logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Solar Flare: ನಾಸಾದ ಕಣ್ಣಿಗೆ ಬಿದ್ದ ತೀವ್ರ ಸೌರ ಜ್ವಾಲೆಗಳು, ಪ್ರಬಲ ಭೂಕಾಂತೀಯ ಚಂಡಮಾರುತದ ಎಚ್ಚರಿಕೆ, ಇಲ್ಲಿದೆ ಚಿತ್ರ ಮಾಹಿತಿ

Solar flare: ನಾಸಾದ ಕಣ್ಣಿಗೆ ಬಿದ್ದ ತೀವ್ರ ಸೌರ ಜ್ವಾಲೆಗಳು, ಪ್ರಬಲ ಭೂಕಾಂತೀಯ ಚಂಡಮಾರುತದ ಎಚ್ಚರಿಕೆ, ಇಲ್ಲಿದೆ ಚಿತ್ರ ಮಾಹಿತಿ

Aug 08, 2023 01:37 PM IST

solar flare: ನಾಸಾವು ಇತ್ತೀಚೆಗೆ ಅಂದರೆ ಆಗಸ್ಟ್‌ 5ರಂದು ಪ್ರಬಲ ಸೌರಜ್ವಾಲೆಗಳ ಚಿತ್ರಗಳನ್ನು ಕ್ಲಿಕ್ಕಿಸಿದೆ. ಈ ಸೌರ ಜ್ವಾಲೆಗಳು ಪ್ರಬಲ ಜಿ3 ಭೂಕಾಂತೀಯ ಚಂಡಮಾರುತ ಉಂಟುಮಾಡುವ ಶಕ್ತಿಯನ್ನು ಹೊಂದಿವೆ.

solar flare: ನಾಸಾವು ಇತ್ತೀಚೆಗೆ ಅಂದರೆ ಆಗಸ್ಟ್‌ 5ರಂದು ಪ್ರಬಲ ಸೌರಜ್ವಾಲೆಗಳ ಚಿತ್ರಗಳನ್ನು ಕ್ಲಿಕ್ಕಿಸಿದೆ. ಈ ಸೌರ ಜ್ವಾಲೆಗಳು ಪ್ರಬಲ ಜಿ3 ಭೂಕಾಂತೀಯ ಚಂಡಮಾರುತ ಉಂಟುಮಾಡುವ ಶಕ್ತಿಯನ್ನು ಹೊಂದಿವೆ.
ನಾಸಾದ ಸೋಲಾರ್‌ ಡೈನಾಮಿಕ್‌ ಅಬ್ಸರ್ವೇಟರಿ ಮೂಲಕ sunspot AR3386 ಎಂಬ ಪ್ರಬಲ ಸೌರಜ್ವಾಲೆಯ ಚಿತ್ರ ಸೆರೆಹಿಡಿಯಲಾಗಿದೆ ಎಂದು ಸ್ಪೇಸ್‌ವೆದರ್‌.ಕಾಂ ವರದಿ ಮಾಡಿದೆ.
(1 / 5)
ನಾಸಾದ ಸೋಲಾರ್‌ ಡೈನಾಮಿಕ್‌ ಅಬ್ಸರ್ವೇಟರಿ ಮೂಲಕ sunspot AR3386 ಎಂಬ ಪ್ರಬಲ ಸೌರಜ್ವಾಲೆಯ ಚಿತ್ರ ಸೆರೆಹಿಡಿಯಲಾಗಿದೆ ಎಂದು ಸ್ಪೇಸ್‌ವೆದರ್‌.ಕಾಂ ವರದಿ ಮಾಡಿದೆ.(Pixabay)
ಈ ಸೌರ ಜ್ವಾಲೆಯನ್ನು ಎಕ್ಸ್‌ 1.6 ಕ್ಲಾಸ್‌ ಎಂದು ವರ್ಗೀಕರಿಸಲಾಗಿದೆ. ಇದು ಬಾಹ್ಯಾಕಾಶ ಪರಿಸರಕ್ಕೆ ಹಾಗೂ ಭೂಮಿಗೆ ಅತ್ಯಂತ ಅಪಾಯಕಾರಿ.  
(2 / 5)
ಈ ಸೌರ ಜ್ವಾಲೆಯನ್ನು ಎಕ್ಸ್‌ 1.6 ಕ್ಲಾಸ್‌ ಎಂದು ವರ್ಗೀಕರಿಸಲಾಗಿದೆ. ಇದು ಬಾಹ್ಯಾಕಾಶ ಪರಿಸರಕ್ಕೆ ಹಾಗೂ ಭೂಮಿಗೆ ಅತ್ಯಂತ ಅಪಾಯಕಾರಿ.  (NASA)
ಸೌರ ಜ್ವಾಲೆಗಳ ತೀವ್ರತೆಯ ಪ್ರಮಾಣವನ್ನು  ಎ, ಬಿ, ಸಿ, ಎಂ ಮತ್ತು ಎಕ್ಸ್‌ ಎಂಬ ವರ್ಗಗಳಾಗಿ ವಿಂಗಡಿಸಲಾಗಿದೆ. 1 ರಿಂದ 9 ರವರೆಗಿನ ಮೌಲ್ಯಗಳ ಜತೆಗೆ ಈ ಎಕ್ಸ್‌-ವರ್ಗದ ಜ್ವಾಲೆಯು ಸೌರ ಸ್ಫೋಟದ ತೀವ್ರತೆಯ ಗರಿಷ್ಠ ಮಟ್ಟವನ್ನು ಸೂಚಿಸುತ್ತದೆ. 
(3 / 5)
ಸೌರ ಜ್ವಾಲೆಗಳ ತೀವ್ರತೆಯ ಪ್ರಮಾಣವನ್ನು  ಎ, ಬಿ, ಸಿ, ಎಂ ಮತ್ತು ಎಕ್ಸ್‌ ಎಂಬ ವರ್ಗಗಳಾಗಿ ವಿಂಗಡಿಸಲಾಗಿದೆ. 1 ರಿಂದ 9 ರವರೆಗಿನ ಮೌಲ್ಯಗಳ ಜತೆಗೆ ಈ ಎಕ್ಸ್‌-ವರ್ಗದ ಜ್ವಾಲೆಯು ಸೌರ ಸ್ಫೋಟದ ತೀವ್ರತೆಯ ಗರಿಷ್ಠ ಮಟ್ಟವನ್ನು ಸೂಚಿಸುತ್ತದೆ. (Unsplash)
ನಾಸಾದ ಪ್ರಕಾರ ಈ ಸೌರ ಜ್ವಾಲೆಯ ಅಪಾಯವು ಆಗಸ್ಟ್ 8 ರಂದು ಭೂಮಿಯಲ್ಲಿ ಕಾಣಿಸಬಹುದು. ಇದು ಸಣ್ಣಮಟ್ಟದ ಜಿ1 ವರ್ಗದ  ಭೂಕಾಂತೀಯ ಚಂಡಮಾರುತಕ್ಕೆ ಕಾರಣವಾಗಬಹುದು.  ಎಲ್ಲಾದರೂ ಇದಕ್ಕೂ ಹೆಚ್ಚಿನ ಜ್ವಾಲೆ ಬಂದರೆ ಅದು ಜಿ2 ಅಥವಾ ಪ್ರಬಲ ಜಿ3 ವರ್ಗದ ಭೂಕಾಂತೀಯ ಚಂಡಮಾರುತ ಪರಿಣಾಮ ಉಂಟುಮಾಡಬಹುದು. 
(4 / 5)
ನಾಸಾದ ಪ್ರಕಾರ ಈ ಸೌರ ಜ್ವಾಲೆಯ ಅಪಾಯವು ಆಗಸ್ಟ್ 8 ರಂದು ಭೂಮಿಯಲ್ಲಿ ಕಾಣಿಸಬಹುದು. ಇದು ಸಣ್ಣಮಟ್ಟದ ಜಿ1 ವರ್ಗದ  ಭೂಕಾಂತೀಯ ಚಂಡಮಾರುತಕ್ಕೆ ಕಾರಣವಾಗಬಹುದು.  ಎಲ್ಲಾದರೂ ಇದಕ್ಕೂ ಹೆಚ್ಚಿನ ಜ್ವಾಲೆ ಬಂದರೆ ಅದು ಜಿ2 ಅಥವಾ ಪ್ರಬಲ ಜಿ3 ವರ್ಗದ ಭೂಕಾಂತೀಯ ಚಂಡಮಾರುತ ಪರಿಣಾಮ ಉಂಟುಮಾಡಬಹುದು. (SDO/NASA)
ಸೌರ ಜ್ವಾಲೆಯ ವಿಕಿರಣವು ವಿಮಾನ ಯಾನದ ಮೇಲೆ ಪರಿಣಾಮ ಬೀರಬಹುದು. ಭೂಮಿಯ ಉಪಗ್ರಹಗಳಿಗೂ ಅಡ್ಡಿಪಡಿಸಬಹುದು.  
(5 / 5)
ಸೌರ ಜ್ವಾಲೆಯ ವಿಕಿರಣವು ವಿಮಾನ ಯಾನದ ಮೇಲೆ ಪರಿಣಾಮ ಬೀರಬಹುದು. ಭೂಮಿಯ ಉಪಗ್ರಹಗಳಿಗೂ ಅಡ್ಡಿಪಡಿಸಬಹುದು.  (NASA)

    ಹಂಚಿಕೊಳ್ಳಲು ಲೇಖನಗಳು