logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Women Athletes In Police Service: ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ಹಹಿಸುತ್ತಿರುವ ಭಾರತದ ಮಹಿಳಾ ತಾರಾ ಕ್ರೀಡಾಪಟುಗಳು ಇವರೇ

Women Athletes in Police Service: ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ಹಹಿಸುತ್ತಿರುವ ಭಾರತದ ಮಹಿಳಾ ತಾರಾ ಕ್ರೀಡಾಪಟುಗಳು ಇವರೇ

Jun 22, 2023 06:32 AM IST

ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಮಿಂಚಿದ ಹಲವು ಮಹಿಳಾ ಆಟಗಾರ್ತಿಯರಿಗೆ ಸರ್ಕಾರಿ ಉದ್ಯೋಗ ಸಿಕ್ಕಿದೆ. ಅದರಲ್ಲೂ ಪೊಲೀಸ್​ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಪಡೆದಿದ್ದಾರೆ. ಅಂತಹ ಆಟಗಾರ್ತಿಯರ ಕುರಿತು ಈ ಮುಂದೆ ನೋಡೋಣ.

  • ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಮಿಂಚಿದ ಹಲವು ಮಹಿಳಾ ಆಟಗಾರ್ತಿಯರಿಗೆ ಸರ್ಕಾರಿ ಉದ್ಯೋಗ ಸಿಕ್ಕಿದೆ. ಅದರಲ್ಲೂ ಪೊಲೀಸ್​ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಪಡೆದಿದ್ದಾರೆ. ಅಂತಹ ಆಟಗಾರ್ತಿಯರ ಕುರಿತು ಈ ಮುಂದೆ ನೋಡೋಣ.
ಕ್ರೀಡಾ ಲೋಕದಲ್ಲಿ ಭಾರತೀಯ ಮಹಿಳೆಯರು ಅಮೋಘ ಸಾಧನೆ ಮಾಡಿದ್ದಾರೆ. ಪ್ರತಿಷ್ಠಿತ ಟೂರ್ನಿಗಳಲ್ಲಿ ಮಹಿಳಾ ಆಟಗಾರ್ತಿಯರು ಪ್ರಮುಖ ಪ್ರಶಸ್ತಿಗಳನ್ನು ಗೆದ್ದು ದೇಶವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಒಲಿಂಪಿಕ್, ಕಾಮನ್​ವೆಲ್ತ್​.. ಹೀಗೆ ಮೇಜರ್ ಟೂರ್ನಿಗಳಲ್ಲಿ ಚಿನ್ನ, ಬೆಳ್ಳಿ, ಕಂಚು ಗೆದ್ದು, ಸಾಧನೆ ಮಾಡಿದ್ದಾರೆ. 
(1 / 9)

ಪ್ರಶಸ್ತಿ ಗೆದ್ದ ಆಟಗಾರ್ತಿಯರು ಕಾಣಿಕೆಯನ್ನೂ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಸಂಪಾದಿಸಿದ ಮಹಿಳಾ ಆಟಗಾರ್ತಿಯರಿಗೆ ಪೊಲೀಸ್​ ಇಲಾಖೆ ಸೇರುವ ಅವಕಾಶವೂ ಸಿಕ್ಕಿದೆ. ಪೊಲೀಸ್​ ಇಲಾಖೆ ಸೇರಿರುವ ಭಾರತೀಯ ಆಟಗಾರ್ತಿಯರ ಕುರಿತು ಈ ಮುಂದೆ ತಿಳಿಯೋಣ.
(2 / 9)

ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದಿರುವ ಬಾಕ್ಸರ್​​ ಮೇರಿ ಕೋಮ್​ ಈಶಾನ್ಯ ರಾಜ್ಯ ಮಣಿಪುರವರು. ಬಾಕ್ಸಿಂಗ್​​ನಲ್ಲಿ ಪದಕ ಗೆದ್ದ ಮೊದಲ ಆಟಗಾರ್ತಿ ಇವರು. ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಬಳಿಕ ಮಣಿಪುರ ಸರ್ಕಾರವು ಅವರನ್ನು ಎಸ್​​ಪಿಯಾಗಿ ನೇಮಿಸಿತು.
(3 / 9)

2020ರ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬಾಕ್ಸಿಂಗ್‌ನಲ್ಲಿ ಲೋವ್ಲಿನಾ ಬೊರ್ಗೊಹೈನ್ ಅವರು ಭಾರತಕ್ಕೆ ಕಂಚಿನ ಪದಕ ಗೆದ್ದರು. ಅವರಿಗೆ ಅವರ ಅಸ್ಸಾಂ ರಾಜ್ಯವು ಪೋಲೀಸ್‌ ಇಲಾಖೆಯಲ್ಲಿ ದೊಡ್ಡ ಜವಾಬ್ದಾರಿಯುತ ಹುದ್ದೆ ನೀಡಿ ಗೌರವಿಸಿತು. ಲೊವ್ಲಿನಾ ಅವರು ಡಿಎಸ್​​ಪಿ ಹುದ್ದೆ ಪಡೆದರು.
(4 / 9)

ಅಸ್ಸಾಂ ರಾಜ್ಯದ ಓಟಗಾರ್ತಿ ಹಿಮಾ ದಾಸ್ ಅವರು ಕೂಡ ಪೊಲೀಸ್ ಸೇವೆಯಲ್ಲೇ ತೊಡಗಿದ್ದಾರೆ. 2018ರಲ್ಲಿ ನಡೆದ 400 ಮೀಟರ್ಸ್  ಜೂನಿಯರ್ ವರ್ಲ್ಡ್​​ ಚಾಂಪಿಯನ್ ಹಿಮಾ ಅವರಿಗೆ ಡಿಎಸ್​​​ಪಿ ಹುದ್ದೆ ನೀಡಿ ಗೌರವಿಸಲಾಗಿತ್ತು. 
(5 / 9)

ಮೀರಾಬಾಯಿ ಚಾನು ಮಣಿಪುರ ರಾಜ್ಯವರು. 2020ರ ಟೋಕಿಯೊ ಒಲಿಂಪಿಕ್ಸ್​ನಲ್ಲಿ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದಿದ್ದರು. ವೇಟ್‌ಲಿಫ್ಟಿಂಗ್‌ನಲ್ಲಿ ಒಲಿಂಪಿಕ್ಸ್​​ನಲ್ಲಿ ಪದಕ ಗೆದ್ದ ಭಾರತದ 2ನೇ ಮಹಿಳಾ ಆಟಗಾರ್ತಿ ಎನಿಸಿದ್ದಾರೆ. ಬಳಿಕ ಮಣಿಪುರ ಸರ್ಕಾರವು ಮೀರಾಬಾಯಿ ಚಾನು ಅವರಿಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ (ಕ್ರೀಡೆ) ಹುದ್ದೆ ನೀಡಿದೆ.
(6 / 9)

ಹರಿಯಾಣದ ಮಹಿಳಾ ಕುಸ್ತಿಪಟು ಗೀತಾ ಫೋಗಟ್ ಅವರಿಗೂ ಪೊಲೀಸ್ ಇಲಾಖೆಯಲ್ಲಿ ಡಿಎಸ್​​​​ಪಿ ಹುದ್ದೆ ನೀಡಿ ಗೌರವಿಸಲಾಗಿದೆ. 2016ರಲ್ಲಿ ಪೊಲೀಸ್​ ಇಲಾಖೆ ಸೇರಿದ ಗೀತಾ, 2010ರಲ್ಲಿ ಕಾಮನ್‌ವೆಲ್ತ್‌ ಗೇಮ್ಸ್​​ನಲ್ಲಿ ಗೋಲ್ಡ್​ ಮೆಡಲ್​ ಗೆದ್ದಿದ್ರು.
(7 / 9)

ಭಾರತದ ಮತ್ತೊಬ್ಬ ಪ್ರಸಿದ್ಧ ಮಹಿಳಾ ಕುಸ್ತಿಪಟು ಬಬಿತಾ ಫೋಗಟ್ ಅವರು ಕೂಡ ಹರಿಯಾಣ ಪೊಲೀಸ್​​ ಇಲಾಖೆಯಲ್ಲಿ ಅತ್ಯುನ್ನತ ಹುದ್ದೆ ಪಡೆದಿದ್ದಾರೆ. ಇವರು ಗೀತಾ ಫೋಗಾಟ್​ ಸಹೋದರಿ. 2013ರಲ್ಲಿ ಕ್ರೀಡಾ ಕೋಟಾದಿಂದ ಸಬ್-ಇನ್‌ಸ್ಪೆಕ್ಟರ್ ಆಗಿ ನೇಮಕಗೊಂಡಿದ್ದರು. ಆದರೆ 2019ರಲ್ಲಿ ರಾಜಕೀಯದತ್ತ ಹೆಜ್ಜೆ ಹಾಕಿದರು. ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷ ಸೇರಿದರು.
(8 / 9)

ಹಾಕಿ ತಂಡದ ಆಟಗಾರ್ತಿಯಾಗಿದ್ದ ಸಬಾ ಅಂಜುಮ್ ಕರೀಂ ಅವರಿಗೆ ಛತ್ತೀಸ್‌ಗಢ ಸರ್ಕಾರ ಡೆಪ್ಯೂಟಿ ಹುದ್ದೆಯನ್ನು ನೀಡಿತು. ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆ ನೀಡಿ ಗೌರವಿಸಿದೆ.
(9 / 9)

    ಹಂಚಿಕೊಳ್ಳಲು ಲೇಖನಗಳು