ಮಿತಿಯನ್ನು ಹೆಚ್ಚಿಸುವ ಮಸೂದೆಯ ಕುರಿತಾದ ಹೂಡಿಕೆದಾರರ ಒತ್ತಡದ ಬೆಂಬಲದಿಂದ ಮತ್ತು ಮುಂದಿನ ಸಭೆಯಲ್ಲಿ ಬಡ್ಡಿದರಗಳನ್ನು ಕಡಿಮೆ ಮಾಡಬಹುದು ಎಂಬ ಭರವಸೆಯಿಂದ ಏಷ್ಯಾ ಷೇರುಗಳು ಶುಕ್ರವಾರ  ಏರಿಕೆಯತ್ತ ಮುಖ ಮಾಡಿದೆ.
(2 / 9)
ಅಮೆರಿಕವು ಸಾಲದ ಮಿತಿಯನ್ನು ಹೆಚ್ಚಿಸುವ ಮಸೂದೆಯ ಕುರಿತಾದ ಹೂಡಿಕೆದಾರರ ಒತ್ತಡದ ಬೆಂಬಲದಿಂದ ಮತ್ತು ಮುಂದಿನ ಸಭೆಯಲ್ಲಿ ಬಡ್ಡಿದರಗಳನ್ನು ಕಡಿಮೆ ಮಾಡಬಹುದು ಎಂಬ ಭರವಸೆಯಿಂದ ಏಷ್ಯಾ ಷೇರುಗಳು ಶುಕ್ರವಾರ  ಏರಿಕೆಯತ್ತ ಮುಖ ಮಾಡಿದೆ.(PIxabay)
ಇಂದು ಬೆಳಗ್ಗೆ 8:20 ಕ್ಕೆ, ಎಸ್‌ಜಿಎಕ್ಸ್‌ ನಿಫ್ಟಿಯು  79 ಅಂಕಗಳು ಅಥವಾ  ಶೇಕಡ 0.43 ಏರಿಕೆಯಾಗಿ 18,642 ನಲ್ಲಿ ವಹಿವಾಟು ನಡೆಸುತ್ತಿದೆ. ಇದು ಭಾರತೀಯ ಮಾರುಕಟ್ಟೆಗಳಿಗೆ ಬಲವಾದ ಆರಂಭದ ಸೂಚಕವಾಗಿದೆ. 
(3 / 9)
ಇಂದು ಬೆಳಗ್ಗೆ 8:20 ಕ್ಕೆ, ಎಸ್‌ಜಿಎಕ್ಸ್‌ ನಿಫ್ಟಿಯು  79 ಅಂಕಗಳು ಅಥವಾ  ಶೇಕಡ 0.43 ಏರಿಕೆಯಾಗಿ 18,642 ನಲ್ಲಿ ವಹಿವಾಟು ನಡೆಸುತ್ತಿದೆ. ಇದು ಭಾರತೀಯ ಮಾರುಕಟ್ಟೆಗಳಿಗೆ ಬಲವಾದ ಆರಂಭದ ಸೂಚಕವಾಗಿದೆ. (Image by StartupStockPhotos from Pixabay)
ಜಾಗತಿಕ ಮಾರುಕಟ್ಟೆಗಳಲ್ಲಿ ಮಿಶ್ರ ಪ್ರವೃತ್ತಿಯ ನಡುವೆ ಬ್ಯಾಂಕಿಂಗ್, ಲೋಹ ಮತ್ತು ಇಂಧನ ಕೌಂಟರ್‌ಗಳಲ್ಲಿ ಮಾರಾಟದ ಕಾರಣ ಈಕ್ವಿಟಿ ಬೆಂಚ್‌ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರ ಹೆಚ್ಚು ಅಸ್ಥಿರ ವಹಿವಾಟು ಕಾಣಿಸಿದೆ. ಈ ಷೇರುಗಳು ಸತತ ಎರಡನೇ ದಿನವೂ ಕುಸಿದಿದೆ.  ಸಕಾರಾತ್ಮಕ ಆರಂಭದ ನಂತರವೂ 30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 193.70 ಪಾಯಿಂಟ್‌ಗಳು ಅಥವಾ ಶೇಕಡ 0.31ರಷ್ಟು ಕುಸಿದು  62,428.54 ಕ್ಕೆ ಸ್ಥಿರವಾಗಿದೆ. ಎನ್‌ಎಸ್‌ಇ  ನಿಫ್ಟಿ 46.65 ಪಾಯಿಂಟ್ ಅಥವಾ ಶೇಕಡ 0.25ಕುಸಿದು 18,487.75 ಕ್ಕೆ ಕೊನೆಗೊಂಡಿದೆ.
(4 / 9)
ಜಾಗತಿಕ ಮಾರುಕಟ್ಟೆಗಳಲ್ಲಿ ಮಿಶ್ರ ಪ್ರವೃತ್ತಿಯ ನಡುವೆ ಬ್ಯಾಂಕಿಂಗ್, ಲೋಹ ಮತ್ತು ಇಂಧನ ಕೌಂಟರ್‌ಗಳಲ್ಲಿ ಮಾರಾಟದ ಕಾರಣ ಈಕ್ವಿಟಿ ಬೆಂಚ್‌ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರ ಹೆಚ್ಚು ಅಸ್ಥಿರ ವಹಿವಾಟು ಕಾಣಿಸಿದೆ. ಈ ಷೇರುಗಳು ಸತತ ಎರಡನೇ ದಿನವೂ ಕುಸಿದಿದೆ.  ಸಕಾರಾತ್ಮಕ ಆರಂಭದ ನಂತರವೂ 30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 193.70 ಪಾಯಿಂಟ್‌ಗಳು ಅಥವಾ ಶೇಕಡ 0.31ರಷ್ಟು ಕುಸಿದು  62,428.54 ಕ್ಕೆ ಸ್ಥಿರವಾಗಿದೆ. ಎನ್‌ಎಸ್‌ಇ  ನಿಫ್ಟಿ 46.65 ಪಾಯಿಂಟ್ ಅಥವಾ ಶೇಕಡ 0.25ಕುಸಿದು 18,487.75 ಕ್ಕೆ ಕೊನೆಗೊಂಡಿದೆ.(Image by Sergei Tokmakov Terms.Law from Pixabay)
ಭಾನುವಾರ OPEC + ಸಭೆ ನಡೆಯಲಿದೆ. ಇದರಿಂದ ತೈಲ ಬೆಲೆಗಳು ಗುರುವಾರ ಹೆಚ್ಚಾದವು.  ಆದರೆ ಅಮೆರಿಕದ ಸಾಲದ ಸೀಲಿಂಗ್ ಅನ್ನು ಅಮಾನತುಗೊಳಿಸುವ ಮಸೂದೆಯ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅಂಗೀಕಾರವು ದೇಶದಲ್ಲಿ ಹೆಚ್ಚುತ್ತಿರು  ತೈಲ ದಾಸ್ತಾನುಗಳ ಪರಿಣಾಮವನ್ನು ಸರಿದೂಗಿಸಲು ಸಹಾಯ ಮಾಡಿದೆ. ಯುಎಸ್‌ ಆಂಡ್‌ ಬಿಎಸ್‌ಪಿ ಇಂಟರ್‌ಮೀಡಿಯೆಟ್‌ ಕ್ರೂಡ್‌ ಫ್ಯೂಚರ್ಸ್‌ ಒಂದು ಬ್ಯಾರೆಲ್‌ಗೆ 2.01 ಡಾಲರ್‌ನಷ್ಟು ಏರಿಕೆಯಾಗಿದೆ. ಬ್ರೆಂಟ್‌ ಕ್ರೂಡ್‌ ಫ್ಯೂಚರ್ಸ್‌ ಬ್ಯಾರೆಲ್‌ಗೆ 1.68 ಡಾಲರ್‌ನಷ್ಟು ಹೆಚ್ಚಾಗಿದೆ. 
(5 / 9)
ಭಾನುವಾರ OPEC + ಸಭೆ ನಡೆಯಲಿದೆ. ಇದರಿಂದ ತೈಲ ಬೆಲೆಗಳು ಗುರುವಾರ ಹೆಚ್ಚಾದವು.  ಆದರೆ ಅಮೆರಿಕದ ಸಾಲದ ಸೀಲಿಂಗ್ ಅನ್ನು ಅಮಾನತುಗೊಳಿಸುವ ಮಸೂದೆಯ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅಂಗೀಕಾರವು ದೇಶದಲ್ಲಿ ಹೆಚ್ಚುತ್ತಿರು  ತೈಲ ದಾಸ್ತಾನುಗಳ ಪರಿಣಾಮವನ್ನು ಸರಿದೂಗಿಸಲು ಸಹಾಯ ಮಾಡಿದೆ. ಯುಎಸ್‌ ಆಂಡ್‌ ಬಿಎಸ್‌ಪಿ ಇಂಟರ್‌ಮೀಡಿಯೆಟ್‌ ಕ್ರೂಡ್‌ ಫ್ಯೂಚರ್ಸ್‌ ಒಂದು ಬ್ಯಾರೆಲ್‌ಗೆ 2.01 ಡಾಲರ್‌ನಷ್ಟು ಏರಿಕೆಯಾಗಿದೆ. ಬ್ರೆಂಟ್‌ ಕ್ರೂಡ್‌ ಫ್ಯೂಚರ್ಸ್‌ ಬ್ಯಾರೆಲ್‌ಗೆ 1.68 ಡಾಲರ್‌ನಷ್ಟು ಹೆಚ್ಚಾಗಿದೆ. (AP)
ಭಾರತದ ಆರ್ಥಿಕತೆಯು ಈ ಆರ್ಥಿಕ ವರ್ಷದಲ್ಲಿ ಶೇಕಡಾ 6.5-6.7 ರ ವ್ಯಾಪ್ತಿಯಲ್ಲಿ ಬೆಳೆಯುವ ನಿರೀಕ್ಷೆಯಿದೆ ಎಂದು ಕೈಗಾರಿಕಾ ಸಂಸ್ಥೆ ಸಿಐಐ ಗುರುವಾರ ಹೇಳಿದೆ. 2022-23 ರ ಮಾರ್ಚ್ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) 6.1 ರಷ್ಟು  ಏರಿಕೆ ಕಂಡಿದೆ. ದು ವಾರ್ಷಿಕ ಬೆಳವಣಿಗೆ ದರವನ್ನು ಶೇಕಡಾ 7.2 ಕ್ಕೆ ತಳ್ಳುತ್ತದೆ. 
(6 / 9)
ಭಾರತದ ಆರ್ಥಿಕತೆಯು ಈ ಆರ್ಥಿಕ ವರ್ಷದಲ್ಲಿ ಶೇಕಡಾ 6.5-6.7 ರ ವ್ಯಾಪ್ತಿಯಲ್ಲಿ ಬೆಳೆಯುವ ನಿರೀಕ್ಷೆಯಿದೆ ಎಂದು ಕೈಗಾರಿಕಾ ಸಂಸ್ಥೆ ಸಿಐಐ ಗುರುವಾರ ಹೇಳಿದೆ. 2022-23 ರ ಮಾರ್ಚ್ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) 6.1 ರಷ್ಟು  ಏರಿಕೆ ಕಂಡಿದೆ. ದು ವಾರ್ಷಿಕ ಬೆಳವಣಿಗೆ ದರವನ್ನು ಶೇಕಡಾ 7.2 ಕ್ಕೆ ತಳ್ಳುತ್ತದೆ. (https://pixabay.com/photos/money-currency-income-investment-4062229/)
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ)  71.07 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಆದರೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐಗಳು) ಜೂನ್ 1 ರಂದು ರೂ 488.93 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ತಾತ್ಕಾಲಿಕ ಡೇಟಾದಿಂದ ತಿಳಿದುಬಂದಿದೆ.
(7 / 9)
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ)  71.07 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಆದರೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐಗಳು) ಜೂನ್ 1 ರಂದು ರೂ 488.93 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ತಾತ್ಕಾಲಿಕ ಡೇಟಾದಿಂದ ತಿಳಿದುಬಂದಿದೆ.
ಫೆಡರಲ್ ರಿಸರ್ವ್ ತನ್ನ ಜೂನ್ ತಿಂಗಳ ನೀತಿ ಪರಾಮರ್ಶೆ ಸಭೆಯಲ್ಲಿ ಬಡ್ಡಿದರ ಹೆಚ್ಚಳವನ್ನು  ಕೈಬಿಡಬಹುದೆಂದು ಭಾವಿಸಿದ ಬಳಿಕ ಡಾಲರ್ ಕುಸಿದಿದೆ. ಇದರಿಂದ  ಗುರುವಾರ ಚಿನ್ನವು ಶೇಕಡ 1 ರಷ್ಟು, ಒಂದು ವಾರದ ಗರಿಷ್ಠ ಮಟ್ಟವನ್ನು ತಲುಪಿದೆ. 
(8 / 9)
ಫೆಡರಲ್ ರಿಸರ್ವ್ ತನ್ನ ಜೂನ್ ತಿಂಗಳ ನೀತಿ ಪರಾಮರ್ಶೆ ಸಭೆಯಲ್ಲಿ ಬಡ್ಡಿದರ ಹೆಚ್ಚಳವನ್ನು  ಕೈಬಿಡಬಹುದೆಂದು ಭಾವಿಸಿದ ಬಳಿಕ ಡಾಲರ್ ಕುಸಿದಿದೆ. ಇದರಿಂದ  ಗುರುವಾರ ಚಿನ್ನವು ಶೇಕಡ 1 ರಷ್ಟು, ಒಂದು ವಾರದ ಗರಿಷ್ಠ ಮಟ್ಟವನ್ನು ತಲುಪಿದೆ. (MINT_PRINT)
ಗುರುವಾರ ಡಾಲರ್‌ ಎದುರು ರೂಪಾಯಿ ಮೌಲ್ಯವು 33 ಪೈಸೆ ಏರಿಕೆಯಾಗಿ 82.42 ರೂ.ಗೆ ತಲುಪಿದೆ. ಇದು ಮೈಕ್ರೊ ಎಕಾನಮಿಕ್‌ ಕುರಿತು ಹೂಡಿಕೆದಾರರ ಸಕಾರಾತ್ಮಕತೆಯನ್ನು ಸೂಚಿಸುತ್ತದೆ. 
(9 / 9)
ಗುರುವಾರ ಡಾಲರ್‌ ಎದುರು ರೂಪಾಯಿ ಮೌಲ್ಯವು 33 ಪೈಸೆ ಏರಿಕೆಯಾಗಿ 82.42 ರೂ.ಗೆ ತಲುಪಿದೆ. ಇದು ಮೈಕ್ರೊ ಎಕಾನಮಿಕ್‌ ಕುರಿತು ಹೂಡಿಕೆದಾರರ ಸಕಾರಾತ್ಮಕತೆಯನ್ನು ಸೂಚಿಸುತ್ತದೆ. (Bloomberg)

    ಹಂಚಿಕೊಳ್ಳಲು ಲೇಖನಗಳು